Mollywood: ಚಿತ್ರರಂಗದಲ್ಲಿ ಯಾವುದೇ ಶಕ್ತಿಕೇಂದ್ರಗಳಿಲ್ಲ.. #MeToo ಬಗ್ಗೆ ಮಮ್ಮುಟ್ಟಿ ಮಾತು


Team Udayavani, Sep 1, 2024, 3:34 PM IST

14

ತಿರುವನಂತಪುರಂ: ಮಾಲಿವುಡ್‌ (Mollywood) ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿರುವ ಹೇಮಾ ಸಮಿತಿ ವರದಿ ಬಗ್ಗೆ (Hema Committee report) ಹಿರಿಯ ನಟ, ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Malayalam superstar Mammootty) ಅವರು ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ತನ್ನ ಫೇಸ್‌ ಬುಕ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡು ಹೇಮಾ ಸಮಿತಿ ವರದಿಯ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ಹೇಮಾ ಸಮಿತಿಯ ವರದಿಯಲ್ಲಿ ಹೇಳಲಾದ ಶಿಫಾರಸುಗಳು ಮತ್ತು ಪರಿಹಾರಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಮತ್ತು ಬೆಂಬಲಿಸುತ್ತೇನೆ. ಚಿತ್ರರಂಗದ ಎಲ್ಲಾ ಸಂಘ ಸಂಸ್ಥೆಗಳು ಕೈ ಜೋಡಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಸಮಯ ಬಂದಿದೆ. ಈಗ ಎದ್ದಿರುವ ದೂರುಗಳ ಕುರಿತು ಪೊಲೀಸ್ ತನಿಖೆ ಪ್ರಗತಿಯಲ್ಲಿದೆ. ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಪೂರ್ಣ ರೂಪ ನ್ಯಾಯಾಲಯದ ಮುಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲಿ. ನ್ಯಾಯಾಲಯ ಶಿಕ್ಷೆಯನ್ನು ನಿರ್ಧರಿಸಲಿ”ಎಂದಿದ್ದಾರೆ.

“ಸಿನಿಮಾದಲ್ಲಿ ‘ಶಕ್ತಿ ಕೇಂದ್ರ’ ಇಲ್ಲ. ಸಿನಿಮಾ ಅಂತಹವುಗಳಿರುವ ರಂಗವಲ್ಲ. ಪ್ರಾಯೋಗಿಕ ಕಾನೂನಿನ ಅಡೆತಡೆಗಳಿದ್ದಲ್ಲಿ ಹೇಮಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕು, ಅಂತಿಮವಾಗಿ, ಸಿನಿಮಾ ಉಳಿಯಬೇಕು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಸಂಘಟನೆ (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ಮತ್ತು ಅದರ ನಾಯಕತ್ವವು ಮೊದಲು ಪ್ರತಿಕ್ರಿಯಿಸಬೇಕು. ಅವರ ಪ್ರತಿಕ್ರಿಯೆಗಳ ನಂತರವೇ ನಾನು ಸದಸ್ಯನಾಗಿ ನನ್ನ ಅಭಿಪ್ರಾಯವನ್ನು ನೀಡಬೇಕು ಎಂದು ನಾನು ನಂಬುತ್ತೇನೆ, ಅದಕ್ಕಾಗಿಯೇ ನಾನು ಇಷ್ಟು ದಿನ ಕಾಯುತ್ತಿದ್ದೆ” ಎಂದು ಅವರು ಹೇಳಿದ್ದಾರೆ.

ಹೇಮಾ ಸಮಿತಿ ವರದಿ ಬೆಳಕಿಗೆ ಬಂದ ನಂತರ ನಿರ್ದೇಶಕ ರಂಜಿತ್‌, ನಟ ಜಯಸೂರ್ಯ ಮತ್ತು ನಟ- ರಾಜಕಾರಣಿ ಮುಖೇಶ್ ಸೇರಿದಂತೆ ಚಿತ್ರರಂಗದ ಹಲವಾರು ಖ್ಯಾತರ ವಿರುದ್ಧ ದೂರು ದಾಖಲಾಗಿದೆ.

ಈ ಸಮಿತಿ ವರದಿ ಬಂದ ಬಳಿಕ ಮಾಲಿವುಡ್ ಸಿನಿರಂಗದಲ್ಲಿ ಹಲವು ಮಹತ್ತರ ಬದಲಾವಣೆ ಆಗಿದೆ. ಮೋಹನ್‌ಲಾಲ್ ಅವರು ಅಮ್ಮಾ (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕೂಡ ಮಹತ್ವದ ಬದಲಾವಣೆ ಆಗಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Jani Master: ನನ್ನ ಪತಿ ಎಲ್ಲಿದ್ದಾರೆ.. ಠಾಣೆ ಬಳಿ ಜಾನಿ ಮಾಸ್ಟರ್‌ ಪತ್ನಿ ರಾದ್ಧಾಂತ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

6

Kanguva Movie: ಸೂರ್ಯ ಪ್ಯಾನ್‌ ಇಂಡಿಯಾ ʼಕಂಗುವʼ ಹೊಸ ರಿಲೀಸ್‌ ಡೇಟ್‌ ಔಟ್

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

Viral Video: ಮೆದುಳಿನ ಸರ್ಜರಿ ನಡೆಸುವ ವೇಳೆ ಜೂ.ಎನ್‌ ಟಿಆರ್‌ ಸಿನಿಮಾ ವೀಕ್ಷಿಸಿದ ರೋಗಿ.!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.