Udupi ಗೀತಾರ್ಥ ಚಿಂತನೆ 24; ಕೊನೆಗೂ ನಡೆಯುವುದು ಭಗವದಿಚ್ಛೆಯೇ…
Team Udayavani, Sep 2, 2024, 12:36 AM IST
ಗಂಡ, ಹೆಂಡತಿ, ಮಕ್ಕಳ ಸಂತೋಷಕ್ಕಾಗಿ ಏನೇನೋ ತ್ಯಾಗ ಮಾಡುತ್ತೇವೆ. ಒಂದು ದಿನ ಇದೆಲ್ಲವೂ ಮಾಡುವುದು ಬೇಡವಿತ್ತು ಎನಿಸುತ್ತದೆ. ಹೀಗೆ ಮಾಡುವುದಕ್ಕಿಂತ “ಭಗವತ್ಪ್ರೀತ್ಯರ್ಥಂ’ ಎಂದು ಮಾಡಬೇಕು.
ಭಗವತ್ಪ್ರೀತಿ ಇಲ್ಲದಿದ್ದರೆ ಯಾವ ಪೂಜೆಯೂ ವ್ಯರ್ಥವೇ. ಕೊಲೆ ಮಾಡಿದವನನ್ನು ಜೈಲಿನಲ್ಲಿ ಗಲ್ಲಿಗೇರಿಸಲಾಗುತ್ತದೆ. ಮೊದಲು ಮಾಡಿದ್ದು ಕೊಲೆ, ಗಲ್ಲಿಗೇರಿಸುವುದೂ ಒಂದರ್ಥದಲ್ಲಿ ಅದುವೇ. ಎರಡೂ ಜೀವಾಪಹರಣವೇ. ಕೊಲೆ ಮಾಡುವವನಿಗೆ ದ್ವೇಷವಿತ್ತು ಮತ್ತು ಆತನಿಗೆ ಶಿಕ್ಷೆ ಇದೆ. ಗಲ್ಲಿಗೇರಿಸುವವನಿಗೆ ದ್ವೇಷವೇ ಇಲ್ಲ. ಈತನದು ಕೆಲಸವಷ್ಟೆ. ಗಲ್ಲಿಗೇರಿಸುವವನಿಗೆ ಆಕರ್ಷಕ ವೇತನವಿರುತ್ತದೆ. ಏಕೆಂದರೆ ಆ ಕೆಲಸಕ್ಕೆ ಯಾರೂ ಬರುವುದಿಲ್ಲ. ಪ್ರಳಯ ಕಾಲದಲ್ಲಿ ರುದ್ರದೇವರು ಇಡೀ ಜಗತ್ತನ್ನು ಸಂಹರಿಸುತ್ತಾರೆ. ಪರೀಕ್ಷೆ ಮುಗಿದ ಬಳಿಕ ಸಭಾಂಗಣದ ಬೆಳಕು ಆರಿಸಿದರೆ ಸರಿ. ಜಗತ್ತಿನ ವ್ಯವಸ್ಥೆ ಬೇಕೆಂದು ಭಗವಂತ ನಿರ್ಧರಿಸಿದರೆ ಬೇಕು, ಇನ್ನು ಮುಗಿಯಿತು ಪ್ರಳಯವಾಗಲಿ ಎಂದು ಇಚ್ಛಿಸಿದರೆ ಸಂಹಾರವೇ ಸರಿ. ಆತ ಲೋಕ ನಡೆಯಬೇಕೆಂದು ಇಚ್ಛಿಸಿದರೆ ಸಂಹರಿಸಲಾಗದು, ಮುಂದುವರಿಯಬಾರದೆಂದು ಆತ ಇಚ್ಛಿಸಿದರೆ ನಡೆಸಲು ಆಗದು. ಯಾರಾದರೂ ಸಾಯಬೇಕೆಂದು ಬಯಸುತ್ತಾರಾ? ಹಾಗಿದ್ದರೂ ಯಾರಾದರೂ ಸಾವಿನಿಂದ ಬಚಾವಾದದ್ದುಂಟೋ? ಇದಕ್ಕಾಗಿಯೇ ಹೇಳಿದ್ದು ಭಗವಂತ ಜಗತ್ತಿನೊಡೆಯನೆಂದು. ಆತನ ನಿರ್ಧಾರವೇ ಅಂತಿಮವಾಗಿ ನಡೆಯುವುದು.
ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.