Yograj Singh; ನಾನೆಂದೂ ಎಂ.ಎಸ್.ಧೋನಿಯನ್ನು ಕ್ಷಮಿಸಲಾರೆ: ಯುವರಾಜ್ ಸಿಂಗ್ ತಂದೆ
Team Udayavani, Sep 2, 2024, 11:14 AM IST
ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರನ್ನು ಸದಾ ದೂರುವ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ತಂದೆ ಯೋಗರಾಜ್ ಸಿಂಗ್ (Yograj Singh) ಅವರು ಇದೀಗ ಮತ್ತೆ ಎಂ.ಎಸ್.ಧೋನಿ ವಿರುದ್ದ ಕಿಡಿಕಾರಿದ್ದಾರೆ. ಭಾರತ ತಂಡದ ಪರ ಏಳು ಅಂತಾರಾಷ್ಟ್ರೀಯ ಪಂದ್ಯವಾಡಿರುವ ಯೋಗರಾಜ್ ಸಿಂಗ್ ಅವರು ತಮ್ಮ ಪುತ್ರನ ವೃತ್ತಿಜೀವನವನ್ನು ಧೋನಿ ಹಾಳು ಮಾಡಿದ ಎಂದು ಸದಾ ಕಿಡಿಕಾರುತ್ತಲೇ ಇರುತ್ತಾರೆ. ಆಗೊಮ್ಮೆ ಈಗೊಮ್ಮೆ ಸಾರ್ವಜನಿಕ ವೇದಿಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ವಿರುದ್ದ ಹೇಳಿಕೆ ನೀಡುತ್ತಾ ಇರುತ್ತಾರೆ.
ಇದೀಗ ಯೂಟ್ಯೂಬ್ ಚಾನೆಲ್ ಒಂದಕ್ಕೆ ಯೋಗರಾಜ್ ಸಿಂಗ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
“ನಾನೆಂದೂ ಎಂ.ಎಸ್.ಧೋನಿಯನ್ನು ಕ್ಷಮಿಸುವುದಿಲ್ಲ. ಅವರು ಮುಖವನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ. ಆತ ದೊಡ್ಡ ಕ್ರಿಕೆಟಿಗ, ಆದರೆ ಆತ ನನ್ನ ಮಗನ ವಿರುದ್ದ ಏನು ಮಾಡಿದ್ದಾನೆ, ಅದೆಲ್ಲಾ ಇದೀಗ ಹೊರಬರುತ್ತಿದೆ. ಅದು ಜೀವನದಲ್ಲಿ ಎಂದೂ ಮರೆಯಲಾಗದು. ನಾನು ಎರಡು ವಿಷಯಗಳನ್ನು ಜೀವನದಲ್ಲಿ ಎಂದೂ ಮಾಡಿಲ್ಲ. ಮೊದಲನೆಯದಾಗಿ, ನನಗೆ ಕೆಟ್ಟದು ಮಾಡಿದ ಯಾರನ್ನೂ ಎಂದೂ ಕ್ಷಮಿಸಿಲ್ಲ. ಎರಡನೆಯದಾಗಿ, ನಾನೆಂದೂ ಅವರನ್ನೂ ತಬ್ಬಿಕೊಂಡಿಲ್ಲ, ಅದು ನನ್ನ ಕುಟುಂಬಿಕರೇ ಆಗಲಿ, ಅಥವಾ ಮಕ್ಕಳೇ ಆಗಿರಲಿ” ಎಂದು ಯೋಗರಾಜ್ ಸಿಂಗ್ ಅವರು ಹೇಳಿದ್ದರೆ.
ಯೋಗರಾಜ್ ಅವರು ಧೋನಿ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಧೋನಿಯ ಕೆಟ್ಟ ಆಸೆಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2024ರಲ್ಲಿ ಸೋಲನುಭವಿಸಿತು ಎಂದು 66 ವರ್ಷ ವಯಸ್ಸಿನ ಯೋಹರಾಜ್ ಹೇಳಿದ್ದರು. ಯುವರಾಜ್ ಬಗ್ಗೆ ಧೋನಿ ಅಸೂಯೆ ಹೊಂದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Australia vs India: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
Pro Kabaddi: ಮೂರಕ್ಕೇರಿದ ಯುಪಿ ಯೋಧಾಸ್
MUST WATCH
ಹೊಸ ಸೇರ್ಪಡೆ
Bettampady: ಶಾಲಾ ಮಕ್ಕಳಿಂದ ಮನೆಯಲ್ಲಿ ಭತ್ತದ ಕೃಷಿ ಅಭಿಯಾನ ಯಶಸ್ವಿ
Uttara Pradesh: ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನೇ ತೆರವುಗೊಳಿಸಿದ ಯುಪಿ ಸರ್ಕಾರ
Manipur ಗಲಭೆಗಳಲ್ಲಿ ‘ಸ್ಟಾರ್‌ಲಿಂಕ್’ ಬಳಕೆ: ಆರೋಪ ನಿರಾಕರಿಸಿದ ಎಲಾನ್ ಮಸ್ಕ್
Sadalwood: ಶ್ರೀಮುರಳಿ ಬರ್ತ್‌ಡೇಗೆ ಎರಡು ಚಿತ್ರ ಘೋಷಣೆ
ಉಲಾಯಿ-ಪಿದಾಯಿ ಜುಗಾರಿ ಆಟ ಆಡುತ್ತಿದ್ದ 33 ಆರೋಪಿಗಳ ಸಹಿತ ಲಕ್ಷಾಂತರ ರೂ. ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.