Technology; ಟೈರ್ ನಿರ್ವಹಣೆಗೂ ಬರಲಿದೆ ‘ಇಂಟಲಿಜೆಂಟ್ ಸಿಸ್ಟಂ’
Team Udayavani, Sep 3, 2024, 6:46 AM IST
ಬೆಂಗಳೂರು: ಸಾಮಾನ್ಯವಾಗಿ ವಾಹನದಲ್ಲಿರುವ ಪೆಟ್ರೋಲ್ ಅಥವಾ ಡೀಸೆಲ್ ಅಥವಾ ಬ್ಯಾಟರಿ ಚಾರ್ಜ್ ಎಷ್ಟು? ಇನ್ನೂ ಎಷ್ಟು ಕಿ.ಮೀ. ಸಂಚರಿಸಬಹುದು ಎಂಬುದು ಡ್ಯಾಶ್‌ಬೋರ್ಡ್‌ನಲ್ಲಿ ಕಾಣುತ್ತದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ವಾಹನದ ಟೈರ್ ಇನ್ನೆಷ್ಟು ದಿನ ಬಾಳಿಕೆ ಬರಲಿದೆ? ಉತ್ತಮ ಬಾಳಿಕೆ ಜತೆಗೆ ಸುಧಾರಿತ ರಸ್ತೆ ಯಾವುದು ಎಂಬ ಮಾಹಿತಿಯನ್ನೂ ನೀಡುವ ತಂತ್ರಜ್ಞಾನವೊಂದು ಬಂದಿದೆ.
ಯಾವುದೇ ವಾಹನಗಳ ಟೈರ್‌ಗಳನ್ನು ನಿಯಮಿತವಾಗಿ ನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಎಬಿಸಿಆರ್‌ಎಲ್ ಎಂಬ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದೆ. ಇದು ಸರಕಾರದ ಸಹಯೋಗದಲ್ಲಿ ಸ್ಥಾಪಿಸಿದ ಸೆಂಟರ್ ಆಫ್ ಎಕ್ಸಿಲೆನ್ಸ್ ಸೆಮಿಕಂಡಕ್ಟರ್ ಫ್ಯಾಬಲೆಸ್ ಎಕ್ಸಿಲರೇಟರ್ ಲ್ಯಾಬ್ (ಎಸ್‌ಎಫ್ಎಎಲ್-ಸಫಲ್) ನೆರವಿನಲ್ಲಿ ಅಸ್ತಿತ್ವಕ್ಕೆ ಬಂದ ಸ್ಟಾರ್ಟ್‌ಅಪ್ ಆಗಿದ್ದು, “ಟೈರ್‌ಸಿನ್ಯಾಪ್ಸ್’ ಚಿಪ್ ಹೊರತಂದಿದೆ.
ಈ ಅತ್ಯಾಧುನಿಕ ಇಂಟೆಲಿಜೆಂಟ್ ಟೈರ್ ನಿರ್ವಹಣ ವ್ಯವಸ್ಥೆ ಅಳವಡಿಕೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಂತನೆ ನಡೆಸಿದೆ. ಪರೀಕ್ಷಾರ್ಥವಾಗಿ ನಗರದಿಂದ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ “ವಾಯುವಜ್ರ’ ವೋಲ್ವೋ ಮತ್ತು ಈಚೆಗೆ ರಸ್ತೆಗಿಳಿದ ವಿದ್ಯುತ್‌ಚಾಲಿತ ಬಸ್‌ಗಳಲ್ಲಿ ಅಳವಡಿಸಲು ಉದ್ದೇಶಿಸಿದೆ. ಇದು ಯಶಸ್ವಿಯಾದರೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲೂ ಅಳವಡಿಸಲು ಚಿಂತನೆ ನಡೆದಿದೆ.
ಟೈರ್ ಗುಣಮಟ್ಟ ಕಾಯ್ದುಕೊಳ್ಳಲು ಸಹಕಾರಿ
ಸಾಮಾನ್ಯವಾಗಿ ಒಂದು ಬಸ್‌ನ ಟೈರ್ ಅನ್ನು 50 ಸಾವಿರ ಕಿ.ಮೀ. ಅನಂತರ ಬದಲಾಯಿಸಲಾಗುತ್ತದೆ. ಈ ತಂತ್ರಜ್ಞಾನದ ಅಳವಡಿಕೆಯಿಂದ ಟೈರ್‌ಗಳ ಬಾಳಿಕೆ ನಿಖರವಾಗಿ ತಿಳಿಯಬಹುದು. ಜತೆಗೆ ಆ ಟೈರ್‌ಗಳ ಮೇಲೆ ಎಷ್ಟು ಲೋಡ್ ಹಾಕಬಹುದು ಮತ್ತು ವಾಹನ ಸಾಗುವ ರಸ್ತೆ ಕಳಪೆ ಗುಣಮಟ್ಟದ್ದಾಗಿದ್ದರೆ ಅದರ ಬಗ್ಗೆಯೂ ಇದು ಮುನ್ಸೂಚನೆ ನೀಡುವುದರೊಂದಿಗೆ ಪರ್ಯಾಯ ರಸ್ತೆಯ ಮಾಹಿತಿಯನ್ನೂ ನೀಡಲಿದೆ. ಅದನ್ನು ಆಧರಿಸಿ ಟೈರ್ ಗುಣಮಟ್ಟ ಕಾಯ್ದುಕೊಳ್ಳಬಹುದು ಎಂದು ಎಬಿಸಿಆರ್‌ಎಲ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಷಾರ್ ಕಾಂತಿ ಭಟ್ಟಾಚಾರ್ಯ ಉದಯವಾಣಿ’ಗೆ ತಿಳಿಸಿದರು.
ಇದನ್ನು ಬಸ್‌ಗಳು ಮಾತ್ರವಲ್ಲ; ದ್ವಿಚಕ್ರ, ನಾಲ್ಕು ಚಕ್ರ ಸೇರಿದಂತೆ ಎಲ್ಲ ಪ್ರಕಾರದ ವಾಹನಗಳ ಟೈರ್ ನಿರ್ವಹಣೆಗೂ ಅಳವಡಿಸಬಹುದು. ವಿಶೇಷವಾಗಿ ವಿದ್ಯುತ್‌ಚಾಲಿತ ವಾಹನಗಳಿಗೆ ಈ ಚಿಪ್ ಅಳವಡಿಸಿದರೆ, ಟೈರ್‌ಗಳ ನಿರ್ವಹಣೆಯಿಂದ ಕಡಿಮೆ ವಿದ್ಯುತ್‌ನಲ್ಲಿ ಹೆಚ್ಚು ಸಂಚರಿಸಲು ಅನುಕೂಲ ಆಗಲಿದೆ. ಅಷ್ಟೇ ಅಲ್ಲ, ಬ್ಯಾಟರಿ ಮೇಲಿನ ಒತ್ತಡ ಕೂಡ ತಗ್ಗಲಿದೆ ಕಂಪೆನಿಯ ಉತ್ಪನ್ನಗಳು 2025ರ ಅಂತ್ಯಕ್ಕೆ ಅಥವಾ 2026ರ ಆರಂಭದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದರು.
ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.