![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Sep 2, 2024, 11:00 PM IST
ಕಾರ್ಕಳ: ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ಎಂಬಲ್ಲಿ ಆ. 30ರಂದು ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿ ಮಾಳ ಗ್ರಾಮದ ಸಂತೋಷ್ ಟಿ.(32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಾಸ್ತವ್ಯದ ಮನೆಯ ಬೀಗವನ್ನು ಮನೆಯ ಹೊರಗಡೆ ಡಬ್ಬದಲ್ಲಿ ಇರಿಸಿದ್ದ ಬೀಗದ ಕೀಯನ್ನು ಬಳಸಿ ಬಾಗಿಲು ತೆರೆದು, ಮನೆಯ ಒಳಗಡೆ ಪ್ರವೇಶಿಸಿ ಮನೆಯ ಬೆಡ್ ರೂಮ್‌ನಲ್ಲಿದ್ದ ಗೋದ್ರೆಜ್ ಲಾಕರ್ ಅನ್ನು ಅಲ್ಲೇ ಇರಿಸಿದ್ದ ಕೀ ಸಹಾಯದಿಂದ ತೆರೆದು ಲಾಕರ್‌ನಲ್ಲಿರಿಸಿದ್ದ ಚಿನ್ನಾಭರಣಗಳ ಪೈಕಿ ಸುಮಾರು 33 ಪವನ್ ತೂಕದ 10.05 ಲಕ್ಷ ರೂ. ಅಂದಾಜು ಮೌಲ್ಯದ ವಿವಿಧ ರೀತಿಯ ಚಿನ್ನಾಭರಣಗಳನ್ನು ಕಳವುಗೈಯಲಾಗಿತ್ತು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಲು ಕಾರ್ಕಳ ಗ್ರಾಮಾಂತರ ಠಾಣೆಯ ಪಿಎಸ್‌ಐ ದಿಲೀಪ್ ಜಿ.ಆರ್. ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ತನಿಖಾ ವಿಭಾಗದ ಪಿಎಸ್‌ಐ ಸುಂದರ ಹಾಗೂ ಸಿಬಂದಿ ಮಹಾಂತೇಶ್, ಪ್ರಶಾಂತ್ ಕೆ., ವಿಶ್ವನಾಥ, ಶಶಿಕುಮಾರ್, ನಾಗರಾಜ, ಗೋವಿಂದ ಆಚಾರಿ, ರಾಘವೇಂದ್ರ, ಅಶೋಕ್ ಅವರ ವಿಶೇಷ ತಂಡ ರಚಿಸಲಾಗಿತ್ತು.
ಈ ತಂಡ ಕಾರ್ಯಾಚರಣೆ ನಡೆಸಿ ಸೆ. 1ರಂದು ಆರೋಪಿ ಸಂತೋಷನನ್ನು ವಶಕ್ಕೆ ಪಡೆದು ಆತ ಕಳವು ಮಾಡಿದ್ದ 10.05 ಲಕ್ಷ ರೂ. ಮೌಲ್ಯದ 33 ಪವನ್ ತೂಕದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿದೆ.
You seem to have an Ad Blocker on.
To continue reading, please turn it off or whitelist Udayavani.