Atlee Kumar: ಒಂದೇ ಸಿನಿಮಾದಲ್ಲಿ ಸಲ್ಮಾನ್ ಖಾನ್, ಕಮಲ್ ಹಾಸನ್; ಅಟ್ಲಿ ಆ್ಯಕ್ಷನ್ ಕಟ್
Team Udayavani, Sep 3, 2024, 2:56 PM IST
ಮುಂಬಯಿ: ಕಿಂಗ್ ಖಾನ್ ಶಾರುಖ್ (ShahRukh Khan) ಅವರೊಂದಿಗೆ ‘ಜವಾನ್ʼ ಸಿನಿಮಾ ಮಾಡಿ ಬಾಲಿವುಡ್‌ನಲ್ಲೂ ಮಿಂಚಿದ್ದ ಸೌತ್ ಸೂಪರ್ ಹಿಟ್ ನಿರ್ದೇಶಕ ಅಟ್ಲಿ ಕುಮಾರ್(Atlee Kumar) ಮತ್ತೊಬ್ಬ ಬಾಲಿವುಡ್ ಸೂಪರ್ ಸ್ಟಾರ್ ನಟನೊಂದಿಗೆ ಸಿನಿಮಾವನ್ನು ಮಾಡಲಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಇದುವರೆಗೆ ಸೋಲು ಕಂಡಿರದ ನಿರ್ದೇಶಕರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಭಾಷೆಯಲ್ಲಿ ಬಂದಿದ್ದ ʼಜವಾನ್ʼ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು.
ʼಜವಾನ್ʼ ಸಕ್ಸಸ್ ಬಳಿಕ ಅವರು ಮತ್ತೆ ಶಾರುಖ್ ಖಾನ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದರು. ಇದಲ್ಲದೆ ಸಲ್ಮಾನ್ , ಆಮೀರ್ ಅವರೊಂದಿಗೆ ತನಗೆ ಕೆಲಸ ಮಾಡುವ ಇರಾದೆ ಇದೆಯೆಂದು ವೇದಿಕೆಯೊಂದರಲ್ಲಿ ಅಟ್ಲಿ ಹೇಳಿದ್ದರು.
ಅದರಂತೆ ಅವರು ಸಲ್ಮಾನ್ ಖಾನ್(Salman Khan) ಅವರೊಂದಿಗೆ ಸಿನಿಮಾ ಮಾಡುವ ಮೊದಲ ಹೆಜ್ಜೆಯನ್ನಿಟ್ಟಿದ್ದಾರೆ ಎಂದು ವರದಿಯಾಗಿದೆ.
ಈ ಸಿನಿಮಾದ ವಿಶೇಷವೆಂದರೆ ಕಾಲಿವುಡ್ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Hasan) ಕೂಡ ಸಿನಿಮಾದ ಭಾಗವಾಗಲಿದ್ದು, ಒಂದೇ ಸ್ಕ್ರೀನ್‌ನಲ್ಲಿ ಮೊದಲ ಬಾರಿಗೆ ಇಬ್ಬರು ಸ್ಟಾರ್‌ಗಳು ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಟೈಟಲ್ ಅಂತಿಮವಾಗದ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸ ಇದೇ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿದ್ದು, ಈ ತಿಂಗಳ ಕೊನೆಯಲ್ಲಿ ಸಲ್ಮಾನ್ ಮತ್ತು ಕಮಲ್ ಸಿನಿಮಾದ ಸಂಪೂರ್ಣ ಸ್ಕ್ರಿಪ್ಟ್ ಆಲಿಸಿದ ಬಳಿಕ ಮುಂದಿನ ಅಟ್ಲಿ ಮುಂದಿನ ಹೆಜ್ಜೆಯನ್ನಿಡಲಿದ್ದಾರೆ ಎಂದು ವರದಿಯಾಗಿದೆ.
ಸಿನಿಮಾದಲ್ಲಿ ಭರಪೂರ ಆ್ಯಕ್ಷನ್ ಸೀನ್ಸ್ ಗಳಿರಲಿದ್ದು, ದೊಡ್ಡ ಪಾತ್ರವರ್ಗಗಳು ಇರಲಿವೆ ಎನ್ನಲಾಗಿದೆ. 2025ರ ಆರಂಭದಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.
ಸದ್ಯ ಸಲ್ಮಾನ್ ಖಾನ್ ಎಆರ್ ಮುರುಗದಾಸ್ ಅವರ ʼಸಿಕಂದರ್ʼ ಸಿನಿಮಾದಲ್ಲಿ ನಿರತರಾಗಿದ್ದು, ಇತ್ತ ಕಮಲ್ ಹಾಸನ್ ʼಇಂಡಿಯನ್ -2ʼ ಸೋಲಿನ ಬಳಿಕ ʼಥಗ್ ಲೈಫ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್ ಅಲಿ ಪುತ್ರ ಬಂಧನ
Tollywood: ನಾಗಚೈತನ್ಯ – ಶೋಭಿತಾ ವಿವಾಹ; ಇಲ್ಲಿದೆ ಸೆಲೆಬ್ರಿಟಿ ಗೆಸ್ಟ್ ಲಿಸ್ಟ್
Tollywood: ‘ಪುಷ್ಪ-3ʼ ಟೈಟಲ್ ರಿವೀಲ್.. ವಿಲನ್ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ
Silk Smitha – Queen of the South; ಬರುತ್ತಿದೆ ಸಿಲ್ಕ್ ಸ್ಮಿತಾ ಬಯೋಪಿಕ್
Suriya 45: ಮುಹೂರ್ತದಲ್ಲಿ ಸೂರ್ಯ 45
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
We don’t talk; ಧೋನಿ ಜತೆಗಿನ ಮುನಿಸಿನ ಬಗ್ಗೆ ಮಾತನಾಡಿದ ಭಜ್ಜಿ!
Tragedy: ವಾಕಿಂಗ್ ಮುಗಿಸಿ ಬರುವಷ್ಟರಲ್ಲಿ ತಂದೆ, ತಾಯಿ, ಸಹೋದರಿಯ ಬರ್ಬರ ಹತ್ಯೆ
Ballari: ದೌರ್ಜನ್ಯ, ಹಿಂಸಾಚಾರ ಖಂಡಿಸಿ ಬಳ್ಳಾರಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ
Ali Khan Tughlaq: ಮಾದಕ ವಸ್ತು ಕಳ್ಳಸಾಗಣೆ ಪ್ರಕರಣ; ಖ್ಯಾತ ನಟ ಮನ್ಸೂರ್ ಅಲಿ ಪುತ್ರ ಬಂಧನ
Kalaburagi: ಕಾಂಗ್ರೆಸ್‌ನ ಒಳ ಜಗಳ ಸಾಬೀತುಪಡಿಸಿದ ಸಮಾವೇಶ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.