Pandeshwar: ಟ್ಯಾಂಕರ್‌ನಲ್ಲಿ ತಂದ ಕೊಳಚೆ ನೀರು ಪಾಲಿಕೆ ಚರಂಡಿಗೆ

ಪಾಂಡೇಶ್ವರ ವೆಟ್‌ವೆಲ್‌ ಪರಿಸರವೆಲ್ಲ ವಾಸನೆ; ಸ್ಥಳೀಯರ ನಿತ್ಯದ ಗೋಳು; ವೆಟ್‌ವೆಲ್‌ಗೆ ಬರುವ ವಾಹನಗಳ ನಿಗಾ ವಹಿಸದ ಪಾಲಿಕೆ, ವಿವಿಧೆಡೆ ಸಮಸ್ಯೆ

Team Udayavani, Sep 3, 2024, 2:58 PM IST

Pandeshwar: ಟ್ಯಾಂಕರ್‌ನಲ್ಲಿ ತಂದ ಕೊಳಚೆ ನೀರು ಪಾಲಿಕೆ ಚರಂಡಿಗೆ

ಪಾಂಡೇಶ್ವರ: ಮಂಗಳೂರು ನಗರದಲ್ಲಿ ಒಳಚರಂಡಿ ತ್ಯಾಜ್ಯ ನೀರಿನ ಸಮಸ್ಯೆ ದಿನಕ್ಕೊಂದು ಬಗೆಯಲ್ಲಿ ವಿವಿಧ ಕಡೆಗಳಲ್ಲಿ ಕಾಡುತ್ತಿದೆ; ಇಂತಹುದರಲ್ಲಿ ಇದೀಗ ನಗರ ಹೊರವಲಯದ ಒಳಚರಂಡಿ ತ್ಯಾಜ್ಯ ನೀರು ಕೂಡ ನಗರದ ಜನರಿಗೆ ಸಂಕಷ್ಟ ಸೃಷ್ಟಿಸಿದೆ. ಗ್ರಾಮಾಂತರ ಭಾಗದ ಖಾಸಗಿ ಟ್ಯಾಂಕರ್‌ನಲ್ಲಿ ನಗರಕ್ಕೆ ತರುವ ಒಳಚರಂಡಿ ತ್ಯಾಜ್ಯ ನೀರನ್ನು ವೆಟ್‌ವೆಲ್‌, ಚರಂಡಿಗಳಿಗೆ ಬೇಕಾಬಿಟ್ಟಿ ಬಿಡುತ್ತಿರುವುದು ಒಂದೆಡೆಯಾದರೆ, ಅನಧಿಕೃತವಾಗಿಯೂ ಹರಿಸಲಾಗುತ್ತಿದೆ ಎಂಬುದು ವಿವಾದ ಸೃಷ್ಟಿಸಿದೆ. ಅದರಲ್ಲಿಯೂ ಪಾಂಡೇಶ್ವರ ಭಾಗದಲ್ಲಿ ಇದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿದೆ.

ಪಾಂಡೇಶ್ವರ, ಕುದ್ರೋಳಿ, ಪಡೀಲ್‌, ಎಕ್ಕೂರು, ಕೊಟ್ಟಾರಚೌಕಿ ಸಹಿತ ಮಂಗಳೂ ರಿನ ಒಟ್ಟು 22 ಕಡೆಗಳಲ್ಲಿ ವೆಟ್‌ವೆಲ್‌ ನಿರ್ಮಿಸಲಾಗಿದೆ. ಅಂದರೆ ಶೌಚಾಲಯ, ಪಾತ್ರೆ ತೊಳೆಯುವ ನೀರು ಒಳಚರಂಡಿಯ ಮೂಲಕ ಮ್ಯಾನ್‌ಹೋಲ್‌ (ಒಟ್ಟು 25 ಸಾವಿರಕ್ಕೂ ಅಧಿಕ) ದಾಟಿ ವೆಟ್‌ವೆಲ್‌ಗೆ ಹರಿಯುತ್ತದೆ. ಅಲ್ಲಿಂದ ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣ ಘಟಕ) ಬರುತ್ತದೆ.

ಏನಿದು ವೆಟ್‌ವೆಲ್‌ ʼರಗಳೆʼ!
ನಗರದಲ್ಲಿ ಒಳಚರಂಡಿ ನೀರು ಸರಾಗವಾಗಿ ಹರಿಯಲು ಪೈಪ್‌ಲೈನ್‌ ವ್ಯವಸ್ಥೆ ಇದೆ. ಆದರೂ ಕೆಲವು ಕಡೆಗಳಲ್ಲಿ ಇದು ಸಶಕ್ತವಾಗಿ ಇಲ್ಲ. ಜತೆಗೆ ಡ್ರೈನೇಜ್‌ ಬ್ಲಾಕ್‌ ಆಗಿ ಕೆಲವು ಕಡೆಗಳಲ್ಲಿ ಸಮಸ್ಯೆಗಳೂ ಆಗುತ್ತದೆ. ಇಂತಹ ಸಂದರ್ಭ ಟ್ಯಾಂಕರ್‌ನಲ್ಲಿ ಒಳಚರಂಡಿ ತ್ಯಾಜ್ಯವನ್ನು ತುಂಬಿಸಿ ನಗರದ ಪಾಂಡೇಶ್ವರ, ಕುದ್ರೋಳಿ ಸಹಿತ ಕೆಲವು ವೆಟ್‌ವೆಲ್‌ಗೆ ಪಾಲಿಕೆ ಟ್ಯಾಂಕರ್‌ನಲ್ಲಿ ತರುತ್ತಾರೆ. ಇದರ ಜತೆಗೆ ದೇರಳಕಟ್ಟೆ, ಉಳ್ಳಾಲ, ಬಜಪೆ ಸಹಿತ ನಗರದ ಹೊರಭಾಗದ ಕೆಲವರು ಒಳಚರಂಡಿ ತ್ಯಾಜ್ಯವನ್ನು ನಗರದ ಎಲ್ಲೆಲ್ಲೋ ಚರಂಡಿ-ರಾಜಕಾಲುವೆಗೆ ತಂದು ಬಿಡುತ್ತಿದ್ದಾರೆ ಎಂಬ ದೂರಿನ ಕಾರಣದಿಂದ ಕೆಲವು ವೆಟ್‌ವೆಲ್‌ಗ‌ಳಲ್ಲಿ ಹರಿಸಲು ಪಾಲಿಕೆ ಹಿಂದೆ ಅನುಮತಿ ನೀಡಿತ್ತು ಎಂಬುದು ಸದ್ಯದ ಮಾಹಿತಿ. ಆದರೆ “ಅನುಮತಿ ಇಧ್ದೋ-ಇಲ್ಲದೆಯೋ’ ಈಗಂತು ನಿತ್ಯ ಹಲವಾರು ಟ್ಯಾಂಕರ್‌ಗಳು ವೆಟ್‌ವೆಲ್‌ಗ‌ಳ ಪಕ್ಕದಲ್ಲಿ ಸಾಲು ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಎಲ್ಲೆಲ್ಲೂ ತ್ಯಾಜ್ಯ ನೀರಿನದ್ದೇ ಗೋಳು ಎಂಬಂತಾಗಿದೆ. ಸ್ಥಳೀಯವಾಗಿ ಆಕ್ರೋಶಕ್ಕೂ ಕಾರಣವಾಗಿದೆ.

ಕೆಲವು ವೆಟ್‌ವೆಲ್‌ಗ‌ಳ ನಿರ್ವಹಣೆ ಮಾಡುವ ಸಂದರ್ಭ ಒಳಚರಂಡಿ ತ್ಯಾಜ್ಯ ನೀರನ್ನು ಕೆಲವು ಟ್ಯಾಂಕರ್‌ನವರು ನೇರವಾಗಿ ತೋಡಿಗೆ ಬಿಡುತ್ತಿದ್ದಾರೆ ಎಂಬುದು ದೂರು. ಪಾಂಡೇಶ್ವರ ವೆಟ್‌ವೆಲ್‌ನಲ್ಲಿ ನಡೆದ ಈ ಘಟನೆ ಸ್ಥಳೀಯವಾಗಿ ಭಾರೀ ವಿರೋಧಕ್ಕೂ ಕಾರಣವಾಗಿದೆ. ವೆಟ್‌ವೆಲ್‌ ನಿರ್ವಹಣೆ ಕಾರಣಕ್ಕೆ ಬಂದ್‌ ಆಗಿದ್ದಾಗ ಖಾಸಗಿಯವರು ತರುವ ಟ್ಯಾಂಕರ್‌ಗಳ ನೀರನ್ನು ನೇರವಾಗಿ ತೋಡಿಗೆ ಹರಿಸಿ ಸ್ಥಳೀಯವಾಗಿ ದುರ್ನಾತ ಹಬ್ಬಿ ಪ್ರತಿಭಟನೆಗೂ ಕಾರಣವಾಗಿದೆ.

ಪರಿಸರವೆಲ್ಲ ವಾಸನೆ!
ಖಾಸಗಿ ಟ್ಯಾಂಕರ್‌ನವರು ಪಾಲಿಕೆಗೆ ಹಣ ಪಾವತಿ ಮಾಡಲು ಇದೆ. ಜತೆಗೆ ವಾಹನಗಳ ನಿಗದಿ ಕೂಡ ಇದೆ. ಆದರೆ ಪಾಂಡೇಶ್ವರಕ್ಕೆ ಬರುವ ಬಹುತೇಕ ಟ್ಯಾಂಕರ್‌ಗಳವರು ಹಣ ನೀಡುತ್ತಿಲ್ಲ, ಜತೆಗೆ ವಾಹನ ಎಷ್ಟು ಬರುತ್ತಿದೆ? ಎಂಬುದಕ್ಕೆ ಲೆಕ್ಕವೇ ಇಲ್ಲ ಎಂಬುದು ಸ್ಥಳೀಯರ ದೂರು. ಸ್ಥಳೀಯವಾಗಿ ವಾಸನೆ ವ್ಯಾಪಿಸಿ ವಾಸಿಸಲು ಆಗದಂತಹ ಪರಿಸ್ಥಿತಿ ಇದೆ. ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ನಡೆದಾಡಲು ಆಗದಂತಹ ಪರಿಸ್ಥಿತಿ ಇದೆ. ಸುಭಾಷ್‌ನಗರ, ಪಟೇಲ್‌ ಕಾಂಪೌಂಡ್‌, ಹೊಗೆಬಜಾರ್‌ ಮ್ಯಾನ್‌ಹೋಲ್‌ ಉಕ್ಕಿ ಹರಿಯುತ್ತಿದೆ ಎಂಬುದು ಸ್ಥಳೀಯರ ದೂರು.

“ವೆಟ್‌ವೆಲ್‌ಗೆ ಬೇಡ-ಎಸ್‌ಟಿಪಿಗೆ ತರಲಿ’
ಗ್ರಾಮಾಂತರ ಭಾಗದಿಂದ ಒಳಚರಂಡಿ ನೀರನ್ನು ಟ್ಯಾಂಕರ್‌ ಮೂಲಕ ನಗರಕ್ಕೆ ತಂದು ಸರಾಗವಾಗಿ ಪಾಂಡೇಶ್ವರ ವೆಟ್‌ವೆಲ್‌ನಲ್ಲಿ ಯಾವುದೇ ಲೆಕ್ಕಾಚಾರವಿಲ್ಲದೆ ನಿರ್ವಹಣೆ ಮಾಡುತ್ತಿರುವ ಬಗ್ಗೆ ಹಾಗೂ ಕೆಲವು ಸಮಯ ನೇರವಾಗಿ ಚರಂಡಿಗೆ ನೀರು ಹರಿಸಿದ ವಿಚಾರ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ತತ್‌ಕ್ಷಣ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆದರೆ ಈಗ ಕುದ್ರೋಳಿ ವೆಟ್‌ವೆಲ್‌ಗೆ ಒಳಚರಂಡಿ ನೀರನ್ನು ಟ್ಯಾಂಕರ್‌ನಲ್ಲಿ ತರಿಸಲಾಗುತ್ತಿದೆ. ಬಜಾಲ್‌, ಸುರತ್ಕಲ್‌, ಕಾವೂರು, ಪಚ್ಚನಾಡಿ ಎಸ್‌ಟಿಪಿಗೆ ಒಳಚರಂಡಿ ನೀರನ್ನು ಟ್ಯಾಂಕರ್‌ ಮೂಲಕ ತರಬೇಕೇ ವಿನಾ ಅದನ್ನು ವೆಟ್‌ವೆಲ್‌ಗೆ ಬಿಡುವುದು ಸರಿಯಲ್ಲ ಎಂಬ ಬಗ್ಗೆ ಆಯುಕ್ತರಿಗೆ ಟಿಪ್ಪಣಿ ಬರೆಯಲಾಗಿದೆ.
-ಸುಧೀರ್‌ ಶೆಟ್ಟಿ ಕಣ್ಣೂರು ಮೇಯರ್‌, ಮಂಗಳೂರು

ಪಾಲಿಕೆ ನಿಗಾ ಯಾಕಿಲ್ಲ?
ವೆಟ್‌ವೆಲ್‌ ರಿಪೇರಿ ಸಂದರ್ಭ ಖಾಸಗಿ ಲಾರಿಯಲ್ಲಿ ತಂದ ಹೊರವಲಯದ ಒಳಚರಂಡಿ ನೀರನ್ನು ಪಾಂಡೇಶ್ವರ ವೆಟ್‌ವೆಲ್‌ನ ಪಕ್ಕದ ತೋಡಿಗೆ ಇತ್ತೀಚೆಗೆ ಬಿಡಲಾಗಿತ್ತು. ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇದು ನಿಂತಿದೆ. ಆದರೆ, ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಇಲ್ಲಿಗೆ ಲಾರಿ ಬರುತ್ತಿದೆ. ಇದರ ಬಗ್ಗೆ ನಿಗಾ ವಹಿಸುವವರು ಯಾರು? ಪ್ರತೀ ವಾಹನದವರು ನಿಗದಿತ ಹಣ ಕಟ್ಟಬೇಕು ಎಂಬ ನಿಯಮವಿದ್ದರೂ ಕೆಲವರು ಇನ್ನೂ ಲಕ್ಷಾಂತರ ರೂ. ಹಣ ಪಾಲಿಕೆಗೆ ಪಾವತಿ ಮಾಡಿಲ್ಲ. ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು ಯಾಕೆ ನಿಗಾ ವಹಿಸುತ್ತಿಲ್ಲ? ಎಂಬುದು ಪ್ರಶ್ನೆ.
-ದಿವಾಕರ್‌ ಪಾಂಡೇಶ್ವರ ಕಾರ್ಪೋರೆಟರ್‌

ಅಧಿಕಾರಿಗಳ ಮೌನ ಯಾಕೆ?
ಉಳ್ಳಾಲ, ದೇರಳಕಟ್ಟೆ ಇನ್ನಿತರ ಗ್ರಾಮಾಂತರ ಭಾಗದಿಂದ ಟ್ಯಾಂಕರ್‌ನಲ್ಲಿ ಒಳಚರಂಡಿ ನೀರನ್ನು ತಂದು ಪಾಂಡೇಶ್ವರ ಭಾಗದಲ್ಲಿ ಬೃಹತ್‌ ಚರಂಡಿಗೆ ನೇರವಾಗಿ ಬಿಡಲಾಗುತ್ತಿದೆ. ಮೊನ್ನೆ ಸ್ಥಳೀಯರು ವಿರೋಧ ಮಾಡಿದ ಕಾರಣದಿಂದ ಕೊಂಚ ಲಾರಿಗಳ ಆಗಮನ ಕಡಿಮೆ ಆಗಿದೆ. ಆದರೆ ವಾಹನಗಳು ಈಗಲೂ ವೆಟ್‌ವೆಲ್‌ ಕಡೆಗೆ ಬರುತ್ತಿದೆ. ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ಪಾಲಿಕೆಯ ವೆಟ್‌ವೆಲ್‌ ಪಂಪ್‌ಹೌಸ್‌ನಲ್ಲಿ ಖಾಸಗಿ ಸಂಸ್ಥೆಯವರು ಟ್ಯಾಂಕರ್‌ ಮುಖಾಂತರ ಒಳಚರಂಡಿ ನೀರು ಚರಂಡಿಗೆ ಬಿಡಲು ಅನುಮತಿ ನೀಡಿದ್ದು ಯಾರು?.
-ಅಬ್ದುಲ್‌ ಲತೀಫ್‌ ಕಾರ್ಪೋರೆಟರ್‌

-ದಿನೇಶ್‌ ಇರಾ

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Mangaluru: ಪ್ರಮುಖ ವ್ಯಾಪಾರ ಕೇಂದ್ರವೀಗ ಹಾಳು ಕೊಂಪೆ!

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

POCSO ಪ್ರಕರಣ : ಜ್ಯೋತಿಷಿ ನರಸಿಂಹ ಪ್ರಸಾದ್‌ ಪಾಂಗಣ್ಣಾಯ ಬಂಧನ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.