Ankita Amar: ನನ್ನ ಕಣ್ಣು ಕೊಡಿಸಿದ ಅವಕಾಶ! ಇಬ್ಬನಿ ಬಗ್ಗೆ ಅಂಕಿತಾ ನಿರೀಕ್ಷೆ 

Team Udayavani, Sep 3, 2024, 3:18 PM IST

Ankita Amar: ನನ್ನ ಕಣ್ಣು ಕೊಡಿಸಿದ ಅವಕಾಶ! ಇಬ್ಬನಿ ಬಗ್ಗೆ ಅಂಕಿತಾ ನಿರೀಕ್ಷೆ 

“ಪರೀಕ್ಷೆ ಬರೆದಾಗಿದೆ, ಎಷ್ಟು ಅಂಕ ಬರ್ತಾವೋ ಗೊತ್ತಿಲ್ಲ, ಕಾತುರದಿಂದ ಇದ್ದೀನಿ’ – ಹೀಗೆ ಹೇಳಿ ನಕ್ಕರು ನಟಿ ಅಂಕಿತಾ ಅಮರ್‌.

ಕನ್ನಡ ಜನತೆಗೆ ಈ ನಟಿ ಹೊಸಬರೇನಲ್ಲ. ಕಿರುತೆರೆಯಲ್ಲಿ ನಟನೆ, ನಿರೂಪಣೆ ಮಾಡಿ ಸೈ ಎನಿಸಿಕೊಂಡ ಈ ಅಪ್ಪಟ ಕನ್ನಡತಿ ಸದ್ಯ ಸಿನಿರಂಗದಲ್ಲಿ ತಮ್ಮ ಭವಿಷ್ಯ ಕಾಣುವ ಹೊಸ್ತಿಲಲ್ಲಿದ್ದಾರೆ. ಪರಂವಃ ಸ್ಟುಡಿಯೋಸ್‌ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ನಾಯಕ ನಟಿ ಅಂಕಿತಾ, ತಮ್ಮ ಸಿನಿಯಾನದ ಅಂಬೆಗಾಲಿನ ಕ್ಷಣಗಳನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಈ ಚಿತ್ರ ಸೆ.5ರಂದು ತೆರೆಕಾಣುತ್ತಿದೆ. ಸೆ.4ರಂದು ವಿಶೇಷ ಪ್ರೀಮಿಯರ್‌ ಶೋ ನಡೆಯಲಿದೆ. ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ “ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಕ್ಕೆ ಆಯ್ಕೆಯಾಗಿದ್ದೇ ಒಂದು ಸೋಜಿಗ ಎನ್ನುತ್ತಾರೆ ಅಂಕಿತಾ.

ಚಿತ್ರದ ಪಾತ್ರದ ಬಗ್ಗೆ ಮಾತನಾಡುತ್ತ, “ಈ ಚಿತ್ರದ ನಟನೆಗೆ ಯಾವುದೇ ಆಡಿಷನ್‌ ಕೊಟ್ಟಿರಲಿಲ್ಲ. ನನ್ನದೊಂದು ಪೋಸ್ಟ್‌ ನೋಡಿ ನಿರ್ದೇಶಕರು ಭೇಟಿಯಾಗಿ ಮಾತನಾಡಿದರು. ಕೇವಲ ನನ್ನ ಕಣ್ಣು ನೋಡಿ ಅನಾಹಿತಾ ಪಾತ್ರಕ್ಕೆ ಆಯ್ಕೆ ಮಾಡಿದರು. ಅನಾಹಿತಾ ನೆನಪುಗಳೊಟ್ಟಿಗೆ ಸಾಗುವ ಭಾವನಾತ್ಮಕ ಹುಡುಗಿ. ಕವಯಿತ್ರಿ ಕೂಡ. ಅನಾಹಿತಾ ಹೆಸರೇ ಸುಂದರ, ನದಿ ಉಗಮವಾಗುವ ಸ್ಥಳ ಎಂಬುದು ಇದರರ್ಥ. ನದಿಯಲ್ಲಿ ನೀರು ಹರಿಯುವಂತೆ ಇವಳಲ್ಲಿ ಭಾವನೆ ಹರಿಯುತ್ತವೆ. ತನ್ನ ಕನಸು, ಭಾವನೆ, ಮನೋಭಿಲಾಷೆ ಯಾವುದನ್ನೂ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಫೋಟೋ ತೆಗೆಯುದು, ಫೋಟೋಗೆ ತಕ್ಕ ಕವಿತೆಯನ್ನು ಡೈರಿಯಲ್ಲಿ ಬರೆಯೋದು ಇದೇ ಅವಳ ಪ್ರವೃತ್ತಿ. ಚಿತ್ರದಲ್ಲಿ ಮೂರು ರೂಪಗಳಲ್ಲಿ ಅನಾಹಿತಾ ಪ್ರೇಕ್ಷಕರ ಮುಂದೆ ಕಾಣುತ್ತಾಳೆ. ನನ್ನ ವ್ಯಕ್ತಿತ್ವವೂ ಹೀಗೆ. ಹಾಗಾಗಿ ಅನಾಹಿತಾ ನನಗೆ ಆಪ್ತವಾಗಿದ್ದಾಳೆ’ ಎನ್ನುತ್ತಾರೆ ಅಂಕಿತಾ.

ನಟಿ ಅಂಕಿತಾಗೆ ಚಂದನವನದಲ್ಲಿ ಇದು ಚೊಚ್ಚಲ ಚಿತ್ರ. ಹಾಗಾಗಿ ಈ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಸಿನಿಮಾ ಬಗ್ಗೆ ಮತ್ತಷ್ಟು ಹೇಳುವ ಅವರು, “ಅಮೃತವರ್ಷಿಣಿ, ನಮ್ಮೂರ ಮಂದಾರ ಹೂವೆ ಚಿತ್ರಗಳಂತೆ ಈ ಚಿತ್ರದಲ್ಲಿ ಹಾಡುಗಳು ಪ್ರಧಾನವಾಗಿವೆ. “ಓ ಅನಾಹಿತಾ’ ಎಂಬ ಆಚರಣೆ ಮಾಡುವ ಹಾಡಿದೆ, “ಸದಾ ನೀನೆ’ ಎಂಬ ಸಾಹಿತ್ಯಕ್ಕೆ ಒತ್ತು ನೀಡಿರುವ ಹಾಡು, ಭಾವಗೀತೆ ಶೈಲಿಯ “ಹೇಳು ಗೆಳತಿ’, ಶಾಸ್ತ್ರೀಯ ಲೇಪನದ “ರಾಧೆ ನೀನು ಆರಾಧಿಸಿ’ ಹಾಡುಗಳು ಸಂಗೀತ ಪ್ರಿಯರಿಗೆ ಇಷ್ಟವಾಗುತ್ತೆ. ಇಲ್ಲಿ ನೈಜತೆ, ಸರಳತೆ, ಸುಂದರ ಸಾಹಿತ್ಯವಿದೆ. ಕನ್ನಡ ಚಿತ್ರರಂಗದಲ್ಲೂ ಈ ಶೈಲಿಯ ಸಿನಿಮಾ ಮಾಡಬಹುದು ಎಂದು ತೋರಿಸಿದ್ದೇವೆ’ ಎಂಬುದು ಅಂಕಿತಾ ಅಂತರಾಳದ ಮಾತುಗಳು.

ಪರಂವಃ ಸ್ಟುಡಿಯೋಸ್‌ನಡಿ ಕೆಲಸ ಮಾಡಿದ ಅನುಭವದ ಬಗ್ಗೆ ಹೇಳುವ ಅವರು, “ಮೊದಲಿಗೆ ಇದು ಪರಂವಃ ಚಿತ್ರ ಎಂದು ಗೊತ್ತಿರಲಿಲ್ಲ. ನಂತರ ಗೊತ್ತಾದಾಗ

ಬಹಳ ಖುಷಿಯಾಯಿತು. ಇದೊಂದು ಕಲಾವಿದರಿಗೆ ಶಾಲೆ ಇದ್ದಂತೆ. ಸೃಜನಾತ್ಮಕತೆಗೆ ಇಲ್ಲಿ ಹೆಚ್ಚು ಜಾಗವಿದೆ. ಒಬ್ಬರ ಕನಸಿಗೆ ಇನ್ನೊಬ್ಬರು ಇಲ್ಲಿ ಹೆಗಲು ನೀಡುತ್ತಾರೆ. ಇದು ನನಗೊಂದು ಹೊಸ ಪ್ರಪಂಚ’ ಎನ್ನುತ್ತಾರೆ ಅಂಕಿತಾ.

ಟಾಪ್ ನ್ಯೂಸ್

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

sidda

‘One Nation One Election’ ಪ್ರಸ್ತಾವ: ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ

cmCM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

CM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Gagana Kusuma: ಗಗನ ಕುಸುಮ ಟ್ರೇಲರ್‌ ಬಂತು

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

Bhale Huduga Movie: ಹಳ್ಳಿ ಹುಡುಗನ ಸಾಹಸ ಕಥನ

15

Nice Road Kannada Movie: ನೈಸ್‌ ರೋಡ್‌ ಅಲ್ಲ,ನೈಟ್‌ ರೋಡ್‌!

14

Rummy Aata Movie: ಸೆ.20ರಿಂದ ರಮ್ಮಿ ಆಟ ಶುರು

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

ರಾಷ್ಟ್ರಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಕೋಡಳ್ಳಿ ಶಿವರಾಮ್‌ ವಿಧಿವಶ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

ಶುಕ್ರಯಾನಕ್ಕೂ ಕೇಂದ್ರ ಸಂಪುಟ ಅನುಮೋದನೆ: ಚಂದ್ರ, ಮಂಗಳ ಯೋಜನೆ ಬಳಿಕ ಶುಕ್ರಯಾನಕ್ಕೆ ನೆರವು

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Biotechnology: ಜೈವಿಕ ತಂತ್ರಜ್ಞಾನ ಬಲವರ್ಧನೆಗೆ ಬಯೋ ರೈಡ್‌: ಅಶ್ವಿ‌ನಿ ವೈಷ್ಣವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.