Bajpe ತ್ಯಾಜ್ಯ ಕಟೀಲಿಗೆ;ಸದ್ದಿಲ್ಲದೆ ಘನ ತ್ಯಾಜ್ಯ ಘಟಕ ನಿರ್ಮಾಣ ಕೆಲಸ:ಗ್ರಾಮಸ್ಥರಿಂದ ವಿರೋಧ
Team Udayavani, Sep 3, 2024, 3:19 PM IST
ಕಟೀಲು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಬಲ್ಲಾಣದಲ್ಲಿ ಕಿನ್ನಿಗೋಳಿ ಮತ್ತು ಬಜಪೆ ಪಟ್ಟಣ ಪಂಚಾಯತ್ ಜಂಟಿಯಾಗಿ ಘನ ತ್ಯಾಜ್ಯ ಘಟಕಕ್ಕೆ ಸರ್ವೇ ಕಾರ್ಯ ನಡೆದು ಜಿಲ್ಲಾ ಮಟ್ಟದಲ್ಲಿ ಸದ್ದಿಲ್ಲದೆ ಕೆಲಸ ನಡೆಯುತ್ತಿದೆ. ಸ್ಥಳೀಯರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಗ್ರಾಮಸ್ಥರು ಹೋರಾಟಕ್ಕೆ ಸಿದ್ದರಾಗಿದ್ದಾರೆ.
ಕಟೀಲು ಸಮೀಪದ ಬಲ್ಲಾಣದಲ್ಲಿ 132/1 ಸರ್ವೆ ನಂಬರ್ ನಲ್ಲಿ ಸುಮಾರು 19.80 ಎಕರೆ ಜಮೀನಿನಲ್ಲಿ 7 ಎಕರೆ ಜಮೀನು ತ್ಯಾಜ್ಯ ಘಟಕಕ್ಕೆ ಮೀಸಲಿರಿಸಿದ್ದು ಸರ್ವೇ ಕಾರ್ಯ ನಡೆಯುತ್ತಿದೆ.
ಕಿನ್ನಿಗೋಳಿ ಮತ್ತು ಬಜಪೆ ಕಳೆದ ಎರಡು ವರ್ಷದ ಹಿಂದೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ್ದು, ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚುತ್ತಿದೆ, ಎರಡೂ ಪಟ್ಟಣ ಪಂಚಾಯತ್ ಗೆ ತ್ಯಾಜ್ಯ ಘಟಕ ಅನಿವಾರ್ಯವಾಗಿದ್ದು, ಕಿನ್ನಿಗೋಳಿಯಲ್ಲಿ ಪ್ರಸ್ತುತ ಒಂದು ಎಕರೆ ಪ್ರದೇಶದಲ್ಲಿ ಒಂದು ತ್ಯಾಜ್ಯ ಘಟಕ ಇದ್ದು, ಭವಿಷ್ಯದ ಯೋಚನೆ ಯೋಜನೆಯಿಂದ, ಪಟ್ಟಣ ಪಂಚಾಯತ್ ನಿಂದ ಈ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ಸಾಯೀಶ್ ಚೌಟ ಅವರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನರ್ತಿಕಲ್ ನಲ್ಲಿ ಸುಮಾರು 2 ಎಕರೆ ಜಮೀನು ಗುರುತಿಸಿ ಅದನ್ನು ಘನ ತ್ಯಾಜ್ಯಕ್ಕೆ ಮೀಸಲಿರಿಸಿ ಕಾಮಗಾರಿಗೆ ಗುದ್ದಲಿ ಪೂಜೆಯೂ ನಡೆದಿತ್ತು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಪ್ರಸ್ತುತ ಎರಡು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಅವಕಾಶವಿದ್ದು ಮುಂದಿನ ಸುಮಾರು 50 ವರ್ಷಕ್ಕಾಗುವಷ್ಟು ತ್ಯಾಜ್ಯ ನಿರ್ವಹಣೆಗೆ ಈ ಜಮೀನು ಸಾಕಾಗಬಹುದಾಗಿದೆ.
ಎರಡು ಮೂರು ಕಡೆಗಳಲ್ಲಿ ಜಮೀನು ಗುರುತು
ಬಜಪೆ ಪಟ್ಟಣ ಪಂಚಾಯತ್ ಘನ ತ್ಯಾಜ್ಯ ಘಟಕ್ಕಾಗಿ ಈ ಹಿಂದೆ ಎರಡು ಮೂರು ಕಡೆಗಳಲ್ಲಿ ಜಮೀನು ಗುರುತಿಸಲಾಗಿದ್ದು ಎಲ್ಲ ಕಡೆಗಳಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಈ ಕಾರಣದಿಂದ ಇದೀಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದಲ್ಲಿ ಎರಡೂ ಪಟ್ಟಣ ಪಂಚಾಯತ್ ಜಂಟಿಯಾಗಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ.
ಕಟೀಲು ದೇವಸ್ಥಾನದಲ್ಲಿ ಇದೀಗ ದ್ರವ ತ್ಯಾಜ್ಯ ಘಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಕಟೀಲು ದೇವಸ್ಥಾನದ ಗೋಶಾಲೆಯ ಬಳಿ ಕಟೀಲು ಗ್ರಾಮ ಪಂಚಾಯತ್ ಇರುವಾಗ ತಾಜ್ಯ ಘಟಕ ಮಾಡಲಾಗಿದ್ದು ಅದು ನೆನೆಗುದಿಗೆ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.