Yadagiri; ಬಿಜೆಪಿಯವರು ಆಪರೇಷನ್ ಕಮಲ ಬಿಡಲಿ: ಸಚಿವ ದರ್ಶನಾಪುರ
Team Udayavani, Sep 3, 2024, 6:27 PM IST
ಯಾದಗಿರಿ: ಸದಾ ಅಧಿಕಾರದ ಹಪಹಪಿಯಲ್ಲಿರುವ ಬಿಜೆಪಿಯವರು ಸುಭದ್ರ ಸರ್ಕಾರವನ್ನು ಬಿಳಿಸಲು ಹಿಂಬಾಗಿಲಿನ ರಾಜಕಾರಣವನ್ನು ಮಾಡುತ್ತಾರೆ. ಬಿಜೆಪಿ ಇತಿಹಾಸದಲ್ಲಿ 112-113 ಸ್ಥಾನ ಪಡೆದು ಸರ್ಕಾರ ರಚನೆ ಮಾಡಲಿಲ್ಲ, ಆದರೆ ಜನಾಭಿಪ್ರಾಯವನ್ನೂ ಸಹ ಒಪ್ಪಿಕೊಳ್ಳದೆ ಕೇಂದ್ರ ಸರ್ಕಾರದ ಮೂಲಕ ರಾಜ್ಯದಲ್ಲಿ ಒತ್ತಡ ಹಾಕಲು ಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.
ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ ಆಫರ್ ಎಂಬ ಶಾಸಕ ಗಾಣಿಗ ರವಿಕುಮಾರ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಹಿಂದೆ ಬಿಜೆಪಿ ರಾಜ್ಯದಲ್ಲಿ ಲೂಟಿ ಮಾಡಿತ್ತು, ಇದೀಗ ಕೇಂದ್ರದ ಪ್ರಭಾವ ಬಳಿಸಿ ರಾಜ್ಯ ಸರ್ಕಾರದ ಮೇಲೆ ಇಲ್ಲೊಂದು ಅರೋಪಗಳನ್ನು ಸೃಷ್ಠಿಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ಬದ್ಧತೆಯಿಂದ ಕೆಲಸ ಮಾಡಿದ್ದಾರೆ ಹಾಗೂ ರಾಜ್ಯ ರಾಜಕೀಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಎಲ್ಲಾ ಕಾಂಗ್ರೆಸ್ ಶಾಸಕರು ದುಡ್ಡಿನ ಆಸೆಗೆ ಯಾವುದೇ ಕಾರಣಕ್ಕು ಒಳಗಾಗಿಲ್ಲ, ಆಗುವ ಸಂದರ್ಭವು ಸಹ ಬರುವುದಿಲ್ಲ ಎಂದು ಹೇಳಿದರು.
ವೇದಿಕೆಯ ಮೇಲೆ ಭಾಷಣ ಮಾಡುವ, ಊರಿಗೆಲ್ಲಾ ಆಚಾರ ಹೇಳುವ ಪ್ರಧಾನಿ ಮೋದಿಯವರು ಆಪರೇಷನ್ ಕಮಲ ಮಾಡುವುದು ಸರಿಯೇ, ಮೊದಲು ಬಿಜೆಪಿಯವರು ಆಪರೇಷನ್ ಸ್ಕೀಮ್ ಗಳನ್ನು ಬಿಡಲಿ, ಹಗಲು ಕನಸು ಕಾಣುವ ಬಿಜೆಪಿ ಮಂದಿ ಅಧಿಕಾರ ಇದ್ದಾಗ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇದೀಗ ಅಧಿಕಾರ ಕಳೆದುಕೊಂಡಾಗ ಮಾತನಾಡಿದ್ದಾರೆ. ರಾಜಕೀಯವಾಗಿ ಪ್ರಭುದ್ಧತೆ ಬೆಳಿಸಿಕೊಳ್ಳಿ ನಂತರ ಇನ್ನೊಂದು ಪಕ್ಷದ ವಿರುದ್ಧ ಹೇಳಿಕೆ ನೀಡಿ ಎಂದು ಶಾಸಕ ಗಾಣಿಗ ರವಿಕುಮಾರ ಅವರಿಗೆ ಟಾಂಗ್ ನೀಡಿದರು.
ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಸಿಎಂ ಆಗುವ ಆಸೆ ವ್ಯಕ್ತಪಡಿಸಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ಸಧ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿಯಿಲ್ಲ, ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರಕಾರ ಜನಪರ ಆಡಳಿತ ನೀಡುವ ಮೂಲಕ ಜನರ ಮನಸ್ಸಿನಲ್ಲಿ ಉಳಿದುಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕನ್ನಡಿಗರ ಒಮ್ಮತದ ಮುಖ್ಯಮಂತ್ರಿಗಳೆಂದು ಅಭಿಮತ ವ್ಯಕ್ತಪಡಿಸಿದರು.
ಇನ್ನೂ ನಟ ದರ್ಶನ ಪ್ರಕರಣದ ಬಗ್ಗೆ ಮಾತನಾಡಿದ ಸಚಿವ ದರ್ಶನಾಪುರ, ನಟ ದರ್ಶನ ಅವರು ತಪ್ಪು ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಮಾಧ್ಯಮವರು ಸಹ ಅವರ ನ್ಯೂಸ್ ಮೇಲಿಂದ ಮೇಲೆ ಹಾಕುತ್ತಾರೆ. ದರ್ಶನ್ ಅವರು ಪಾಪ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.