News Paper Distributors Day: ಓದುಗರ ಮನೆ ಬಾಗಿಲಿಗೆ ಪತ್ರಿಕೆ ತರುವ ಸೇನಾನಿಗಳು

ಇಂದು ಪತ್ರಿಕಾ ವಿತರಕರ ದಿನ , ಮಳೆ, ಬಿಸಿಲೆನ್ನದೆ ಬಿಸಿಬಿಸಿ ಸುದ್ದಿ ನೀಡುವ ವಿತರಕರಿಗೆ ಈ ದಿನ ಮೀಸಲು

Team Udayavani, Sep 4, 2024, 7:27 AM IST

newspaper

ಕ್ಷಣ ಕ್ಷಣಕ್ಕೆ ಮೊಬೈಲ್‌ನಲ್ಲಿ ಸುದ್ದಿ ಓದಿರಲಿ, ಇಡೀ ದಿನ ಟಿವಿಯೇ ನೋಡಿರಲಿ… ಬೆಳಗ್ಗೆ ಎದ್ದು ಕಾಫಿನೋ, ಚಹಾವನ್ನು ಹೀರುತ್ತಾ ದಿನಪತ್ರಿಕೆ ಓದದಿದ್ದರೆ ಎಷ್ಟೋ ಜನಕ್ಕೆ ಈಗಲೂ “ಶುಭ ಮುಂಜಾವು’ ಶುರುವಾಗುವುದೇ ಇಲ್ಲ! ಓದುಗರ ಬೆಳಗಿನ ಹೊತ್ತಿಗೆ ಸುದ್ದಿಗಳನ್ನು ಹೊತ್ತ ಪತ್ರಿಕೆಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ಪತ್ರಿಕಾ ವಿತರಕರು ಮಾಡುತ್ತಾರೆ. ಅವರ ಕಾರ್ಯವನ್ನು ಸ್ಮರಿಸುವುದಕ್ಕಾಗಿ ಸೆ. 4ರಂದು ಪತ್ರಿಕಾ ವಿತರಕರ ದಿನವನ್ನು ಆಚರಿಸಲಾಗುತ್ತದೆ.

ಯಾಕೆ ಪತ್ರಿಕಾ ವಿತರಕರ ದಿನ?
ಒಂದು ಸುದ್ದಿ ಪತ್ರಿಕೆ ಮುದ್ರಣವಾಗಿ ಓದುಗರ ಕೈ ಸೇರುವ ಹೊತ್ತಿಗೆ, ಅದರ ಹಿಂದೆ ಸಾವಿರಾರು ಜನರ ಪರಿಶ್ರಮವಿರುತ್ತದೆ. ಈ ಪೈಕಿ ಪತ್ರಿಕಾ ವಿತರಕರ ಪಾತ್ರ ಮಹತ್ವದ್ದು. ಎಷ್ಟೇ ಅತ್ಯುತ್ತಮವಾಗಿ ಪತ್ರಿಕೆ ರೂಪಿಸಿದರೂ, ಸರಿಯಾದ ಸಮಯಕ್ಕೆ ಓದುಗರ ಕೈ ಸೇರಿದಿದ್ದರೆ ಎಲ್ಲರ ಶ್ರಮ ವ್ಯರ್ಥವಾಗುತ್ತದೆ.

ಈ ಶ್ರಮ ವ್ಯರ್ಥವಾಗದಂತೆ ನೋಡಿಕೊಳ್ಳುವವರೇ ಈ “ವಿತರಕರು’. ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿರುವ ವಿತರಕರ ಸೇವೆಯನ್ನು ಸ್ಮರಿಸುವುದಕ್ಕಾಗಿಯೇ ಸೆ.4ರಂದು ಪತ್ರಿಕಾ ವಿತರಕರ ದಿನವನ್ನು ಆಚರಿಸಲಾಗುತ್ತದೆ. ಎಲ್ಲ ಋತುಮಾನಗಳಲ್ಲೂ ವ್ರತದಂತೆ ಅವರು ಪತ್ರಿಕಾ ವಿತರಣೆಯನ್ನು ಕಾರ್ಯವನ್ನು ಕೈಗೊಳ್ಳುತ್ತಾರೆ. ಇದು ಅವರ ವೃತ್ತಿ ಬದ್ಧತೆಗೆ ಸಾಕ್ಷಿ.

ಪತ್ರಿಕಾ ವಿತರಕರ ದಿನದ ಇತಿಹಾಸ
ಅಮೆರಿಕದ ನ್ಯೂಯಾರ್ಕ್‌ನಲ್ಲಿ 191 ವರ್ಷಗಳ ಹಿಂದೆ ಅಂದರೆ 1833 ಸೆಪ್ಟಂಬರ್‌ 4ರಂದು ಪತ್ರಿಕೆ ಮಾರಾಟಕ್ಕೆ “ದ ನ್ಯೂಯಾರ್ಕ್‌ ಸನ್‌’ ಪತ್ರಿಕೆ ಪ್ರಕಾಶಕ ಬೆಂಜಮಿನ್‌ ಡೇ 10 ವರ್ಷದ ಬಾಲಕ ಬಾರ್ನಿ ಫ್ಲಾಹರ್ಟಿಗೆ ಪತ್ರಿಕೆ ಮಾರಾಟ ಕೆಲಸ ವಹಿಸಿದರು. ಈ ಬಾಲಕ ರಸ್ತೆ ಬದಿಯಲ್ಲಿ ನಿಂತ “ಪೇಪರ್‌… ಪೇಪರ್‌ ತೆಗೆದುಕೊಳ್ಳಿ’ ಎಂದು ಜೋರಾಗಿ ಹೇಳುತ್ತಾ ಮಾರಾಟ ಮಾಡಲಾರಂಭಿಸಿದ.ಅನಂತರ, ಪೇಪರ್‌ ಮಾರಾಟಕ್ಕೆ ಇನ್ನಷ್ಟು ಹುಡುಗರು ಜತೆಯಾದರು.

ಹೀಗೆ ಪತ್ರಿಕಾ ವಿತರಣೆಯು ಕಾಲಾನಂತರದಲ್ಲಿ ಅನೇಕ ಬದಲಾವಣೆಗಳನ್ನು ಕಂಡಿವೆ. ಗಲ್ಲಿಯಲ್ಲಿ ನಿಂತು ಪತ್ರಿಕೆ ಮಾರಾಟ ಮಾಡಿದ ಮೊದಲ ದಿನದ ನೆನಪಿಗಾಗಿ ಸೆ. 4ರಂದು ಪತ್ರಿಕಾ ವಿತರಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಇಷ್ಟಾಗಿಯೂ ಮೊಟ್ಟ ಮೊದಲಿಗೆ ಯಾವಾಗ ಪತ್ರಿಕಾ ವಿತರಣೆ ದಿನವನ್ನು ಆಚರಿಸಲಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ.

ಸೆ.8ಕ್ಕೆ ಚಿತ್ರದುರ್ಗದಲ್ಲಿ 4ನೇ ರಾಜ್ಯಮಟ್ಟದ ಪತ್ರಿಕಾ ವಿತರಕರ ಸಮ್ಮೇಳನದ ವಿಶೇಷ
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ಪತ್ರಿಕಾ ವಿತರಕರ ದಿನವನ್ನು ಸೆ.8ರಂದು ಆಚರಿಸಲಿದೆ. ಇದರ ಅಂಗವಾಗಿ ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಗ ವಿಕಲ ಪತ್ರಿಕಾ ವಿತರಕರೊಬ್ಬರಿಗೆ ಸಮ್ಮಾನ ಮಾಡಲಾಗುತ್ತಿದೆ.

ಜತೆಗೆ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೂಡ ಇರಲಿದೆ. ಪತ್ರಿಕಾ ವಿತರಣೆಗೆ ಸಂಬಂಧಿಸಿದಂತೆ, “ಪತ್ರಿಕೆ ವಿತರಣೆ ಅಂದು-ಇಂದು-ಮುಂದು’ ಎಂಬ ವಿಷಯದ ಕುರಿತು ಚರ್ಚಾಗೋಷ್ಠಿ ಇರಲಿದೆ. ಈ ಸಮ್ಮೇಳನಕ್ಕೆ 3,000ಕ್ಕೂ ಹೆಚ್ಚು ವಿತರಕರು ಆಗಮಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಹಾಗೂ ಪತ್ರಿಕೋದ್ಯಮದ ಹಿರಿಯರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಕೆ. ತಿಳಿಸಿದ್ದಾರೆ.

ಪತ್ರಿಕಾ ವಿತರಣೆಗೆ ಹೊಸಬರ ಕೊರತೆ!
ಇತ್ತೀಚಿನ ಕೆಲವು ವರ್ಷಗಳಲ್ಲಿ ಪತ್ರಿಕಾ ವಿತರಕ ಕೆಲಸಕ್ಕೆ ಹೊಸಬರು ಬರುತ್ತಿಲ್ಲ. ಈ ಹಿಂದಿನಿಂದಲೂ ಈ ವೃತ್ತಿ ಮಾಡಿಕೊಂಡವರೇ ಈಗಲೂ ಮುಂದುವರಿಸುತ್ತಿದ್ದಾರೆ. ಈ ಹಿಂದೆಯಾದರೆ ಪೇಪರ್‌ ಹಂಚಲು ಹುಡುಗರು ಓಡೋಡಿ ಬರುತ್ತಿದ್ದರು. ಅವರ ವಿದ್ಯಾಭ್ಯಾಸಕ್ಕೆ ಒಂಚೂರು ಕಾಸು ಆಗುತ್ತಿತ್ತು. ಈಗ ಪತ್ರಿಕೆ ಹಂಚಲು ಹುಡುಗರೇ ಸಿಗುತ್ತಿಲ್ಲ ಎಂಬುದು ವಿತರಕರ ಅಳಲು.

ವಿತರಕರ ಸಮಸ್ಯೆ, ಸವಾಲುಗಳು
* ನಗರವೇ ಇರಲಿ, ಹಳ್ಳಿಯೇ ಇರಲಿ ಪತ್ರಿಕಾ ವಿತರಣೆ ಕಾರ್ಯವು ಸುಲಭದ್ದಲ್ಲ, ಬಹಳ ಸವಾಲಿನ ಕೆಲಸ
* ಬಹುತೇಕ ನಗರಗಳಲ್ಲಿ ನಸುಕಿನಲ್ಲಿ ಪತ್ರಿಕಾ ವಿತರಣೆಗೆ ಹೊರಟಾಗ ನಾಯಿಗಳದ್ದೇ ಕಾಟ ಹೆಚ್ಚು.
* ಅನೇಕ ಬಾರಿ ಕಳ್ಳಕಾಕರ ಬೆದರಿಕೆಯನ್ನು ವಿತರಕರು ಎದುರಿಸುತ್ತಾರೆ. ಜೀವ ಭಯ ಎದುರಾಗುತ್ತದೆ.
* ಗಗನಚುಂಬಿ ಅಪಾರ್ಟ್‌ಮೆಂಟ್‌ಗಳ ಓದುಗರ ಫ್ಲಾಟ್‌ಗೆ ಪತ್ರಿಕೆ ತಲುಪಿಸುವುದೇ ದೊಡ್ಡ ಸಾಹಸ.
* ಭದ್ರತೆ ಕಾರಣಕ್ಕೆ ಬಹಳಷ್ಟು ಅಪಾರ್ಟ್‌ಮೆಂಟ್‌ನವರು ಲಿಫ್ಟ್ನಲ್ಲಿ ಹೋಗಲು ಅವಕಾಶ ಕಲ್ಪಿಸುವುದಿಲ್ಲ.
* ಇಂಥ ಸಂದರ್ಭದಲ್ಲಿ ಪರ್ಯಾಯವಾಗಿ ಅಪಾರ್ಟ್‌ಮೆಂಟ್‌ ಸೆಕ್ಯುರಿಟಿಗೆ ಪತ್ರಿಕೆ ನೀಡಬೇಕಾಗುತ್ತದೆ. ಹೀಗಾದಾಗ ಕೆಲವೊಮ್ಮೆ ಓದುಗರಿಗೆ ಪತ್ರಿಕೆ ತಲುಪುವುದೇ ಇಲ್ಲ.
* ಕೆಲವೊಂದು ಸಂದರ್ಭದಲ್ಲಿ ಪತ್ರಿಕಾ ವಾಹನಗಳು ತಡವಾದಾಗ, ವಿತರಣೆಯೂ ವಿಳಂಬವಾಗುತ್ತದೆ.
* ಮನೆಗಳಿಗೆ ಪತ್ರಿಕೆ ವಿಳಂಬವಾಗಿ ಪತ್ರಿಕೆ ತಲುಪಿದಾಗ ಓದುಗರಿಂದ ಆಕ್ರೋಶದ ಮಾತು ಕೇಳಬೇಕಾಗುತ್ತದೆ.
* ಗ್ರಾಮೀಣ ಪ್ರದೇಶದಲ್ಲೂ ವಿತರಣೆಯಲ್ಲಿ ಹಲವು ಸವಾಲುಗಳು ಎದುರಾಗುತ್ತವೆ.

ಪತ್ರಿಕಾ ವಿತರಕರ ಬೇಡಿಕೆಗಳೇನು?
1. ಜೀವ ವಿಮೆ- 70 ವರ್ಷ ಮೇಲ್ಪಟ್ಟವರ ಪರಿಗಣನೆ
ಸರಕಾರ ಪತ್ರಿಕಾ ವಿತರಕರಿಗೆ ಜೀವವಿಮೆ ಸೌಲಭ್ಯ ಒದಗಿಸುತ್ತಿದೆ. ಅಪಘಾತದಲ್ಲಿ ಮೃತಪಟ್ಟರೆ 2 ಲಕ್ಷ ರೂ., ಗಾಯ ಗೊಂಡವರಿಗೆ 1 ಲಕ್ಷ ರೂ. ನೆರವು ಒದಗಿಸಲಾಗುತ್ತಿದೆ. ಈ ಸೌಲಭ್ಯಕ್ಕೆ 70 ವರ್ಷ ಮೇಲ್ಪಟ್ಟವರನ್ನೂ ಪರಿಗಣಿಸಬೇಕು.
2.  10 ಕೋಟಿ ರೂ. ಕ್ಷೇಮ ನಿಧಿ
ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ಸರಕಾರ 10 ಕೋಟಿ ರೂ. ಕ್ಷೇಮ ನಿಧಿ ಸ್ಥಾಪಿಸಬೇಕು. ವಿತರಕರು ಅಕಾಲಿಕ ಮೃತಪಟ್ಟಾಗ ಅಥವಾ ಇನ್ನಿತರ ಗಂಭೀರ ಕಾಯಿಲೆಗೆ ತುತ್ತಾದ ವೇಳೆ ಪತ್ರಿಕಾ ವಿತರಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ಷೇಮನಿಧಿ ಬಳಸುವ ಉದ್ದೇಶವಿದೆ.

3. ಮಾಧ್ಯಮ ಅಕಾಡೆಮಿಗೆ ನೇಮಕ
ಪತ್ರಿಕೋದ್ಯಮದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕರು, ಪತ್ರಿಕೆಗೆ ಸಂಬಂಧಿಸಿದ ಅನೇಕ ಸಂಘ, ಸಂಸ್ಥೆಗಳು, ಅಕಾಡೆಮಿಗಳಲ್ಲಿ ಸ್ಥಾನವಿಲ್ಲ. ಈ ಹಿನ್ನೆಲೆಯಲ್ಲಿ ಮಾಧ್ಯಮ ಅಕಾಡೆಮಿ ಯಲ್ಲಿ ಪತ್ರಿಕಾ ವಿತರಕರೊಬ್ಬರಿಗೆ ಸ್ಥಾನ ನೀಡಬೇಕೆಂಬ ಒತ್ತಾಯ.

4. ರಾಜ್ಯೋತ್ಸವ ಪ್ರಶಸ್ತಿ ನಿರಂತರ
ವಿತರಕರ ಬೇಡಿಕೆಯಂತೆ ಪತ್ರಿಕಾ ವಿತರಕರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಾಗುತ್ತಿದೆ. ಆದರೆ ಇದು ಒಂದೇ ವರ್ಷಕ್ಕೆ ಸೀಮಿತವಾಗದೇ ಪ್ರತೀ ವರ್ಷವೂ ವಿತರಕರನ್ನು ಪ್ರಶಸ್ತಿಗೆ ಪರಿಗಣಿಸಬೇಕು.

5. ಅರ್ಹ ಪ್ರಶಸ್ತಿಗಳಿಗೂ ಪರಿಗಣಿಸಿ
ಮಾಧ್ಯಮ ಅಕಾಡೆಮಿ, ಪ್ರಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ, ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಾರ್ಷಿಕ ದತ್ತಿ ಪ್ರಶಸ್ತಿ ವಿತರಕರನ್ನು ಆಯ್ಕೆ ಮಾಡಬೇಕು.

6. ಕಚೇರಿಗೆ ಜಾಗ ನೀಡಿ
ಪತ್ರಿಕಾ ವಿತರಕರಿಗಾಗಿ ಒಂದು ಕಚೇರಿಯ ವ್ಯವಸ್ಥೆಯಾಗಬೇಕಿದೆ. ಸರಕಾರವು ಖಾಲಿ ನಿವೇಶನ ಅಥವಾ ಬಡ್ಡಿ ರಹಿತ ಸಾಲದಲ್ಲಿ ನಿವೇಶನ ನೀಡಬೇಕು. 3,000ಕ್ಕೂ ಅಧಿಕ ಸದಸ್ಯರಿರುವ ವಿತರಕರ ಒಕ್ಕೂಟದ ಕಾರ್ಯನಿರ್ವಹಣೆಗೆ ಸುಲಭವಾಗಲಿದೆ.

7. ಎಲೆಕ್ಟ್ರಿಕಲ್‌ ಬೈಕ್‌
ಈ ಮೊದಲು ಸೈಕಲ್‌ಲ್ಲಿ ಪೇಪರ್‌ ಹಂಚಲಾಗುತ್ತಿತ್ತು. ಈಗ ಕಾಲ ಬದಲಾಗಿದೆ. ವಿತರಣೆಗೆ ವೇಗ ನೀಡಲು ಎಲೆಕ್ಟ್ರಿಕಲ್‌ ಬೈಕ್‌ ಸೌಲಭ್ಯ ದೊರೆತರೆ ಹೆಚ್ಚು ಅನುಕೂಲ. ಹಾಗಾಗಿ, ಈ ಬೈಕ್‌ಗಳನ್ನು ಕೊಳ್ಳಲು ಸರಕಾರವು ಬಡ್ಡಿರಹಿತ ಸಾಲ ನೀಡಬೇಕೆಂಬುದು ಬೇಡಿಕೆ. ಮಳೆಯ ವೇಳೆ ವಿತರಣೆಯು ಭಾರೀ ಕಷ್ಟವಾಗುತ್ತದೆ. ಹಾಗಿದ್ದೂ, ಪತ್ರಿಕೆ ಹಂಚಲೇಬೇಕು.

 

– ಮಲ್ಲಿಕಾರ್ಜುನ ತಿಪ್ಪಾರ

ಟಾಪ್ ನ್ಯೂಸ್

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

6-spcl

Story Of Generations: ಪೀಳಿಗೆಗಳ ವೃತ್ತಾಂತ

train

Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-spcl

Story Of Generations: ಪೀಳಿಗೆಗಳ ವೃತ್ತಾಂತ

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

ಮಹಿಳೆ ಮೇಲೆ ತಾಲಿ ‘ಬ್ಯಾನ್‌’ !

Astronamy-moon

Space Wonder: 2025ರಲ್ಲಿ ಜರುಗಲಿದೆ ಖಗೋಳ ವಿಶೇಷ ವಿಸ್ಮಯಗಳು!

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

International: Middle East ತೈಲ ಸಂಪತ್ತು…ಸಂಘರ್ಷ-ಮಧ್ಯಪ್ರಾಚ್ಯದಲ್ಲಿ ಎಷ್ಟು ದೇಶಗಳಿವೆ?

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್‌ ಹಂಚಿಕೆ; ಡಾ.ಸರ್ಜಿ

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Rohit Sharma; ಮುಗಿಯಿತಾ ರೋಹಿತ್‌ ಕ್ರಿಕೆಟ್‌ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.