Bantwal: ವಾಹನಗಳ ಅಡ್ಡಾದಿಡ್ಡಿ ಸಂಚಾರ: ಅಪಘಾತದ ಆತಂಕ ಬಂಟ್ವಾಳ ಬೈಪಾಸ್‌ನಲ್ಲಿ ಅಯೋಮಯ
Team Udayavani, Sep 4, 2024, 1:12 PM IST
ಬಂಟ್ವಾಳ: ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ಬಂಟ್ವಾಳ ಬೈಪಾಸ್ ಜಂಕ್ಷನ್ ಬಹಳ ಅಪಾಯಕಾರಿಯಾಗಿ ಪರಿಣಮಿಸಿದ್ದು, ವಾಹನಗಳ ಅಡ್ಡಾದಿಡ್ಡಿ ಚಾಲನೆಯ ಪರಿಣಾಮ ಗೊಂದಲದ ಸ್ಥಿತಿ ಉಂಟಾಗುತ್ತಿದೆ. ಜಂಕ್ಷನ್‌ನಲ್ಲೇ 4 ರಸ್ತೆಗಳು ಸೇರುವುದರಿಂದ ವಾಹನಗಳ ಅಪಘಾತದ ಆತಂಕವೂ ಇದೆ.
ಅಭಿವೃದ್ಧಿಯ ಬಳಿಕ ಹೆದ್ದಾರಿಯಲ್ಲಿ ಸಾಗುವ ವಾಹನಗಳು ಬಹಳ ವೇಗವಾಗಿ ಸಾಗುತ್ತಿದ್ದು, ಈ ನಡುವೆ ಮೂಡಬಿದಿರೆ ಹಾಗೂ ಬಂಟ್ವಾಳ ಪೇಟೆಯಿಂದ ಆಗಮಿಸುವ ರಸ್ತೆಗಳು ಹೆದ್ದಾರಿಯನ್ನು ಕೂಡಲಿದ್ದು, ಇಲ್ಲಿ ವಾಹನಗಳು ಯಾವುದೇ ಎಚ್ಚರಿಕೆಯನ್ನು ವಹಿಸದೆ ನೇರವಾಗಿ ಹೆದ್ದಾರಿಗೆ ಬರುವುದರಿಂದ ಗೊಂದಲ ಉಂಟಾಗುತ್ತದೆ. ಸವಾರರು ಅವಸರದಲ್ಲೇ ಇರುವುದರಿಂದ ಸಂಚಾರ ನಿಯಮಗಳನ್ನು ಪಾಲಿಸದೆ ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಾರೆ.
ಬೈಪಾಸ್ ಜಂಕ್ಷನ್‌ನಲ್ಲಿ ನಿರ್ಮಾಣ ಗೊಂಡಿರುವ ಸರ್ಕಲ್ ಕೂಡ ಸೂಕ್ತ ರೀತಿಯಲ್ಲಿ ಇಲ್ಲದೇ ಇರುವುದರಿಂದ ಗೊಂದಲಗಳಿಂದ ನಿತ್ಯವೂ ಸಣ್ಣ ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇದೆ ಎನ್ನಲಾಗಿದೆ. ಹೀಗಾಗಿ ವಾಹನಗಳ ವೇಗ ನಿಯಂತ್ರಣದ ಜತೆಗೆ ಜಂಕ್ಷನ್‌ನಲ್ಲಿ ವಾಹನ ಗಳು ಹೆದ್ದಾರಿ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಸಿಗ್ನಲ್ ವ್ಯವಸ್ಥೆಗೆ ಆಗ್ರಹ
ಹೆದ್ದಾರಿಯಲ್ಲಿ ಸಾಗುವ ವಾಹನಗಳ ಜತೆಗೆ ಬೈಪಾಸ್ ಜಂಕ್ಷನ್‌ನಲ್ಲಿ ಹೆದ್ದಾರಿ ಪ್ರವೇಶಿಸುವ ವಾಹನಗಳಿಗೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ಸೂಕ್ತ ಸಿಗ್ನಲ್ ವ್ಯವಸ್ಥೆಗಳನ್ನು ಅಳವಡಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ವೇಗ ನಿಯಂತ್ರಿಸದ ವಾಹನಗಳು
ಈ ಪ್ರದೇಶದಲ್ಲಿ ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಹೆಚ್ಚಿನ ವಾಹನಗಳ ಓಡಾಟ ಕಂಡುಬರುತ್ತಿದ್ದು, ಈ ಸಮಯದಲ್ಲೇ ಗೊಂದಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗ ನಿಯಂತ್ರಣಕ್ಕಾಗಿ ಥರ್ಮೋ ಫ್ಲಾಸ್ಟ್‌ಗಳನ್ನು ಬಳಸಿದರೂ, ವಾಹನಗಳು ಯಾವುದೇ ರೀತಿಯಲ್ಲೂ ವೇಗವನ್ನು ನಿಯಂತ್ರಿಸದೆ ಸಾಗುತ್ತಿವೆ. ಜತೆಗೆ ಮೂಡುಬಿದಿರೆ ರಸ್ತೆಯಲ್ಲಿ ಆಗಮಿಸುವ ವಾಹನಗಳು ಹೆದ್ದಾರಿಯ ವಾಹನಗಳನ್ನು ಗಮನಿಸದೆ ನೇರವಾಗಿ ಹೆದ್ದಾರಿಗೆ ನುಗ್ಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿದ ಉದಾಹರಣೆಯೂ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.