Shreya’s Sweets; ಮಂಗಳೂರಿನಲ್ಲಿ ಹೊಸ ಮೈಲಿಗಲ್ಲು: ಶಾಸಕ ವೇದವ್ಯಾಸ್ ಕಾಮತ್
ಶ್ರೇಯಾಸ್ ಸ್ವೀಟ್ಸ್‌ನ ನವೀಕೃತ ಹವಾ ನಿಯಂತ್ರಿತ ಮಳಿಗೆ ಉದ್ಘಾಟನೆ
Team Udayavani, Sep 4, 2024, 11:45 PM IST
ಮಂಗಳೂರು: ಶ್ರೇಯಾಸ್ ಸ್ವೀಟ್ಸ್‌ನ ನವೀಕೃತ, ಸಂಪೂರ್ಣ ಹವಾನಿಯಂತ್ರಿತ ಮಳಿಗೆ ಮಂಗಳೂರಿನ ಅಳಕೆಯ ಮಲ್ಯ ಆರ್ಕೇಡ್‌ನಲ್ಲಿ ಬುಧವಾರ ಆರಂಭಗೊಂಡಿದೆ.
ಮಳಿಗೆಯನ್ನು ಉದ್ಘಾಟಿಸಿ ಹಾಗೂ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರಿನಲ್ಲಿ ಶ್ರೇಯಾಸ್ ಸ್ವೀಟ್ಸ್ ಹೊಸ ಮೈಲಿಗಲ್ಲು ನೆಟ್ಟಿದೆ. 22 ವರ್ಷಗಳಿಂದ ಮಳಿಗೆ ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆಯಿಂದಾಗಿ ಇಂದಿನ ಸುಸಜ್ಜಿತ ಮಳಿಗೆ ಸ್ಥಾಪನೆಗೆ ಸಾಧ್ಯವಾಗಿದೆ. ರಮೇಶ್ ಮಲ್ಯ ನೇತೃತ್ವದ ಮಳಿಗೆ ಆರೋಗ್ಯಕರ ತಿನಿಸುಗಳನ್ನು ಪೂರೈಸಿದ್ದು ಮಂಗಳೂರಿನ ಜನ ಖುಷಿಪಟ್ಟು, ಮಳಿಗೆಯನ್ನು ನೆಚ್ಚಿಕೊಂಡಿದ್ದಾರೆ.
ಗುಣಮಟ್ಟ ಕಾಯ್ದುಕೊಂಡ ಕಾರಣ ಶ್ರೇಯಾಸ್ ಸ್ವೀಟ್ಸ್ ಮಂಗಳೂರಿನಲ್ಲಿ ಬ್ರಾಂಡ್ ಆಗಿದೆ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತ ನಾಡಿ, ಗುಣಮಟ್ಟ ಹಾಗೂ ಅತ್ಯುತ್ತಮ ಸೇವೆಗೆ ಹೆಸರಾ ಗಿರುವ ಶ್ರೇಯಾಸ್ ಸ್ವೀಟ್ಸ್ 2ನೇ ಮಳಿಗೆ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ದೇಶದೆಲ್ಲೆಡೆ ನೂರಾರು ಮಳಿಗೆಗಳು ಆರಂಭವಾಗಲಿ ಎಂದು ಹಾರೈಸಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ ಶುಭಹಾರೈಸಿದರು. ಉದ್ಯಮಿಗಳಾದ ಸುಧಾಕರ ಕಾಮತ್, ಶಿವಕುಮಾರ್ ಶರ್ಮ, ನರೇಶ್ ಶೆಣೈ, ನರೇಶ್ ಪ್ರಭು, ಗುರುಪ್ರಸಾದ್ ಕಾಮತ್, ಚೇತನ್ ಕಾಮತ್, ದೀಪಕ್ ಶೆಣೈ ವಾಶಿ, ಮಳಿಗೆಯ ಪ್ರಮುಖರಾದ ಶ್ರೇಯಾ ಮಲ್ಯ, ಶಿಖಾ ಮಲ್ಯ, ವರದ್ ನಾಯಕ್, ಕೆಸಿಸಿಐ ಮಾಜಿ ಅಧ್ಯಕ್ಷ ಮುರಳೀಧರ ರಮಣಿ, ಐಸಿಐಸಿಐ ಬ್ಯಾಂಕ್ ಅಧಿಕಾರಿ ಗಿರಿರಾಜ್, ಎಂಆರ್‌ಪಿಎಲ್ ಅಧಿಕಾರಿ ವಲ್ಲಭ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಎನ್. ರಮೇಶ್ ಮಲ್ಯ, ಎನ್. ಆಶಾ ಮಲ್ಯ ಸ್ವಾಗತಿಸಿದರು. ಆರ್.ಜೆ. ಕಿರಣ್ ನಿರೂಪಿಸಿದರು.
ಶ್ರೇಯಾಸ್ ಸ್ವೀಟ್ಸ್ ವೈಶಿಷ್ಟ್ಯ
ಮಾಲಕ ರಮೇಶ್ ಮಲ್ಯ ಮಾತನಾಡಿ, ಶ್ರೇಯಾಸ್ ಸ್ವೀಟ್ಸ್ ಅನ್ನು 2002ರಲ್ಲಿ ಜಿ.ಎಚ್.ಎಸ್. ರಸ್ತೆಯಲ್ಲಿ ಆರಂಭಿಸಲಾಗಿದ್ದು, 22 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸಿಹಿ ತಿಂಡಿಗಳನ್ನು ಪೂರೈಸಿ ವಿಶ್ವಾಸ ಗಳಿಸಿದ್ದೇವೆ. ಉತ್ತರ ಭಾರತೀಯ, ಬಂಗಾಲಿ ಸಿಹಿ ತಿಂಡಿಗಳು, ಗೋಲ್ಡ್ ಸ್ವೀಟ್ಸ್ ಅನ್ನು ಮೊದಲ ಬಾರಿಗೆ ಮಂಗಳೂರಿಗೆ ಪರಿಚಯಿಸಿದ ಹೆಗ್ಗಳಿಕೆ ಸಂಸ್ಥೆಗೆ ಸಲ್ಲುತ್ತದೆ. ಅಲ್ಲದೆ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ ಕೂಡ ಸಂಸ್ಥೆಗೆ ಸಿಕ್ಕಿದೆ. ವಿಶಾಲವಾದ ಹವಾ ನಿಯಂತ್ರಿತ ಮಳಿಗೆಯಲ್ಲಿ ವೈವಿದ್ಯಮಯ ಸ್ವೀಟ್ಸ್‌ಗಳ ಸಂಗ್ರಹವಿದೆ. ಚಾಟ್ಸ್, ವಿವಿಧ ಕರಿದ ತಿಂಡಿಗಳು, ಮಿಕ್ಸರ್, ಬಿಸಿ ಮೈಸೂರು ಪಾಕ್, ಸ್ವೀಟ್ಸ್‌ಗಳ ಗಿಫ್ಟ್ ಪ್ಯಾಕ್, ಡ್ರೈ ಫ್ರುಟ್ಸ್ ಲಭ್ಯವಿದ್ದು, ಎಲ್ಲದಕ್ಕೂ ಪ್ರತ್ಯೇಕ ಕೌಂಟರ್‌ಗಳಿವೆ. ಗ್ರಾಹಕರಿಗೆ ಪ್ರಿಯವಾದ ಸಿಹಿತಿಂಡಿಗಳು, ಉತ್ತಮ ಬೆಲೆಯಲ್ಲಿ ಗೋಲ್ಡ್ ಸ್ವೀಟ್ಸ್, ಬೆಲ್ಲದ ಸಿಹಿ ತಿಂಡಿಗಳು, ಶುಗರ್‌ಫ್ರೀ ಸ್ವೀಟ್ಸ್, ಉಪ್ಪು, ಖಾರ ಮಿಶ್ರಿತ ತರಹೇವಾರಿ ತಿನಿಸುಗಳನ್ನು ಒಳಗೊಂಡಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.