Covid Scam: ಸಂಪುಟ ಕುತೂಹಲ: ಕೋವಿಡ್ ವೈದ್ಯಕೀಯ ಸಾಮಗ್ರಿ ಖರೀದಿಯಲ್ಲಿ ಹಗರಣ
ಇಂದು ನ್ಯಾ| ಕುನ್ಹಾ ವರದಿ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ
Team Udayavani, Sep 5, 2024, 6:55 AM IST
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ನ್ಯಾ| ಜಾನ್ ಮೈಕಲ್ ಕುನ್ಹಾ ನೇತೃತ್ವದ ಸಮಿತಿಯ ಕೋವಿಡ್ ಖರೀದಿ ಹಗರಣದ ತನಿಖಾ ವರದಿ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗುವ ನಿರೀಕ್ಷೆ ಇದೆ.
ಒಟ್ಟು 1,722 ಪುಟಗಳ ಈ ವರದಿಯನ್ನು 2 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯಗೆ ಸಲ್ಲಿಸಲಾಗಿದೆ. ವರದಿಯನ್ನು ಸಿದ್ದರಾಮಯ್ಯ ಗೌಪ್ಯವಾಗಿಟ್ಟಿದ್ದಾರೆ. ವರದಿಯಲ್ಲಿ ಕೋವಿಡ್ ಸಂದರ್ಭ ನಡೆದ ಸಾಮಗ್ರಿ ಖರೀದಿ ಹಾಗೂ ಆಡಳಿತಾತ್ಮಕ ಅವ್ಯವಹಾರಗಳ ಸಮಗ್ರ ಮಾಹಿತಿ ಇದೆ ಎನ್ನಲಾಗುತ್ತಿದೆ.
ಸರಕಾರದ ಉನ್ನತ ಮೂಲಗಳ ಪ್ರಕಾರ, ಈ ಅಕ್ರಮದ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ. ವರದಿಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಸುದೀರ್ಘ ಚರ್ಚೆ ನಡೆಸಿದ ಬಳಿಕವೇ ಕ್ರಮ ತೆಗೆದುಕೊಳ್ಳುವುದಕ್ಕೆ ಸರಕಾರ ನಿರ್ಧರಿಸಿದೆ. ಆದರೆ ಅಧಿಕೃತ ಅಜೆಂಡಾದಲ್ಲಿ ಈ ವಿಚಾರ ಸೇರ್ಪಡೆಯಾಗಿಲ್ಲ.
ಆರೋಪಗಳೇನು?
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಕೋವಿಡ್ ನಿಯಂತ್ರಣಕ್ಕಾಗಿ ನಡೆಸಿದ ಖರೀದಿಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ರಾಮಲಿಂಗಾ ರೆಡ್ಡಿ ಹಾಗೂ ಎಚ್.ಕೆ. ಪಾಟೀಲ್ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಆಕ್ಷೇಪ ವ್ಯಕ್ತಪಡಿಸಿತ್ತು.
ಮುಡಾ ತೀರ್ಪಿನ ಬಳಿಕ
ಬಿಜೆಪಿ ಮತ್ತೆ ಹೋರಾಟ?
ಮುಡಾ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪು ಆಧರಿಸಿ ಸರಕಾರ, ಸಿದ್ದರಾಮಯ್ಯ ವಿರುದ್ಧ ಮತ್ತೂಂದು ಸುತ್ತಿನ ಹೋರಾಟ ನಡೆಸುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಚಿಂತನೆ ನಡೆದಿದೆ. ಹೈಕೋರ್ಟ್‌ನಲ್ಲಿ ಸಿದ್ದ ರಾಮಯ್ಯಗೆ ರಿಲೀಫ್ ಸಿಕ್ಕರೆ, ವಾಲ್ಮೀಕಿ ನಿಗಮ ಹಗರಣವನ್ನಿಟ್ಟುಕೊಂಡು ಹೋರಾಟ ನಡೆಸಲಾಗುತ್ತದೆ. ತೀರ್ಪು ವಿರುದ್ಧವಾಗಿ ಬಂದರೆ ಸಿಎಂ ರಾಜೀ ನಾಮೆಗೆ ಆಗ್ರಹಿಸುವ ನಿರೀಕ್ಷೆಗಳಿವೆ.
ಮುಡಾ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ತೀರ್ಪು ಬಂದ ಬಳಿಕ ಸಿದ್ದರಾಮಯ್ಯ ಪದತ್ಯಾಗ ನೂರಕ್ಕೆ ನೂರು ಖಚಿತ. ತೀರ್ಪು ಬರುವ ಮುನ್ನವೇ ರಾಜೀನಾಮೆ ನೀಡಿದರೆ ಗೌರವ ಉಳಿಯುತ್ತದೆ.
– ಯಡಿಯೂರಪ್ಪ,
ಮಾಜಿ ಮುಖ್ಯಮಂತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.