Save Malaprabha: ನೀರಿನ ಬಳಕೆ ಹಕ್ಕು- ಮಲಪ್ರಭಾ ಬಚಾವೋ ಆಂದೋಲನಕ್ಕೆ ಚಿಂತನೆ
28 ಸಂಸದರಿರುವ ರಾಜ್ಯ ಅನ್ಯಾಯ ಅನುಭವಿಸುತ್ತಿದೆ ಎಂಬ ಅಸಮಾಧಾನ, ಆಕ್ರೋಶ ರೈತದ್ದಾಗಿದೆ.
Team Udayavani, Sep 5, 2024, 12:09 PM IST
ಉದಯವಾಣಿ ಸಮಾಚಾರ
ಹುಬ್ಬಳ್ಳಿ: ನಾಲ್ಕು ದಶಕಗಳಿಂದ ಹೋರಾಟ ಮಾಡಿದರೂ ಹನಿ ನೀರು ಸಿಗದೆ ರಾಜಕೀಯ ಗಾಳಕ್ಕೆ ಸಿಲುಕಿ ಒದ್ದಾಡುತ್ತಿರುವ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಯ ಗೊಡವೆಯೇ ಬೇಡವೆಂದು, ಪರ್ಯಾಯವಾಗಿ ಮಲಪ್ರಭಾ ಬಚಾವೋ ಆಂದೋಲನಕ್ಕೆ ಗಂಭೀರ ಯತ್ನಗಳು ನಡೆದಿವೆ. ಎಲ್ಲವೂ ಅಂದುಕೊಂಡಂತಾದರೆ ಅಕ್ಟೋಬರ್ 2 ಗಾಂಧಿ ಜಯಂತಿ ದಿನದಂದು ಆಂದೋಲನ ಘೋಷಣೆ ಸಾಧ್ಯತೆ ಇದೆ.
ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಮಲಪ್ರಭಾ ಬಚಾವೋ ಆಂದೋಲನ ಮೊಳಗಿಸಲು ರೈತರು ನಿರ್ಧರಿಸಿದ್ದಾರೆ. ಕಳಸಾ-ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆಗೆ ಹೋರಾಟ ಮಾಡಿದ್ದು ರೈತರೇ ವಿನಃ ಅದರ ಫಲಾನಭವಿಗಳಲ್ಲ. ಇದರ ಬದಲು ಮಲಪ್ರಭಾ ನೀರು ನೀರಾವರಿಗೆ ಹೆಚ್ಚು ಬಳಕೆಗೆ ಹೋರಾಟ ಮಾಡೋಣ ಎನ್ನುವುದು ಹಲವು ರೈತರ ಅನಿಸಿಕೆಯಾಗಿದೆ.
ರಾಜಕೀಯ ಗಾಳಕ್ಕೆ ಸಿಲುಕಿದ ಮಹದಾಯಿ:
ಮಹದಾಯಿ ಕುರಿತಾಗಿ 1976ರಿಂದಲೇ ಧ್ವನಿ ಮೊಳಗಿದ್ದರೆ, ಕಳಸಾ-ಬಂಡೂರಿ ನಾಲಾ ಯೋಜನೆ 2000 ಇಸ್ವಿಯಿಂದ ಇಂದು-ನಾಳೆ ಜಾರಿ ಎನ್ನುತ್ತಲೇ ಸಾಗಿದೆ. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಗೋವಾದ ನಿಲುವುಗಳೇ ಜಾರಿ-ಯಶಸ್ವಿಯಾಗುತ್ತಿವೆ. ಇಬ್ಬರು ಸಂಸದರು ಮೇಲುಗೈ ಸಾಧಿಸುತ್ತಿದ್ದರೆ, 28 ಸಂಸದರಿರುವ ರಾಜ್ಯ ಅನ್ಯಾಯ ಅನುಭವಿಸುತ್ತಿದೆ ಎಂಬ ಅಸಮಾಧಾನ, ಆಕ್ರೋಶ ರೈತದ್ದಾಗಿದೆ.
ಮಹದಾಯಿ ನ್ಯಾಯಾಧಿಕರಣ ಕರ್ನಾಟಕಕ್ಕೆ 13.42 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಿದ್ದು, ಇದರಲ್ಲಿ 8 ಟಿಎಂಸಿ ಅಡಿ ವಿದ್ಯುತ್ ಉತ್ಪಾದನೆಯದ್ದಾಗಿದೆ. ಉಳಿದ 5.42 ಟಿಎಂಸಿ ಅಡಿಯಷ್ಟು ನೀರು ಎಂದಿದ್ದರೂ, ವಾಸ್ತವವಾಗಿ ಬಳಕೆಗೆ ಸಿಗುವುದು ಕೇವಲ 3-4 ಟಿಎಂಸಿ ಅಡಿಯಷ್ಟು ಮಾತ್ರ. ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿದಂತೆ ವಿವಿಧ ಕಡೆಗೆ ಕುಡಿಯುವ ನೀರಿನ ಉದ್ದೇಶದ ಹೆಸರಲ್ಲಿಯೇ 2000 ಇಸ್ವಿಯಲ್ಲಿ ಆರಂಭಗೊಂಡ ಕಳಸಾ-ಬಂಡೂರಿ ನಾಲಾ ಯೋಜನೆ ತ್ರಿಶಂಕು ಸ್ಥಿತಿಗೆ ತಲುಪಿದೆ.
ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗಾಗಿ ರೈತರು ಧರಣಿ, ಪಾದಯಾತ್ರೆ, ಉಪವಾಸ, ರಸ್ತೆ -ರೈಲು ತಡೆ ಹೀಗೆ ವಿವಿಧ ಸ್ವರೂಪದ ಹೋರಾಟ ಮೂಲಕ ಲಾಠಿ-ಗುಂಡಿನೇಟು ತಿಂದಿದ್ದಾರೆ. ಜೈಲು ಸೇರಿದ್ದಾರೆ, ಕೇಸ್‌ಗಳಿಗಾಗಿ ಕೋರ್ಟ್‌ಗಳಿಗೆ ಅಲಿಯುತ್ತಿದ್ದಾರೆ, ಇಷ್ಟಾದರೂ ಹನಿ ನೀರು ಮಾತ್ರ ಬಂದಿಲ್ಲ. ಕೃಷಿಗೆ ವರವಾದ ಮಲಪ್ರಭಾ ನದಿ ಹಾಗೂ ನೀರಾವರಿ ಆದ್ಯತೆಯೊಂದಿಗೆ ನಿರ್ಮಾಣಗೊಂಡ ಮಲಪ್ರಭಾ ಜಲಾಶಯ ನೀರು ಸಂರಕ್ಷಣೆ, ಕೃಷಿ ಬಳಕೆಗೆ ಒತ್ತು ನೀಡುವ ಆಂದೋಲನಕ್ಕೆ ಮುಂದಾಗೋಣ ಎಂಬುದು ರೈತರು ನಿರ್ಧಾರವಾಗಿದೆ.
ರೂಪ ಪಡೆಯುತ್ತಿದೆ ಆಂದೋಲನ: ಮಲಪ್ರಭಾ ಜಲಾಶಯದ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಸಂಗ್ರಹಿಸಲು, ಬಳಸಲು ನಮ್ಮ ವಿರೋಧವಿಲ್ಲ. ಆದರೆ ಕುಡಿಯುವ ನೀರಿನ ನೆಪದೊಂದಿಗೆ ಅಗತ್ಯಕ್ಕಿಂತ ಹೆಚ್ಚಿನ ನೀರು ಸಂಗ್ರಹ ಹಾಗೂ ನೀರಾವರಿಗೆ ಇಲ್ಲವಾಗಿಸಿ ಉದ್ಯಮಗಳಿಗೆ ನೀರು ನೀಡುವುದಕ್ಕೆ ನಮ್ಮ ವಿರೋಧವಿದೆ. ಮಲಪ್ರಭಾ ಬಚಾವೋ ಆಂದೋಲನ ಈ ವಿಚಾರವನ್ನೇ ಪ್ರಮುಖವಾಗಿಟ್ಟುಕೊಂಡು ಹೋರಾಟಕ್ಕೆ ಮುಂದಾಗುವ ಎಂಬ ಅನಿಸಿಕೆ ರೈತರದ್ದಾಗಿದೆ.
ಮಲಪ್ರಭಾ ಜಲಾಶಯ ವ್ಯಾಪ್ತಿಯಲ್ಲಿಯೇ ನಾಲ್ಕು ಜಿಲ್ಲೆಗಳ ರೈತರು ನೀರಾವರಿ ಶುಲ್ಕ ಭರಿಸುತ್ತಿದ್ದಾರೆ. ಆದರೆ ಕುಡಿಯುವ ನೀರು ನೆಪದಲ್ಲಿ 14-15 ಟಿಎಂಸಿ ಅಡಿಯಷ್ಟು ನೀರು ಸಂಗ್ರಹಿಸಿ ನೀರಾವರಿಗೆ ನೀರಿಲ್ಲವೆನ್ನುವುದನ್ನು ರೈತರು ಒಪ್ಪಲು ಸಾಧ್ಯವಿಲ್ಲ. ಮಲಪ್ರಭಾ ಜಲಾಶಯ ಸಂಪೂರ್ಣ ಕುಡಿಯುವ ನೀರಿನ ಉದ್ದೇಶವೆಂದು ಘೋಷಣೆ ಮಾಡಿ ಅದರ ವ್ಯಾಪ್ತಿಯ ಎಲ್ಲ ಕೃಷಿ ಭೂಮಿಯನ್ನು ನೀರಾವರಿ ರಹಿತ ಪ್ರದೇಶವೆಂದು ಘೋಷಿಸಲಿ, ಇಲ್ಲವೆ ನಮಗೆ ಸಮರ್ಪಕ ನೀರು ಕೊಡಲಿ ಎಂಬ ಹಕ್ಕೊತ್ತಾಯ ರೈತರದ್ದಾಗಿದೆ.
ಮಹದಾಯಿ, ಕಳಸಾ-ಬಂಡೂರಿ ಹೋರಾಟ ಬದಲು ಮಲಪ್ರಭಾ ಬಚಾವೋ ಆಂದೋಲನ ಗಂಭೀರ ಚಿಂತನೆ ನಿಜ. ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಗೆ ಎಷ್ಟೇ ಹೋರಾಟ ಮಾಡಿದರೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದ ಹನಿ ನೀರು ದೊರೆಯದಾಗಿದ್ದು, ಆ ಹೋರಾಟಕ್ಕಾಗಿ ನಮ್ಮ ಶ್ರಮ ವ್ಯಯ-ವ್ಯರ್ಥದ ಬದಲು ಮಲಪ್ರಭಾ ಬಚಾವೋಕ್ಕೆ ಮುಂದಾಗುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದಿದ್ದೇವೆ. ಕಾನೂನಾತ್ಮಕ ಹೋರಾಟಕ್ಕೂ ಮುಂದಾಗಿದ್ದೇವೆ.
*ಶಂಕರಪ್ಪ ಅಂಬಲಿ, ರೈತ ಮುಖಂಡ.
*ಅಮರೇಗೌಡ ಗೋನವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.