Udupi: ಅಧಿಕ ಲಾಭದ ಭರವಸೆ; ಕೋಟ್ಯಂತರ ರೂ. ವಂಚನೆ
Team Udayavani, Sep 6, 2024, 6:40 AM IST
ಉಡುಪಿ: ಆಫ್ಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತೆ ತಿಳಿಸಿ ದಂಪತಿಗೆ ಮಹಿಳೆಯೊಬ್ಬರು ಕೋಟ್ಯಂತರ ರೂ.ವಂಚಿಸಿದ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಸ್ತುತ ವಿದೇಶದಲ್ಲಿರುವ ಶಿರ್ವ ಮೂಲದ ಲಿನೆಟ್ ಸೋಫಿಯಾ ಡಿ’ಮೆಲ್ಲೋ, ಅವರ ಪತಿ ಹಾಗೂ ಪತಿಯ ಸೋದರ ಸಂಬಂಧಿಗೆ ವಿದ್ಯಾ ಸೋಮೇಶ್ವರ ಎಂಬವರು ತಾನು ಕೆಲಸ ಮಾಡಿಕೊಂಡಿರುವ ಎಸ್ಪಿ ಕ್ಯಾಪಿಟಲ್ಸ್ ಟ್ರೇಡಿಂಗ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ಪಡೆಯಬಹುದು ಎಂದು ನಂಬಿಸಿದ್ದಾರೆ. ಬಳಿಕ 2019ರ ಸೆ.19ರಿಂದ 2024ರ ಆ.29ರ ವರೆಗೆ ಹಂತ ಹಂತವಾಗಿ 3,60,67,000 ರೂ.ಗಳನ್ನು ವಿದ್ಯಾ ಸೋಮೇಶ್ವರ ಅವರು ತನ್ನ ಖಾತೆಗೆ ಜಮೆ ಮಾಡಿಸಿಕೊಂಡಿದ್ದು ಈ ವರೆಗೆ ಹೂಡಿಕೆ ಮಾಡಿದ ಹಣ ಅಥವಾ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಲಿನೆಟ್ ಸೋಫಿಯಾ ಡಿ’ಮೆಲ್ಲೋ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.