Kasaragod ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಆರಂಭ
ದೊಡ್ಡ ಕೊಡುಗೆ: ಸ್ವಾಮಿ ವಿವಿಕ್ತಾನಂದ ಸರಸ್ವತಿ
Team Udayavani, Sep 5, 2024, 11:49 PM IST
ಕಾಸರಗೋಡು: ಆರೋಗ್ಯ ಕ್ಷೇತ್ರದಲ್ಲಿ ಅತ್ಯಂತ ಹಿಂದುಳಿದ ಕಾಸರಗೋಡಿನಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಶುಭಾರಂಭಗೊಂಡಿರುವುದು ಓಣಂ ಕೊಡುಗೆ ಎಂಬುದಾಗಿ ಚಿನ್ಮಯ ಮಿಷನ್ ಕಾಸರಗೋಡು ಪ್ರಾದೇಶಿಕ ಮುಖ್ಯಸ್ಥರಾದ ಪರಮಪೂಜ್ಯ ಶ್ರೀ ಸ್ವಾಮಿ ವಿವಿಕ್ತಾನಂದ ಸರಸ್ವತಿಜೀ ಹೇಳಿದರು.
ನೂತನ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಅವರು ದೀಪ ಪ್ರಜ್ವಲಿಸಿ ಆಶೀರ್ವಚನ ನುಡಿಗಳನ್ನಾಡಿದರು. ಪಂಚೇಂದ್ರಿಯಗಳಲ್ಲಿ ಪ್ರಮುಖವಾದ ನೇತ್ರದಿಂದಲೇ ಎಲ್ಲವನ್ನೂ ವೀಕ್ಷಿಸಲು ಸಾಧ್ಯ. ಪ್ರಸಾದ್ ನೇತ್ರಾಲಯ ನೇತ್ರ ಚಿಕಿತ್ಸೆ ಮೂಲಕ ಆರೋಗ್ಯ ರಂಗದಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ ಎಂದರು.
ನೂತನ ಚಿಕಿತ್ಸಾ ಕೇಂದ್ರವನ್ನು ಕಾಸರಗೊಡು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಉದುಮ ಶಾಸಕ ಸಿ.ಎಚ್.ಕುಂಞಂಬು ಶಸ್ತ್ರಚಿಕಿತ್ಸಾ ಕೊಠಡಿಯನ್ನು ಉದ್ಘಾಟಿಸಿದರು.
ಕಾಸರಗೊಡು ನಗರಸಭಾ ಅಧ್ಯಕ್ಷ ಅಬ್ಟಾಸ್ ಬೇಗಂ, ವಿಪಕ್ಷ ನಾಯಕ ಪಿ.ರಮೇಶ್, ನಗರಸಭಾ ಸದಸ್ಯೆ ಶ್ರೀಲತಾ ಎಂ, ಸನ್‌ಫÉವರ್ ಕಟ್ಟಡ ಮಾಲಕ ಖಮರುದ್ದೀನ್, ಗುತ್ತಿಗೆದಾರ ಮಾಹಿನ್ ಕೆ., ನಿವೃತ್ತ ಆರಣ್ಯ ಸಂರಕ್ಷಣಾಧಿಕಾರಿ ಹಾಗೂ ಪ್ರಸಾದ್ ನೇತ್ರಾಲಯ ನಿರ್ದೇಶಕ ಕೆ.ರಘುರಾಮ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ನೇತ್ರಾಲಯದ ಕಾಸರಗೋಡಿನ ನಿರ್ದೇಶಕರಾದ ಡಾ| ವೃಂದಾ ವಿಶ್ವನಾಥನ್, ಡಾ| ಜಾಕೋಬ್ ಚಾಕೋ, ಡಾ| ಶಿಬಿನ್ ಗಿರೀಶ್, ಡಾ| ಜಯಂತ್ ಉಪಸ್ಥಿತರಿದ್ದರು. ಕಟ್ಟಡದ ಮಾಲಕ ಕಮರು ದ್ದೀನ್, ಗುತ್ತಿಗೆದಾರ ಮಾಹಿನ್, ರಾಜೇಶ್ ಕೂಡ್ಲು, ಪ್ರೊಜೆಕ್ಟ್ ಮ್ಯಾನೇಜರ್ ನಾಗರಾಜ್, ರಾಘವೇಂದ್ರ, ಮುಳಿಯಾರು ಪಂಚಾಯತ್ ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಬಾಲಕೃಷ್ಣ ಭಂಡಾರಿ, ಅರುಣ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.
ಹೇಮಶ್ರೀ, ಜಯಶ್ರೀ, ನಂದಿನಿ ಪ್ರಾರ್ಥಿಸಿದರು. ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಕೂಡ್ಲು ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಡಾ| ಬಾಲಕೃಷ್ಣ ಮಧ್ದೋಡಿ, ದಿವಾಕರ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು.
ಪ್ರಸಾದ್ ನೇತ್ರಾಲಯದ ಬಗ್ಗೆ
24 ವರ್ಷಗಳಿಂದ ಪ್ರಸಾದ್ ನೇತ್ರಾಲಯವು ಉಡುಪಿ, ಮಂಗಳೂರು, ಸುಳ್ಯ, ತೀರ್ಥಹಳ್ಳಿ, ಶಿವಮೊಗ್ಗ, ಗೋವಾ ಮತ್ತು ಪುತ್ತೂರಿನಲ್ಲಿ ಜನರಿಗೆ ಸೇವೆ ನೀಡುತ್ತಿದೆ. 2012 ಮತ್ತು 2015ರಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿತು. ಕಣ್ಣಿನ ಪೊರೆ, ರೆಟಿನಾ, ಗ್ಲಾಕೋಮಾ, ಮೆಳ್ಳೆಗಣ್ಣು, ಮಕ್ಕಳ ಕಣ್ಣಿನ ಚಿಕಿತ್ಸೆ, ಕಣ್ಣಿನ ಕರಿಗುಡ್ಡೆ ಚಿಕಿತ್ಸೆ, ಲೇಸರ್ ಚಿಕಿತ್ಸೆ, ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್‌ಗಳನ್ನೊಳಗೊಂಡಂತೆ ಲೇಸರ್ ಕಣ್ಣಿನ ಪೊರೆ ಚಿಕಿತ್ಸೆ, ಲಾಸಿಕ್/ಸ್ಮೈಲ್ ಮುಂತಾದ ಕನ್ನಡಕ ರಹಿತ ಮಾಡುವಂತಹ ಚಿಕಿತ್ಸೆ, ವಿಶ್ವದಲ್ಲೇ ನೂತನ ತಂತ್ರಜ್ಞಾನದ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸೆ ಮುಂತಾದ ಎಲ್ಲ ವಿಭಾಗಗಳನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.