Kundapura ಪ್ರಾಂಶುಪಾಲರ ಪ್ರಶಸ್ತಿಗೆ ತಡೆ: ಬಿಜೆಪಿ ಶಾಸಕ, ಸಂಸದರ ಆಕ್ರೋಶ
ಉಡುಪಿಯ ಶಿಕ್ಷಕರ ಪ್ರಶಸ್ತಿ ತಡೆಹಿಡಿದ ಸರಕಾರ:ಯದುವೀರ್ ಆಕ್ಷೇಪ
Team Udayavani, Sep 6, 2024, 6:44 AM IST
ಉಡುಪಿ: ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅವರನ್ನು ಪ್ರಸಕ್ತ ಸಾಲಿನ ಉತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆ ಮಾಡಿ, ಪ್ರಶಸ್ತಿ ಕೊಡುವ ದಿನ ಅದನ್ನು ತಡೆ ಹಿಡಿದಿರುವ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆಯ ನಿಲುವನ್ನು ಬಿಜೆಪಿ ಶಾಸಕರು, ಸಂಸದರು ಖಂಡಿಸಿದ್ದಾರೆ.
ಎರಡು ವರ್ಷಗಳ ಹಿಂದಿನ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ, ವಿದ್ಯಾರ್ಥಿನಿಯರನ್ನು ಕಾಲೇಜಿನ ಗೇಟಿನಲ್ಲಿ ನಿಲ್ಲಿಸಿದ್ದಾರೆ ಎನ್ನಲಾದ ಚಿತ್ರವೊಂದನ್ನು ಮುಂದಿಟ್ಟುಕೊಂಡು ಕೆಲವರು ಸರಕಾರದ ಮೇಲೆ ಒತ್ತಡ ಹೇರಿದ್ದರ ಪರಿಣಾಮ ಸರಕಾರ ಪ್ರಶಸ್ತಿಯನ್ನು ತಡೆ ಹಿಡಿದಿದೆ.
ಈ ಸಂಬಂಧ ಉಡುಪಿಯಲ್ಲಿ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಅತ್ಯಗತ್ಯ. ಪ್ರಾಂಶುಪಾಲರನ್ನು ಪ್ರಶಸ್ತಿಗೆ ಆಯ್ಕೆ ಮಾಡಿ ಕೊನೆ ಕ್ಷಣದಲ್ಲಿ ನೀಡದಿರುವುದು ನೋವಿನ ಸಂಗತಿ. ರಾಜ್ಯ ಸರಕಾರದ ಈ ನಡೆ ಆಶ್ಚರ್ಯಕರವಾಗಿದೆ. ಪ್ರಾಂಶುಪಾಲರು ರಾಜ್ಯ ಸರಕಾರದ ಆದೇಶವನ್ನು ಪಾಲಿಸಿದ್ದುದೇ ತಪ್ಪು ಎನ್ನುವಂಥ ವಾತಾವರಣ ಸೃಷ್ಟಿಸಲಾಗಿದೆ.
ಹೈಕೋರ್ಟ್ ಕೂಡ ಸರಕಾರದ ಆದೇಶಕ್ಕೆ ಪೂರಕ ನಿಲುವು ವ್ಯಕ್ತಪಡಿಸಿತ್ತು. ಹಾಗಿದ್ದರೆ ಈಗಿನ ಸರಕಾರ ಹೈಕೋರ್ಟ್ ಆದೇಶವನ್ನು ಗೌರವಿಸುವುದೋ ಅಥವಾ ತಮ್ಮ ಕಾರ್ಯಸೂಚಿಯನ್ನು ಗೌರವಿಸುವುದೋ ಎಂಬ ಪ್ರಶ್ನೆಗೆ ಸರಕಾರವೇ ಉತ್ತರಿಸಬೇಕು.
ಮುಖ್ಯಮಂತ್ರಿಯವರು ಈ ತಪ್ಪನ್ನು ಕೂಡಲೇ ಸರಿಪಡಿಸಿ ಪ್ರಾಂಶುಪಾಲರಿಗೆ ತತ್‌ಕ್ಷಣ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು.
ಮತೀಯ ಶಕ್ತಿ ಓಲೈಕೆ
ಹಿಜಾಬ್ ನಿಷೇಧ ವಿಚಾರವಾಗಿ ಅಂದಿನ ಸರಕಾರ ಆದೇಶ ಪಾಲಿಸಿದ್ದ ರಾಮಕೃಷ್ಣರಿಗೆ ಶಿಕ್ಷಣ ಇಲಾಖೆಯಿಂದ ಘೋಷಿಸಿದ್ದ ರಾಜ್ಯ ಮಟ್ಟದ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ರಾಜ್ಯ ಸರಕಾರ ಮತೀಯ ಶಕ್ತಿಗಳ ಓಲೈಕೆಗಾಗಿ ಹಿಂಪಡೆದಿದೆ. ಇದು ಸಮಸ್ತ ಶಿಕ್ಷಕ ವೃಂದಕ್ಕೆ ಮಾಡಿದ ಅಪಮಾನ. ಸರಕಾರ ಕೂಡಲೇ ರಾಮಕೃಷ್ಣರಿಗೆ ಪ್ರಶಸ್ತಿ ನೀಡಿ ಗೌರವಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಂದು ಶಾಸಕ ಯಶ್‌ಪಾಲ್ ಸುವರ್ಣ ಅವರು ಎಚ್ಚರಿಸಿದ್ದಾರೆ.
ಉಡುಪಿಯ ಶಿಕ್ಷಕರ ಪ್ರಶಸ್ತಿ ತಡೆಹಿಡಿದ ಸರಕಾರ:ಯದುವೀರ್ ಆಕ್ಷೇಪ
ಮೈಸೂರು: ಉಡುಪಿಯಲ್ಲಿ ಶಿಕ್ಷಕರೋರ್ವರಿಗೆ ಪ್ರಶಸ್ತಿ ಪ್ರಕಟಿಸಿದ ಬಳಿಕ ತಡೆ ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದವೀರ್ ಕೃಷ್ಣ ದತ್ತ ಚಾಮ ರಾ ಜ ಒಡೆಯರ್ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ ಅವರು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಯದುವೀರ್ ಒಡೆಯರ್, ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣುತ್ತಾರೆ. ಹೀಗಾಗಿ ಎಲ್ಲರೂ ಸಮವಸ್ತ್ರ ಧರಿಸಿಕೊಂಡು ಬನ್ನಿ ಎಂದಿದ್ದಾರೆ. ಆದರೆ ಇದನ್ನೇ ಮುಂದಿಟ್ಟುಕೊಂಡು ಪ್ರಕಟಿಸಿದ್ದ ಪ್ರಶಸ್ತಿಯನ್ನು ಸರಕಾರ ತಡೆ ಹಿಡಿದಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.