ತಮಿಳು ಚಿತ್ರರಂಗ; ಲೈಂ*ಗಿಕ ದೌರ್ಜನ್ಯ ಎಸಗಿದರೆ 5 ವರ್ಷ ನಿಷೇಧ!
Team Udayavani, Sep 6, 2024, 12:54 AM IST
ಚೆನ್ನೈ: ನ್ಯಾ| ಹೇಮಾ ಸಮಿತಿ ವರದಿ ಮಲಯಾಳ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ತಮಿಳು ಚಿತ್ರರಂಗವೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಎಚ್ಚೆತ್ತುಕೊಂಡಿದೆ. ಲೈಂಗಿಕ ದೌರ್ಜನ್ಯ ಅಪರಾಧಿಗಳಿಗೆ ತಮಿಳು ಚಿತ್ರರಂಗದಿಂದ 5 ವರ್ಷಗಳ ನಿಷೇಧ ಹೇರಲು ದಕ್ಷಿಣ ಭಾರತದ ಕಲಾವಿದರ ಸಂಘವು (ಎಸ್‌ಐಎಐ-ನಾಡಿಗರ್ ಸಂಘಮ್) ನಿರ್ಣಯ ಅಂಗೀಕರಿಸಿದೆ.
ನಾಡಿಗರ್ ಸಂಘಮ್ ಮತ್ತು ಅದರ ಆಂತರಿಕ ದೂರುಗಳ ಸಮಿತಿ ಬುಧವಾರ ಚೆನ್ನೈಯಲ್ಲಿ ಮಹತ್ವದ ಸಭೆ ನಡೆಸಿದ್ದವು. ಈ ವೇಳೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಸಮಸ್ಯೆಗಳನ್ನು ಮಟ್ಟ ಹಾಕುವುದಕ್ಕಾಗಿ ಉದ್ಯಮದ ಒಳಗಿನ ಜನರಿಗೆ ಬೆಂಬಲ ನೀಡುವಂಥ ಅನೇಕ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಈ ಪೈಕಿ ಲೈಂಗಿಕ ದೌರ್ಜನ್ಯ ಅಪರಾಧಿಯನ್ನು 5 ವರ್ಷ ಬ್ಯಾನ್ ಮಾಡುವ ಪ್ರಮುಖ ನಿರ್ಣಯವೂ ಸೇರಿದೆ.
ಆರೋಪ ಸಾಬೀತಾದಲ್ಲಿ ನಿರ್ಮಾಪಕರ ಸಂಘವೇ ಅಪರಾಧಿಯನ್ನು ನಿಷೇಧಿಸಬೇಕೆಂದು ನಿರ್ಧರಿಸಲಾಗಿದೆ. ಇದಲ್ಲದೇ ದೂರು ನೀಡಲು ಬರುವವರಿಗೆ ಅಗತ್ಯ ಕಾನೂನು ನೆರವು ನೀಡುವುದಾಗಿಯೂ ಸಮಿತಿ ಹೇಳಿದೆ. ಮಾಧ್ಯಮಗಳ ಮುಂದೆ ಹೋಗುವ ಬದಲು ಸಮಿತಿಗೇ ದೂರು ನೀಡಬಹುದು, ಇದಕ್ಕಾಗಿ ಹೊಸ ಮೇಲ್ ಐಡಿಯನ್ನೂ ರಚಿಸಿರುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Kollywood: ʼಅಮರನ್ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?
Kollywood: ಧನುಷ್ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು
Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.