Renukaswamy Case: ಎದೆ ಮೇಲೆ ಕಾಲಿಟ್ಟು ಪಕ್ಕೆಲುಬು ಮುರಿದ ಡಿ ಗ್ಯಾಂಗ್‌!

ಚಾರ್ಜ್‌ಶೀಟ್‌ನಲ್ಲಿ ರೇಣುಕಾಸ್ವಾಮಿ ಹತ್ಯೆಯ ಭೀಕರತೆ ಬಿಚ್ಚಿಟ್ಟ ಪೊಲೀಸರು, ಪವಿತ್ರಾ ಮುಂದೆಯೇ ಮರ್ಮಾಂಗ ಹೊಸಕಿದ ರಾಕ್ಷಸ!

Team Udayavani, Sep 6, 2024, 6:55 AM IST

Renuka-Murder

ಬೆಂಗಳೂರು: ಪ್ರೇಯಸಿಗೆ ಅಶ್ಲೀಲ ಸಂದೇಶ ಹಾಗೂ ಫೋಟೋ ಕಳುಹಿಸಿದ ರೇಣುಕಾಸ್ವಾಮಿಯನ್ನು ನಟ ದರ್ಶನ್‌ ಎಷ್ಟು ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂಬುದನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ. ಎದೆ ಮೇಲೆ ಕಾಲಿಟ್ಟು ಎಲುಬುಗಳನ್ನು ಮುರಿದಿದ್ದಲ್ಲದೆ, ಹಲ್ಲೆ ಸಂದರ್ಭ ದರ್ಶನ್‌ ರೇಣುಕಾಸ್ವಾಮಿಗೆ ನಿಂದಿಸುವ ಅಶ್ಲೀಲ ಪದಗಳನ್ನು ಯಥಾವತ್ತಾಗಿ ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ.

ಜೂನ್‌ 9ರಂದು ರಾಘವೇಂದ್ರ ಮತ್ತು ತಂಡ ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್‌ಗೆ ಕರೆತಂದ ಬಳಿಕ ವಿನಯ್‌ ಹಾಗೂ ಇತರರು ಹಲ್ಲೆ ನಡೆಸಿದ್ದಲ್ಲದೆ, ಎಲೆಕ್ಟ್ರಿಕ್‌ ಶಾಕ್‌ ಕೊಟ್ಟು ಅರೆಪ್ರಜ್ಞಾವಸ್ಥೆಗೆ ತಲುಪಿಸಿದ್ದರು. ಬಳಿಕ ದರ್ಶನ್‌ಗೆ ಕರೆ ಮಾಡಿ ಶೆಡ್‌ಗೆ ಬರುವಂತೆ ಹೇಳಿದ್ದರು. ಅದೇ ವೇಳೆ ಸ್ಟೋನಿ ಬ್ರೂಕ್‌ ಹೊಟೇಲ್‌ನಲ್ಲಿ ಪ್ರದೂಷ್‌, ನಾಗರಾಜ್‌ ಹಾಗೂ ಇತರರ ಜತೆ ಮದ್ಯ ಸೇವಿಸಿದ್ದ ದರ್ಶನ್‌ ಅದೇ ಅಮಲಿನಲ್ಲಿ ಪವಿತ್ರಾ ಗೌಡ ಮನೆಗೆ ಹೋಗಿ ಆಕೆಯನ್ನು ಶೆಡ್‌ಗೆ ಕರೆದೊಯ್ದನು.

ಎದೆ ಮೇಲೆ ಕಾಲಿಟ್ಟು ಕ್ರೌರ್ಯ
ಶೆಡ್‌ನ‌ಲ್ಲಿ ರೇಣುಕಾಸ್ವಾಮಿಯನ್ನು ಕಂಡ ದರ್ಶನ್‌ ಆತನ ಕೊರಳಪಟ್ಟಿ ಹಿಡಿದು ತಲೆಗೆ ಡಿಚ್ಚಿ ಹೊಡೆದನು. ಕೆಳಗೆ ಬಿದ್ದ ಆತನ ಎದೆ ಮೇಲೆ ಬೂಟುಗಾಲಿಟ್ಟು ಬಲವಾಗಿ ಒತ್ತಿದನು. ಪರಿಣಾಮ ಎದೆಯ ಎಲುಬುಗಳು ಒಳಭಾಗದಲ್ಲೇ ಮುರಿದವು. ಒಂದೆರಡು ಶ್ವಾಸಕೋಶಕ್ಕೆ ಚುಚ್ಚಿದ್ದರಿಂದ ಆಂತರಿಕ ರಕ್ತಸ್ರಾವ ಉಂಟಾಗಿದೆ. ಬಳಿಕ ಪೊಲೀಸ್‌ ಲಾಠಿ, ಎರಡು ಮರದ ಕೋಲುಗಳು ಮುರಿಯುವಂತೆ ಮನಸೋ ಇಚ್ಛೆ ಹಲ್ಲೆ ನಡೆಸಿದನು. ಇತರ ಆರೋಪಿಗಳು ಕೂಡ ಹಲ್ಲೆಗೈದರು. ದರ್ಶನ್‌, ಮ್ಯಾನೇಜರ್‌ ಬಾಡಿ ಬಿಲ್ಡರ್‌ ಆಗಿದ್ದು ಈ ಇಬ್ಬರ ಪ್ರತಿ ಏಟಿಗೂ ರೇಣುಕಸ್ವಾಮಿ ನರಳಿದ್ದಾನೆ.

ಸೆಕ್ಯೂರಿಟಿ ಗಾರ್ಡ್‌ ಕೋಣೆಯಲ್ಲಿ ಕೊನೆಯುಸಿರು
ಪವಿತ್ರಾ ಹೊರತು ಪಡಿಸಿ ಇತರ ಆರೋಪಿಗಳು ಮದ್ಯದ ಅಮಲಿನಲ್ಲಿ ಹಲ್ಲೆ ನಡೆಸಿದ ಪರಿಣಾಮ ರೇಣುಕಾಸ್ವಾಮಿ ತೀವ್ರ ಅಸ್ವಸ್ಥಗೊಂಡಿದ್ದ. ಬಳಿಕ ಆತನನ್ನು ಶೆಡ್‌ನ‌ ಸೆಕ್ಯೂರಿ ಗಾರ್ಡ್‌ ಕೋಣೆಯಲ್ಲಿ ಕೂಡಿಹಾಕಿದ್ದರು. ಬಳಿಕ ಆತನಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಗಾಬರಿಗೊಂಡ ಆರೋಪಿಗಳು ಶೆಡ್‌ನ‌ಲ್ಲೇ ಮತ್ತೂಂದೆಡೆ ಕುಳಿತಿದ್ದ ದರ್ಶನ್‌, ಪವಿತ್ರಾಗೌಡಳನ್ನು ಕೋಣೆಗೆ ಕರೆಸಿಕೊಂಡರು.

ಇಬ್ಬರೂ ಆತನನ್ನು ಎಚ್ಚರಿಸಲು ಪ್ರಯತ್ನಿಸಿದರು. ಆತನ ನಾಡಿಮಿಡಿತ ಪರಿಶೀಲಿಸಿದಾಗ ಕೊಂಚ ಎಚ್ಚರಗೊಂಡರೂ ಕೆಲವೇ ಕ್ಷಣದಲ್ಲೇ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಅದರಿಂದ ಗಾಬರಿಗೊಂಡ ದರ್ಶನ್‌, ಈಗೇನು ಮಾಡುವುದು ಎಂದು ಇತರರ ಜತೆ ಪ್ರಶ್ನಿಸಿದಾಗ ಉತ್ತರಿಸಿದ ಪ್ರದೂಶ್‌, ಈ ವಿಚಾರ ನಾನು ನೋಡಿಕೊಳ್ಳುತ್ತೇನೆ ಬಾಸ್‌. ಚಿಂತೆ ಬಿಡಿ ಎಂದು ಅವರನ್ನು ಸ್ಥಳದಿಂದ ಕಳುಹಿಸಿದ್ದನು. ದರ್ಶನ್‌ ತನ್ನ ಮನೆಗೆ ಹೋಗಿ ಬಟ್ಟೆ ಬದಲಿಸಿ ಪತ್ನಿ ಮನೆಗೆ ಹೋಗಿ ಆತಂಕದಿಂದಲೇ ಮರು ದಿನದ ಪೂಜೆಯಲ್ಲಿ ಭಾಗಿಯಾಗಿದ್ದ ಎಂದು ಆರೋಪಪಟ್ಟಿಯಲ್ಲಿ ದಾಖಲಾಗಿದೆ.

ಏನ್‌ ಮಾಡ್ತಿಯೋ ಮಾಡೋ….
ಪ್ರೇಯಸಿಗೆ ತನ್ನ ಖಾಸಗಿ ಫೋಟೋ ಕಳುಹಿಸಿದ್ದಕ್ಕೆ ಕೆಂಡಾಮಂಡಲವಾಗಿದ್ದ ದರ್ಶನ್‌, ರೇಣುಕಾಸ್ವಾಮಿಯ ಪ್ಯಾಂಟ್‌ ಎಳೆಸಿ ಮರ್ಮಾಂಗಕ್ಕೆ ಒದ್ದು ಹೊಸಕಿದ್ದಾನೆ. ಇತರರು ಆತನ ಮರ್ಮಾಂಗಕ್ಕೆ ಒದ್ದು ಹಾನಿಗೊಳಿಸಿದ್ದಾರೆ. ಆಗ ದರ್ಶನ್‌, ಈ… ಫೋಟೋ ಕಳಿಸುತ್ತೀಯಾ ಅವಳಿಗೆ, ಈಗ ಅದು ಏನ್‌ ಮಾಡ್ತಿಯೋ ಮಾಡು ಎಂದು ಕೂಗಾಡುತ್ತಾ ಪಕ್ಕದಲ್ಲೇ ಇದ್ದ ಪವಿತ್ರಾ ಕಡೆ ತಿರುಗಿ, ಹೋಗೇ ಏನ್‌ ಮಾಡ್ತಾನೆ ನಾನೂ ನೋಡ್ತೀನಿ ಎಂದು ಹೇಳಿದ. ಹೀಗೆ ಅಶ್ಲೀಲ ಪದಗಳಿಂದ ರೇಣುಕಾಸ್ವಾಮಿಯನ್ನು ನಿಂದಿಸುವ ಪ್ರತೀ ಪದವನ್ನೂ ತನಿಖಾಧಿಕಾರಿಗಳು ಉಲ್ಲೇಖೀಸಿದ್ದಾರೆಂದು ತಿಳಿದು ಬಂದಿದೆ.

ಬದುಕಲು ಯೋಗ್ಯನಲ್ಲ ನೀನು ಎಂದ ಪವಿತ್ರಾ
ದರ್ಶನ್‌ ಜತೆ ಪವಿತ್ರಾ ಕೂಡ ರೇಣುಕಾಸ್ವಾಮಿಯ ಮರ್ಮಾಂಗದ ಮೇಲೆ ಹಲ್ಲೆ ನಡೆಸಿದ್ದಾಳೆ. ಚಪ್ಪಲಿಯಿಂದ ಆತನ ಮುಖ ಹಾಗೂ ದೇಹದೆಲ್ಲೆಡೆ ಹಲ್ಲೆ ನಡೆಸಿ, ನನಗೆ ಆ ಫೋಟೋ ಕಳುಹಿಸಿ ಮುಜುಗರ ಪಡಿಸುತ್ತಿಯಾ? ನೀನು ಬದುಕಲು ಯೋಗ್ಯನಲ್ಲ. ಹಾಕ್ರೋ ಈ ನನ್ಮಗನಿಗೆ ಎಂದಾಗ ಎಲ್ಲರೂ ಮತ್ತೂಮ್ಮೆ ಹಲ್ಲೆ ನಡೆಸಿದ್ದಾರೆ. ಈಕೆಯ ನಿಂದನೆ ಪದಗಳನ್ನೂ ಆರೋಪಟ್ಟಿಯಲ್ಲಿ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

Lokayukta

Kinnigoli: ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ,ಜೂನಿಯರ್‌ ಇಂಜಿನಿಯರ್‌ ಲೋಕಾಯಕ್ತ ಬಲೆಗೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

police crime

Nyamathi;ಕೊ*ಲೆ,ಇರಿ*ತ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಬಂಧನ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

Suspend

Nagamangala ಗಲಭೆ: ಡಿವೈಎಸ್ಪಿ ಅಮಾನತು

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.