Renukaswamy Case: ನಟ ದರ್ಶನ್‌ ಹೆಸರು ಬಂದಿದ್ದೇ ರೋಚಕ!

ರೇಣುಕಸ್ವಾಮಿ ಕೊಲೆ ಕೇಸ್‌ ; ವಿಚಾರಣೆಯಲ್ಲಿ ವಿಜಯಲಕ್ಷ್ಮೀ ಹೆಸರು ಹೇಳಿದ್ದ ಆರೋಪಿಗಳು; ತನಿಖೆಗಿಳಿದಾಗ ಪವಿತ್ರಾ ಹೆಸರು ಈಚೆಗೆ

Team Udayavani, Sep 6, 2024, 2:36 PM IST

7-bng-crime

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹೆಸರು ಬಂದಿದ್ದೇ ರೋಚಕ. ಇದೇ ವೇಳೆ ಹತ್ಯೆಗೈದಿದ್ದಾಗಿ ಶರಣಾಗಿದ್ದವರು, ಪವಿತ್ರಾಗೌಡ ಹೆಸರು ಬದಲಿಗೆ, ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಹೆಸರು ಬಾಯಿಬಿಟ್ಟಾಗ ಪೊಲೀಸರು ಒಂದು ಕ್ಷಣ ಅಚ್ಚರಿಗೊಂಡಿರುವ ಅಂಶವೂ ಆರೋಪಪಟ್ಟಿಯಲ್ಲಿ ದಾಖಲಾಗಿದೆ.

ರೇಣುಕಸ್ವಾಮಿ ಮೃತಪಟ್ಟ ಬಳಿಕ ಆತನ ಮೃತದೇಹವನ್ನು ಬೇರೆಡೆ ಸಾಗಿಸಲು ಸಂಚು ರೂಪಿಸಿದ ಆರೋಪಿಗಳು, ಸುಮನಹಳ್ಳಿ ಸತ್ವ ಅಪಾರ್ಟ್‌ ಮೆಂಟ್‌ ಬಳಿಯ ಕಾಲುವೆ ಬಳಿ ಎಸೆದು ಪರಾರಿಯಾಗಿದ್ದರು. ಮರುದಿನ ಅಪರಿಚಿತ ಶವ ಪತ್ತೆಯಾದ ವಿಚಾರ ಬಹಿರಂಗವಾಗುತ್ತಿದ್ದಂತೆ ಆತಂಕ ಗೊಂಡ ಪವಿತ್ರಾಗೌಡ ಆಪ್ತ ಪ್ರದೂಷ್‌, ಸ್ಟೋನಿ ಬ್ರೂಕ್‌ ಹೋಟೆಲ್‌ ಮಾಲೀಕ ವಿನಯ್‌ ಮತ್ತು ಆತನ ಆಪ್ತ ದೀಪಕ್‌ ಸಂಚು ರೂಪಿಸಿ, ಚಿತ್ರದುರ್ಗದ ರಾಘವೇಂದ್ರ, ಆತನ ಸ್ನೇಹಿತರಾದ ನಿಖೀಲ್‌ ನಾಯಕ್‌, ಕೇಶವಮೂರ್ತಿ, ಕಾರ್ತಿಕ್‌ಗೆ ಕೂಡಲೇ ಪೊಲೀಸರಿಗೆ ಶರಣಾಗುವಂತೆ ಸೂಚಿಸಿದ್ದರು. ಆದರೆ, ರಾಘವೇಂದ್ರ ಭಯಗೊಂಡು ಸಾಧ್ಯವಿಲ್ಲ ಎಂದಿದ್ದ. ಬಳಿಕ ಆತನಿಗೆ ಮನವೊಲಿಸಿ ಹಣದ ಆಮಿಷವೊಡ್ಡಿದರಿಂದ ಜೂನ್‌ 10ರಂದು ಬೆಳಗ್ಗೆಯೇ ರಾಘವೇಂದ್ರ ತನ್ನ ಮೂವರು ಸ್ನೇಹಿತರ ಜತೆ ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿದ್ದಾರೆ.

ಹೀಗಾಗಿ ಆರಂಭದಲ್ಲಿ ರೇಣುಕಸ್ವಾಮಿ ಯಾರೋ ರೌಡಿಶೀಟರ್‌ ಇರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಮತ್ತೂಂದೆಡೆ ಅದೇ ದಿನ ಪೊಲೀಸ್‌ ಆಯುಕ್ತರು, ಡಿಸಿಪಿ ಅನಿರೀಕ್ಷಿತವಾಗಿ ಠಾಣೆಗೆ ಹೋದಾಗ, ಆರೋಪಿಗಳ ಕಂಡು ಪ್ರಶ್ನಿಸಿದಾಗ ರೌಡಿಶೀಟರ್‌ ಮರ್ಡರ್‌ ಕೇಸ್‌ ಎಂದು ಠಾಣಾಧಿಕಾರಿ ಮಾಹಿತಿ ನೀಡಿದ್ದಾರೆ. ಅದರಿಂದ ಅನುಮಾನಗೊಂಡ ಡಿಸಿಪಿ ಗಿರೀಶ್‌ ಹಾಗೂ ಎಸಿಪಿ ಚಂದನ್‌ ಕುಮಾರ್‌, ಕೆಲ ಹೊತ್ತಿನ ಬಳಿಕ ಠಾಣೆಗೆ ಬಂದು ರಾಘವೇಂದ್ರನ ಹಿನ್ನೆಲೆಯನ್ನು ಕೆದಕಿದಾಗ, ಚಿತ್ರದುರ್ಗ ದರ್ಶನ್‌ ಅಭಿಮಾನ ಸಂಘದ ಅಧ್ಯಕ್ಷ. ಹಣಕಾಸು ವಿಚಾರಕ್ಕೆ ರೇಣುಕಸ್ವಾಮಿಯನ್ನು ಹತ್ಯೆ ಮಾಡಿದ್ದಾಗಿ ಹೇಳಿದ್ದ. ಆದರೆ, ಹಣದ ಮೂಲ ತಿಳಿಸಿರಲಿಲ್ಲ. ಅದರಿಂದ ಇನ್ನಷ್ಟು ಅನುಮಾನಗೊಂಡ ಎಸಿಪಿ, ರೇಣುಕಸ್ವಾಮಿ ಯನ್ನು ಇಲ್ಲಿಗೆ ಕರೆತಂದು ಕೊಲ್ಲಲು ಕಾರಣವೇನು, ರೇಣುಕಸ್ವಾಮಿಗೂ ಈತನಿಗೂ ಯಾವ ರೀತಿ ವ್ಯವಹಾರ ಎಂದು, ನಾಲ್ವರು ಆರೋಪಿಗಳನ್ನು ಪ್ರತ್ಯೇಕ ವಾಗಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯಲಕ್ಷ್ಮೀ ಎಂದ ರಾಘವೇಂದ್ರ, ಪವಿತ್ರಾ ಎಂದ ಕೇಶವ:

ಪ್ರತ್ಯೇಕ ವಿಚಾರಣೆಯಲ್ಲಿ ಹಣಕಾಸಿನ ವಿಚಾರವಲ್ಲ. ದರ್ಶನ್‌ ಪತ್ನಿ ವಿಜಯಲಕ್ಷ್ಮೀಗೆ ಅಶ್ಲೀಲ ಸಂದೇಶ ಕಳುಹಿಸಿದ್ದ. ಅದಕ್ಕಾಗಿ ಬೆಂಗಳೂರಿಗೆ ಕರೆ ತಂದು ಕೊಲೆ ಮಾಡಿದ್ದೇವೆ ಎಂದಿದ್ದ. ನಂತರ ತಡ ರಾತ್ರಿ ಕೇಶವಮೂರ್ತಿ ಪೊಲೀಸರ ತೀವ್ರ ವಿಚಾರಣೆಗೆ ಭಯಗೊಂಡು, ವಿಜಯಲಕ್ಷ್ಮೀ ಅಲ್ಲ. ಡಿ ಬಾಸ್‌ ಪ್ರೇಯಸಿ ಪವಿತ್ರಾಗೌಡಗೆ ಕೆಟ್ಟದಾಗಿ ಸಂದೇಶ ಕಳುಹಿಸಿದ್ದ. ಚಿತ್ರದುರ್ಗದಿಂದ ಶೆಡ್‌ಗೆ ಕರೆದೊಯ್ದು ಡಿ ಬಾಸ್‌ ಸೇರಿ ಎಲ್ಲರೂ ಹೊಡೆದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆಗ ಅಸಲಿ ವಿಚಾರ ಬಯಲಾಗಿದೆ. ಕೂಡಲೇ ಅಲರ್ಟ್‌ ಆದ ಪೊಲೀಸರು, ಎಲ್ಲರ ಮೊಬೈಲ್‌ ನೆಟ್‌ವರ್ಕ್‌ ಪರಿಶೀಲಿಸಿದಾಗ ದರ್ಶನ್‌, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಒಂದೆಡೆ ಪತ್ತೆಯಾಗಿದೆ.

ಕೂಡಲೇ ನಸುಕಿನಲ್ಲಿ ಎಸಿಪಿ ಚಂದನ್‌ ಕುಮಾರ್‌, ಡಿಸಿಪಿ ಗಿರೀಶ್‌ಗೆ ಕರೆ ಮಾಡಿ, ದರ್ಶನ್‌ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನದ ಬಗ್ಗೆ ಮಾಹಿತಿ ನೀಡಿ, ಬಂಧಿಸುವ ಕುರಿತು ಅನುಮತಿ ಕೇಳಿದ್ದರು. ಆಗ ಡಿಸಿಪಿ, ಸ್ವಲ್ಪ ಭಾಗಿಯಾಗಿದ್ದಾನೆ ಅಂತಾ ಕಂಡು ಬಂದರೂ ಕೂಡಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿ ಎಂದು ಸೂಚಿಸಿದಲ್ಲದೆ, ಕೂಡಲೇ ಮೈಸೂರಿಗೆ ಹೊರಡಿ ಎಂದು ಸೂಚಿಸಿದ್ದಾರೆ.

ಮತ್ತೂಂದೆಡೆ ಪತ್ನಿ ಮನೆಯ ಪೂಜೆ ಮುಗಿಸಿ ಕೊಂಡು ದರ್ಶನ್‌, ಜೂನ್‌ 9ರಂದು ರಾತ್ರಿಯೇ ಮೈಸೂರಿಗೆ ಹೋಗಿದ್ದರು. ಈ ಮಾಹಿತಿ ಬೆನ್ನಲ್ಲೇ ಎಸಿಪಿ ಚಂದನ್‌ ತಂಡ, ಮೈಸೂರಿಗೆ ತೆರಳಿತ್ತು. ಇತ್ತ ಮತ್ತೂಂದು ತನಿಖಾ ತಂಡ ಇತರೆ ಕೆಲ ಆರೋಪಿಗಳ ಮೊಬೈಲ್‌ ನೆಟ್‌ವರ್ಕ್‌ ಶೋಧಿಸಿದಾಗ ಮೈಸೂರಿನಿಂದ ಬೆಂಗಳೂರಿಗೆ ಬರುತ್ತಿರುವ ಮಾಹಿತಿ ಪಡೆದು, ಕುಂಬಳಗೋಡು ಟೋಲ್‌ ಗೇಟ್‌ ಬಳಿಯೇ ಬಂಧಿಸಲಾಗಿತ್ತು.

ಇನ್ನು ಮುಂಜಾನೆ 6 ಗಂಟೆ ಸುಮಾರಿಗೆ ಪ್ರಕರಣದಲ್ಲಿ ದರ್ಶನ್‌ ಭಾಗಿ ವಿಚಾರವನ್ನು ಡಿಸಿಪಿ ಗಿರೀಶ್‌, ಪೊಲೀಸ್‌ ಕಮಿಷನರ್‌ ಬಿ.ದಯಾನಂದ, ಹೆಚ್ಚುವರಿ ಪೊಲೀಸ್‌ ಆಯುಕ್ತರಾದ ಸತೀಶ್‌ ಕುಮಾರ್‌ಗೆ ತಿಳಿಸಿದ್ದಾರೆ. ಅವರೂ ಬಂಧನಕ್ಕೆ ಅನುಮತಿ ನೀಡಿದ್ದರಿಂದ ಖಾಸಗಿ ಹೋಟೆಲ್‌ ನಲ್ಲಿಯೇ ದರ್ಶನ್‌ನನ್ನು ಬಂಧಿಸಿ, ಬೆಂಗಳೂರಿಗೆ ಕರೆ ತರಲಾಗಿದೆ ಎಂಬುದನ್ನು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.

ನಟ ದರ್ಶನ್‌ ಕರೆ ತರುವಾಗ, ಇದು ಶೂಟಿಂಗ್‌ ಎಂದ ಪೊಲೀಸರು! ದರ್ಶನ್‌ನನ್ನು ಮೈಸೂರಿನ ಖಾಸಗಿ ಹೋಟೆಲ್‌ ನಿಂದ ಬೆಂಗಳೂರಿಗೆ ಕರೆ ತರುವಾಗ ಹತ್ತಾರು ಬೈಕ್‌ಗಳಲ್ಲಿ ಕೆಲ ಅಭಿಮಾನಿಗಳು ಹಿಂಬಾಲಿಸಿದ್ದರು. ಆಗ ಪೊಲೀಸರು ಮಾರ್ಗ ಮಧ್ಯೆಯೇ ತಡೆದು, ಇದು ಸಿನಿಮಾ ಶೂಟಿಂಗ್‌ ತೊಂದರೆ ಕೊಡಬೇಡಿ ಎಂದು ಯಾಮಾರಿಸಿ ಕಳುಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಕೈಮುಗಿದು ಕಣ್ಣೀರು ಹಾಕಿದರೂ ಕರಗದ ಡಿ ಗ್ಯಾಂಗ್‌ನಿಂದ ಹತ್ಯೆ

ಕಿವಿ ಕಟ್‌, ತಲೆ 4 ಇಂಚು ಓಪನ್‌, ಹತ್ತಾರು ಕಡೆ ಗಾಯ ಬಡಕಲು ದೇಹದ ರೇಣುಕಸ್ವಾಮಿ ಗೋಗರೆದರೂ ಚಿತ್ರ ಹಿಂಸೆ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಆ್ಯಂಡ್‌ ಗ್ಯಾಂಗ್‌ನ ಕೌರ್ಯದ ಒಂದೊಂದೇ ಫೋಟೋಗಳು ಹೊರ ಬರುತ್ತಿದ್ದು, ಸಾವಿಗೂ ಮುನ್ನ ದರ್ಶನ್‌ ಹಾಗೂ ತಂಡ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿರುವುದನ್ನು ಫೋಟೋಗಳು ಸ್ಪಷ್ಟಪಡಿಸಿದಂತಿದೆ.

ಇನ್ನು ಸಾವಿಗೂ ಮುನ್ನ ಶೆಡ್‌ನ‌ಲ್ಲಿ ರೇಣುಕಸ್ವಾಮಿ ಕೈ ಮುಗಿದು, ಕಣ್ಣೀರು ಸುರಿಸುತ್ತಾ ನನ್ನನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದಯನೀಯ ಸ್ಥಿತಿ ಫೋಟೋ ಮೂಲಕ ವ್ಯಕ್ತವಾಗಿದೆ. ದರ್ಶನ್‌, ಪ್ರೇಯಸಿ ಪವಿತ್ರಾಗೌಡ ಹಾಗೂ ಗ್ಯಾಂಗ್‌ ಹಲ್ಲೆಯಿಂದ ತೀವ್ರವಾಗಿ ನಲುಕಿದ್ದ ಬಡಕಲು ದೇಹದ ರೇಣುಕಸ್ವಾಮಿ, ಮೈಮೇಲೆ ಬಟ್ಟೆ ಇಲ್ಲದೇ ಕಣ್ಣೀರಿಡುತ್ತ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಗೋಗರೆಯುತ್ತಿರುವ ಸ್ಥಿತಿಯ ಫೋಟೋ ವೈರಲ್‌ ಆಗಿದೆ.

ಪಟ್ಟಣಗೆರೆ ಶೆಡ್‌ನ‌ಲ್ಲಿ ನಟ ದರ್ಶನ್‌ ಮತ್ತು ಗ್ಯಾಂಗ್‌, ರೇಣುಕಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿತ್ತು. ಈಗ ಇದೇ ಸ್ಥಳದಲ್ಲಿ ತೆಗೆದಿರುವ ಫೋಟೋಗಳು ರಿವೀಲ್‌ ಆಗಿದ್ದು, ರೇಣುಕಸ್ವಾಮಿ ಹಿಂದೆ ಲಾರಿಗಳು ನಿಂತಿವೆ. ನೆಲದಲ್ಲಿ ಕುಳಿತಿರುವ ಸಂತ್ರಸ್ತ ಕೈಚಾಚಿ ಅಂಗಲಾಚುತ್ತಿರುವ ಸ್ಥಿತಿಯಲ್ಲಿದ್ದಾನೆ. ಅಲ್ಲದೆ, ಆತನ ಕಣ್ಣುಗಳಲ್ಲಿ ಗಾಯಗಳಾಗಿವೆ. ಹಲ್ಲು ಉದುರಿದೆ. ಮೈಮೇಲೆ ಗಾಯದ ಹತ್ತಾರು ಗುರುತುಗಳಿವೆ. ಇನ್ನು ತಲೆಯಲ್ಲಿ 3-4 ಇಂಚು ಓಪನ್‌ ಆಗಿದೆ. ಮರದ ರಿಪೀಸ್‌ ಪಟ್ಟಿಯಿಂದ ಹÇÉೆ ಮಾಡಿ ಲಾರಿಗೆ ಗುದ್ದಿಸಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿರುವುದು ಫೋಟೊಗಳಿಂದ ಬೆಳಕಿಗೆ ಬಂದಿದೆ. ಜತೆಗೆ ರೇಣುಕಸ್ವಾಮಿ ಕಿವಿ ಕೂಡ ಕಟ್‌ ಆಗಿದೆ. ಹೀಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬುದನ್ನು ಈ ಫೋಟೋ ತೋರಿಸುತ್ತದೆ. ಹಾಗೆಯೇ ಹತ್ಯೆಗೆ ಬಳಸಿದ್ದ ಮೆಗ್ಗಾರ್‌, ಹಗ್ಗ, ಪೊಲೀಸ್‌(ಸೆಕ್ಯೂರಿಟಿ ಗಾರ್ಡ್‌ ಬಳಸಿದ) ಲಾಠಿ, ಹಲ್ಲೆಗೆ ಬಳಸಿದ್ದ ಮರದ ಪೀಸ್‌, ಫೋಟೋಗಳು ಮತ್ತು ನಿತ್ರಾಣಗೊಂಡು ಅಂಗಾತ ಮಲಗಿರುವ ಫೋಟೋಗಳು ಕೂಡ ರಿವೀಲ್‌ ಆಗಿದೆ. ಈ ಅಂಶಗಳನ್ನು ಪೊಲೀಸರು ಆರೋಪಪಟ್ಟಿಯಲ್ಲಿ ಉಲ್ಲೇಖೀಸಿದ್ದಾರೆ.

ಕೃತ್ಯದ ವೇಳೆ ಪವಿತ್ರಾಗೌಡ ಆಪ್ತ ಪವನ್‌ ಫೋಟೋ ತೆಗೆದು ಅದನ್ನು ಸ್ಟೋನಿ ಬ್ರೂಕ್‌ ರೆಸ್ಟೋರೆಂಟ್‌ ಮಾಲೀಕ ವಿನಯ್‌ ಹಾಗೂ ದರ್ಶನ್‌ ಆಪ್ತ, ಪ್ರದೂಷ್‌ಗೆ ಕಳುಹಿಸಿದ್ದ. ರೇಣುಕಸ್ವಾಮಿ ಮೃತದೇಹ ಪತ್ತೆಯಾಗುತ್ತಿದ್ದಂತೆ ಈ ಫೋಟೋಗಳನ್ನು ಡಿಲೀಟ್‌ ಮಾಡಿ ಸಾಕ್ಷ್ಯ ನಾಶಪಡಿಸಿದ್ದರು. ಆದರೆ, ದತ್ತಾಂಶ ಮರು ಸಂಗ್ರಹದ ವೇಳೆ ಆ ಫೋಟೋಗಳು ಪತ್ತೆಯಾಗಿವೆ.

ಇನ್ನು ಕೃತ್ಯ ಎಸಗಿದ ಬಳಿಕ ದರ್ಶನ್‌ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಮನೆಗೆ ತೆರಳಿದ್ದಾನೆ. ನಂತರ ಇತರೆ ಆರೋಪಿಗಳು ರೇಣುಕಸ್ವಾಮಿ ಮೃತದೇಹ ವನ್ನು ಬಿಳಿ ಬಣ್ಣದ ಸಫಾರಿ ಕಾರಿನಲ್ಲಿ ಕೊಂಡೊ ಯ್ಯುತ್ತಿರುವ ಫೋಟೋಗಳು ಬಹಿರಂಗವಾಗಿದೆ.

ಕೊಲೆಗೂ ಮೊದಲು ಪಾರ್ಟಿ, ರಿಕ್ರಿಯೆಟ್‌ ಮಾಡಿದ ಪೊಲೀಸರು

ಕೃತ್ಯಕ್ಕೂ ಮೊದಲು ದರ್ಶನ್‌, ಮ್ಯಾನೇಜರ್‌ ನಾಗರಾಜ್‌, ಪ್ರದೂಷ್‌, ಪವನ್‌, ವಿನಯ್‌ ಹಾಗೂ ಹಾಸ್ಯನಟ ಚಿಕ್ಕಣ್ಣ ಸ್ಟೋನಿ ಬ್ರೂಕ್‌ ಹೋಟೆಲ್‌ನಲ್ಲಿ ಪಾರ್ಟಿ ಮಾಡಿರುವುದನ್ನು ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೆ, ಅದನ್ನು ರಿಕ್ರಿಯೆಟ್‌ ಮಾಡಿ, ಸ್ಥಳದಲ್ಲೇ ಪ್ರತಿಯೊಬ್ಬರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ, ಚಿಕ್ಕಣ್ಣನ ಹೇಳಿಕೆಯಲ್ಲಿ ರೇಣುಕಸ್ವಾಮಿ ಎಂಬಾತನ ವಿಚಾರ ಮಾತನಾಡುತ್ತಿದ್ದರೂ, ಆದರೆ, ಆತ ಯಾರೆಂಬ ಬಗ್ಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

KL Rahul and Athiya Shetty to welcome their first child in 2025

Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್‌ – ಅಥಿಯಾ ಶೆಟ್ಟಿ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.