ಆತ್ಮ ಶುದ್ಧಿಯಿಂದ ಬದುಕು ಸುಂದರ- ಶ್ರೀ ವಿಶ್ವಾರಾಧ್ಯ ಮಠ
Team Udayavani, Sep 6, 2024, 5:32 PM IST
■ ಉದಯವಾಣಿ ಸಮಾಚಾರ
ಯಾದಗಿರಿ: ನಮ್ಮ ಅಂತರಂಗವನ್ನು ಶುದ್ಧವಾಗಿಟ್ಟುಕೊಂಡಾಗ ಒಳಗಿನ ಆತ್ಮ ಇತರರಿಗೆ ಲೇಸನ್ನು ಬಯಸಲು ಪ್ರರೇಪಿಸುತ್ತದೆ. ಆತ್ಮ ಶುದ್ಧಿ ಇದ್ದಾಗ ಮಾತ್ರ ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುತ್ತದೆ ಎಂದು ತಾಲೂಕಿನ ಅಬ್ಬೆತುಮಕೂರಿನ ಶ್ರೀ ವಿಶ್ವಾರಾಧ್ಯ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಕೊನೆಯ ವಿಶೇಷ ಪೂಜಾ ಮಹಾಮಂಗಲ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಇಡೀ ವರುಷದುದ್ದಕ್ಕೂ ಪ್ರತಿಯೊಬ್ಬ ಮನುಷ್ಯ ಜೀವಿ ಸಾಂಸಾರಿಕ ಜೀವನದಲ್ಲಿ ತೊಡಗಿಸಿಕೊಂಡು ಅನೇಕ ಎಡರು- ತೊಡರುಗಳನ್ನು ಅನು ಭವಿಸುತ್ತಾನೆ. ಈ ಸಂಕಷ್ಟಗಳಿಂದ ನೀಗಲು ಶ್ರಾವಣ ಮಾಸದಲ್ಲಿ ಪುರಾಣ-ಪುಣ್ಯ ಕಥೆಗಳನ್ನು ಆಲಿಸುವುದು ಅಗತ್ಯವಾಗಿದೆಯೆಂದು ಹೇಳಿದರು. ಶ್ರಾವಣವೆಂದರೆ ಶ್ರವಣ. ಅಂದರೆ ಒಳ್ಳೆಯ ವಿಚಾರಗಳನ್ನು ಆಲಿಸುವುದು ಎಂದರ್ಥವಾಗುತ್ತದೆ.
ಇಡೀ ತಿಂಗಳಲ್ಲಿ ಪುಣ್ಯ ಕ್ಷೇತ್ರಗಳ ದರ್ಶನ ಮಾಡಬೇಕು. ಪುರಾಣ, ಪ್ರವಚನಗಳನ್ನು ಆಲಿಸುವುದರಿಂದ ಮನಃಶುದ್ಧಿಯಾಗಿ
ಮನುಷ್ಯ ಮಹಾಂತನಾಗಲು ಸಾಧ್ಯವಾಗುತ್ತದೆ ಎಂದರು. ಪ್ರತಿ ಯೊಬ್ಬರು ಧರ್ಮ ಮಾರ್ಗದಲ್ಲಿ ನಡೆಯಬೇಕು. ಅಧರ್ಮ, ಅನೀತಿ ಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ಸಾಗಿದಾಗ ಬದುಕಿಗೆ ಅರ್ಥವಂತಿಕೆ ಬರುತ್ತದೆ. ಮನುಷ್ಯ ಬದುಕು
ಮಾರ್ಗದರ್ಶಿಯಾಗಬೇಕಾದರೆ ಮಾನ ವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅವಶ್ಯ ವಿದೆ ಯೆಂದರು. ಲೋಕ ಕಲ್ಯಾಣ ಮತ್ತು ಜನ ಕಲ್ಯಾಣವನ್ನು ಬಯಸಿ, ತಿಂಗಳ ಪರ್ಯಂತ ವಿಶೇಷ ಪೂಜೆಯನ್ನು ನೆರವೇರಿಸಿಕೊಂಡು ಬರಲಾಗಿದೆ. ಶ್ರೀ
ವಿಶ್ವಾರಾಧ್ಯರು ಸಂಪ್ರೀತರಾಗಿ ಎಲ್ಲರಿಗೂ ಒಳಿತಾಗಲು ಹರಸುತ್ತಾರೆಂದು ಹೇಳಿದರು.
ಪ್ರಸಾದ ವಿತರಣೆ: ಬೆಳಗ್ಗೆ ಶ್ರೀ ವಿಶ್ವಾರಾಧ್ಯರ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾ ಭಿಷೇಕವನ್ನು ನೆರವೇರಿ ಸುವುದರೊಂದಿಗೆ ತಿಂಗಳ ಪರ್ಯಂತ ನಡೆಸಿಕೊಂಡು ಬಂದ ಪೂಜೆಯನ್ನು ಮಹಾ ಮಂಗಲಗೊಳಿಸಲಾಯಿತು. ತರುವಾಯ ಸಿದ್ಧರಾಮ ಮೇತ್ರೆ ಪರಿವಾರದವರಿಂದ ಡಾ| ಗಂಗಾಧರ ಸ್ವಾಮೀಜಿ ಪಾದಪೂಜೆ ನಡೆಯಿತು.
ಸಿದ್ಧರಾಮ ಮೇತ್ರೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪ ಗೌಡ ಮೋಸಂಬಿ, ರಾಚಣ್ಣಗೌಡ ಮುದ್ನಾಳ, ಡಾ| ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಶಿರವಾರ ಸೇರಿದಂತೆ ಅನೇಕ ಭಕ್ತರು ಇದ್ದರು. ಶಹಾಬಾದ, ಲಕ್ಷ್ಮೀಪೂರ, ಹತ್ತಿಕುಣಿ, ಯಾದಗಿರಿ, ಯರಗೋಳ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ಭಜನಾ ತಂಡದವರಿಂದ ನಡೆದ ಭಜನಾ ಮೇಳ ಭಕ್ತಿಯ
ಮೆರಗನ್ನು ಹೆಚ್ಚಿಸಿತು. ಎಲ್ಲ ಭಕ್ತಾದಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು
Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.