Jammu: ಉಗ್ರ ದಮನ, ಉದ್ಯೋಗ ಸೃಷ್ಟಿ ಬಿಜೆಪಿ ಸಂಕಲ್ಪ
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಕಣಿವೆಯ ಅಭಿವೃದ್ಧಿಗೆ "25 ಸಂಕಲ್ಪ'ಗಳ ಘೋಷಣೆ, ದೇಗುಲಗಳ ಮರು ನಿರ್ಮಾಣ, ಪಂಡಿತರ ಪುನರ್ವಸತಿಯ ಆಶ್ವಾಸನೆ
Team Udayavani, Sep 6, 2024, 11:16 PM IST
ಜಮ್ಮು: ಭಯೋತ್ಪಾದನೆ ನಿರ್ಮೂಲನೆ, ಹಿಂದೂ ದೇಗುಲಗಳ ಮರು ನಿರ್ಮಾಣ, ಕಾಶ್ಮೀರಿ ಪಂಡಿತರ ಪುನರ್ವಸತಿ. 5 ಲಕ್ಷ ಉದ್ಯೋಗ ಸೃಷ್ಟಿ ಸೇರಿದಂತೆ ಒಟ್ಟು 25 ಸಂಕಲ್ಪಗಳೊಂದಿಗೆ ಬಿಜೆಪಿ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿದೆ.
ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ಹೊಸ ಜಮ್ಮು-ಕಾಶ್ಮೀರಕ್ಕೆ 25 ಆಶ್ವಾಸನೆಗಳು’ ಎಂಬ ಸಂಕಲ್ಪದೊಂದಿಗೆ ಪಕ್ಷದ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದಾರೆ. ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದತಿ ಬಳಿಕ ಕಣಿವೆ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಈ ಹಿನ್ನೆಲೆಯಲ್ಲಿ ಕೆಲವು ವಿಪಕ್ಷಗಳು ಈ ವಿಧಿಯನ್ನು ವಾಪಸ್ ತರುವ ಆಶ್ವಾಸನೆ ನೀಡುತ್ತಿದ್ದರೆ, ಬಿಜೆಪಿ 370ನೇ ವಿಧಿ ಮರುಜಾರಿಯ ಪ್ರಶ್ನೆಯೇ ಇಲ್ಲ ಎಂದಿದೆ. ಯುವಕರ ಕೈಗೆ ಶಸ್ತ್ರಾಸ್ತ್ರಗಳು ಲಭ್ಯವಾಗಲು ಈ ವಿಧಿಯೇ ಕಾರಣ ಎಂದು ಸಚಿವ ಶಾ ಹೇಳಿದ್ದಾರೆ.
ಟೆರರಿಸ್ಟ್ ಹಾಟ್‌ಸ್ಪಾಟ್ ಆಗಿದ್ದ ಕಾಶ್ಮೀರವನ್ನು ಪ್ರಧಾನಿ ಮೋದಿಯವರು ಟೂರಿಸ್ಟ್ ಹಾಟ್‌ಸ್ಪಾಟ್ ಆಗಿ ಬದಲಿಸಿದ್ದಾರೆ ಎಂದೂ ಹೇಳಿದ್ದಾರೆ. ಪ್ರಣಾಳಿಕೆ ಬಿಡುಗಡೆ ಮೂಲಕ ಕಾಶ್ಮೀರದಲ್ಲಿ ಚುನಾವಣ ಪ್ರಚಾರದ ಕಹಳೆ ಮೊಳಗಿಸಿರುವ ಅಮಿತ್ ಶಾ, ಶನಿವಾರ 2 ರ್ಯಾಲಿಗಳನ್ನು ನಡೆಸಲಿದ್ದಾರೆ.
ಪಾಕ್ ಜತೆ ಮಾತುಕತೆ ಇಲ್ಲ: ಶಾ ಸ್ಪಷ್ಟನೆ
ಭಯೋತ್ಪಾದನೆ ಕೊನೆಗೊಳ್ಳುವವರೆಗೂ ಪಾಕಿಸ್ಥಾನದೊಂದಿಗೆ ಮಾತುಕತೆ ನಡೆಸುವುದಿಲ್ಲ. ಆದರೆ ಕಾಶ್ಮೀರದ ಯುವಕರೊಂದಿಗೆ ನಾವು ಖಂಡಿತಾ ಮಾತುಕತೆ ನಡೆಸುತ್ತೇವೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಎಲ್‌ಒಸಿಯಲ್ಲಿ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧ ಪುನಃಸ್ಥಾಪನೆಗಾಗಿ ಭಾರತ-ಪಾಕ್ ಮಾತುಕತೆ ನಡೆಯಬೇಕು ಎಂದು ವಿವಿಧ ರಾಜಕೀಯ ಪಕ್ಷಗಳು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
370ನೇ ವಿಧಿ ಮರುಜಾರಿ ಪ್ರಶ್ನೆಯೇ ಇಲ್ಲ: ಸಚಿವ
ಕೆಲವು ರಾಜಕೀಯ ಪಕ್ಷಗಳು 370ನೇ ವಿಧಿ ಮರುಜಾರಿಯ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಲು ಮುಂದಾಗಿರುವಂತೆಯೇ ಬಿಜೆಪಿ ಈ ವಿಧಿಯನ್ನು ಪುನಃಸ್ಥಾಪಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ. 370ನೇ ವಿಧಿ ಈಗ ಇತಿಹಾಸದ ಪುಟ ಸೇರಿದೆ. ಕಳೆದ 10 ವರ್ಷಗಳ ಅವಧಿಯು ಚರಿತ್ರೆಯಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆಯುವಂಥ ಅವಧಿಯಾಗಿತ್ತು. ಹೀಗಾಗಿ ಜಮ್ಮು-ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿ ಮಾಡುವುದಿಲ್ಲ ಎಂದು ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಯ ಪ್ರಮುಖ ಅಂಶಗಳು
– ಕಣಿವೆ ರಾಜ್ಯದ ಜಮ್ಮು-ಕಾಶ್ಮೀರದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸುವ ವಾಗ್ಧಾನ
– ಪ್ರಗತಿ ಶಿಕ್ಷಾ ಯೋಜನೆ ಅನ್ವಯ ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 3,000 ರೂ. ಪ್ರಯಾಣ ಭತ್ತೆ ನೀಡಲಾಗುವುದು
– ಕುಗ್ರಾಮಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್‌ಲೆಟ್/ಲ್ಯಾಪ್‌ಟಾಪ್ ಹಂಚಿಕೆ
– ವೃದ್ಧಾಪ್ಯ, ವಿಧವಾ ಮತ್ತು ಅಂಗವಿಕಲರ ಪಿಂಚಣಿಯನ್ನು ಈಗಿರುವ 1,000 ರೂ.ಗಳಿಂದ 3,000ರೂ.ಗೆ ಏರಿಕೆ
– ಕಣಿವ ರಾಜ್ಯದ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ಛಕ್ತಿ ದರ ಶೇ.50ರಷ್ಟು ಇಳಿಕೆ
– ಶ್ವೇತಪತ್ರ ಹೊರಡಿಸಿ, ಭಯೋತ್ಪಾದನೆಯ ಎಲ್ಲ ಸಂತ್ರಸ್ತರಿಗೆ ತ್ವರಿತವಾಗಿ ನ್ಯಾಯ ಒದಗಿಸುವುದು ವಾಗ್ಧಾನ
– ಋಷಿ ಕಶ್ಯಪ ಯಾತ್ರಾಸ್ಥಳ ಪುನರುತ್ಥಾನ ಅಭಿಯಾನದ ಅಡಿ 100 ಶಿಥಿಲಗೊಂಡ ದೇಗುಲಗಳ ಮರುನಿರ್ಮಾಣ
– ಶಂಕರಾಚಾರ್ಯ ದೇಗುಲ, ರಘುನಾಥ, ಮಾರ್ತಾಂಡ ಸೂರ್ಯ ದೇಗುಲ ಸೇರಿದಂತೆ ಇತರ ದೇಗುಲಗಳ ಅಭಿವೃದ್ಧಿ
– ಕಾಶ್ಮೀರಿ ಪಂಡಿತರು, ಪಶ್ಚಿಮ ಪಾಕಿಸ್ಥಾನಿ ನಿರಾಶ್ರಿತರು, ಪಿಒಜೆಕೆ ನಿರಾಶ್ರಿತರು, ವಾಲ್ಮೀಕಿ, ಗೋರ್ಖಾ ಸೇರಿ ನಿರ್ಲಕ್ಷಿತ ಸಮುದಾಯಗಳ ಪುನರ್ವಸತಿಗೆ ಕ್ರಮ
– ವಿಶ್ವದರ್ಜೆಯ ಪ್ರವಾಸಿ ತಾಣವಾಗಿ ದಾಲ್ ಸರೋವರ ಅಭಿವೃದ್ಧಿಯ ಭರವಸೆ
– ಜಮ್ಮು-ಕಾಶ್ಮೀರದಲ್ಲಿ ವಿಶೇಷ ಆರ್ಥಿಕ ವಲಯ, ಐಟಿ ಹಬ್, ಫಾರ್ಮಾ ಪಾರ್ಕ್, ಆಯುಷ್ ಹರ್ಬಲ್ ಪಾರ್ಕ್ ಸ್ಥಾಪನೆ
– ಸರಕಾರಿ ಉದ್ಯೋಗದಲ್ಲಿ ಅಗ್ನಿವೀರರಿಗೆ ಶೇ.20 ಕೋಟಾ ಭರವಸೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.