Fake Document ಸೃಷ್ಟಿಸಿ ವಾಹನ ನೋಂದಣಿ: ದೂರು ದಾಖಲು
Team Udayavani, Sep 7, 2024, 1:01 AM IST
ಸಿದ್ದಾಪುರ: ನಕಲಿ ದಾಖಲೆ ಸೃಷ್ಟಿಸಿ ಕಾರು ನೋಂದಣಿ ಮಾಡಿದ್ದ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ವೆ ಗ್ರಾಮದ ಪ್ಲೋರಿನ್ ಫಿಲೋಮಿನಾ ಅವರು ತಮ್ಮ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಕುಂದಾಪುರ ಸಾಯಿ ಡ್ರೀಮ್ ಕಾರ್ ಶೋರೂಮ್ ಮಾಲಕ ನಾಗೇಂದ್ರ ಅವರಿಗೆ ಮೇ 13ರಂದು 5.90 ಲ. ರೂ.ಗೆ ಮಾರಾಟ ಮಾಡಿದ್ದರು. ಆ.29ರಂದು ನಾಗೇಂದ್ರ ಅವರು ಕಾರನ್ನು ಬೇರೆಯವರಿಗೆ ಮಾರಾಟ ಮಾಡಲು ಉಡುಪಿ ಆರ್ಟಿಒ ಕಚೇರಿಯಲ್ಲಿ ಸಿಸಿ ತೆಗೆದಾಗ, ಕಾರು ಧಾರವಾಡದ ಫಾರೂಕ್ ಅಹ್ಮದ್ ಖಾತಿಬ್ ಅವರ ಹೆಸರಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಇದರ ಹಿಂದೆ ಸತೀಶ ದೇವಾಡಿಗ ತ್ರಾಸಿ ಎಂಬವರ ಕೈವಾಡವೂ ಇದೆ ಎಂಬುದು ತಿಳಿಯಿತು.
ಸತೀಶ್ ಹಾಗೂ ಫಾರೂಕ್ ಸೇರಿ ನಕಲಿ ದಾಖಲೆ ಸೃಷ್ಟಿಸಿ ಧಾರವಾಡ ಆರ್ಟಿಒ ಕಚೇರಿಯಲ್ಲಿ ಬೇರೆ ವಾಹನಕ್ಕೆ ಪ್ಲೋರಿನ್ ಫಿಲೋಮಿನಾ ಅವರ ಕಾರಿನ ನಂಬರನ್ನು ಹಾಕಿ, ಫಾರೂಕ್ ಅಹ್ಮದ್ ಖಾತಿಬ್ ಹೆಸರಿನಲ್ಲಿ ದಾಖಲೆ ನೋಂದಣಿ ಮಾಡಲಾಗಿದೆ. ಆದ್ದರಿಂದ ಸತೀಶ ದೇವಾಡಿಗ ತ್ರಾಸಿ ಹಾಗೂ ಫಾರೂಕ್ ಅಹ್ಮದ್ ಖಾತಿಬ್ ವಿರುದ್ಧ ಕ್ರಮಕ್ಕಾಗಿ ಪ್ಲೋರಿನ್ ಫಿಲೋಮಿನಾ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ
Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ
Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ
Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Viral Disease: ಕೇರಳದಲ್ಲಿ ಎಂ ಫಾಕ್ಸ್ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್
Mangaluru: ಕದ್ರಿ ಪಾರ್ಕ್ನಲ್ಲಿ ರಾಜ್ಯದ ಎರಡನೇ ಅತಿ ಎತ್ತರದ ರಾಷ್ಟ್ರ ಧ್ವಜಸ್ತಂಭ ಅನಾವರಣ
Guarantee: ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಯಲ್ಲೂ ನೋಡಲ್ ಅಧಿಕಾರಿ: ಪುಷ್ಪಾ ಅಮರನಾಥ್
Virtual Meeting: ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ
ISPRL Programme: ಪಾದೂರು ಜಲ್ಲಿ ಕ್ರಷರ್: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.