Ganesh Chaturthi Special Story: ವಿಶ್ವಪೂಜಿತ ವಿನಾಯಕ


Team Udayavani, Sep 7, 2024, 8:00 PM IST

17-desiswara-ganaap

ಪ್ರತೀ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯಂದು ವಿಘ್ನ ವಿನಾಶಕನ ಜನ್ಮದಿನವಾದ ಗಣೇಶ ಚತುರ್ಥಿಯನ್ನು  ಭಾರತದಾದ್ಯಂತ ಅತ್ಯಂತ ಸಡಗರ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪೂಜೆಗೆ ಅಧಿಪತಿಯಾಗಿರುವ ವಕ್ರತುಂಡ ಗಣಪತಿಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಮಹಾನ್‌ ಭಕ್ತರಿದ್ದಾರೆ.

ವಿದೇಶದಲ್ಲಿ ನೆಲೆಸಿರುವ  ಅನಿವಾಸಿ ಭಾರತೀಯರು, ವಿದೇಶಿಯರು ಗಣೇಶನನ್ನು ಆರಾಧಿಸುತ್ತಾರೆ. ಭಾರತ ಹೊರತುಪಡಿಸಿ ಇತರೇ ದೇಶಗಳಲ್ಲಿಯೂ ಮಹಾಗಣಪತಿಯ ಹಲವು ದೇವಾಲಯಗಳನ್ನು ಕಾಣಬಹುದು. ಭಾರತದಂತೆ ವಿದೇಶದಲ್ಲಿಯೂ ಉಮಾಪುತ್ರನ ದಿನವನ್ನು ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ.

ಅಮೆರಿಕ

ಅತೀ ಹೆಚ್ಚು ಭಾರತೀಯರಿರುವ ಅಮೆರಿಕದಲ್ಲಿ ವಿವಿಧ ಅನಿವಾಸಿ ಸಂಘ-ಸಂಸ್ಥೆಗಳು  ಮತ್ತು ಧಾರ್ಮಿಕ ಗುಂಪುಗಳು ಬಹುತೇಕ ಭಾರತದ ಪ್ರತೀ ಹಬ್ಬಗಳನ್ನು ಆಚರಿಸುತ್ತಾರೆ ಅದರಲ್ಲೂ ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಭಾರತೀಯ ಸಮುದಾಯದವರು ಮುಂಬಯಿಯಿಂದ ದೊಡ್ಡ ಗಣೇಶ ಮೂರ್ತಿಯನ್ನು ಬರಮಾಡಿಕೊಂಡು, ಸಾರ್ವಜನಿಕವಾಗಿ ಕ್ರೀಡಾಂಗಣ, ಪಾರ್ಟಿಹಾಲ್‌ಗ‌ಳಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರುವ ಮೂಲಕ 11ದಿನದ ಗಣೇಶನ ಉತ್ಸವ ನಡೆಸಲಾಗುತ್ತದೆ. ಪೆನ್ನಿಸಿಲ್ವೇನಿಯಾದ ಚಾಲ್‌ಫಾಂಟ್‌ನ ಭಾರತೀಯ ದೇವಾಲಯದಲ್ಲಿ  ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿ ಹಬ್ಬವನ್ನು ಆಚರಿಸಲಾಗುತ್ತದೆ. ಇಲ್ಲಿ ನೋಯ್ಸನ ವಾರೆನ್‌ ವಿಲ್ಲೆಯಲ್ಲಿನ ಸಾಯೀ ಸಂಸ್ಥಾನದಲ್ಲಿ ಸಾಕಷ್ಟು ಜನರು ಭಾಗವಹಿಸಿ, ಸಾಂಸ್ಕೃತಿಕ  ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿಜೃಂಭಣೆಯಿಂದ ಆಚರಿಸುತ್ತಾರೆ.

ಅಮೆರಿಕದ ಪ್ರಮುಖ ದೇವಾಲಯಗಳು

 ಪ್ಲೋರಿಡಾದಲ್ಲಿರುವ ಗುಜರಾತ್‌ ಸಮಾಜ ಹಿಂದೂ ದೇವಾಲಯ

 ಅರಿಜೋನಾದ ಫೀನಿಕ್ಸ್‌ ಸಿಟಿಯಲ್ಲಿರುವ ಮಹಾಗಣಪತಿ ದೇವಾಲಯ

 ಉತಾಹ್‌ನ ಸಾಲ್ಟ್ ಲೇಕ್‌ ಸಿಟಿಯಲ್ಲಿರುವ ಶ್ರೀ ಗಣೇಶ ದೇವಸ್ಥಾನ

 ಸಿಯಾಟಲ್‌ನಲ್ಲಿರುವ ಶ್ರೀ ಗಣೇಶ ದೇವಸ್ಥಾನ

 ಅಲಾಸ್ಕಾದ ಶ್ರೀ ಗಣೇಶ ದೇವಸ್ಥಾನ

 ಉತ್ತರ ಟೆಕ್ಸಾಸ್‌ನಲ್ಲಿರುವ ಶ್ರೀ ಗಣೇಶ ದೇವಸ್ಥಾನ

 ಕ್ಯಾಲಿಪೋರ್ನಿಯಾದ ಸೇಂಟ್‌ ಜೋಸ್‌ನಲ್ಲಿರುವ ವೈದಿಕ ವಿದ್ಯಾಗಣಪತಿ ದೇವಸ್ಥಾನ

ಬ್ರಿಟನ್‌

ಲಂಡನ್‌ನ ಹೌನ್‌ಸ್ಲೋ ಎಂಬಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಪ್ರತೀ ವರ್ಷ ಗಣೇಶನ ಮೂರ್ತಿಯನ್ನು ಕೂರಿಸಿ. 5 ಸಾವಿರಕ್ಕೂ ಹೆಚ್ಚಿನ ಜನ ಸೇರುತ್ತಾರೆ. ಪ್ರತೀ ದಿನ‌ ಆರತಿ ಪೂಜೆ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಕೊನೆಯ ದಿನ ಹ್ಯಾಂ ಕೊಳದವರೆಗೆ ಮೆರವಣಿಗೆ ಮೂಲಕ ಗಣೇಶ ಮೂರ್ತಿಯನ್ನು ಕೊಂಡೊಯ್ದು ವಿಸರ್ಜಿಸಲಾಗುತ್ತದೆ. ಅತೀ ಹೆಚ್ಚು ಹಿಂದೂಗಳನ್ನು ಹೊಂದಿರುವ ಬ್ರಿಟನ್‌ನಲ್ಲಿ  ಪ್ರತೀ ವರ್ಷ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜತೆಗೆ ಬ್ರಿಟನ್‌ ದಕ್ಷಿಣ ಭಾಗದಲ್ಲಿ ಗುಜರಾತಿ ಸಮುದಾಯದವರು ಸಾವಿರಾರು ಸಂಖ್ಯೆಯಲ್ಲಿ ಸೇರುವ ಮೂಲಕ ಆಚರಿಸುತ್ತಾರೆ.

ಇಂಗ್ಲೆಂಡ್‌ನ‌ ದೇವಾಲಯಗಳು

 ಲಂಡನ್‌ನಲ್ಲಿರುವ ಶ್ರೀ ಗಣಪತಿ ದೇವಾಲಯ

 ವಿಂಬಲ್ಡನ್‌ನಲ್ಲಿ ಗಣಪತಿ ದೇವಾಲಯ

 ಥಾರ್ನ್ಟನ್‌ನಲ್ಲಿರುವ ಶ್ರೀ ಶಕ್ತಿ ಗಣಪತಿ ದೇವಾಲಯ

ಥೈಲ್ಯಾಂಡ್‌ 

ಅತೀ ಹೆಚ್ಚು ಗಣೇಶ ಭಕ್ತರನ್ನು ಹೊಂದಿದ ಈ ದೇಶದಲ್ಲಿ  ಹಿಂದೂಯೇತರರೆ ಹೆಚ್ಚು ಎಂಬುದು ವಿಶೇಷ . ಉದ್ಯಾಯನ ಗಣೇಶ ದೇವಾಸ್ಥಾನ ಮತ್ತು ವಿಶ್ವ ಹಿಂದೂ ಪರಿಷದ್‌ ಥೈಲ್ಯಾಂಡ್‌ ಘಟಕದಿಂದ  ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಬ್ಯಾಂಕಾಕ್‌ನಿಂದ 106 ಕಿ. ಮೀ. ದೂರವಿರುವ ನಾಖೂನ್‌ ನಾಯೋಕ್‌ ನಗರದಲ್ಲಿ ಆಗ್ನೇಯ ಏಷ್ಯಾದಲ್ಲೆ ಅತೀ ಎತ್ತರದ 38 ಅಡಿ ಮಣ್ಣಿನ ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಮನೆಯಿಂದಲೇ ತಯಾರಿಸಿದ ಪ್ರಸಾದವನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ.

ಜರ್ಮನಿ

ಬರ್ಲಿನ್‌ನ ಶ್ರೀ ಗಣೇಶ ಹಿಂದೂ ದೇವಾಲಯದಲ್ಲಿ  10 ದಿನಗಳ ಕಾಲ ಗಣೇಶನಿಗೆ ಪ್ರತೀ ದಿನ ಮಂಗಳಾರತಿ, ಪೂಜೆ ಮಾಡುವುದರ ಮೂಲಕ ಕೊನೆಯ ದಿನ ಹಿಂದೂ ಪದ್ಧತಿಯಂತೆ ಗಣೇಶನ ವಿಸರ್ಜನೆಯನ್ನು ಮಾಡಲಾಗುತ್ತದೆ.

ಮುನೀಚ್‌ನಲ್ಲಿ ಮಹಾರಾಷ್ಟ್ರ  ಮಂಡಳಿಯಿಂದ ಪೂಜೆ, ಸಂಗೀತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ. ಫ್ರಾಂಕ್‌ಫ‌ರ್ಟ್‌ ಮತ್ತು ಹಂಬರ್ಗ್‌ನಲ್ಲಿ ಸ್ಥಳೀಯ ಭಾರತೀಯ ಹಿಂದೂ ಸಮುದಾಯದವರಿಂದ ಸಣ್ಣ  ಪ್ರಮಾಣದಲ್ಲಿ  ಗಣೇಶ ಹಬ್ಬವನ್ನು ವಾರಾಂತ್ಯದ ಕೊನೆಯ ಎರಡು ದಿನಗಳಲ್ಲಿ ಆಚರಿಸುತ್ತಾರೆ.

ಜರ್ಮನಿಯ ಗಣೇಶ ದೇವಾಲಯ

 ಹಾಂನಲ್ಲಿರುವ ಸಿದ್ಧಿವಿನಾಯಕ ದೇವಸ್ಥಾನ

 ಹೆಲ್ಬಾರ್ನ್ ನಲ್ಲಿರುವ ವಿನಾಯಕ ದೇವಸ್ಥಾನ

ಮಲೇಶಿಯಾ 

ಮಲೇಶಿಯಾ ರಾಜಧಾನಿ ಕುಲಾಲಂಪುರ್‌ನಲ್ಲಿ ಮತ್ತು ಬ್ರಿಕ್‌ಫೀಲ್ಡ್‌ನಲ್ಲಿ  ಪರಿಸರ ಸ್ನೇಹಿ ಗಣೇಶ ಮೂರ್ತಿಯೊಂದಿಗೆ ಚತುರ್ಥಿಯನ್ನು ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ.  ವಿಸರ್ಜನ ಅನಂತರ ಸಮುದ್ರ ಜೀವಿಗಳಿಗೆ ಇದು ಆಹಾರವಾಗಿ ಮಾರ್ಪಡುತ್ತದೆ. ಭಾರತದಲ್ಲಿ ತಯಾರಿಸಿದ 5.5ಮೀ ಎತ್ತರದ ವಿಗ್ರಹವನ್ನು  ಜಲನ್‌ ತುನ್‌ ಸಂಬಂತನ್‌ ಮುಖ್ಯ ರಸ್ತೆಯಲ್ಲಿನ ಎತ್ತರ‌ದ ಅಂಗಡಿಯಲ್ಲಿ  ಪ್ರತಿಷ್ಠಾಪಿಸಲಾಗುತ್ತದೆ. ಅನಂತರ 9 ದಿನಗಳ ಕಾಲ ಬಗೆಬಗೆಯ ಖಾದ್ಯಗಳನ್ನ ತಯಾರಿಸಿ ನೈವೇದ್ಯ ನೀಡಿತ್ತಾರೆ. ಕೊನೆಯ ದಿನ ಬೃಹತ್‌ ಮೆರವಣಿಗೆಯ ಮೂಲಕ ವಿಸರ್ಜಿಸಲಾಗುತ್ತದೆ.

ಮಲೇಶಿಯಾದ ಗಣೇಶ ದೇವಸ್ಥಾನ

 ಕೊಟ್ಟುಮಲೈನ ಶ್ರೀ ಗಣೇಶ ದೇವಸ್ಥಾನ

 ಜಲಾನ್‌ ಪುದು ಲಾಮಾದಲ್ಲಿನ ಶ್ರೀ ಗಣೇಶ ದೇವಸ್ಥಾನ

 ಇಪೋದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ,

ಶ್ರೀ ಪರಮಜ್ಯೋತಿ ವಿನಾಯಕ ದೇವಸ್ಥಾನ

ಇಟಲಿ  

ಇಲ್ಲಿನ ನಗರದಲ್ಲಿ 10 ದಿನಗಳ ಕಾಲ ಶ್ರೀ ಮನಿಕರ್‌ ವಿನಾಯಕರ್‌ ಅಲಯಮ್‌ ದೇವಾಲಯದಲ್ಲಿ  ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಕೊನೆಯ ದಿನ ಹೂಗಳಿಂದ ಆಲಂಕೃತಗೊಂಡ ರಥದಲ್ಲಿ ಗಣೇಶನನ್ನು ಕುಳ್ಳಿರಿಸಿ ಸಾಂಪ್ರದಾಯಿಕ ಉಡುಗೆ ಧರಿಸಿ ಹಿಂದೂ ಹಾಗೂ ಹಿಂದೂ ಯೇತರರು ರಥ ಎಳೆಯುವುದರೊಂದಿಗೆ, ಮುಖ್ಯ ಬೀದಿ ಗಳಲ್ಲಿ ಮೆರವಣಿಗೆ ಸಾಗಿ ಅನಂತರ ವಿಸರ್ಜಿಲಾಗುತ್ತದೆ.

ಕೆನಡಾ

ಕೆನಡಾ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿರುವ ರಾಜಧಾನಿ ಟೊರಂಟೋದಲ್ಲಿ ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸದೆ, ಒಬ್ಬರ ಮನೆಯಲ್ಲಿ ಗಣೇಶನನ್ನು ಕೂರಿಸಿ ಅಕ್ಕಪಕ್ಕ ದವರೆಲ್ಲ ಸೇರಿ ನೈವೇದ್ಯ ಸಿದ್ಧಪಡಿಸಿ ಸಾಮೂಹಿಕ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಗುತ್ತದೆ.

ಕೆನಡಾದ ಪ್ರಮುಖ ಗಣೇಶ ದೇವಾಲಯ

 ಟೊರಂಟೊದಲ್ಲಿರುವ ಮುತ್ತು ವಿನಿಯಗರ್‌ ಕೋವಿಲ್‌ ದೇವಸ್ಥಾನ

 ಟೊರಂಟೊನ ರಿಚ್ಮಂಡ್‌ ಹಿಲ್‌ ಗಣೇಶ ದೇವಸ್ಥಾನ

 ಬ್ರಾಂಪ್ಟನ್‌ನಲ್ಲಿರುವ ಶ್ರೀ ಕಟ³ಕ್‌ ವಿನಾಯಕರ್‌ ರೋವಿಲ್ಲೆ ದೇವಸ್ಥಾನ

 ಎಡ್ಮಂಟನ್‌ನಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನ

ಫ್ರಾನ್ಸ್‌  

ಫ್ರಾನ್ಸ್‌ನ ಪ್ಯಾರೀಸ್‌ನಲ್ಲಿ  ಗಣೇಶ ಹಬ್ಬವನ್ನು ಹತ್ತು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ಯಾರೀಸ್‌ನ ಮಾಣಿಕ್ಯ ವಿನಾಯಕ ಮಂದಿರದಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ, ಪ್ರತೀ ದಿನ ಆರತಿ ಮತ್ತು ಪೂಜೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಕೊನೆಯ ದಿನ ಗಣೇಶನ ಮೂರ್ತಿಯನ್ನು ರಥದಲ್ಲಿ ಕೂರಿಸಿ, ಜನರು ಸಾಂಪ್ರದಾಯಿಕ ಉಡುಗೆ ಧರಿಸಿ ರಥವನ್ನು 15 ಕಿ.ಮೀ. ಎಳೆಯುವ  ಮೂಲಕ ಮೆರವಣಿಗೆ ಮಾಡಲಾಗುತ್ತದೆ. ಅನಂತರ ದೇವಸ್ಥಾನದ ಹತ್ತಿರ ವಿಸರ್ಜಿಸಲಾಗುತ್ತದೆ.

ನೇಪಾಲ

ಹಿಂದೂ ರಾಷ್ಟ್ರವಾದ ನೇಪಾಲದಲ್ಲಿ ಗಣೇಶನ ಹಬ್ಬವನ್ನು 11 ದಿನಗಳ ಕಾಲ ಭಾರೀ ಜೋರಾಗಿ ಆಚರಿಸಲಾಗುತ್ತದೆ. ಆದರೆ ಇಲ್ಲಿ ದೇವಾಲಯ ಮತ್ತು ಮನೆಗಳಲ್ಲಿ ಮೂರ್ತಿಯನ್ನು ಕೂರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ನೇಪಾಲದ ಗಣೇಶ ದೇವಾಲಯಗಳು

 ಅಶೋಕ ವಿನಾಯಕ, ಕಠ್ಮಂಡುವಿನ ವಿನಾಯಕ ದೇವಾಲಯ

 ಚೋಬರ್‌ನಲ್ಲಿರುವ ಜಲ ವಿನಾಯಕ ದೇವಾಲಯ

 ಬಂಗಮತಿಯಲ್ಲಿರುವ ಕರ್ಣ ವಿನಾಯಕ ದೇವಾಲಯ

 ಸಿದ್ಧ ಗಣೇಶ ದೇವಸ್ಥಾನ ಜನಕಪುರ

 ಪುಲ್ಹಾ ರದಲ್ಲಿರುವ ಗಿರಿಜಾ ಗಣೇಶ ದೇವಸ್ಥಾನ

 ಗೋರ್ಖಾದಲ್ಲಿರುವ ವಿಜಯ ಗಣಪತಿ ದೇವಸ್ಥಾನ

 ಭಕ್ತಪುರದಲ್ಲಿರುವ ಸೂರ್ಯ ವಿನಾಯಕ ದೇವಾಲಯ

ಮಾರಿಷಸ್‌

ಶೇ.52ರಷ್ಟು ಹಿಂದೂಗಳಿರುವ ದ್ವೀಪ ರಾಷ್ಟ್ರವಾದ ಮಾರಿಷಸ್‌ನಲ್ಲಿ, ಗಣೇಶ ಚತುರ್ಥಿಯನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಇಲ್ಲಿ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸುವ ಪದ್ಧತಿ ಬದಲಾಗಿ ದೇವಸ್ಥಾನ ಮತ್ತು ಮನೆಗಳಲ್ಲಿ ಮಣ್ಣಿನ ಮೂರ್ತಿಯನ್ನು ನಿರ್ಮಿಸಿ ಕೂರಿಸಲಾಗುತ್ತದೆ. 3-5 ದಿನಗಳ ವರೆಗೆ ಗಣೇಶ ಹಬ್ಬ ನಡೆಯುತ್ತದೆ. ಭಾರತದಲ್ಲಿ 2024ರ ಸೆಪ್ಟಂಬರ್‌ 7ರಂದು ಗಣೇಶ ಚತುರ್ಥಿ ಆಚರಿಸಿದರೆ, ಇಲ್ಲಿ  ಸೆ. 8ರಂದು ಆಚರಿಸಲಾಗುತ್ತಿದೆ. ಅಂದು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಗುತ್ತದೆ.

ಮೊದಲ ದಿನ ಮಾರಿಷಸ್‌ನ ಭಾರತೀಯರ ಮನೆಗಳಲ್ಲಿ ಗಣೇಶನನ್ನು ಭಕ್ತಿಯಿಂದ ಸ್ವಾಗತಿಸಲಾಗುತ್ತದೆ, ಹೂಗಳಿಂದ ಆಲಂಕೃತಗೊಂಡ ಪೀಠದ ಮೇಲೆ ಕೂರಿಸಿ, ಗಣೇಶನಿಗೆ ಪ್ರಿಯವೆನಿಸುವ ಆಹಾರ ಪದಾರ್ಥಗಳನ್ನು ತಯಾರಿಸಿ, ಕೊನೆಯ ದಿನ ಸಮುದ್ರದಲ್ಲಿ  ವಿಸರ್ಜಿಸುವ ಮೂಲಕ ಆಚರಿಸಲಾಗುತ್ತದೆ. ಅಂದು ಮಾರಿಷಸ್‌ನ ಭಾರತೀಯ ಹೈ ಕಮಿಷನರ್‌ ಕಚೇರಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಕಾಂಬೋಡಿಯಾ7ನೇ ಶತಮಾನದಿಂದಲೂ ಕಾಂಬೋಡಿಯಾದಲ್ಲಿ ಗಣೇಶನನ್ನು ಪ್ರಾಥಮಿಕ ದೇವರನ್ನಾಗಿ ಪೂಜಿಸಲಾಗುತ್ತಿದೆ. ಕುತೂಹಲವೆಂದರೆ ಭಾರತಕ್ಕಿಂತಲೂ ಮೊದಲು ಈ ದೇಶದಲ್ಲಿ ಗಣೇಶ ಹಬ್ಬದ ಆಚರಣೆಯಿತ್ತು. ಕಾಂಬೋಡಿಯಾದಲ್ಲಿ ಆನೆ ತಲೆ ಮತ್ತು ಮನುಷ್ಯನ ದೇಹದೊಂದಿಗೆ ನೇರವಾಗಿ ನಿಂತಿರುವ ಗಣೇಶನನ್ನು ಚಿತ್ರಿಸಲಾಗಿದೆ.

ಚೀನಉತ್ತರ ಚೀನದಲ್ಲಿ  ತಿಳಿದಿರುವ ಅತ್ಯಂತ ಪ್ರಾಚೀನ ಗಣೇಶನ ಪ್ರತಿಮೆಯು ಕ್ರಿ.ಶ.531ರ ಶಾಸನವನ್ನು ಹೊಂದಿದೆ. ತುನ್‌- ಹುವಾಂಗ್‌ನಲ್ಲಿರುವ ಬಂಡೆಯಿಂದ ಕೆತ್ತಿದ ದೇವಾಲಯದಲ್ಲಿ ಗಣೇಶನ ಚಿತ್ರವಿದೆ. ಕುಂಗ್‌-ಹಿಯೆನ್‌ನಲ್ಲಿಯೂ ಅದೇ ರೀತಿಯ ಇನ್ನೊಂದು ಚಿತ್ರವಿದೆ.

ಸಿಂಗಾಪುರ

ಸಿಂಗಾಪುರ್‌ ನಗರದಲ್ಲಿ ಮಹಾರಾಷ್ಟ್ರದ ಮರಾಠಿ ಮಂಡಳ ದಿಂದ ಗಣೇಶ ಚತುರ್ಥಿಯಂದು  ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂದು ಭಾರತೀಯ ಮಹಿಳೆಯರು ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮತ್ತು ದೇವಸ್ಥಾನಗಳಲ್ಲಿ ಸಣ್ಣ ಪ್ರಮಾಣದಲ್ಲಿ ಗಣೇಶನನ್ನು ಕೂರಿಸಿ ಅರಶಿನ ಮತ್ತು ಕುಂಕುಮ ಪೂಜೆ, ಬಗೆ ಬಗೆಯ ಹಣ್ಣುಗಳನ್ನು ನೈವೇದ್ಯದ ಮೂಲಕ ಹಬ್ಬವನ್ನು ಆಚರಿಸುತ್ತಾರೆ.

ಸಿಂಗಾಪುರದ ಗಣೇಶ ದೇವಸ್ಥಾನಗಳು

 19 ಸೆಲೋನ್‌ ರಸ್ತೆಯಲ್ಲಿರುವ ಶ್ರೀ ಸೆಂಪಾಗ ವಿನಾಯಕ ದೇವಸ್ಥಾನ

 78 ಕಿಯೋಂಗ್‌ ಸಿಯಾಕ್‌ ರಸ್ತೆಯಲ್ಲಿರುವ ಶ್ರೀ ಸೆಂಪಾಗ್‌

ಇತರ ದೇಶಗಳಲ್ಲಿನ ವಿಘ್ನ ವಿನಾಶಕನ ಪ್ರಮುಖ ದೇವಾಲಯಗಳು:

ಶ್ರೀಲಂಕಾದ ದೇವಸ್ಥಾನಗಳು

 ನಲ್ಲೂರಿನ ಕೈಲಾಶ ಪಿಳ್ಳೆ„ಯಾರ್‌ ದೇವಸ್ಥಾನ

 ಚುಲಿಪುರಂನಲ್ಲಿರುವ ಕನ್ನೈಕೋತಿಕಕ್ಕೆ„ ಪಿಳ್ಳೆಯಾರ್‌ ದೇವಾಲಯ

 ಇನುವಿಯಲ್ಲಿರುವ ಕರುಣಾಕರ ಪಿಳ್ಳೆಯಾರ್‌ ದೇವಸ್ಥಾನ

 ಕೊಲಂಬೊದಲ್ಲಿರುವ ಶ್ರೀ ಮುತ್ತು ವಿನಾಯಕ ದೇವಸ್ಥಾನ

 ನೀರವೇಲಿಯಲ್ಲಿರುವ ಅರಸಕೇಸರಿ ಪಿಳ್ಳೆಯರ್‌ ದೇವಾಲಯ

 ಮುರುಕಂಡಿಯಲ್ಲಿರುವ ಪಿಳ್ಳೆಯಾರ್‌ ದೇವಾಲಯ

ನಾರ್ವೆಯ ಗಣೇಶ ದೇವಾಲಯ

 ಟ್ರೋಂಡ್‌ಹೈಮ್‌ನಲ್ಲಿರುವ ಗಣೇಶ ದೇವಸ್ಥಾನ

ದಕ್ಷಿಣ ಆಫ್ರಿಕಾದ ದೇವಾಲಯಗಳು

 ಡರ್ಬನ್‌ನಲ್ಲಿರುವ ಸಿದ್ದಿ ವಿನಾಯಕ ದೇವಾಲಯ

 ಮೌಂಟ್‌ ಎಡ್ಜ್ಕಾಂಬ್‌ನಲ್ಲಿರುವ ಗಣೇಶ ದೇವಾಲಯ

ಆಸ್ಟ್ರೇಲಿಯಾದ ಗಣೇಶ ದೇವಾಲಯ

 ಬ್ರಿಸ್ಬೇನ್‌ನಲ್ಲಿರುವ ಶ್ರೀ ಸೇವಾ ವಿನಾಯಕ ದೇವಸ್ಥಾನ

 ಅಡಿಲೇಡ್‌ನ‌ಲ್ಲಿರುವ ಗಣೇಶ ದೇವಸ್ಥಾನ

 ಮೆಲ್ಬೋರ್ನ್ನಲ್ಲಿರುವ ಶ್ರೀ ವಕ್ರತುಂಡ ವಿನಾಯಕ ದೇವಸ್ಥಾನ

ಮಾಹಿತಿ: ವಿಜಯಕುಮಾರ್‌ ಹಿರೇಮಠ, ದಿವ್ಯಾ ನಾಯ್ಕನಕಟ್ಟೆ

ಟಾಪ್ ನ್ಯೂಸ್

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Cricket: ಚಾಂಪಿಯನ್ಸ್‌ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Aligarh ಮುಸ್ಲಿಮ್‌ ವಿವಿ  ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ

Rakesh Adiga in Maryade Prashne movie

Rakesh Adiga: ನಾನು ಮಿಡಲ್‌ ಕ್ಲಾಸ್‌ ಹುಡುಗ ಮರ್ಯಾದೆ ಉಳಿಸಿ!

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

BGT Series: Indians Should not forget the battle of Pujara at the Gabba

BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ

24-tma-pai

Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ

12(2)

Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.