Ganesh Chaturthi: ಗಣೇಶ ಬಂದ
Team Udayavani, Sep 7, 2024, 9:00 PM IST
ಗೌರಿ ಗಣೇಶ ಹಬ್ಬದ ಎಂದರೆ ಎಲ್ಲರಿಗೂ ಸಡಗರ ಸಂಭ್ರಮ. ಗಣೇಶ ಚತುರ್ಥಿಗೆ ತನ್ನದೇ ಆದ ವೈಶಿಷ್ಟವಿದೆ. ಗಣೇಶನ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಾರೆ. ಜಾತಿ, ಮತ ಭೇದವಿಲ್ಲದೇ ಶ್ರೀ ಗಣೇಶವನ್ನು ವೈಭವದಿಂದ 5 ದಿನಗಳವರೆಗೆ ಪೂಜಿಸುತ್ತಾರೆ. ಕೆಲವರು ಒಂದೇ ದಿನ ಪೂಜಿಸುತ್ತಾರೆ. ಗಣೇಶನ ಪೂಜೆಯ ಮೊದಲ ದಿನ ಗೌರಿಪೂಜೆ ಮಾಡುತ್ತಾರೆ. ಚತುರ್ಥಿಯಂದು ಗಣಪತಿಯ ಮೂರ್ತಿಯನ್ನು ತಂದು ಒಂದು, ಮೂರು, ಐದು, ಏಳು, ಹನ್ನೊಂದು ಹಾಗೂ ಇಪ್ಪತ್ತೂಂದು ದಿನಗಳವರೆಗೆ ಪೂಜಿಸಿ, ಆರಾಧಿಸುತ್ತಾರೆ.
ಯಾವುದೇ ಒಂದು ಶುಭ ಸಮಾರಂಭ ನಡೆಯಲಿ ಮೊದಲು ವಿಘ್ನನಿವಾರಕ ಗಣೇಶನ ಸ್ಮತಿಯೊಂದಿಗೆ ಆರಂಭವಾಗುವುದು ರೂಢಿ. ನಾವು ಮಾಡುವಂತಹ ಕೆಲಸವು ಯಾವುದೇ ತೊಂದರೆಯಿಲ್ಲದೇ ಶೀಘ್ರವಾಗಿ ಪೂರ್ಣವಾಗಲಿ ಎಂದು ವಿನಾಯಕನಿಗೆ ಪೂಜೆ ಮಾಡುತ್ತೇವೆ. ಗಣೇಶ ಏಕದಂತ, ಮಂಗಳಮೂರ್ತಿ ವಿಘ್ನೇಶ್ವರ, ಲಂಬೋದರ, ವಿನಾಯಕ, ಗಜಮುಖ, ಮೂಷಿಕವಾಹಕ, ಮೋದಕ ಪ್ರಿಯ ಮುಂತಾದ ಅನೇಕ ಹೆಸರುಗಳಿವೆ. ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು ಕರೆಯುತ್ತೇವೆ.
ಪೂಜೆಯ ಕೊನೆಯ ದಿನ ಗಣೇಶನ ಮೂರ್ತಿಯನ್ನು ಕೆರೆ ಮತ್ತು ಸಮುದ್ರದ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಹಾನಿಕಾರಕ ವಸ್ತಗಳನ್ನು ಬಳಸಿ ತಯಾರಿಸಿ ಗಣೇಶನ ಮೂರ್ತಿಗಳನ್ನು ಕೆರೆ, ಸಮುದ್ರಗಳಲ್ಲಿ ವಿಸರ್ಜನೆ ಮಾಡುವುದರಿಂದ ಹಾನಿಕಾರಕಗಳು ನೀರಿನಲ್ಲಿ ಕರಗಿ ಜಲಚರಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಈ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ಮಾಡಿದ ಗಣಪತಿಗಳನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಪರಿಸರ ಸ್ನೇಹಿ ಗಣೇಶೋತ್ಸವವನ್ನು ಆಚರಿಸೋಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.