Knowledge: ಅಂಕಗಳೇ ಜ್ಞಾನದ ಮಾನದಂಡವಲ್ಲ
Team Udayavani, Sep 8, 2024, 11:00 AM IST
ಪರೀಕ್ಷೆಗಳ ಕಾರುಬಾರು ಜೋರಿನ ಆರ್ಭಟ ಸದ್ಯಕ್ಕೆ ಕುಗ್ಗಿರುವ ಸಂದರ್ಭದಲ್ಲಿ ನಿಂತಿರುವ ನಾವುಗಳು ಜೀವನದ ಪರೀಕ್ಷೆಯನ್ನು ಸದಾ ಎದುರಿಸುತ್ತಲೇ ಇರುತ್ತೇವೆ. ಪರೀಕ್ಷೆಗಳ ಅನಂತರ ಹೊರ ಬೀಳುವ ಅಂಕಗಳು ವಿದ್ಯಾರ್ಥಿಗಳ ಮುಂದಿನ ಬದುಕನ್ನು ನಿರ್ಧರಿಸುತ್ತದೆ. ಇತ್ತೀಚೆಗೆ ಪಿಯುಸಿ, ಎಸೆಸೆಲ್ಸಿ ಫಲಿತಾಂಶ ಬಂದಿದೆ.
ಹೆಚ್ಚು ಕಡಿಮೆ ಉತ್ತಮ ಫಲಿತಾಂಶವೇ ಬಂದಿದೆ ಎಂದುಕೊಂಡಿದ್ದರೂ ಕೆಲವರು ತಾವು ಗಳಿಸಿದ ಅಂಕಗಳು ಕಡಿಮೆಯಾಯಿತೆಂದು ಪರಿತಪಿಸಿ ಕೊರಗುತ್ತಿರುವುದು, ಟೆಲಿಮನಸ್ ಎಂಬ ಸಹಾಯವಾಣಿಗೆ ಕಳೆದ ಮೂರು ತಿಂಗಳಲ್ಲಿ ವಿದ್ಯಾರ್ಥಿಗಳೇ ಹೆಚ್ಚು ಕರೆ ಮಾಡಿ ಪರೀಕ್ಷೆಯ ಬಗ್ಗೆ ತಮಗಿರುವ ಭಯ ದುಗುಡ ಆತಂಕಗಳನ್ನು ಹೇಳಿಕೊಂಡಿರುವುದಲ್ಲದೆ, ಫಲಿತಾಂಶದ ಅನಂತರ ಕಡಿಮೆ ಅಂಕಗಳು ಬಂದಿರುವುದರಿಂದ ಮಾನಸಿಕವಾಗಿ ತಾವು ಕುಗ್ಗಿ ಹೋಗಿರುವುದಾಗಿ ತಿಳಿಸಿದ್ದಾರೆ ಎಂಬುದನ್ನು ಪತ್ರಿಕೆಯೊಂದರ ವರದಿಯಲ್ಲಿ ನೋಡಿ ಬೇಸರವಾಯಿತು.
ನಿಜ ಬದುಕಿನ ಅತ್ಯಂತ ತಿರುವಿನ ಹಂತಗಳಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ತಿಳಿಯಬೇಕಾದ ವಿಚಾರ ಮತ್ತೂಂದಿದೆ ಕೇವಲ ಕಡಿಮೆ ಅಂಕಗಳು ಬಂತೆಂದು ಅಥವಾ ತಾವು ನಿರೀಕ್ಷಿಸಿದಷ್ಟು ಅಂಕಗಳು ಬರಲಿಲ್ಲವೆಂದು ಮಾನಸಿಕವಾಗಿ ಕುಗ್ಗುವ ಅಗತ್ಯವಿಲ್ಲ. ಅಂಕಗಳು ನಿಮ್ಮ ಜ್ಞಾನ ಸಾಧನೆಯನ್ನು ತರುವ ಮಾನದಂಡವಲ್ಲ. ಹೆಚ್ಚು ಅಂಕಗಳು ಬಂದವರು ಬುದ್ಧಿವಂತರೆಂದು, ಕಡಿಮೆ ಅಂಕಗಳು ಬಂದವರು ದಡ್ಡರೆಂದು ತಿಳಿಯುವ ಅಗತ್ಯವಿಲ್ಲ.
ಅಂಕಗಳು ಶೈಕ್ಷಣಿಕವಾಗಿ ನಿಮ್ಮ ಸಾಮರ್ಥ್ಯವನ್ನು ಮೊದಲಿಗೆ ಒರೆಗೆ ಹಚ್ಚುವ ಕೆಲಸವನ್ನು ಮಾಡಿದರೂ ಅಂತಿಮವಾಗಿ ಉಳಿಯುವುದು ನಿಮ್ಮ ಸ್ವ ಸಾಮರ್ಥ್ಯ. ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಹೇಗೆ ಪ್ರತಿಕ್ರಿಯೆ ನೀಡುವಿರಿ ಸಮಸ್ಯೆಗಳನ್ನು ಹೇಗೆ ಎದುರಿಸುವಿರಿ ಎಂಬುದರ ಮೇಲೆ ನಿಮ್ಮ ಜೀವನ ನಿರ್ಧಾರವಾಗಿರುತ್ತದೆ. ವಿನಃ ನೀವು ಗಳಿಸಿರುವ ಅಂಕಗಳ ಮೇಲೆ ಅಲ್ಲ. ಕಡಿಮೆ ಅಂಕಗಳನ್ನು ಪಡೆದು ಮುಂದೆ ತಾವು ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಯಶಸ್ವಿಯಾದ ಎಷ್ಟೋ ಸಾಧಕರ ಉದಾಹರಣೆಗಳು ನಮ್ಮ ಕಣ್ಮುಂದೆ ಜೀವಂತವಾಗಿಯೇ ಇವೆ. ಬದುಕನ್ನು ಸಾಗಿಸಲು ಬೇಕಾಗಿರುವುದು ಛಲ,ಹಟ ಹೊರತು ಅಂಕಗಳಲ್ಲ ಎಂಬುದು ನನ್ನ ಅಭಿಪ್ರಾಯ.
ಅಂಕಗಳನ್ನು ಗಳಿಸುವುದು ಉನ್ನತವಾದ ದರ್ಜೆಯನ್ನು ಪಡೆಯುವುದು ಇತ್ತೀಚಿನಗಳಲ್ಲಿ ಅಷ್ಟು ಕಷ್ಟವೇನಲ್ಲ, ಆದರೆ ಉತ್ತಮ ಕೆಲಸವನ್ನು ಪಡೆಯಲು ಅಂಕಗಳ ಹೊರತಾಗಿ ಕೌಶಲ್ಯ, ಸ್ವ ಸಾಮರ್ಥ್ಯ, ಆಸಕ್ತಿ, ಪ್ರೇರಣೆ ಬೇಕಾಗುತ್ತವೆ. ಆದ್ದರಿಂದ ಅಂಕಗಳನ್ನೇ ಜ್ಞಾನದ ಮೂಲ ಮಾಪನವಾಗಿ ಪರಿಗಣಿಸದೆ ಅದರಿಂದಾಚೆಗೆ ಬದುಕಿದೆ ಎಂಬುದನ್ನು ಮೊದಲು ನಾವು ಗ್ರಹಿಸಬೇಕು. ಹೀಗೆ ಆಗಬೇಕಾದರೆ ನಾವು ಯೋಚಿಸುವ ಲಹರಿಯನ್ನು ಬದಲಿಸಿಕೊಳ್ಳಬೇಕು.
ನಿರೀಕ್ಷೆಗಳನ್ನು ಬಿಟ್ಟು ಬದುಕುವುದನ್ನು ರೂಢಿಸಿಕೊಳ್ಳಬೇಕು
ಬದುಕು ನಾವಂದುಕೊಂಡ ಹಾಗೆ ಇರುವುದಿಲ್ಲ ಏನೇ ಬಂದರೂ ಅದನ್ನು ಎದುರಿಸಿ ಬಾಳುವ ಸಾಮರ್ಥ್ಯ ನಮ್ಮಲ್ಲಿ ಇರಬೇಕು. ಈ ರೀತಿ ನಾವು ಬದುಕಬೇಕೆಂದರೆ ಮೊದಲು ನಿರೀಕ್ಷೆಗಳನ್ನು ಬಿಟ್ಟು ಬದುಕುವುದನ್ನು ಕಲಿಯಬೇಕು. ಆದ್ದರಿಂದ ಅಂಕಗಳೇ ನಮ್ಮ ಬದುಕನ್ನು ರೂಪಿಸಬಲ್ಲದು ಎಂಬ ನಿರೀಕ್ಷೆಯನ್ನು ಬಿಟ್ಟು ವಿಭಿನ್ನವಾದ ,ವಿಶಿಷ್ಟವಾದ ಆಲೋಚನೆಗಳನ್ನು ಮಾಡಬೇಕು.
ಸಮಸ್ಯೆಗಳನ್ನು ದಕ್ಷವಾಗಿ ಎದುರಿಸುವ ಸದೃಢ ಮನೋಭಾವ
ನಮ್ಮ ವಿದ್ಯಾಭ್ಯಾಸ ನೀಡಬೇಕಾಗಿರುವುದು ಬದುಕೆಂಬ ಚದುರಂಗದಲ್ಲಿ ಏನೇ ಸಮಸ್ಯೆಗಳು ಎದುರಾದರೂ ಧೈರ್ಯವಾಗಿ ಸದೃಢತೆಯಿಂದ ಎದುರಿಸುವಂತಹ ಮನೋಭಾವ ಬೆಳೆಯುವಂತಾಗಬೇಕು.ಇಂತಹ ಸದೃಢ ಮನೋಭಾವ ಇಂದಿನ ವಿದ್ಯಾರ್ಥಿಗಳು ಬೆಳೆಸಿಕೊಂಡಿದ್ದಲ್ಲಿ ಖಂಡಿತವಾಗಿಯೂ ಯಾವ ಸಾಧನೆಯನ್ನಾದರೂ ಮಾಡಬಲ್ಲರು.
ಸಕರಾತ್ಮಕವಾದ ಆತ್ಮವಿಶ್ವಾಸ
ಕೆಲವೊಮ್ಮೆ ಸಮಸ್ಯೆಗಳಿಗೆ ನೀವು ಪ್ರತಿಕ್ರಿಯಿಸುವ ರೀತಿ, ನಿಮ್ಮಲ್ಲಿ ಸದೃಢವಾಗಿರುವ ಆತ್ಮವಿಶ್ವಾಸ, ಸಕಾರಾತ್ಮಕವಾಗಿ ಆಲೋಚಿಸುವ ಪರಿ ಇವುಗಳು ಕೂಡ ಪ್ರಮುಖವಾಗಿರುತ್ತದೆ. ಶೈಕ್ಷಣಿಕವಾಗಿ ನೀವು ಗಳಿಸಿರುವ ಅಂಕಗಳು ಒಂದು ಮಾನದಂಡವೇ ಹೊರತು ಅದೇ ಬದುಕಲ್ಲ.
ಸೃಜನಶೀಲತೆಗೆ ಒತ್ತು ನೀಡುವಿಕೆ
ಉದ್ಯೋಗವನ್ನು ಪಡೆಯಬೇಕಾದರೆ ಮೊದಲಿಗೆ ಅಂಕಗಳು ಪ್ರಮುಖವಾಗುತ್ತದೆ ನಿಜ.ಆದರೆ ಅಂಕಗಳೇ ಅಂತಿಮವಲ್ಲ. ನಿಮ್ಮಲ್ಲಿ ಸೃಜನಶೀಲತೆ ಇದ್ದರೆ ಖಂಡಿತವಾಗಿಯೂ ಯಾವುದೇ ಬಗೆಯ ಉದ್ಯೋಗವನ್ನು ಪಡೆಯಲು ಸಾಧ್ಯವಿದೆ. ಅಂಕಗಳಿಗೆ ಒತ್ತು ನೀಡಿ ಕೆಲಸ ನೀಡುತ್ತಿದ್ದ ದಿನಗಳು ಕಣ್ಮರೆಯಾಗಿ ವ್ಯಕ್ತಿಯಲ್ಲಿ ಅದರಲ್ಲಿಯೂ ವಿಶೇಷವಾಗಿ ಅಡಗಿರುವ ಸೃಜನಶೀಲತೆಗೆ ಒತ್ತುಕೊಟ್ಟು ಉದ್ಯೋಗವನ್ನು ನೀಡುವ ಅನೇಕ ಕಂಪನಿಗಳು ಇಂದು ಎÇÉೆಡೆ ಕಂಡುಬರುತ್ತದೆ.
ಜ್ಞಾನವನ್ನು ಅಂಕಗಳಿಂದ ಅಳೆಯುವ ಪದ್ಧತಿ ಬದಲಾದರೆ ಖಂಡಿತವಾಗಿ ಎಲ್ಲರ ಮನಸ್ಥಿತಿ ಬದಲಾಗುತ್ತದೆ.
- ರಾಘವೇಂದ್ರ ಸಿ.ಎಸ್.
ಮೈಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.