Monti Fest: ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ತೆನೆ ಹಬ್ಬ
Team Udayavani, Sep 8, 2024, 10:40 AM IST
ಶಿರ್ವ: ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚ್ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಅವರ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್) ಸಂಭ್ರಮಾಚರಣೆ ಸೆ.8 ರಂದು ನಡೆಯಿತು.
ಭವ್ಯ ಮೆರವಣಿಗೆ
ಸಂತ ಮೇರಿ ಪ್ರೌಢ ಶಾಲೆಯ ಹಿಲಾರಿ ರಂಗಮಂಟಪದಲ್ಲಿ ತೆನೆಯಿರಿಸಿ ಮಾತೆ ಕನ್ಯಾ ಮೇರಿಯ ಮೂರ್ತಿಗೆ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ , ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್ ಅರಾನ್ಹಾ ಮತ್ತು ರೆ|ಫಾ| ರೋಲ್ವಿನ್ ಪಿಂಟೋ ಪ್ರಾರ್ಥನಾ ವಿಧಿ ನೆರವೇರಿಸಿ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.
ಮಾತೆ ಕನ್ಯಾ ಮೇರಿಯ ಮೂರ್ತಿ ಮತ್ತು ತೆನೆಯನ್ನು ಮೆರವಣಿಗೆಯೊಂದಿಗೆ ಚರ್ಚ್‌ನವರೆಗೆ ಕೊಂಡೊಯ್ದ ಬಳಿಕ ಭಕ್ತರ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ|ಫಾ|ಡಾ| ಲೆಸ್ಲಿ ಡಿಸೋಜಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು.
ಸಹಾಯಕ ಧರ್ಮಗುರು ರೆ|ಫಾ| ರೋಲ್ವಿನ್ ಅರಾನ್ಹಾ ಆಶೀರ್ವಚನ ನೀಡಿ 9 ದಿನಗಳ ನೊವೆನಾ ಪ್ರಾರ್ಥನೆಯ ಬಳಿಕ ಮಾತೆ ಮೇರಿ ಜನ್ಮ ದಿನವನ್ನು ಕುಟುಂಬದ ಹಬ್ಬವನ್ನಾಗಿ ಆಚರಿಸುತ್ತಿದ್ದು,ಮಾತೆ ಮೇರಿಯು ಸರ್ವರನ್ನೂ ಹರಸಿ ಎಲ್ಲರ ಕೋರಿಕೆ ಈಡೇರಿಸಲಿ. ಭಕ್ತರು ಮಾತೆ ಮೇರಿಯ ಆದರ್ಶಗಳನ್ನು ಪಾಲಿಸಿಕೊಂಡು ಶಾಂತಿ ಸಹಬಾಳ್ವೆಯೊಂದಿಗೆ ಜೀವನ ನಡೆಸಿ ಎಂದು ಹೇಳಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ಅರಾನ್ಹಾ, ಕಾರ್ಯದರ್ಶಿ ಫ್ಲೆàವಿಯಾ ಡಿಸೋಜಾ,ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಜೂಲಿಯಾನ್ ರೊಡ್ರಿಗಸ್,ಮೋಹನ್ ನೊರೊನ್ಹಾ,ಚರ್ಚ್ ಆಯೋಗದ ಲೀನಾ ಮತಾಯಸ್, ಪ್ರಮುಖರಾದ ಪೀಟರ್ ಕೋರ್ಡಾ, ಮೈಕಲ್ ಡಿಸೋಜಾ,ಫೆಲಿಕ್ಸ್ ಡಿಸೋಜಾ, ಆಲ್ವಿನ್ ಡಿಸೋಜಾ, ಎಡ್ವರ್ಡ್‌ಮಿಸ್ಕಿತ್,ನೋರ್ಬರ್ಟ್ ಮಚಾದೋ, ಡೆನ್ನಿಸ್ ಲೋಬೋ, ಪ್ರೊ| ರೊನಾಲ್ಡ್ ಮೊರಾಸ್, ಚರ್ಚ್‌ನ ಪಾಲನಾ ಮಂಡಳಿ ಮತ್ತು ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್‌ನ ಧರ್ಮ ಭಗಿನಿಯರು,ವಿವಿಧ ವಾರ್ಡ್‌ಗಳ ಗುರಿಕಾರರು,ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿರ್ವ ವಲಯದ ಪಿಲಾರು,ಪೆರ್ನಾಲು,ಪಾಂಬೂರು,ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಬಲಿಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.