Kalaburagi: ಹನಿಟ್ರ್ಯಾಪ್ ಬ್ಲಾಕ್ ಮೇಲ್ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
Team Udayavani, Sep 8, 2024, 2:46 PM IST
ಕಲಬುರಗಿ: ಯುವತಿಯರಿಗೆ ಕೆಲಸ, ನ್ಯಾಯ ಕೊಡಿಸುವುದಾಗಿ ಆತ್ಮೀಯತೆ ಬೆಳೆಸಿಕೊಂಡು ಅತ್ಯಾಚಾರ ಎಸಗುವುದರ ಜತೆಗೆ ಯುವತಿಯರನ್ನು ಇಟ್ಟುಕೊಂಡು ಶ್ರೀಮಂತರು ಹಾಗೂ ಅಧಿಕಾರಿಗಳ ಬಳಿ ಹೆಣ್ಣು ಮಕ್ಕಳನ್ನು ಬಳಸಿ ಹನಿಟ್ರ್ಯಾಪ್ ಬ್ಲಾಕ್ ಮೇಲ್ ದಂಧೆ ಪ್ರಕರಣವನ್ನು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಅನ್ಯಾಯ, ಶೋಷಣಗೆ ಒಳಗಾದ ಸಂತ್ರಸ್ತೆ ನೀಡಿದ ಹನಿಟ್ಯ್ರಾಪ್ ದಂಧೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ನಗರ ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ದಲಿತ ಸೇನೆ ಮುಖಂಡ ರಾಜು ಲೇಂಗಟಿಯನ್ನು ಬಂಧಿಸಿರುವ ಪೊಲೀಸರು, ಶನಿವಾರ ತಡರಾತ್ರಿ ಪ್ರಭುಲಿಂಗ ಹಿರೇಮಠ ಎಂಬಾತನನ್ನು ಸಹ ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನ ಶೋಧನಾ ಕಾರ್ಯ ಮುಂದುವರೆದಿದೆ.
ದಲಿತ ಸೇನೆಯ ಕೆಲವು ಕ್ರಿಮಿನಲ್ ಕಾರ್ಯಕರ್ತರು ತಮ್ಮನ್ನು ಬಳಸಿ ಜತೆಗೆ ವ್ಯಾಪಾರಿ ಜತೆ ಹಾಗೂ ಇತರ ಜತೆ ಲೈಂಗಿಕ ಸಂಪರ್ಕಕ್ಕೆ ಬೆದರಿಸಿದ್ದಲ್ಲದೆ ಈ ಸಂಬಂಧ ಫೋಟೋ ಹಾಗೂ ವಿಡಿಯೋ ಸೆರೆ ಹಿಡಿದಿದ್ದಾರೆ. ತದ ನಂತರ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ರೂ ವಸೂಲಿ ಮಾಡಿದ್ದಾರೆ ಎಂದು ಸಂತ್ರಸ್ತೆಯರು ದೂರಿದ್ದಾರೆ.
ಒಟ್ಟಾರೆ ಈ ಪ್ರಕರಣ ಆಳ- ಅಗಲವನ್ನು ಪೊಲೀಸರ ತನಿಖೆಯಿಂದ ಇನ್ನಷ್ಟು ಬಯಲಾಗಲಿದೆ. ಪೊಲೀಸ್ ಆಯುಕ್ತ ಶರಣಪ್ಪ ಢಗೆ ಅವರ ನಿರ್ದೇಶನ ಮೇರೆಗೆ ತನಿಖೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.