![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 9, 2024, 12:02 AM IST
ಉಡುಪಿ: ಅಧಿಕ ಲಾಭಾಂಶದ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಬಾಗಲಕೋಟೆ ಮೂಲದ ಉಡುಪಿಯಲ್ಲಿ ನೆಲೆಸಿರುವ ಮುಜಮ್ಮಿಲ್ ಖಾನ್ ಪಠಾನ (19) ವಂಚನೆಗೊಳಗಾದವರು. ಜು. 30ರಂದು A3 stock Market elite chat Group ಎಂಬ ವಾಟ್ಸಾಪ್ ಗುಂಪಿಗೆ ಯಾರೋ ಅಪರಿಚಿತರು ಸೇರ್ಪಡೆ ಮಾಡಿ ಅದರಲ್ಲಿ ಸ್ಟಾಕ್ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡುತ್ತಿದ್ದರು.
ತಾವು ಹೇಳಿದ ಷೇರಿನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಗಳಿಸಬಹುದಾಗಿ ನಂಬಿಸಿ ಆ. 23ರಿಂದ ಸೆ. 6ರ ವರೆಗೆ ಆರೋಪಿಗಳು ತಮ್ಮ ವಿವಿಧ ಖಾತೆಗಳಿಗೆ 4,86,885 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ.
ಅನಂತರ ಹೂಡಿಕೆ ಮಾಡಿದ ಹಣ ಹಾಗೂ ಲಾಭಾಂಶ ನೀಡದೆ ವಂಚಿಸಿದ್ದಾರೆ ಎಂದು ಉಡುಪಿಯ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.