Train ಚಲಿಸುವಾಗ ಕೊಂಡಿ ತುಂಡು: ಬೇರ್ಪಟ್ಟ ಬೋಗಿ
Team Udayavani, Sep 9, 2024, 1:40 AM IST
ಪಟ್ನಾ: ರೈಲಿನ 2 ಬೋಗಿಗಳನ್ನು ಜೋಡಿಸುವ ಕೊಂಡಿ ತುಂಡಾದ ಕಾರಣ ದಿಲ್ಲಿ-ಇಸ್ಲಾಂಪುರ ಮಗಧ್ ಎಕ್ಸ್ಪ್ರಸ್ನ ಬೋಗಿಗಳು ಪ್ರತ್ಯೇಕಗೊಂಡಿವೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಬಿಹಾರದ ಬಕ್ಸರ್ ಜಿಲ್ಲೆಯ ಟ್ವಿನಿಗಂಜ್ ಹಾಗೂ ರಘುನಾಥಪುರ ರೈಲು ನಿಲ್ದಾಣಗಳ ನಡುವೆ ರವಿವಾರ ಈ ಘಟನೆ ನಡೆದಿದೆ. ಮಧ್ಯಾಹ್ನದ ಬಳಿಕ ರೈಲು ಸಂಚಾರ ಆರಂಭವಾಗಿದೆ.
ಟ್ವಿನಿಗಂಜ್ ನಿಲ್ದಾಣ ದಾಟಿ ಮುಂದೆ ಹೋಗುವಾಗ ರೈಲಿನ ಕೊಂಡಿ ತುಂಡಾಗಿದ್ದು, 2 ಬೋಗಿಗಳು ರೈಲು ಚಲಿಸುತ್ತಲ್ಲೇ ಪ್ರತ್ಯೇಕಗೊಂಡಿದೆ. ಹವಾನಿಯಂತ್ರಿತ ಎಸ್-7 ಬೋಗಿ ಮುಂದೆ ಸಾಗಿದ್ದು ಅದರ ಹಿಂದಿನ ಬೋಗಿಗಳು ಹಾಗೇ ನಿಂತಿವೆ. ಇದನ್ನು ಗಮನಿಸಿದ ಲೋಕೋಪೈಲಟ್ ಎಚ್ಚೆತ್ತುಕೊಂಡು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತತ್ಕ್ಷಣ ಸ್ಥಳಕ್ಕಾಗಮಿಸಿದ ರಕ್ಷಣ ತಂಡ ಹಾಗೂ ತಾಂತ್ರಿಕ ತಂಡ ಪರಿಶೀಲನೆ ನಡೆಸಿವೆ. ಈ ಬಗ್ಗೆ ಕಾರಣ ತಿಳಿದುಕೊಳ್ಳಲು ತನಿಖೆಗೆ ಆದೇಶ ನೀಡಲಾಗಿದೆ ಪೂರ್ವ ಕೇಂದ್ರ ರೈಲ್ವೇ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸರಸ್ವತಿ ಚಂದ್ರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.