Mudhol: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ… ನಾಲ್ವರ ವಿರುದ್ದ ಪೋಕ್ಸೊ ಪ್ರಕರಣ
Team Udayavani, Sep 9, 2024, 10:36 AM IST
ಮುಧೋಳ : ಅಪ್ರಾಪ್ತಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಹಿನ್ನೆಲೆ ನಾಲ್ವರ ವಿರುದ್ದ ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಗ್ರಾಮವೊಂದರ ಅಪ್ರಾಪ್ತೆ ಶೌಚಕ್ಕೆ ತೆರಳಿದ ವೇಳೆ ಆರೋಪಿಗಳು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ತಿಳಿದುಬಂದಿದೆ.
ಬಾಲಕಿಯನ್ನು ಅದೇ ಗ್ರಾಮದ ಯುವಕ ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಬಾಲಕಿ ಆತನ ಪ್ರೀತಿ ನಿರಾಕರಿಸಿದ್ದಳು. ಯುವಕನ ಉಪಟಳದಿಂದ ಬಾಲಕಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದಳು. ಅಲ್ಲಿಗೂ ತೆರಳಿದ ಯುವಕ ತನ್ನ ಸ್ನಹೀತರ ನೆರವಿನಿಂದ ಬಾಲಕಿ ಶೌಚಕ್ಕೆ ತೆರಳಿದಾಗ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಸಂಬಂಧ ಸುನೀಲ ಜಾನಪ್ಪಗೋಳ(23), ಮಂಜುನಾಥ ಮ್ಯಾಗೇರಿ(32), ಸಚೀನ ಮ್ಯಾಗೇರಿ (24), ರವಿಚಂದ್ರ ತಳಗೇರಿ (23) ಇವರ ವಿರುದ್ದ ಬಾಲಕಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್ಐ ಕಾಡಪ್ಪ ಜಕ್ಕನ್ನವರ ತನಿಖೆ ಕೈಗೊಂಡು ಮೂವರನ್ನು ಬಂಧಿಸಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಇದನ್ನೂ ಓದಿ: Kanpur: ಹಳಿ ಮೇಲೆ ಎಲ್ಪಿಜಿ ಸಿಲಿಂಡರ್ ಇರಿಸಿ ರೈಲು ಸ್ಫೋಟಕ್ಕೆ ಯತ್ನ… ತಪ್ಪಿದ ಅನಾಹುತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಪ್ರತೀ ಪೇಜರ್ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್ನ ಮೊಸಾದ್?
Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್!
Mohana Singh: ತೇಜಸ್ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್ ಆಗಿ ಮೋಹನಾ ಸಿಂಗ್ ನೇಮಕ
Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ
Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.