Hubli; ಪಿಎಫ್ಐ ಮಾದರಿಯಲ್ಲಿ ಎಸ್‌ಡಿಪಿಐ ಪಕ್ಷವನ್ನೂ ನಿಷೇಧಿಸಬೇಕು: ಪ್ರಮೋದ ಮುತಾಲಿಕ್
Team Udayavani, Sep 9, 2024, 12:02 PM IST
ಹುಬ್ಬಳ್ಳಿ: ಎಸ್ ಡಿಪಿಐ ದೇಶದ್ರೋಹಿ ಪಕ್ಷವಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ಪಿಎಫ್ಐ ಮಾದರಿಯಲ್ಲಿ ಅದನ್ನೂ ನಿಷೇಧಿಸಬೇಕು ಎಂದು ಶ್ರೀ ರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿಕ ಆಗ್ರಹಿಸಿದರು.
ಸೋಮವಾರ (ಸೆ.09) ಇಲ್ಲಿನ ಈದ್ಗಾ ಮೈದಾನದಲ್ಲಿ ರಾಣಿ ಚನ್ನಮ್ಮ ಗಜಾನನ ಮಹಾಮಂಡಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ವೇಳೆ ಪಾಲ್ಗೊಂಡ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದೂಗಳು ಶಾಂತಿಪ್ರಿಯರು ಎಂಬುದನ್ನು ತೋರಿಸುತ್ತ ಬಂದಿದ್ದೇವೆ. ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದರೆ ಗಲಭೆ-ಗಲಾಟೆ ಆಗುತ್ತವೆ ಎಂದು ಹೇಳಿದ್ದರು ಆದರೆ ಮೂರು ವರ್ಷಗಳಿಂದ ಶಾಂತಿಯುತ ಆಚರಣೆಯಾಗಿದೆ. ಗಣೇಶೋತ್ಸವ ವಿರೋಧಿಗಳು ಸಹಕಾರಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸುಪ್ರೀಂ ಕೋರ್ಟ್ ತೀರ್ಪು ನೆಪದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿ.ಜೆ ಬಳಕೆಗೆ ನಿರ್ಬಂಧಿಸಿರುವುದು ಸರಿಯಲ್ಲ. ಮಸೀದಿ ಧ್ವನಿವರ್ಧಕಕ್ಕೂ ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿದೆ. ಅಲ್ಲಿ ಕ್ರಮವಿಲ್ಲದೆ ವರ್ಷಕ್ಕೊಮ್ಮ ಆಚರಿಸುವ ಗಣೇಶೋತ್ಸವಕ್ಕೆ ಮಾತ್ರ ಯಾಕೆ? ಡಬಲ್ ಡಿ.ಜೆ. ಹಾಕಿ ಸಂಭ್ರಮಿಸಿ ಎಂದು ಗಣೇಶೋತ್ಸವ ಸಮಿತಿಗಳಿಗೆ ಕರೆ ನೀಡುತ್ತೇನೆ ಎಂದರು.
ಗಣೇಶ ಪ್ರಸಾದಕ್ಕೆ ನಿರ್ಬಂಧ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ. ಬಿಜೆಪಿಯೂ ಅಧಿಕಾರದಲ್ಲಿದ್ದಾಗ ಹಿಂದೂ ವಿರೋಧಿ ನೀತಿ ಅನುಸರಿಸಿ ನಮ್ಮನ್ನು ಬಂಧಿಸಿತ್ತು. ಮೋದಿಗೆ ನಮ್ಮ ಬೆಂಬಲ ಅಚಲ; ಸ್ಥಳೀಯ ಬಿಜೆಪಿ ನಾಯಕರಿಗಲ್ಲ. ಮೋದಿ ಇಲ್ಲವಾದರೆ ದೇಶ ಮಾರಾಟ ಮಾಡುವ ರಾಹುಲ್ ಗಾಂಧಿ ಬರುತ್ತಾನೆ ಎಂದು ಕಿಡಿಕಾರಿದರು.
ವಿಸರ್ಜನೆ ಮೆರವಣಿಗೆ
ರಾಣಿ ಚನ್ನಮ್ಮ ಗಜಾನನ ಮಹಾಮಂಡಳವು ಇಲ್ಲಿನ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಗೆ ಸೋಮವಾರ ಬೆಳಿಗ್ಗೆ11:50 ಗಂಟೆ ಸುಮಾರಿಗೆ ಆರಂಭಗೊಂಡಿತು. ಮೂರು ದಿನಗಳಿಂದ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಆರ್ ಎಸ್ ಎಸ್ ಪ್ರಮುಖ ಮಂಗೇಶ ಭೇಂಡೆ, ಮಾಜಿ ಸಚಿವರಾದ ಸಿ.ಟಿ.ರವಿ, ಶಂಕರ ಪಾಟೀಲ ಮುನೇನಕೊಪ್ಪ ಇನ್ನಿತರರು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.