CM ಹುದ್ದೆ ವಿಚಾರದಲ್ಲಿ ಸಚಿವರಿಂದಲೇ ಗೊಂದಲ: ಖರ್ಗೆಗೆ ಪತ್ರ ಬರೆದ ಪರಿಷತ್ ಸದಸ್ಯರು

ಸರಕಾರ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ... ಶಿಸ್ತು ಕ್ರಮಕ್ಕೆ ಒತ್ತಾಯ!

Team Udayavani, Sep 9, 2024, 8:33 PM IST

Kharge 2

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್(Congress) ಪಕ್ಷದಲ್ಲಿ ಹಲವು ಪ್ರಮುಖರು ಬಹಿರಂಗ ಹೇಳಿಕೆ ನೀಡುತ್ತಿರುವ ಹಿನ್ನಲೆಯಲ್ಲಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡುವುದಕ್ಕೆ ಬ್ರೇಕ್ ಹಾಕಲು ರಾಜ್ಯ ಕಾಂಗ್ರೆಸ್(KPCC) ಮುಂದಾಗಿದ್ದು, ಹೇಳಿಕೆಗಳಿಗೆ ತಡೆ ಹಾಕಲು ಮನವಿ ಮಾಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರಿಗೆ ಸೋಮವಾರ (ಸೆ9) ವಿಧಾನ ಪರಿಷತ್ ಸದಸ್ಯರು ಪತ್ರ ಬರೆದಿದ್ದಾರೆ.

ವಿಧಾನ ಪರಿಷತ್ ಸದಸ್ಯರುಗಳಾದ ದಿನೇಶ್ ಗೂಳಿಗೌಡ ಮತ್ತು ಮಂಜುನಾಥ್ ಭಂಡಾರಿ ಅವರು ಖರ್ಗೆ ಅವರಿಗೆ ಪತ್ರ ಬರೆದು ಪಕ್ಷದ ಒಳಗೇ ಆಗುತ್ತಿರುವ ಗೊಂದಲ ಮುಂದಿವರಿಯದಂತೆ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪತ್ರದಲ್ಲಿ ” ಕಾಂಗ್ರೆಸ್ ಪಕ್ಷವು ರಾಜ್ಯದ ಕಳೆದ 34 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳನ್ನು ಗಳಿಸಿ,2023 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಬರೆದಿತ್ತು. ಶೇ. 42.88 ರಷ್ಟು ಮತ ಗಳಿಸಿ, 135 ಸ್ಥಾನಗಳನ್ನು ಗಳಿಸಿ, ಸರ್ಕಾರ ರಚಿಸಿದೆ. 1989 ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸದ ಅತಿ ದೊಡ್ಡ ಗೆಲುವು ಕಾಂಗ್ರೆಸ್‌ಗೆ ಲಭಿಸಿತ್ತು. ಮಾತ್ರವಲ್ಲ, ಸರ್ಕಾರ ಚುಕ್ಕಾಣಿ ಹಿಡಿದ ಆರೇ ತಿಂಗಳಲ್ಲಿ5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ದೇಶದಲ್ಲೇ ವಿಶಿಷ್ಟ ಹಾಗೂ ಗಮನ ಸೆಳೆಯುವ ಸಾಧನೆ ಮಾಡಿದೆ.
ಪಕ್ಷದ ವರಿಷ್ಠ ಮಂಡಳಿಯ ಅನುಮೋದನೆಯಿಂದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತಹ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮುಂತಾದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಆಶ್ರಯವಾಗಿವೆ. ಮಹಿಳಾ ಸಬಲೀಕರಣಕ್ಕೆ ವಿಶಿಷ್ಟ ಅರ್ಥ ನೀಡಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಗ್ಯಾರಂಟಿ ಯೋಜನೆಗಳು ಜನಜನಿತವಾಗಿವೆ. ಇವಕ್ಕೆಲ್ಲ ಕಾರಣ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ಹಾಗೂ ಜನಪರ ಕಾಳಜಿ ಎಂಬುದರಲ್ಲಿ ಎರಡು ಮಾತಿಲ್ಲ. ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂತ ಆತಂಕಿತವಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ, ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ, ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ”

”ಕಾಂಗ್ರೆಸ್ ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಶಿಸ್ತಿನ ಪಕ್ಷ. ಮುಖ್ಯಮಂತ್ರಿ ಮುಂತಾದ ಮಹತ್ವದ ಸ್ಥಾನಗಳು ಹೈಕಮಾಂಡ್ ಹಂತದಲ್ಲಿ ನಿರ್ಧಾರವಾಗುತ್ತವೆ, ಆಗಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹಾಗಿರುವಾಗ ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ವಿಷಯ ಚರ್ಚೆಯಾಗುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದೆ ಪಕ್ಷದ ವರ್ಚಸಿಗೆ ದಕ್ಕೆ ತರುವ ಹಾಗೂ ಸರ್ಕಾರದ ಅಭದ್ರತೆಯ ಬಗ್ಗೆ ಚರ್ಚೆಗಳಿಗೆ ಎಡೆಮಾಡಿ ಕೊಟ್ಟಂತಾಗುತ್ತದೆ.. ಹಾಗಾಗಿ ಇಂಥ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ. ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ್ಮ ಇಲಾಖೆಗೆ ಕಳೆದ ಆಯವ್ಯಯದಲ್ಲಿ ನೀಡಿದ ಕೊಡುಗೆಗಳ ಜಾರಿಗೆ ಕ್ರಮ ವಹಿಸಲಿ. ಸಾರ್ವಜನಿಕರಿಗೆ, ರಾಜ್ಯದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

3-rabakavi

Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

Ricky Ponting: ಡೆಲ್ಲಿಯಿಂದ ಪಂಜಾಬ್‌ ಗೆ ಬಂದ ರಿಕಿ ಪಾಂಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

CM Siddaramaiah ಬೀಳ್ಳೋದು ನಮ್ಮದಲ್ಲ, ಮೋದಿ ಸರಕಾರ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

ಅ. 4ರಿಂದ ಗ್ರಾಮ ಪಂಚಾಯತ್‌ ಸೇವೆ ಸ್ಥಗಿತ: ನೌಕರರ ಎಚ್ಚರಿಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

ಪ್ರತೀ ಪೇಜರ್‌ನಲ್ಲಿ 3 ಗ್ರಾಂ. ಸ್ಫೋಟಕ: ಪೇಜರಲ್ಲಿ ಸ್ಫೋಟಕ ಇಟ್ಟಿದ್ದು ಇಸ್ರೇಲ್‌ನ ಮೊಸಾದ್‌?

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Legal Bid: ಯುರೋಪಿನಲ್ಲಿ 13,000 ಕೋಟಿ ರೂ. ಕಾನೂನು ಸಮರ ಗೆದ್ದ ಗೂಗಲ್‌!

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

Mohana Singh: ತೇಜಸ್‌ ಯುದ್ಧ ವಿಮಾನಕ್ಕೆ ಮೊದಲ ಮಹಿಳಾ ಪೈಲಟ್‌ ಆಗಿ ಮೋಹನಾ ಸಿಂಗ್‌ ನೇಮಕ

TTD: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು: ನಾಯ್ಡು ಆರೋಪಕ್ಕೆ YSR ಕಾಂಗ್ರೆಸ್ ತಿರುಗೇಟು

Laddoo: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು… YSR ಕಾಂಗ್ರೆಸ್ ವಿರುದ್ಧ ನಾಯ್ಡು ಆರೋಪ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Congress: ಮಹಿಳೆಯರಿಗೆ ಮಾಸಿಕ 2000, ಜಾತಿ ಸಮೀಕ್ಷೆ: ಹರಿಯಾಣ ಕೈ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.