Rani Movie: ದೊಡ್ಡವರು ಬರದಿದ್ದರೆ ಏನಂತೆ, ಜನ ಬಂದ್ರೆ ಸಾಕು!

Team Udayavani, Sep 10, 2024, 4:10 PM IST

Rani Movie: ದೊಡ್ಡವರು ಬರದಿದ್ದರೆ ಏನಂತೆ, ಜನ ಬಂದ್ರೆ ಸಾಕು!

ಯಾವುದೇ ಕ್ಷೇತ್ರವಾದರೂ ಅಲ್ಲಿ ನೀವು ಗೆದ್ದು ತೋರಿಸುವವರೆಗೆ ನಿಮ್ಮ “ಕಥೆ’ಗಳಿಗೆ ಬೆಲೆ ಇರುವುದಿಲ್ಲ. ಒಮ್ಮೆ ನೀವು ಗೆದ್ದುಬಿಟ್ಟರೆ ನೀವು ಹೇಳುವ “ಯಾವುದೇ’ ಕಥೆಗಳನ್ನಾದರೂ ಕಣ್ಣಿಗೊತ್ತಿಕೊಂಡು ಕೇಳುತ್ತಾರೆ. ಸಿನಿಮಾ ರಂಗದಲ್ಲಂತೂ ಇದು ಸ್ವಲ್ಪ ಹೆಚ್ಚೇ. ಅದರಲ್ಲೂ ಹೊಸಬರ ಅಥವಾ ಒಂದು ಗೆಲುವಿಗಾಗಿ ಹಂಬಲಿಸುವ ತಂಡವಾದರೆ ಅವರನ್ನು ಬೆಂಬಲಿಸುವವರ ಸಂಖ್ಯೆ ತೀರಾ ಕಡಿಮೆ.

ಈ ಅನುಭವ “ರಾನಿ’ ತಂಡಕ್ಕೆ ಆಗಿದೆ. ಈಗಾಗಲೇ ಟೀಸರ್‌, ಟ್ರೇಲರ್‌ ಮೂಲಕ ಸದ್ದು ಮಾಡುತ್ತಿರುವ “ರಾನಿ’ ಚಿತ್ರ ಸೆ.12ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಕಿರಣ್‌ ರಾಜ್‌ ಹೀರೋ ಆಗಿ ನಟಿಸಿದ್ದು, ಗುರುತೇಜ್‌ ಶೆಟ್ಟಿ ನಿರ್ದೇಶನವಿದೆ. ನಿರ್ಮಾಪಕರು ಕೂಡಾ ಹೊಸಬರು. ಈ ತಂಡ ಚಿತ್ರದ ಟ್ರೇಲರ್‌ ರಿಲೀಸ್‌ ಅಥವಾ ಯಾವುದಾದರೂ ಒಂದು ಇವೆಂಟ್‌ ಅನ್ನು ಚಿತ್ರರಂಗದ ಸ್ಟಾರ್‌ ನಟ ಅಥವಾ ಖ್ಯಾತನಾಮರನ್ನು ಕರೆಸಿ ಮಾಡಬೇಕೆಂದು ಕನಸು ಕಂಡಿತ್ತಂತೆ. ಅದರಂತೆ ಅನೇಕರನ್ನು ಸಂಪರ್ಕಿಸಿದೆ. ಆದರೆ, ಹೊಸಬರ ತಂಡ ಎಂಬ ಕಾರಣಕ್ಕೋ ಏನೋ ಯಾರು ಕೂಡಾ ಈ ತಂಡದ ಬೆಂಬಲಕ್ಕೆ ನಿಂತಿಲ್ಲ. ಇದು ತಂಡಕ್ಕೆ ತುಂಬಾ ಬೇಸರ ತಂದಿದೆ.

ಇತ್ತೀಚೆಗೆ ನಡೆದ ಚಿತ್ರದ ಟೈಟಲ್‌ ಟ್ರ್ಯಾಕ್‌ ರಿಲೀಸ್‌ ಇವೆಂಟ್‌ನಲ್ಲಿ ನಿರ್ದೇಶಕ ಗುರುತೇಜ್‌ ಶೆಟ್ಟಿ ಈ ಕುರಿತ ತಮ್ಮ ಬೇಸರವನ್ನು ಹೊರ ಹಾಕಿದರು. ಚಿತ್ರದ ಟ್ರೇಲರ್‌ ಬಿಡುಗಡೆಯನ್ನು ದೊಡ್ಡದಾಗಿ ಮಾಡಬೇಕು, ದೊಡ್ಡವರನ್ನು ಕರೆಸಬೇಕೆಂಬ ಆಸೆ ಇತ್ತು. ಈ ಸಂಬಂಧ ಹಲವು ದೊಡ್ಡ ನಟರನ್ನು ಕೇಳಿದ್ದೇವೆ. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದರು.

ಬಹುಶಃ ಅವರೆಲ್ಲರೂ ಬಿಝಿ ಇರಬಹುದು. ನಿರ್ಮಾಪಕರು ಹೊಸಬರು. ಯಾರೂ ಬರದಿದ್ದಾಗ ಅವರಿಗೆ ಸಹಜವಾಗಿಯೇ ಆತಂಕ ಕಾಡುತ್ತದೆ. ಮಾಧ್ಯಮದವರು ಬಿಟ್ಟರೆ ನಮ್ಮ ಜೊತೆಗೆ ಯಾರೂ ಇಲ್ಲ. ಹಾಗಂತ ಯಾರಿಗೂ ಬಕೆಟ್‌ ಹಿಡಿಯುವುದಕ್ಕೆ ನನಗೆ ಸಾಧ್ಯವಿಲ್ಲ. ನಾನು ಸ್ವಾಭಿಮಾನಿ. ಹಾಗಾಗಿ, ನಿರ್ಮಾಪಕರಿಗೆ ಈ ಮೂಲಕ ಕ್ಷಮೆ ಕೇಳುತ್ತೇನೆ. ಯಾರೂ ಬರದಿದ್ದರೇನು? ಜನ ಬರುತ್ತಾರೆ, ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ’ ಎಂದರು. ಚಿತ್ರದಲ್ಲಿ ನಟಿಸಿರುವ ರವಿಶಂಕರ್‌, ಮಠ ಗುರುಪ್ರಸಾದ್‌ ಕೂಡಾ ಈ ಸಿನಿಮಾದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. “ನಾವು ಸಿನಿಮಾವನ್ನು ಕಾಟಾಚಾರಕ್ಕೆ ಮಾಡಿಲ್ಲ. ತುಂಬಾ ಇಷ್ಟಪಟ್ಟು ಮಾಡಿದ್ದೇವೆ’ ಎನ್ನುವುದು ಗುರುತೇಜ್‌ ಶೆಟ್ಟಿ ಮಾತು.

“ರಾನಿ’ ಚಿತ್ರದ ಶೀರ್ಷಿಕೆ ಗೀತೆಯನ್ನು ಹಿರಿಯ ಚಿತ್ರಸಾಹಿತಿ ಜೆ.ಕೆ. ಭಾರವಿ ಚಿತ್ರದ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಹಾಡನ್ನು ಪ್ರಮೋದ್‌ ಮರವಂತೆ ಬರೆದರೆ, ಸಚಿನ್‌ ಬಸ್ರೂರು ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿದ್ದಾರೆ. ಚಂದ್ರಕಾಂತ ಪೂಜಾರಿ ಮತ್ತು ಉಮೇಶ್‌ ಹೆಗ್ಡೆ ಈ ಚಿತ್ರದ ನಿರ್ಮಾಪಕರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

Love Reddy movie released today

Love Reddy: ತೆರೆಗೆ ಬಂತು ʼಲವ್‌ ರೆಡ್ಡಿʼ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.