Paralympics 2024; ಪ್ಯಾರಾ ಸಾಧಕರಿಗೆ ಪ್ರೀತಿಯ ಸ್ವಾಗತ; ಚಿನ್ನ ಗೆದ್ದವರಿಗೆ 75 ಲಕ್ಷ ರೂ.
Team Udayavani, Sep 11, 2024, 5:47 AM IST
ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ದಾಖಲೆ ಸಂಖ್ಯೆಯ 29 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಹೆಮ್ಮೆಯ ಪ್ಯಾರಾತ್ಲೀಟ್‌ಗಳು ಮಂಗಳವಾರ ತವರಿಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹೊಸದಿಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರೀತಿಪೂರ್ವಕ ಸ್ವಾಗತ ಕೋರಲಾಯಿತು. ಇದೇ ವೇಳೆ ಪ್ಯಾರಾಲಿಂಪಿಕ್ಸ್ ಪದಕವೀರರಿಗೆ ಕೇಂದ್ರ ಕ್ರೀಡಾ ಸಚಿವರು ನಗದು ಬಹುಮಾನ ಘೋಷಿಸಿದರು.
ನೂರಾರು ಕ್ರೀಡಾಭಿಮಾನಿಗಳು, ನಿಲ್ದಾಣದ ಅಧಿಕಾರಿಗಳು, ಸಾಧಕರ ಕುಟುಂಬದ ಸದಸ್ಯರೆಲ್ಲ ಸೇರಿಕೊಂಡು ಕ್ರೀಡಾಪಟುಗಳನ್ನು ಹೃತೂ³ರ್ವಕವಾಗಿ ಬರಮಾಡಿಕೊಂಡರು. ಹೂವಿನ ಹಾರ ಹಾಕಿ, ಸಿಹಿ ತಿಂಡಿ ಹಂಚಿ ಸಂಭ್ರಮಿ ಸಿದರು. ಧೋಲ್ ಹಾಗೂ ವಾದ್ಯ ಕೂಡ ಈ ಸ್ವಾಗತದ ಸಂಭ್ರಮವನ್ನು ಹೆಚ್ಚಿಸಿತು.
ಮೊದಲು ಚಹಾ ಕುಡಿಯಬೇಕು!
“ಇಂಥದೊಂದು ಭವ್ಯ ಸ್ವಾಗತಕ್ಕೆ ಧನ್ಯವಾದಗಳು’ ಎಂಬುದಾಗಿ ಜಾವೆ ಲಿನ್‌ನಲ್ಲಿ ಸತತ 2 ಚಿನ್ನ ಗೆದ್ದ ಸುಮಿತ್ ಅಂತಿಲ್ ಹೇಳಿದರು.
“ನೀವು ಉತ್ತಮ ಸಿದ್ಧತೆಯೊಂದಿಗೆ ತೆರಳಿದಾಗ ಸಹಜವಾಗಿಯೇ ಆತ್ಮ ವಿಶ್ವಾಸ ಮೂಡುತ್ತದೆ. ಶೀಘ್ರದಲ್ಲೇ 75 ಮೀ. ಗುರಿ ತಲುಪಲು ಪ್ರಯ ತ್ನಿಸುತ್ತೇನೆ. ಕಳೆದ ಕೆಲವು ದಿನಗ ಳಿಂದ ನಾನು ಚಹಾ ಕುಡಿದಿಲ್ಲ. ಕುಟುಂಬ ದವರೊಂದಿಗೆ ಸೇರಿ ಚಹಾ ಕುಡಿಯುವ ಕಾತರದಲ್ಲಿದ್ದೇನೆ’ ಎಂದರು.
ಪ್ಯಾರಾ ಕ್ರೀಡಾಳುಗಳೇ ಸ್ಫೂರ್ತಿ
ಪ್ಯಾರಾಲಿಂಪಿಕ್ಸ್ ಆರ್ಚರಿಯಲ್ಲಿ ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕ ತಂದಿತ್ತ ಹರ್ವಿಂದರ್ ಸಿಂಗ್ ಕೂಡ ಈ ಸ್ವಾಗತ ಕಂಡು ಬೆರಗಾಗಿದ್ದರು. “ನಾನು ಯಾವಾಗಲೂ ಬ್ಯುಸಿ ಆಗಿರಲು ಬಯಸುತ್ತೇನೆ. ಸಂಕಷ್ಟದಲ್ಲಿರುವವರು ಅಥವಾ ಬದುಕಿನಲ್ಲಿ ಸೋಲುಂಡವರು, ಯಾರೇ ಆಗಿರಲಿ, ನಮ್ಮಂಥ ಪ್ಯಾರಾ ಆ್ಯತ್ಲೀಟ್‌ಗಳಿಂದ ಸ್ಫೂರ್ತಿ ಪಡೆಯ ಬಹುದು’ ಎಂದರು. ಆರ್ಮ್ಲೆಸ್ ವಂಡರ್ ಖ್ಯಾತಿಯ ಶೀತಲ್‌ದೇವಿ ಕೂಡ ಜತೆಯಲ್ಲಿದ್ದರು. ಅಭಿಮಾನಿಗಳು ಇವರ ಮೇಲೆ ಹೂವು ಸುರಿಸಿ ಹರ್ಷ ವ್ಯಕ್ತಪಡಿಸಿದರು.
“ನನ್ನ ಪಾಲಿಗೆ ಇದೊಂದು ಶ್ರೇಷ್ಠ ಅನುಭವ. ಆರ್ಚರಿಯಲ್ಲಿ ಭಾರತಕ್ಕೆ 2 ಪದಕ ಬಂದುದಕ್ಕೆ ಬಹಳ ಖುಷಿಯಾಗಿದೆ. ನಮಗೆ ಅತ್ಯುತ್ತಮ ಬೆಂಬಲ ಲಭಿಸಿದ್ದರಿಂದಲೇ ಇಷ್ಟೊಂದು ಪದಕಗಳು ಒಲಿದವು’ ಎಂದು ಶೀತಲ್‌ದೇವಿ ಅಭಿಪ್ರಾಯಪಟ್ಟರು.
ಜಾವೆಲಿನ್ ಎಫ್41 ವಿಭಾಗದಲ್ಲಿ ಚಿನ್ನ ಜಯಿಸಿದ ಕುಬj ಸಾಹಸಿ ನವದೀಪ್ ಸಿಂಗ್ ಅವರನ್ನು ಅಭಿಮಾನಿಗಳು ಎತ್ತಿ ಹಿಡಿದು ಸಂಭ್ರಮಿಸಿದರು.
ಚಿನ್ನ ಗೆದ್ದವರಿಗೆ 75 ಲಕ್ಷ ರೂ.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರು ಮಂಗಳವಾರ ಬಹುಮಾನದ ಚೆಕ್ ವಿತರಿಸಿದರು. ಇದರಂತೆ ಚಿನ್ನ ಗೆದ್ದವರಿಗೆ 75 ಲಕ್ಷ ರೂ., ಬೆಳ್ಳಿ ವಿಜೇತರಿಗೆ 50 ಲಕ್ಷ ರೂ. ಹಾಗೂ ಕಂಚು ಜಯಿಸಿದವರಿಗೆ 30 ಲಕ್ಷ ರೂ. ಬಹುಮಾನ ನೀಡಲಾಯಿತು. ಶೀತಲ್‌ದೇವಿ ಅವರಂತೆ ಮಿಶ್ರ ತಂಡ ವಿಭಾಗದಲ್ಲಿ ಪದಕ ಗೆದ್ದವರು 22.5 ಲಕ್ಷ ರೂ. ಪಡೆದರು.
ಪ್ಯಾರಾ ಕ್ರೀಡಾಪಟುಗಳನ್ನು ಸಮ್ಮಾನಿಸಿ ಮಾತನಾಡಿದ ಕ್ರೀಡಾ ಸಚಿವರು, “ಭಾರತ ಪ್ಯಾರಾಲಿಂಪಿಕ್ಸ್ ಹಾಗೂ ಪ್ಯಾರಾ ಕೂಟಗಳಲ್ಲಿ ಪ್ರಗತಿ ಕಾಣುತ್ತ ಇದೆ. 2016ರಲ್ಲಿ 4 ಪದಕವಿದ್ದದ್ದು, ಟೋಕಿಯೊದಲ್ಲಿ 19ಕ್ಕೆ, ಈಗ 29ಕ್ಕೆ ಏರಿದೆ. 18ನೇ ಸ್ಥಾನ ಪಡೆದಿದ್ದೇವೆ. ಮುಂದಿನ ಲಾಸ್ ಏಂಜಲೀಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಇನ್ನೂ ಹೆಚ್ಚಿನ ಪದಕ ಜಯಿಸಬೇಕು. ಇದಕ್ಕಾಗಿ ಸರಕಾರ ಎಲ್ಲ ರೀತಿಯ ಸೌಕರ್ಯ, ಬೆಂಬಲ, ಆರ್ಥಿಕ ನೆರವು ನೀಡಲು ಸಿದ್ಧವಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.