INS Submarine ship: ಮಲ್ಪೆ, ಮೂಲ್ಕಿ ಹೆಸರಿನ ಹಡಗು ಲೋಕಾರ್ಪಣೆ

ಸಂಪೂರ್ಣವಾಗಿ ದೇಶೀಯವಾಗಿ ನಿರ್ಮಾಣ 16 ಹಡಗು ತಯಾರು ಮಾಡಲು ಒಪ್ಪಂದ

Team Udayavani, Sep 11, 2024, 7:49 AM IST

INS-malpe

ಮಂಗಳೂರು: ಕರ್ನಾಟಕದ ಪ್ರಮುಖ ಸ್ಥಳಗಳಾದ ಮಲ್ಪೆ ಮತ್ತು ಮೂಲ್ಕಿ ಎಂಬ ಹೆಸರನ್ನು ಹೊಂದಿರುವ ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ಮಂಗಳವಾರ ಲೋಕಾರ್ಪಣೆ ಮಾಡಲಾಗಿದೆ.

ಭಾರತೀಯ ನೌಕಾಪಡೆ ಈ ಹಡಗುಗಳನ್ನು ತಯಾರಿಸಿದ್ದು, ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತಯಾರು ಮಾಡಲಾಗಿದೆ. ಈ ಮೊದಲೇ ಇಂತಹ 2 ಹಡಗುಗಳನ್ನು ನೌಕಾಪಡೆಯ ವಶಕ್ಕೆ ನೀಡಲಾಗಿತ್ತು. ಈ ಹಡಗುಗಳಲ್ಲಿ ನೀರಿನಾಳದಲ್ಲಿರುವ ವಸ್ತುಗಳನ್ನು ಗುರುತಿಸಬಲ್ಲ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ.

ತೀರ ಪ್ರದೇಶದಲ್ಲಿ ಮೈನ್‌ (ನೆಲಬಾಂಬ್‌)ಗಳನ್ನು ಪತ್ತೆ ಹಚ್ಚಲು, ಜಲಂತರ್ಗಾಮಿಗಳ ಸಂಚಾರದ ಮೇಲೆ ಕಣ್ಣಿಡಲು ಇವು ಸಹಾಯ ಮಾಡುತ್ತವೆ. ಒಟ್ಟು 16 ಜಲಂತರ್ಗಾಮಿ ನಿಗ್ರಹ ಹಡಗುಗಳನ್ನು ತಯಾರು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದ್ದು, ಕೊಚ್ಚಿ ಹಾಗೂ ಕೋಲ್ಕತಾದಲ್ಲಿರುವ ಸಂಸ್ಥೆಗಳು ತಲಾ 8 ಹಡಗುಗಳನ್ನು ತಯಾರು ಮಾಡಲಿವೆ. ಇದಕ್ಕಾಗಿ ಕೇಂದ್ರ ಸರಕಾರದ ಜತೆಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಹೆಸರು ಇರಿಸಲು ಕಾರಣ:
ಐಎನ್‌ಎಸ್‌ ಮೂಲ್ಕಿ ಹಾಗೂ ಐಎನ್‌ಎಸ್‌ ಮಲ್ಪೆ ಎಂಬ ಹೆಸರು ಇರಿಸುವುದಕ್ಕೆ ಕಾರಣವೂ ಇದೆ. ಹಿಂದೆಯೂ ಇದೇ ಹೆಸರಿನ ನೌಕೆಗಳಿದ್ದವು. ರಷ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ 6 ಮೈನ್ ಸ್ವೀಪಿಂಗ್‌ ನೌಕೆಗಳಲ್ಲಿ ಇವೂ ಸೇರಿದ್ದವು. 1984ರಿಂದ ತೊಡಗಿ 2003(ಮೂಲ್ಕಿ) ಹಾಗೂ 2006 (ಮಲ್ಪೆ)ರ ವರೆಗೆ ಕಾರ್ಯಾಚರಿಸಿದ್ದ ಈ ನೌಕೆಗಳನ್ನು ಮುಖ್ಯವಾಗಿ ಸಮುದ್ರ ತಟದಲ್ಲಿ ಕಡಲಿನ ಮೈನ್‌ ಸ್ಫೋಟಕ ಪತ್ತೆ ಮಾಡುವುದಕ್ಕೆ ಬಳಸಲಾಗುತ್ತಿತ್ತು.

ಇವೆರಡನ್ನೂ ಬಳಿಕ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು. ಆದರೆ ಇಂತಹ ಹೆಸರನ್ನು ಸಾಮಾನ್ಯವಾಗಿ ಮತ್ತೆ ಇರಿಸಲಾಗುತ್ತದೆ. ನೌಕಾಪಡೆಯಲ್ಲಿ 150ಕ್ಕೂ ಅಧಿಕ ಹಡಗುಗಳಿದ್ದು, ಹೆಸರನ್ನು ಸಾಮಾನ್ಯವಾಗಿ ಪುನರಾವರ್ತಿಸುತ್ತಾರೆ ಎನ್ನುತ್ತಾರೆ ಮೂಲ್ಕಿಯವರೇ ಆಗಿರುವ ನಿವೃತ್ತ ನೇವಲ್‌ ಅಧಿಕಾರಿ ವೈಸ್‌ ಅಡ್ಮಿರಲ್‌ ಬಿ.ಆರ್‌.ರಾವ್‌.

ಹಿಂದೆ ಮೂಲ್ಕಿ ಹೇಗೆ ಆಯ್ಕೆ?
ಮೂಲ್ಕಿ ಹಿಂದೆ ರಾಜ್ಯದ ಬಂದರುಗಳಲ್ಲೊಂದಾಗಿತ್ತು, ಆಗ ದೇಶ ವಿದೇಶಗಳಿಂದ ಸಣ್ಣ ಹಡಗುಗಳು ಮೂಲ್ಕಿ ಸಮುದ್ರದ ವರೆಗೆ ಬಂದು ಅಲ್ಲಿಂದ ಶಾಂಭವಿ ನದಿಯ ಒಳಗೆ ಬರುತ್ತಿದ್ದವು, ಪ್ರಮುಖ ವಾಣಿಜ್ಯ ಚಟುವಟಿಕೆಗೆ ಆಗ ಮೂಲ್ಕಿ ಕೇಂದ್ರವಾಗಿತ್ತು. 1930ರಿಂದ 1960ರ ವರೆಗೆ ಪ್ರಯಾಣಿಕರ ಸ್ಟೀಮರ್‌ ನೌಕೆಗಳೂ ಇಲ್ಲಿಗೆ ಬಂದು ಹೋಗುತ್ತಿದ್ದವು. ಉಡುಪಿಯಿಂದ ಮಂಗಳೂರಿಗೆ ಹೋಗಲು ಫೆರ್ರಿ ಮೂಲಕ ಇಲ್ಲಿ ಜನರು ನದಿ ದಾಟುತ್ತಿದ್ದರು. ಹಾಗಾಗಿಯೇ ಬ್ರಿಟಿಷರ ಕಾಲದಲ್ಲೇ ಕಡಲ ನಕ್ಷೆಯಲ್ಲಿ ಮೂಲ್ಕಿ ಹಾಗೂ ಮಲ್ಪೆ ಇವೆರಡರ ಹೆಸರುಗಳಿದ್ದವು.

ಉಪಯೋಗವೇನು?

1. ಜಲಂತರ್ಗಾಮಿಗಳ ಸಂಚಾರ ಪತ್ತೆ ಹಚ್ಚಲು. 2. ತೀರದಲ್ಲಿ ಅಡಗಿಸಿಟ್ಟ ಬಾಂಬ್‌ ಪತ್ತೆ ಮಾಡಲು. 3. ತೀರ ಪ್ರದೇಶದ ಮೇಲೆ ಕಣ್ಗಾವಲು ಇಡಲು.
4. ದ್ವೀಪಪ್ರದೇಶಗಳ ರಕ್ಷಣೆಗಾಗಿ ಬಳಕೆ

ಟಾಪ್ ನ್ಯೂಸ್

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

ಮಲ್ಪೆ ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವತ್ಛತೆ

Malpe ಸೈಂಟ್‌ಮೇರೀಸ್‌ ದ್ವೀಪದಲ್ಲಿ ಸ್ವಚ್ಛತೆ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

Udupi: ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ಗೆ ಹಾನಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.