Kasaragod: ವೃದ್ಧೆಯ ಹತ್ಯೆಗೈದು ಮೃತದೇಹ ಹೂತು ಹಾಕಿದ ಪ್ರಕರಣ

ನಾಪತ್ತೆಯಾದ ಉಡುಪಿಯ ಮಹಿಳೆ, ಪತಿಗಾಗಿ ಶೋಧ

Team Udayavani, Sep 11, 2024, 8:56 PM IST

Kasaragod: ವೃದ್ಧೆಯ ಹತ್ಯೆಗೈದು ಮೃತದೇಹ ಹೂತು ಹಾಕಿದ ಪ್ರಕರಣ

ಕಾಸರಗೋಡು: ಆಲಪ್ಪುಳ ಸಮೀಪ ವೃದ್ಧೆಯೊಬ್ಬರನ್ನು ಹತ್ಯೆಗೈದು ಮೃತದೇಹವನ್ನು ಮಣ್ಣಿನಡಿ ಹೂತು ಹಾಕಿದ ಪ್ರಕರಣದಲ್ಲಿ ಆರೋಪಿಗಳೆಂದು ಶಂಕಿಸಿರುವ ಕರ್ನಾಟಕ ಉಡುಪಿಯ ಮಹಿಳೆ ಹಾಗು ಆಕೆಯ ಪತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಎರ್ನಾಕುಳಂ ಸೌತ್‌ ರೈಲ್ವೇ ನಿಲ್ದಾಣ ಬಳಿ ಕರಿತ್ತಲ ರೋಡ್‌ ಶಿವಕೃಪಾದ ಸುಭದ್ರ(73) ಅವರನ್ನು ಕೊಲೆಗೈದು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೆಂದು ಶಂಕಿಸಿರುವ ಉಡುಪಿಯ ಶರ್ಮಿಳಾ ಹಾಗು ಆಕೆಯ ಪತಿ ಮ್ಯಾಥ್ಯೂಸ್‌ ಯಾನೆ ನಿತಿನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಇಬ್ಬರು ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ. ಇದೇ ವೇಳೆ ಇವರು ಕಾಸರಗೋಡಿಗೆ ತಲುಪುವ ಸಾಧ್ಯತೆಯಿದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಕಾಸರಗೋಡಿನಲ್ಲೂ ಶೋಧ ನಡೆಸುತ್ತಿದ್ದಾರೆ.

ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಸುಭದ್ರ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪುತ್ರ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾಗ ಕವಲೂರುನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕರ್ನಾಟಕ ಉಡುಪಿ ನಿವಾಸಿ ಶರ್ಮಿಳ ಹಾಗು ಆಕೆಯ ಪತಿ ಕಾಟೂರುಪಳ್ಳಿ ಪರಂಬಿಲ್‌ನ ಮ್ಯಾಥ್ಯೂಸ್‌ ಯಾನೆ ನಿತಿನ್‌ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿತ್ತು. ಸುಭದ್ರ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ದೋಚಲಾದ ಚಿನ್ನಾಭರಣವನ್ನು ಮಂಗಳೂರಿನಲ್ಲಿ ಅಡವಿರಿಸಿದ್ದಾಗಿ ಮಾಹಿತಿ ಲಭಿಸಿದೆ. ಚಿನ್ನಾಭರಣ ಅಡವಿರಿಸಿದ ಬಳಿಕ ಅವರು ಕಾಸರಗೋಡಿಗೆ ತಲುಪಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ನಾಪತ್ತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆ ಸುಭದ್ರ ಕವಲೂರಿಗೆ ಬಂದಿದ್ದು ತಿಳಿದು ಬಂದಿದೆ. ಆ.4 ರಂದು ಎರ್ನಾಕುಳಂ ಸೌತ್‌ನಿಂದ ಮಹಿಳೆಯೊಂದಿಗೆ ಸುಭದ್ರ ತೆರಳುವ ಸಿಸಿಟಿವಿ ದೃಶ್ಯ ಲಭಿಸಿದೆ. ಜೊತೆಗಿದ್ದುದು ಶರ್ಮಿಳ ಎಂಬುದಾಗಿ ದೃಢೀಕರಿಸಿ ಆಕೆಯ ಮನೆಗೆ ಪೊಲೀಸರು ತೆರಳಿದಾಗ ಮನೆ ಮುಚ್ಚಲಾಗಿತ್ತು. ಇದರಿಂದ ಸುಭದ್ರ ಅವರಿಗಾಗಿ ಶೋಧ ಮುಂದುವರಿಸಿ ಪೊಲೀಸರು ಶ್ವಾನ ದಳವನ್ನು ಸ್ಥಳಕ್ಕೆ ತಲುಪಿಸಿ ಪರಿಶೀಲಿಸಿದಾಗ ಮೃತದೇಹ ಕವಲೂರು ಕೋರ್ತುಶೇರಿಯ ಮನೆ ಹಿತ್ತಿಲಿನಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪುತ್ರ ರಾಧಾಕೃಷ್ಣನ್‌ ಮೃತದೇಹದ ಗುರುತು ಹಚ್ಚಿದ್ದು, ಮೈಮೇಲಿದ್ದ ಚಿನ್ನಾಭರಣ ನಾಪತ್ತೆಯಾಗಿತ್ತು. ಸುಭದ್ರ ಹಾಗು ಶರ್ಮಿಳ ಮಧ್ಯೆ ಹಣ ವ್ಯವಹಾರವಿತ್ತೆಂದು ತನಿಖೆಯಿಂದ ತಿಳಿದು ಬಂದಿದೆ. ಅಲ್ಲದೆ ಸುಭದ್ರ ಶರ್ಮಿಳ ಅವರ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ಶರ್ಮಿಳಾಳತ್ತ ಕೇಂದ್ರೀಕರಿಸಲಾಗಿದೆ.

ಟಾಪ್ ನ್ಯೂಸ್

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime

Tipper ಢಿಕ್ಕಿ: ಎಂಬಿಬಿಎಸ್‌ ವಿದ್ಯಾರ್ಥಿ ಸಾವು

Untitled-1

Kasaragod ಅಪರಾಧ ಸುದ್ದಿಗಳು

Veena-goegre

Viral Disease: ಕೇರಳದಲ್ಲಿ ಎಂ ಫಾಕ್ಸ್‌ ದೃಢ: ಆರೋಗ್ಯ ಸಚಿವೆ ವೀಣಾ ಜಾರ್ಜ್‌

Court-Symbol

Kasaragodu: ಶಿಕ್ಷಕಿ ಆತ್ಮಹತ್ಯೆ: ಪತಿಗೆ 9 ವರ್ಷ, ಅತ್ತೆಗೆ 7 ವರ್ಷ ಕಠಿನ ಜೈಲು ಶಿಕ್ಷೆ

Kasaragod crime news

Kasaragod ಅಪರಾಧ ಸುದ್ದಿಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-eeeeee

Train ಹಳಿಯ ಮೇಲೆ ರಾಡ್‌: ಹಳಿ ತಪ್ಪಿಸಲು ಮತ್ತೆ ಯತ್ನ, ತಪ್ಪಿದ ಅನಾಹುತ

“ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಕೆಎಂಎಫ್ ಅಧ್ಯಕ್ಷ

KMF; “ಹಾಲಿನ ದರ ಹೆಚ್ಚಳ ಬಗ್ಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ’: ಭೀಮಾ ನಾಯ್ಕ

firee

Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

Karnataka ಸುವರ್ಣ ಸಂಭ್ರಮದಲ್ಲಿ ಕನ್ನಡ ಜನೋತ್ಸವ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.