Asian Hockey: ಭಾರತ ಸೆಮಿಫೈನಲ್‌ಗೆ, ಮಲೇಷ್ಯಾ ವಿರುದ್ಧ 8-1 ಜಯಭೇರಿ
Team Udayavani, Sep 11, 2024, 11:11 PM IST
ಹುಲುನ್‌ಬಿಯುರ್ (ಚೀನ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿದ ಭಾರತ, ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.
ಬುಧವಾರದ ಪಂದ್ಯದಲ್ಲಿ ಭಾರತ 8-1 ಭರ್ಜರಿ ಅಂತರದಿಂದ ಮಲೇಷ್ಯಾವನ್ನು ಮಣಿಸಿತು.
ಯುವ ಸ್ಟ್ರೈಕರ್ ರಾಜ್‌ಕುಮಾರ್ ಹ್ಯಾಟ್ರಿಕ್ ಗೋಲು ಗಳ ಮೂಲಕ ಮಿಂಚಿದರು. ಅವರು 3ನೇ, 25ನೇ ಮತ್ತು 33ನೇ ನಿಮಿಷದಲ್ಲಿ ಗೋಲು ಸಿಡಿಸಿದರು. ಉಳಿದ ಗೋಲು ವೀರರೆಂದರೆ ಅರೈಜೀತ್ ಸಿಂಗ್ ಹುಂಡಾಲ್ (6ನೇ, 39ನೇ ನಿಮಿಷ), ಜುಗ್ರಾಜ್ ಸಿಂಗ್ (7ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್ ಸಿಂಗ್ (22ನೇ ನಿಮಿಷ) ಮತ್ತು ಉತ್ತಮ್ ಸಿಂಗ್ (40ನೇ ನಿಮಿಷ). ಮಲೇಷ್ಯಾದ ಏಕೈಕ ಗೋಲನ್ನು 34ನೇ ನಿಮಿಷದಲ್ಲಿ ಅಖೀಮುಲ್ಲಾ ಅನ್ವರ್ ಹೊಡೆದರು.
ಭಾರತ ಕಳೆದ ಏಷ್ಯನ್ ಚಾಂಪಿ ಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲೂ ಮಲೇಷ್ಯಾವನ್ನು ಮಣಿಸಿತ್ತು. ಅಲ್ಲಿ ವಿರಾಮದ ವೇಳೆ 1-3ರ ಹಿನ್ನಡೆ ಯಲ್ಲಿದ್ದ ಭಾರತ, ಬಳಿಕ 4-3 ಅಂತರ ದಿಂದ ಗೆದ್ದು ಬಂದಿತ್ತು.
ಅಗ್ರಸ್ಥಾನದಲ್ಲಿ ಭಾರತ
ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತವೀಗ 9 ಅಂಕಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ. ಇದಕ್ಕೂ ಮುನ್ನ ಚೀನ ವಿರುದ್ಧ 3-0 ಹಾಗೂ ಜಪಾನ್ ವಿರುದ್ಧ 5-1 ಅಂತರದ ಜಯ ಸಾಧಿಸಿತ್ತು. ಇದು 6 ತಂಡಗಳ ನಡುವಿನ ರೌಂಡ್ ರಾಬಿನ್ ಲೀಗ್ ಮಾದರಿಯ ಪಂದ್ಯಾವಳಿಯಾಗಿದ್ದು, ಹಾಲಿ ಚಾಂಪಿ ಯನ್ ಭಾರತವಿನ್ನು ಗುರುವಾರ ಕೊರಿಯಾ ವಿರುದ್ಧ ಹಾಗೂ ಶನಿವಾರ ಪಾಕಿಸ್ಥಾನ ವಿರುದ್ಧ ಸೆಣಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.