MUDA ಬಳಿಕ ಮತ್ತೊಂದು ಪಾದಯಾತ್ರೆಗೆ ಬಿಜೆಪಿ ಸಜ್ಜು; ಯತ್ನಾಳ್‌ ಬಣಕ್ಕೆ ಮೇಲುಗೈ?

ವಾಲ್ಮೀಕಿ ನಿಗಮ ಅವ್ಯವಹಾರ ವಿರುದ್ಧ ನಡಿಗೆಗೆ ವರಿಷ್ಠರ ಅಸ್ತು 

Team Udayavani, Sep 12, 2024, 7:25 AM IST

MUDA ಬಳಿಕ ಮತ್ತೊಂದು ಪಾದಯಾತ್ರೆಗೆ ಬಿಜೆಪಿ ಸಜ್ಜು; ಯತ್ನಾಳ್‌ ಬಣಕ್ಕೆ ಮೇಲುಗೈ?

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನ ಲಾದ ಅವ್ಯವ ಹಾರಕ್ಕೆ ಸಂಬಂಧ ಪಟ್ಟಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಆರೋಪ ಪಟ್ಟಿ ಸಲ್ಲಿಸುತ್ತಿದ್ದಂತೆ ಚುರುಕಾಗಿರುವ ಬಿಜೆಪಿಯು ಈಗ ಮುಡಾ ಮಾದರಿಯಲ್ಲಿ ಮತ್ತೊಂದು ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಈ ಮೂಲಕ ಸರಕಾರದ ವಿರುದ್ಧ ಮತ್ತೊಂದು ಸಮರಕ್ಕೆ ಸಜ್ಜಾಗಿದ್ದು, ಜನಾಭಿಪ್ರಾಯ ಮೂಡಿಸಲು ಮುಂದಾಗಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಬಹಳ ದಿನಗಳಿಂದ ಬಿಜೆಪಿಯ ಒಂದು ಬಣ ನಡೆಸುತ್ತಿದ್ದ ಒತ್ತಾಯಕ್ಕೆ ಕೊನೆಗೂ ವರಿಷ್ಠರು ಒಪ್ಪಿಗೆ ನೀಡಿದ್ದಾರೆ.

ವರಿಷ್ಠರು ಪಾದಯಾತ್ರೆಗೆ ಸಮ್ಮತಿ ನೀಡಿರುವ ವಿಷಯವನ್ನು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ. ಪಾದಯಾತ್ರೆ ಬಗ್ಗೆ ನಾವು ದಿಲ್ಲಿ ನಾಯಕರ ಮುಂದೆ ಅಭಿಪ್ರಾಯ ಮಂಡಿಸಿದ್ದೆವು. ಅವರು ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಈ ಹೋರಾಟದ ಸ್ವರೂಪದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾಹಿತಿ ನೀಡುತ್ತಾರೆ ಎಂದರು.

ಹಾಗಾದರೆ ಹಿರಿಯ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬೇಡಿಕೆಗೆ ವರಿಷ್ಠರು ಒಪ್ಪಿಗೆ ನೀಡಿದಂತಾಯಿತೇ ಎಂಬ ಪ್ರಶ್ನೆಗೆ, ಇದನ್ನು ಯತ್ನಾಳ್‌ ಪಾದಯಾತ್ರೆ ಎಂದು ವ್ಯಾಖ್ಯಾನಿಸಬೇಕಿಲ್ಲ. ಎಲ್ಲ ಬಿಜೆಪಿ ನಾಯಕರು ಸೇರಿ ಪಾದಯಾತ್ರೆ ಮಾಡುತ್ತೇವೆ. ಪಕ್ಷಕ್ಕೆ ಒಬ್ಬ ವ್ಯಕ್ತಿ ಮುಖ್ಯವಲ್ಲ. ರಾಜ್ಯದ ಮಟ್ಟಿಗೆ ಪಕ್ಷದಲ್ಲಿ ರಾಜ್ಯಾಧ್ಯಕ್ಷರೇ ಸುಪ್ರೀಂ. ನಾಳೆ ಯತ್ನಾಳ್‌ ಅವರೇ ರಾಜ್ಯಾಧ್ಯಕ್ಷರಾಗಬಹುದು. ಆಗ ಅವರ ಮಾತು ಕೇಳಬೇಕಾಗುತ್ತದೆ. ಈಗ ವಿಜಯೇಂದ್ರ ರಾಜ್ಯಾಧ್ಯಕ್ಷರು. ಅವರು ಹೋರಾಟದ ಸ್ವರೂಪವನ್ನು ತೀರ್ಮಾನ ಮಾಡುತ್ತಾರೆ. ಇದು ಪಕ್ಷದ ವೇದಿಕೆಯ ಮೂಲಕವೇ ನಡೆಯುವ ಹೋರಾಟ ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂ. ಅಕ್ರಮದ ಬಗ್ಗೆ ಬಿಜೆಪಿ ಹೋರಾಟ ಮಾಡಿತ್ತು. ಬಳಿಕ ಸರ್ಕಾರ ಎಚ್ಚೆತ್ತುಕೊಂಡು ಎಸ್‌ಐಟಿ ರಚನೆ ಮಾಡಿತ್ತು. ಆರಂಭದಲ್ಲಿ ನಾಗೇಂದ್ರ ಹಾಗೂ ದದ್ದಲ್‌ ಹೆಸರು ಹೇಳಲಿಲ್ಲ. ಈಗ ಇ.ಡಿ. ಆರೋಪ ಪಟ್ಟಿಯಲ್ಲಿ ಅವರ ಹೆಸರನ್ನು ಉಲ್ಲೇಖೀಸಲಾಗಿದೆ. ನಾವು ಮುಡಾ ಪ್ರತಿಭಟನೆಯಲ್ಲಿ ಇದ್ದುದರಿಂದ ಆ ಬಗ್ಗೆ ಅಷ್ಟು ಸದ್ದಾಗಿರಲಿಲ್ಲ. ಈಗ ಪೂರ್ಣ ಪ್ರಮಾಣದಲ್ಲಿ ಹೋರಾಟ ಮಾಡುತ್ತೇವೆ ಎಂದರು.

ಇದು ಸಾಮಾನ್ಯ ಹಗರಣ ಅಲ್ಲ
ಇದು ಸಾಮಾನ್ಯ ಹಗರಣ ಅಲ್ಲ. ಇದನ್ನು ಸರಕಾರ ಬಹಳ ಲಘುವಾಗಿ ಪರಿಗಣಿಸಿದೆ. ಸರಕಾರದ ಹಣ ನೇರವಾಗಿ ಖಾತೆಗೆ ವರ್ಗಾಯಿಸಿಕೊಂಡು ನುಂಗಿದ್ದಾರೆ. ಸಚಿವರ ವಿರುದ್ಧವೇ ಆರೋಪ ಬಂದಿದೆ. ಹಣಕಾಸು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಪ್ರಸ್ತಾವಿಸಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳುತ್ತಾರೆ? ಸಿದ್ದರಾಮಯ್ಯನವರ ಮೇಲೆ ಬಹಳ ಅಪವಾದ ಬಂದಿದೆ. ಹೀಗಾಗಿ ಅವರು ವಿಚಲಿತರಾಗಿದ್ದಾರೆ ಎಂದರು.

ಯತ್ನಾಳ್‌ ಬಣಕ್ಕೆ ಮೇಲುಗೈ?
ಈ ಪಾದಯಾತ್ರೆಗೆ ವರಿಷ್ಠರು ಒಪ್ಪಿಗೆ ನೀಡಿರುವುದರಿಂದ ಬಸನಗೌಡ ಯತ್ನಾಳ್‌ ಬಣ ಪಕ್ಷದಲ್ಲಿ ಮೇಲುಗೈ ಸಾಧಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮುಡಾ ಪ್ರಕರಣದಲ್ಲಿ ಸಿಎಂ ರಾಜೀನಾಮೆಗೆ ಆಗ್ರಹಿಸಿ ವಿಜಯೇಂದ್ರ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಪಾದಯಾತ್ರೆ ನಡೆಸುವಂತೆ ಯತ್ನಾಳ್‌ ಆಗ್ರಹಿಸಿದ್ದರು. ಆದರೆ ಆಗ ವರಿಷ್ಠರು ಒಪ್ಪಿರಲಿಲ್ಲ. ಯತ್ನಾಳ್‌ ಹಾಗೂ ರಮೇಶ್‌ ಜಾರಕಿಹೊಳಿ ಈ ಪಾದಯಾತ್ರೆಯಿಂದ ದೂರ ಉಳಿದಿದ್ದರು. ಈಗ ವರಿಷ್ಠರು ಯತ್ನಾಳ್‌ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಾರೆ.

ಎಲ್ಲಿಂದ ಪಾದಯಾತ್ರೆ?
ಪಾದಯಾತ್ರೆ ಎಲ್ಲಿಂದ ಪ್ರಾರಂ ಭಿಸಬೇಕೆಂಬುದು ಇನ್ನೂ ನಿರ್ಣಯವಾಗಿಲ್ಲ. ಚಿತ್ರದುರ್ಗ ದಿಂದ ಬಳ್ಳಾರಿ ಅಥವಾ ಯಾದಗಿರಿಯಿಂದ ಬಳ್ಳಾರಿಯ ವರೆಗೆ ಪಾದಯಾತ್ರೆ ನಡೆಸುವ ಸಾಧ್ಯತೆ ಇದೆ. ನವರಾತ್ರಿ ಬಳಿಕ ದಿನಾಂಕ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

da

Davanagere: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

High Court; “ಅರ್ಧ ಪಾಕಿಸ್ಥಾನ’: ಯತ್ನಾಳ್‌ ಹೇಳಿಕೆಗೆ ಹೈಕೋರ್ಟ್‌ ಸಿಟ್ಟು

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

Kasturi Rangan ವರದಿ ಹಿನ್ನೆಲೆ: ನಯನಾ ಮೋಟಮ್ಮ ರಾಜೀನಾಮೆ ಬೆದರಿಕೆ

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

100 ಎಫ್ಐಆರ್‌ ದಾಖಲಿಸಿದರೂ ಹೆದರಲ್ಲ: ಅಶೋಕ್‌

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

J-P-Nadda

PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

Tungabhadra ಡ್ಯಾಂನ ಎಲ್ಲ 33 ಗೇಟ್‌ ಬದಲಿಸಲು ತಜ್ಞರ ಸಲಹೆ

modi (4)

Congress-NC ಮೈತ್ರಿಗೆ ಪಾಕ್‌ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ

chess

Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

High Court: ಬಾಂಬ್‌ ಸ್ಫೋಟ ಹೇಳಿಕೆ; ಶೋಭಾ ಕರಂದ್ಲಾಜೆ ಮೇಲಿನ ಕೇಸ್‌ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.