Aparna: ಮಾತು ಮುಗಿಸಿದ ಕನ್ನಡದ ಅಪ್ಸರೆ

Team Udayavani, Sep 12, 2024, 3:55 PM IST

7-uv-fusion

ಕನ್ನಡದ  ಖ್ಯಾತ ನಿರೂಪಕಿ ಅಪರ್ಣ ವಸ್ತಾರೆ  ಅವರು 1966 ಜುಲೈ 7ರಂದು ಜನಿಸಿದರು. ಇವರು ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು ತಂದೆ ಕೆ. ಎಸ್‌. ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದರು. ನಟಿಯಾಗಿ ನಿರೂಪಕಿಯಾಗಿ ಕಿರುತೆರೆಯಲ್ಲಿಯೂ ಗುರುತಿಸಿಕೊಂಡು ಅದರಲ್ಲೂ ಅಚ್ಚ ಕನ್ನಡದ ನಿರೂಪಣೆಯಲ್ಲಿ ತಮ್ಮದೇ ಆದ ಚಾಪನ್ನು ಹೊತ್ತಿ ಇಂದು ನಿರ್ಗಮಿಸಿದ್ದಾರೆ.

ನಟಿ ನಿರೂಪಕಿ ಅಪರ್ಣಾ ಅವರು ಬಣ್ಣದ ಲೋಕದ ಮೇಲಿನ ಸೆಳೆತದಿಂದ ನಟನ ರಂಗಕ್ಕೆ ಆಗಮಿಸಿದರು 1985ರಲ್ಲಿ ತೆರೆಗೆ ಬಂದ ಪುಟ್ಟಣ್ಣಕಣಗಾಲ್‌ ನಿರ್ದೇಶನದ ಮಸಣದ ಹೂವು ಸಿನಿಮಾದ ಮೂಲಕ ಚಂದನವನಕ್ಕೆ ಆಗಮಿಸಿದರು. ಅದಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.

ಕಿರುತೆರೆಯಲ್ಲಿಯೂ ಗುರುತಿಸಿಕೊಂಡರು. ಆದರೆ ಸಿನಿಮಾಗಳಿಗಿಂತ ಅವರಿಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದ್ದು ನಿರೂಪಣೆ. ಸರಿ ಸುಮಾರು 7,000ಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ ಹೆಗ್ಗಳಿಕೆ  ಅಪರ್ಣ ಅವರದ್ದು.ಆಕಾಶವಾಣಿಯಲ್ಲಿ ನಿರೂಪಣೆ ಮಾಡಿ ಎಲ್ಲರ ಗಮನ ಸೆಳೆದ ಇವರು 1993ರಿಂದ 2010ರ ವರೆಗೂ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.

ಆಕಾಶವಾಣಿಗೆ ಹೆಜ್ಜೆ ಇಟ್ಟದ್ದು ಬಾಲ ಕಲಾವಿದೆಯಾಗಿ ನಂತರದಲ್ಲಿ ಅವರು ಆಕಾಶವಾಣಿಗೆ ತಾತ್ಕಾಲಿಕ ಉದ್ಯೋಗಿಯಾಗಿ ಬರುತ್ತಿದ್ದರು. ಟಿ.ಎನ್‌. ಸೀತಾರಾಮ್‌ ಅವರ ಮಾಯಾಮೃಗ, ಮುಕ್ತ ಧಾರಾವಾಹಿಗಳಲ್ಲಿಯೂ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ನಟನೆಯ ಜತೆಗೆ ನಿರೂಪಣೆ. ಆರೋಗ್ಯ ಕಾರ್ಯಕ್ರಮಗಳು. ನೇರಪ್ರಸಾರದ ಕಾರ್ಯಕ್ರಮಗಳು. ಸಂದರ್ಶನಗಳನ್ನೂ ಕೂಡ ನಡೆಸಿಕೊಟ್ಟರು. ಸಿನಿಮಾಗಳಲ್ಲಿಯೂ ಕಾಣಿಸಿಕೊಂಡರು.

ಮಜಾಟಾಕೀಸ್‌ ಮೂಲಕ ಬೇರೆಯ ಎತ್ತರಕ್ಕೆ ಜಿಗಿದ ಅಪರ್ಣಾ, ನಾನು ನಗಿಸುವುದಕ್ಕೂ ಸೈ ಎಂದು ಒನ್‌ ಅಂಡ್‌ ಓನ್ಲೀ ವರಲಕ್ಷ್ಮೀಯಾಗಿ ಗಮನ ಸೆಳೆದರು. ನಮ್ಮ ಮೆಟ್ರೋಗೆ, ಕರ್ನಾಟಕ ರಾಜ್ಯದ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಜೀವ ದನಿಯಾದವರು ಕೂಡ ಇದೇ ಅಪರ್ಣ.

ಇವರ ಪತಿ ನಾಗರಾಜ್‌ ವಸ್ತಾರೆ ಅವರು ಸಹ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದಾರೆ. ಬರುವ ಅಕ್ಟೋಬರ್‌ಗೆ 58 ವರ್ಷ ಪೂರೈಸುತ್ತಿದ್ದ ಅಪರ್ಣ ಅವರು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು.

ಇವರು ನಿರೂಪಣೆ ಕುರಿತ ಶಾಲೆ ಆರಂಭಿಸುವ ಯೋಜನೆ ಹಾಕಿದ್ದರು. ಆದರೆ ಈ ಕನಸು ಕೊನೆಗೂ ಈಡೇರಲಿಲ್ಲ. ನಿರೂಪಣಾ ಜಗತ್ತು ಇನ್ನೂ ಹೀಗೆ ವ್ಯಾಪಿಸದ ಸಮಯದಲ್ಲಿ ಅದು ಒಂದು ವ್ಯಾಪಾರ ಅಬ್ಬರ ಟಿಆರ್‌ ಪಿ  ಆಗಿರದೇ ನಿಜದ ಉದ್ಘೋಷಣೆ ನಿಜದ ಪ್ರಸ್ತುತೀಕರಣ ನಿಜದ ಕಲೆ ಅನಿಸಿಕೊಂಡಿದ್ದ ಆ ನಿಜ ಸಮಯದಲ್ಲಿ ನಿಜದ ನಿಜವಾಗಿ ಬೆಳೆದವರು ಅಪರ್ಣ ಕನ್ನಡದ ಜನಮನಗಳ ವಿವಿಧ ಭಾವಗಳ ಕಿಂಡಿಗಳನ್ನು ಬೆಸೆದು ಸಾಗಿದ ನಿರೂಪಣ ಕೊಂಡಿ ಅಬ್ಬರವಿಲ್ಲದ ಅವರ ಮೃದು ಮಾತು ಕೇಳಿಸುತ್ತಲೇ ಇದೇ ನಾವುಗಳು ಕಿವಿಕೊಡಬೇಕು ಅಷ್ಟೇ.

-ರಂಜಿತಾ ಎಚ್‌. ಕೆ.

ಹಾಸನ

ಟಾಪ್ ನ್ಯೂಸ್

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jammu and Kashmir:ಕಲಂ 370 ಪುನರ್‌ ಜಾರಿ-ಕಾಂಗ್ರೆಸ್‌, ಎನ್‌ ಸಿ ನಿಲುವಿಗೆ ಪಾಕ್‌ ಬೆಂಬಲ!

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Jani Master: ಲೈಂಗಿಕ ಕಿರುಕುಳ ಪ್ರಕರಣ; ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ಬಂಧನ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

Mangaluru: ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

5-savanur

ಖಾಯಂ ಪಿಡಿಓ, ಕಾರ್ಯದರ್ಶಿ ನೇಮಕಕ್ಕೆ ಒತ್ತಾಯ;ಗ್ರಾ.ಪಂ.ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22–uv-fusion

Motivation: ಸಾಧನೆಗೆ ಸ್ಫೂರ್ತಿ, ಪ್ರೇರಣೆಗಿಂತ ಸ್ಪಷ್ಟತೆ ಅಗತ್ಯ

21-Tungabhadra

Tungabhadra: ಬರಪೀಡಿತ ಜಿಲ್ಲೆಗಳ ಜೀವನಾಡಿ ತುಂಗಭದ್ರಾ

20-uv-fusion

UV Fusion: ಆಯ್ಕೆ ನಿಮ್ಮ ಕೈಯಲ್ಲಿದೆ

19-uv-fusion

UV Fusion: ಎತ್ತ ಸಾಗುತ್ತಿದೆ ಈ ಪ್ರಪಂಚ…

17-uv-fusion

UV Fusion: ಪ್ರಕೃತಿಯನ್ನು ಮರೆತ ನಮ್ಮ ಉಳಿವು ಅಸಾಧ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

Kundapura: ಗಾಂಧಿ ಮೈದಾನದಲ್ಲಿ ಸಮಸ್ಯೆಗಳದ್ದೇ ಆಟ!

7-road-mishap

ರಸ್ತೆ ಪಕ್ಕ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಲಾರಿ ಹರಿದು ಇಬ್ಬರು ಸಾವು

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Chikkaballapura; ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದಲಿತ ಸಂಘಟನೆಗಳ ಪ್ರತಿಭಟನೆ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.