India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ


Team Udayavani, Sep 13, 2024, 6:45 AM IST

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

ಮೂಲಭೂತ ಹಕ್ಕುಗಳ ಪೈಕಿ ಪ್ರಪ್ರಥಮ ಸ್ಥಾನವನ್ನೇ ನೀಡಿದುದು “ಸಮಾನತೆ’ಯ ಹಕ್ಕಿಗಾಗಿ- ಇಲ್ಲಿನ ಒಟ್ಟು ಸಾಂವಿಧಾನಿಕ ಆಶಯ ಚಿಮ್ಮುವುದೇ ನಮ್ಮ ರಾಷ್ಟ್ರದಲ್ಲಿ ಯಾವುದೇ ಭಾಷೆ, ಪ್ರದೇಶ, ಧರ್ಮ, ಮತೀಯ ಪಂಗಡ, ಲಿಂಗ- ಇದು ಯಾವುದೇ ವ್ಯತ್ಯಾಸ ವಿರಹಿತ ವಾಗಿ ಸಮಾನತೆಯ ಗಾಳಿ ಬೀಸಬೇಕು ಎಂಬುದು. ಮಾತ್ರವಲ್ಲ, ತುರ್ತು ಪರಿಸ್ಥಿತಿಯ ಸಂದರ್ಭ ಪ್ರಸ್ತಾವನೆಗೇ ಸೇರ್ಪಡೆಗೊಂಡ ಸೆಕ್ಯುಲರ್‌ ಶಬ್ದ ಹೊಮ್ಮಿಸುವ ಧ್ವನಿ ಕೂಡ ಮತೀಯ ಚೌಕಟ್ಟುಗಳಿಗೆ ಅತೀತವಾಗಿ, ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಕಾನೂನು ಸಮುಚ್ಚಯ ಈ ನೆಲದಲ್ಲಿರಬೇಕು ಎಂಬುದು. ಒಂದು ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಏಕರೂಪದ ಕಾನೂನು ಇರುವಿಕೆ ಪ್ರಗತಿಪರ ಹಾಗೂ ಸೈದ್ಧಾಂತಿಕ ಸಮಾನತೆಯ ಹೆಗ್ಗುರುತು.

“ಪ್ರಚಲಿತ ವ್ಯಕ್ತಿಗತ ಕಾನೂನು ಸಮುಚ್ಚಯ (Personal civil code law) ನಿಜಕ್ಕೂ ಕಮ್ಯುನಲ್‌ ಹಾಗೂ ತಾರತಮ್ಯ ಪೂರಿತ. ನಮಗಿಂದು ಬೇಕಾಗಿರುವುದು ಸೆಕ್ಯುಲರ್‌ ಕಾನೂನು!’ ಇದು 78ನೇ ಸ್ವಾತಂತ್ರ್ಯೋತ್ಸವದ ಸಂದರ್ಭ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವರಳಿಸಿದ ಪ್ರಧಾನಿ ರಾಷ್ಟ್ರವನ್ನು ಉದ್ದೇಶಿಸಿ ನೀಡಿದ ಕರೆ. ಅದರೊಂದಿಗೇ, “ಈ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯಾಗಬೇಕು; ಹಾಗೂ ಪ್ರತಿಯೊಬ್ಬನೂ ತಂತಮ್ಮ ಅಭಿಮತ ವ್ಯಕ್ತಪಡಿಸಬೇಕು’ ಎಂಬುದಾಗಿಯೂ ಆಶಿಸಿದರು. ಅದರಲ್ಲಿಯೂ ಮುಖ್ಯವಾಗಿ ಮಹಿಳೆಯರಿಗೆ ಸಾಮಾಜಿಕ ನ್ಯಾಯ ದೊರಕಿಸುವ ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆಯ ಆವಶ್ಯಕತೆಯನ್ನು ವಿಶದಪಡಿಸಿದರು. ತಾರತಮ್ಯ ಎಂಬುದು ಒಂದೇ ಮನೆಯ ಮಂದಿಯಲ್ಲಿ ಇರುವಿಕೆ ಎಂದಿಗೂ ಸಮಂಜಸವೆನಿಸಲಾರದು. ಅದೇ ರೀತಿ ಒಂದೇ ದೇಶದೊಳಗೆ ಸಮಾನ ನಾಗ ರಿಕತೆ ಸಂಹಿತೆ ಇಲ್ಲದಿರುವಿಕೆ ಈ ಸ್ವಾತಂತ್ರ್ಯೋತ್ತರ ಭಾರತದ 77 ವರ್ಷ ಗಳ ಒಂದು ವಿಡಂಬನೆಯೇ ಸರಿ!

ಸಮಾನತೆ ನಮ್ಮ ಭಾರತ ಸಂವಿಧಾನದ ಮೂಲ ತಳಹದಿ; ಮೂಲಭೂತ ಚೌಕಟ್ಟಿನ ಒಂದು ಪ್ರಧಾನಸ್ತಂಭ. ಕೇಶವಾನಂದ ಭಾರತೀ ಮೊಕದ್ದಮೆಯ ತೀರ್ಪಿನಲ್ಲಿ “ನಮ್ಮಿ ರಾಜ್ಯಾಂಗ ಘಟನೆಯ ಪ್ರಧಾನ ಭೂಮಿಕೆಗೆ ಚ್ಯುತಿ ಬರುವಂತಿಲ್ಲ’ ಎಂಬುದನ್ನು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಸಾರಿದೆ. ಸಮಾನತೆ ಎಂಬುದು ನಮ್ಮ ಸಂವಿಧಾನ ಎತ್ತಿ ಹಿಡಿದ ಒಂದು ಮೂಲಧಾತು. ನಮ್ಮ ರಾಷ್ಟ್ರೀಯ ದಾಖಲೆಯ ಪ್ರಸ್ತಾವನೆಯಲ್ಲಿಯೇ “ಸಮಾನ ಸ್ಥಾನಮಾನ ಹಾಗೂ ಅವಕಾಶಗಳು’ (Equality of status and opportunities) ಎಂಬ ಶಬ್ದಗಳಲ್ಲಿ ನಯವಾಗಿ ಪೋಣಿಸ ಲ್ಪಟ್ಟಿದೆ. ಅದೇ ರೀತಿ ಮುಂದೆ 3ನೇ ವಿಭಾಗದ ಒಟ್ಟು 6 ಮೂಲಭೂತ ಹಕ್ಕುಗಳ ಪೈಕಿ ಪ್ರಪ್ರಥಮ ಸ್ಥಾನವನ್ನೇ ನೀಡಿದುದು “ಸಮಾನತೆ’ಯ ಹಕ್ಕಿಗಾಗಿ- ಇಲ್ಲಿನ ಒಟ್ಟು ಸಾಂವಿಧಾನಿಕ ಆಶಯ ಚಿಮ್ಮುವುದೇ ಈ ನಮ್ಮ ರಾಷ್ಟ್ರದಲ್ಲಿ ಯಾವುದೇ ಭಾಷೆ, ಪ್ರದೇಶ, ಧರ್ಮ, ಮತೀಯ ಪಂಗಡ, ಲಿಂಗ- ಇದು ಯಾವುದೇ ವ್ಯತ್ಯಾಸ ವಿರಹಿತವಾಗಿ ಸಮಾನತೆಯ ಗಾಳಿ ಬೀಸಬೇಕು ಎಂಬುದು. ಮಾತ್ರವಲ್ಲ, ತುರ್ತು ಪರಿಸ್ಥಿತಿಯ ಸಂದರ್ಭ ಪ್ರಸ್ತಾವನೆಗೇ ಸೇರ್ಪಡೆಗೊಂಡ ಸೆಕ್ಯುಲರ್‌ ಶಬ್ದ ಹೊಮ್ಮಿಸುವ ಧ್ವನಿ ಕೂಡ ಮತೀಯ ಚೌಕಟ್ಟುಗಳಿಗೆ ಅತೀತವಾಗಿ, ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಕಾನೂನು ಸಮುಚ್ಚಯ ಈ ನೆಲದಲ್ಲಿರಬೇಕು ಎಂಬುದು.

ಸೈದ್ಧಾಂತಿಕ ಸಮಾನತೆಯ ಹೆಗ್ಗುರುತು
ವಿಶ್ವದ ಆಧುನಿಕ ರಾಷ್ಟ್ರಗಳಲ್ಲಿ ಧಾರ್ಮಿಕತೆಯ ಆಧಾರದಲ್ಲಿ, ಸಮಾಜವನ್ನು ಭಿನ್ನ ಭಿನ್ನ ನಾಗರಿಕ ಕಾನೂನುಗಳ ಅಡಿಯಲ್ಲಿ ವಿಭಜನೆಗೊಳಿಸುವಿಕೆ ಕಂಡು ಬರುವುದಿಲ್ಲ. ಒಂದು ರಾಷ್ಟ್ರದಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಏಕರೂಪದ ಕಾನೂನು ಇರುವಿಕೆ ಪ್ರಗತಿಪರ ಹಾಗೂ ಸೈದ್ಧಾಂತಿಕ ಸಮಾನತೆಯ ಹೆಗ್ಗುರುತು. ಅದರಲ್ಲಿಯೂ ಕಾನೂನು ಸಮುತ್ಛಯದ ಆಳಕ್ಕೆ ಹೋದಾಗ ಸ್ವಾಭಾವಿಕ ನ್ಯಾಯ (Natural Justice) ಎಂಬ ಸುಂದರ ಪದರ ಕಾಣಸಿಗುವಂತಿದೆ. ಇಲ್ಲಿ ಪ್ರಜೆಗಳ ಮಧ್ಯೆ, ಆರ್ಥಿಕ, ಸಾಮಾಜಿಕ, ನೈತಿಕ, ರಾಜಕೀಯ ಕಾನೂನು, ಸಮಾನತೆ ಹಾಗೂ ನ್ಯಾಯದ ಗಟ್ಟಿ ಶಿಲೆಯಲ್ಲಿ ಆವಿರ್ಭಜಿ ಸಬೇಕಾಗುತ್ತದೆ.

ಮುಖ್ಯವಾಗಿ, ಮಹಿಳೆಯರಿಗೆ ಸ್ವಾತಂತ್ರ್ಯ ದ ಪರಿಧಿ ಯನ್ನು ತೀರಾ ಕಿರಿದುಗೊಳಿಸುವಿಕೆ, ತ್ರಿವಳಿ ತಲಾಖ್‌ನಂತಹ ಕಾಲಬಾಹಿರ ಪದ್ಧತಿಗೆ ವಿದಾಯ ಹೇಳುವಿಕೆ ಇಲ್ಲಿ ಉಲ್ಲೇಖನೀಯ. ವಿವಾಹಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾಕ ರಿಗೆ ಒಂದು ಕಾನೂನು ಆದರೆ ಬಹುಸಂಖ್ಯಾಕರಿಗೆ ಹಿಂದೂ ಕೋಡ್‌ ಬಿಲ್‌ ಅನ್ವಯ ತೀರಾ ವಿಭಿನ್ನ ಕಾನೂನು ಇಷ್ಟು ದೀರ್ಘ‌ ಕಾಲ ಸೆಕ್ಯುಲರ್‌ ಹಣೆಪಟ್ಟಿ ಯೊಂದಿಗೆ ಹೇಗೆ ಮುಂದು ವರಿಯಿ ತು? ಮಾತ್ರವಲ್ಲ, ಗುಣಾತ್ಮಕವಾಗಿ, ಬಹು ಸಂಖ್ಯಾಕರಿಗೆ ನಕಾರಾತ್ಮಕ ಚಿಹ್ನೆಗಳನ್ನೇ ತೋರಿಸಿ, ಅಲ್ಪಸಂಖ್ಯಾಕರು ಎಂಬ ವಿಶಿಷ್ಟ ವಲಯ ಸೃಜಿಸಿ, ವಿಶೇಷ ಸವಲತ್ತುಗಳು, ಅಧಿಕಾರಗಳು ಅದೂ ಪುರುಷ ವರ್ಗಕ್ಕೆ ಸೀಮಿತಗೊಳಿಸುವಿಕೆ ಪ್ರಾಯಶಃ ನಮ್ಮ ದೇಶದಲ್ಲಿ ಮಾತ್ರ ಸಾಧ್ಯ!

ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳಲ್ಲಿ ಉಲ್ಲೇಖ
ಭಾರತದ ಸರ್ವೋಚ್ಚ ನ್ಯಾಯಾಲಯ ತನ್ನ ಹಲವಾರು ತೀರ್ಪಿನಲ್ಲಿ ಸಮಾನ ನಾಗರಿಕ ಸಂಹಿತೆ ಅಥವಾ ಸೆಕ್ಯುಲರ್‌ ಕೋಡ್‌ನ‌ ತೀವ್ರ ಅಗತ್ಯವನ್ನು ಅನೇಕ ಬಾರಿ ಎತ್ತಿ ಹಿಡಿದಿದೆ. ಹಿಂದೂ ಕಕ್ಷಿದಾರರು ತನ್ನ ಮೊದಲ ಪತ್ನಿಗೆ ಗೇಟ್‌ ಪಾಸ್‌ ನೀಡಲು ಮತಾಂತರಗೊಂಡು ಎರಡನೇ ವಿವಾಹ ಸಲೀಸಾಗಿ ಮಾಡಿ ಕೊಂಡ ಬಗೆಯನ್ನು ಸುಪ್ರೀಂ ಕೋರ್ಟು ತೀರ್ಪುಗಳಲ್ಲಿ ಉಲ್ಲೇಖಿಸಿದೆ. ಭಾರತ ಸಂವಿಧಾನದ 4ನೇ ವಿಭಾಗ ಎನಿಸಿದ ರಾಜ್ಯ ನಿರ್ದೇಶಕ ತಣ್ತೀಗಳ (Directive Principles of State Policy) 44ನೇ ವಿಧಿ “ಭಾರತದ ಭೂ ಪ್ರದೇಶದೊಳಗೆ ಸಮಾನ ನಾಗರಿಕ ಸಂಹಿತೆ ಎಲ್ಲ ನಾಗರಿಕರಿಗೆ ಅನ್ವಯಿಸಲು ಯತ್ನಿಸತಕ್ಕದ್ದು’ ಎಂಬುದಾಗಿ ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ನಮೂದಿಸಲ್ಪಟ್ಟಿದೆ. ಸರಲಾ ಮುದ್ಗಲ್‌ (1995) ಮೊಕದ್ದಮೆಯಲ್ಲಿ “ಹಿಂದೂ ವಿವಾಹ ನೋಂದಣಿ ಬಳಿಕ ಪತಿ ಇಸ್ಲಾಂಗೆ ಮತಾಂತರಗೊಂಡು ದ್ವಿತೀಯ ವಿವಾಹವಾದರೂ, ತನ್ನಿಂ ತಾನೇ ಮೊದಲ ವಿವಾಹ ಅಸಿಂಧು ಆಗುವಂತಿಲ್ಲ’ ಎಂಬುದಾಗಿ ಸುಪ್ರೀಂ ಕೋರ್ಟು ತೀರ್ಪಿತ್ತಿತು. “1950ರ ಬಳಿಕ ಅನೇಕ ಸರಕಾರಗಳು ಬಂದು ಹೋದರೂ 44ನೇ ವಿಧಿಯ ಬಗ್ಗೆ ಗಂಭೀರವಾಗಿ ಚಿಂತನೆ ಹರಿಸಿಲ್ಲ’ ಎಂಬುದಾಗಿ ನ್ಯಾ|ಮೂ| ಕುಲದೀಪ್‌ ಸಿಂಗ್‌ ಹಾಗೂ ನ್ಯಾ| ಮೂ| ಆರ್‌.ಎಂ. ಶಾಹಿಮಾ ಉದ್ಗರಿಸಿ¨ªಾರೆ. ಅನೇಕ ಇಸ್ಲಾಂ ರಾಷ್ಟ್ರಗಳೂ, ಈ ಬಹು ಪತ್ನಿತ್ವ ವಿಷಯದಲ್ಲಿ ಹಲವಾರು ಸುಧಾರಣೆಗಳನ್ನು ತಂದಿವೆ. ಅಮೆರಿಕ ಕೂಡ “ಸಾರ್ವಜನಿಕ ನೈತಿಕತೆ’ಯ ಆಧಾರದಲ್ಲಿ “ಬಹು ಪತ್ನಿತ್ವ’ ವನ್ನು ನಿಯಂತ್ರಿಸಿದೆ.

“1996ರಲ್ಲಿ ಸುಪ್ರೀಂ ಕೋರ್ಟು ಸಮಾನ ನಾಗರಿಕ ಸಂಹಿತೆ ಜಾರಿಗೆ ವಿಷಯದಲ್ಲಿ ಕೇಂದ್ರ ಸರಕಾರ ಏನು ಕ್ರಮ ಕೈಗೊಂಡಿದೆ’ ಎಂಬುದಾಗಿ ಕಾನೂನು ಇಲಾಖೆಗೆ ಕಾರ್ಯದರ್ಶಿ ಮೂಲಕ ನೋಟಿಸ್‌ ನೀಡಿತ್ತು. ವಿಚ್ಛೇದಿತ ಮಹಿಳೆಗೆ ಅಂತೆಯೇ, ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಒದಗುವ ಸಂಕಷ್ಟದ ಬಗ್ಗೆ ಮುಸ್ಲಿಂ ವಿವಾದಿತರ ಮಧ್ಯೆಯೇ ತೀರ್ಪು ಸರ್ವೋಚ್ಚ ನ್ಯಾಯಾಲಯ ಮಹಿಳಾ ಪರವಾಗಿ ನೀಡುವ ಪ್ರಮೇಯ 1997 ನೂರ್‌ ಸಾಬಾ-ವಿ-ಡ ಮಹಮ್ಮದ್‌ ಕಾಸಿಮ್‌ ಮೊಕದ್ದಮೆಯಲ್ಲಿ ಕಂಡು ಬಂತು.

ಶಿಯಾ ಪಂಗಡದ ಮುಸ್ಲಿಮರು “ಸೆಕ್ಯಲರ್‌ ಸಿವಿಲ್‌ ಕೋಡ್‌’ ಸ್ವಾಗತಿಸಿರುವುದು ವರದಿ ಆಗುತ್ತಿದೆ. ಇಲ್ಲೊಂದು ಗಮನಾರ್ಹ ಪ್ರಶ್ನೆ “Common Criminal Procedure code” ಅಂತೆಯೇ “Indian Penal Code ಇದೆಲ್ಲ ಸಮಾನವಾಗಿ ಎಲ್ಲ ಪೌರರಿಗೂ ಇರಲಿ’ ಎಂದು ಬಯಸುವ ಮಂದಿ ಸಿವಿಲ್‌ ವಿಚಾರದಲ್ಲಿ ಮಾತ್ರವೇ ಪ್ರತ್ಯೇಕತೆಗೆ ಧ್ವನಿ ಬದಲಿಸುತ್ತಿರುವುದಾದರೂ ಏಕೆ? ಸೆಕ್ಯುಲರಿಸಂನ ನಿತ್ಯ ಆರಾಧಕರು ಎನ್ನುವ ಮಂದಿ “ಪ್ರತ್ಯ ಪ್ರತ್ಯೇಕ ಕಾನೂನು ಸಮುಚ್ಚಯ ನಮ್ಮ ಹಕ್ಕು’ ಎಂದು ಎತ್ತರದ ಸ್ವರದಲ್ಲಿ ಹಕ್ಕೊತ್ತಾಯ ಮಾಡುವುದಾದರೂ ಎಷ್ಟು ಸಮರ್ಥನೀಯ? ವಿಕಸಿತ ಭಾರತದ ಸುವರ್ಣ ಯುಗದ (Golden Era) ಹೆಗ್ಗುರುತಾಗಿ ಸೆಕ್ಯುಲರ್‌ ಸಿವಿಲ್‌ ಕೋಡ್‌ ಮೂಡಿ ಬರುವಂತಾಗಲಿ.

ಡಾ| ಪಿ.ಅನಂತಕೃಷ್ಣ ಭಟ್‌,
ಮಂಗಳೂರು

ಟಾಪ್ ನ್ಯೂಸ್

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Raichur: ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಗೆ ಹೊರಟ ಮುಸ್ಲಿಂ ವ್ಯಕ್ತಿ

Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್‌ ಹತ್ಯೆ; ಇಬ್ಬರು ಪೊಲೀಸರ ಬಂಧನ

Crime: ಆಹಾರ, ಮದ್ಯವನ್ನು ಕೊಡಲೊಪ್ಪದ ರೆಸಾರ್ಟ್ ಮ್ಯಾನೇಜರ್‌ ಹತ್ಯೆ; ಇಬ್ಬರು ಪೊಲೀಸರ ಬಂಧನ

sanjay-raut

Modi ಸರಕಾರ 2 ವರ್ಷ ಇರುವುದೇ ಅನುಮಾನ: ಸಂಜಯ್ ರಾವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

nucchinunde

Healthy Recipe: ಹಳೇ ಕಾಲದ ರುಚಿ; ಈ ರೆಸಿಪಿ ಮಾಡದಿದ್ದರೆ ಒಮ್ಮೆಯಾದ್ರು ಮಾಡಿ ನೋಡಿ…

Rohit-SHarma-(2)

BGT Finale: ಪಂದ್ಯಕ್ಕಿಲ್ಲ ರೋಹಿತ್ ಶರ್ಮ? ಬುಮ್ರಾ ನಾಯಕತ್ವಕ್ಕೆ ಸಿದ್ಧ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.