BSE ಸೆನ್ಸೆಕ್ಸ್ 83,000 ಮತ್ತೊಂದು ಮೈಲುಗಲ್ಲು
Team Udayavani, Sep 13, 2024, 6:00 AM IST
ಮುಂಬಯಿ: ಇದೇ ಮೊದಲ ಬಾರಿಗೆ 83 ಸಾವಿರದ ಗಡಿ ದಾಟುವ ಮೂಲಕ ಸೆನ್ಸೆಕ್ಸ್ ಹೊಸ ಇತಿಹಾಸ ಸೃಷ್ಟಿಸಿದೆ. ಬ್ಲೂಚಿಪ್ ಷೇರುಗಳ ಖರೀದಿ ಹೆಚ್ಚಳ, ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ಬೆಳವಣಿಗೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆಯ ಹರಿವಿನ ಪರಿಣಾಮವೆಂಬಂತೆ, ಗುರುವಾರ ಬಿಎಸ್‌ಇ ಸೆನ್ಸೆಕ್ಸ್ 1,593.03 ಅಂಕ ಏರಿಕೆಯಾಗಿದೆ. ಮಧ್ಯಾಂತರದಲ್ಲಿ ಸೆನ್ಸೆಕ್ಸ್ 83,116ಕ್ಕೆ ತಲುಪಿ, ದಿನಾಂತ್ಯಕ್ಕೆ 82,962ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಷೇರುಪೇಟೆ ದಾಖಲೆಯಿಂದಾಗಿ ಹೂಡಿಕೆದಾರರು 7 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದಾರೆ. ಇದೇ ವೇಳೆ, ನಿಫ್ಟಿ 470 ಅಂಕ ಏರಿಕೆಯಾಗಿದ್ದು, 25,388ರಲ್ಲಿ ವಹಿವಾಟು ಅಂತ್ಯಗೊಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ, ಜೆಎಸ್‌ಡಬ್ಲ್ಯು ಸ್ಟೀಲ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಅದಾನಿ ಪೋರ್ಟ್ಸ್, ಟೆಕ್ ಮಹೀಂದ್ರಾ, ಟಾಟಾ ಸ್ಟೀಲ್, ಎಸ್‌ಬಿಐ ಲಾಭ ಗಳಿಸಿದವು.
ಬೆಳ್ಳಿ ದರ ಕೆ.ಜಿ.ಗೆ 2,000 ರೂ. ಏರಿಕೆ
ದಿಲ್ಲಿಯಲ್ಲಿ ಗುರುವಾರ ಬೆಳ್ಳಿಯ ದರ 2 ಸಾವಿರ ರೂ. ಹೆಚ್ಚಳವಾಗಿ ಕೆ.ಜಿ.ಗೆ 87 ಸಾವಿರ ರೂ. ಆಗಿದೆ. ಈ ಮೂಲಕ ಕಳೆದ 3 ದಿನಗಳಲ್ಲಿ ಒಟ್ಟಾರೆ ಕೆ.ಜಿ. ಬೆಳ್ಳಿಗೆ 3,200 ರೂ. ಏರಿಕೆಯಾದಂತಾಗಿದೆ. ಇದೇ ವೇಳೆ, ಚಿನ್ನದ ದರ 250 ರೂ. ಇಳಿಕೆಯಾಗಿ, 10 ಗ್ರಾಂಗೆ 74,350 ರೂ.ಗೆ ತಲುಪಿದೆ.
ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.3.65ಕ್ಕೇರಿಕೆ
ಆಗಸ್ಟ್‌ನಲ್ಲಿ ದೇಶದ ಚಿಲ್ಲರೆ ಹಣದುಬ್ಬರ ಶೇ.3.65ಕ್ಕೆ ಏರಿಕೆಯಾಗಿದೆ. ಇದು ಶೇ.4ರೊಳಗೆ ಇರಬೇ ಕೆಂಬ ರಿಸರ್ವ್ ಬ್ಯಾಂಕ್‌ನ ಗುರಿಯ ಒಳಗೇ ಇದೆ ಎಂದು ಸರಕಾರ ತಿಳಿಸಿದೆ. ಗ್ರಾಹಕ ದರ ಸೂಚ್ಯಂಕ(ಸಿಪಿಐ)ವನ್ನು ಆಧರಿಸಿರುವ ಚಿಲ್ಲರೆ ಹಣದುಬ್ಬರವು, 2023ರ ಆಗಸ್ಟ್‌ನಲ್ಲಿ ಶೇ.6.83, 2024ರ ಜುಲೈಯಲ್ಲಿ ಶೇ.3.6 ಆಗಿತ್ತು. ಆಹಾರ ಹಣದುಬ್ಬರ ಜುಲೈಯಲ್ಲಿ ಶೇ.5.42, ಆಗಸ್ಟ್‌ನಲ್ಲಿ ಶೇ.5.66ಕ್ಕೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.