Mulki ರುದ್ರಭೂಮಿಗೆ ಕಾಯಕಲ್ಪ ಆರಂಭ; ಒಂದುವರೆ ಎಕ್ರೆಯಲ್ಲಿ ಅಭಿವೃದ್ಧಿ ಚಟುವಟಿಕೆಗೆ ಚಿಂತನೆ
ಹಣಕಾಸು ಹೊಂದಾಣಿಕೆಗೆ ಕ್ರಮ ಸಾರ್ವಜನಿಕ ಹಿಂದೂ ರುದ್ರಭೂಮಿಗೆ ಹೊಸ ಸಿಲಿಕಾನ್ ಬಾಕ್ಸ್ ಅಳವಡಿಕೆ, ಉದ್ಯಾನ ನಿರ್ಮಾಣ
Team Udayavani, Sep 13, 2024, 2:20 PM IST
ಮೂಲ್ಕಿ: ಮೂವತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾದ ಮೂಲ್ಕಿಯ ಸಾರ್ವಜನಿಕ ಹಿಂದೂ ರುದ್ರಭೂಮಿ ಇದೀಗ ಜೀರ್ಣಾವಸ್ಥೆ ತಲುಪಿದ್ದು, ಅದರ ಕಾಯಕಲ್ಪ ಕಾರ್ಯ ಆರಂಭವಾಗಿದೆ. ಶ್ಮಶಾನದಲ್ಲಿ ಹೆಣ ಸುಡಲು ಬಳಸುವ ಸಿಲಿಕಾನ್ ಬಾಕ್ಸ್ ಈಗ ಬಲ ಕಳೆದುಕೊಂಡಿದ್ದು, ಅದನ್ನು ಬದಲಿಸುವುದೂ ಸಹಿತ ಹಲವು ಅಭಿವೃದ್ಧಿ ಚಟುವಟಿಕೆಗೆ ಸಮಿತಿ ಮುಂದಾಗಿದೆ.
ಮಂಗಳೂರು ಭಾಗದಲ್ಲಿ ರುದ್ರಭೂಮಿಗಳ ಅಭಿವೃದ್ಧಿಯ ಹರಿಕಾರರೆಂದೇ ಗುರುತಿಸಲಾದ ಮೂಲ್ಕಿಯ ಸಮಾಜ ಸೇವಕ ಎಂ. ಆರ್.ಎಚ್. ಪೂಂಜ ಅವರ ಸಾರಥ್ಯದಲ್ಲಿ ಮೂಲ್ಕಿಯಲ್ಲೂ ಸುಸಜ್ಜಿತ ಶ್ಮಶಾನ ನಿರ್ಮಿಸಲಾಗಿತ್ತು. ಅವರು ಹಲವು ಸಂಘ-ಸಂಸ್ಥೆಗಳು, ವ್ಯಕ್ತಿಗಳ ನೆರವು ಪಡೆದು ಶ್ಮಶಾನಗಳನ್ನು ಅಭಿವೃದ್ಧಿಪಡಿಸಿದ್ದರು. ಮಂಗಳೂರಿನಲ್ಲಿ ಅವರು ಪುನರುಜ್ಜೀವನಗೊಳಿಸಿದ್ದ ರುದ್ರಭೂಮಿಗಳ ನಿರ್ವಹಣೆಯ ಹೊಣೆಯನ್ನು ಮಹಾನಗರ ಪಾಲಿಕೆ ವಹಿಸಿಕೊಂಡಿದ್ದರೆ, ಮೂಲ್ಕಿಯ ರುದ್ರಭೂಮಿಯ ಜವಾಬ್ದಾರಿಯನ್ನು ಎಂ.ಆರ್.ಎಚ್. ಪೂಂಜರ ಪುತ್ರ ಎಂ.ಎಚ್. ಅರವಿಂದ ಪೂಂಜ ನೇತೃತ್ವದ ಸಮಿತಿ ವಹಿಸಿಕೊಂಡಿದೆ.
ಮೂಲ್ಕಿಯ ಈ ರುದ್ರಭೂಮಿಯ ಜಾಗ ಹಿಂದೆ ಮೂಲ್ಕಿಯ ಶಿವ ಬ್ರಾಹ್ಮಣ ಸಭಾದ ಕೈಯಲ್ಲಿತ್ತು. ಮೂಲ್ಕಿಗೆ ಒಂದು ಸಾರ್ವಜನಿಕ ರುದ್ರಭೂಮಿ ಬೇಕು ಎಂಬ ವಿಚಾರ ಚರ್ಚೆಗೆ ಬಂದಾಗ ಶಿವ ಬ್ರಾಹ್ಮಣ ಸಭಾ ಸುಮಾರು ಒಂದೂವರೆ ಎಕ್ರೆ ಜಾಗವನ್ನೇ ಸಮಿತಿಯ ಕೈಗೆ ಒಪ್ಪಿಸಿ ಸಾರ್ವಜನಿಕ ರುದ್ರಭೂಮಿಯಾಗಿ ಪರಿವರ್ತಿಸಲು ಅವಕಾಶ ಮಾಡಿಕೊಡುವ ದೊಡ್ಡ ಮನಸು ಮಾಡಿತ್ತು. ಬಳಿಕ ಅದು ಪೂಂಜರ ನೇತೃತ್ವದಲ್ಲಿ ಹೊಸ ರೂಪ ಪಡೆಯಿತು. ಈಗ ಅದು ಜೀರ್ಣಾವಸ್ಥೆಯಲ್ಲಿದ್ದು, ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದೆ.
ಅಭಿವೃದ್ಧಿಗೆ ಬೇಕಿದೆ ನೆರವು
ಅರವಿಂದ ಪೂಂಜ ಅವರ ನೇತೃತ್ವದಲ್ಲಿ ರುದ್ರಭೂಮಿ ಅಭಿವೃದ್ಧಿಗೆ ಚಿಂತನೆ ನಡೆದಿದೆ. ಇಲ್ಲಿ ಒಂದು ಹೆಣ ಸುಡುವುದಕ್ಕೆ ಅಲ್ಪ ಪ್ರಮಾಣದ ಮೊತ್ತವನ್ನಷ್ಟೇ ಸ್ವೀಕರಿಸಲಾಗುತ್ತದೆ, ಜತೆಗೆ ಹೆಚ್ಚು ಶವಗಳು ಬರುವುದಿಲ್ಲ. ಹೀಗಾಗಿ ಆದಾಯಕ್ಕಿಂತ ನಿರ್ವಹಣೆ ವೆಚ್ಚವೇ ಹೆಚ್ಚು. ಹೀಗಾಗಿ ಸ್ಥಳೀಯಾಡಳಿತ, ಸಾರ್ವಜನಿಕರು, ಸಹಕಾರ ಸಂಘಗಳ ನೆರವು ಸಿಕ್ಕಿದರೆ ಅಭಿವೃದ್ಧಿಗೆ ಸಹಾಯವಾಗಲಿದೆ ಎಂಬುದು ಸಮಿತಿಯ ಅಭಿಪ್ರಾಯ. ಇಲ್ಲಿ ಕಾವಲುಗಾರರು ಇಲ್ಲದೆ ಕಳ್ಳರು ಮರಗಳನ್ನು ಕಡಿಯುವುದು, ವಸ್ತುಗಳನ್ನು ದೋಚುವ ಕೃತ್ಯ ನಡೆಯುತ್ತಿದೆ. ಇಲ್ಲಿ ವಿದ್ಯುತ್ ದೀಪಗಳಿದ್ದರೂ ಕಳ್ಳರ ಕರಾಮತ್ತು ಜೋರಾಗಿದೆ. ಹೀಗಾಗಿ ರಕ್ಷಣೆ ಕೆಲಸವೂ ನಡೆಯಬೇಕಾಗಿದೆ.
ಏನೇನು ಅಭಿವೃದ್ಧಿ ಕಾರ್ಯ?
ಈ ಬಾರಿ ರುದ್ರಭೂಮಿಯನ್ನು ಸುಸ್ಥಿತಿಗೆ ತರುವ ಜತೆಗೆ ಆಕರ್ಷಣೆ ಹೆಚ್ಚಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಸಂಬಂಧಪಟ್ಟು ಸುಮಾರು 1.5 ಎಕ್ರೆ ಜಾಗವಿದೆ. ಅಲ್ಲಿ ಗಿಡ ಗಳನ್ನು ನೆಡಲಾಗಿದೆ. ಈ ಜಾಗದಲ್ಲಿ ಉದ್ಯಾನವನ ನಿರ್ಮಿಸುವ ಚಿಂತನೆ ಇದೆ.
ಇಲ್ಲಿ ವಾಕಿಂಗ್ ಟ್ರ್ಯಾಕ್ ಮಾಡಿದರೆ ಜನರ ಓಡಾಟಕ್ಕೂ ಅನುಕೂಲವಾಗ ಬಹುದು ಎಂಬ ಸಲಹೆ ಇದೆ.
ರುದ್ರಭೂಮಿಯಲ್ಲಿ ಹಿಂದೆ ಶಿವನ ಮೂರ್ತಿ ನಿರ್ಮಿಸಲಾಗಿತ್ತು. ಅದು ಜೀರ್ಣಗೊಂಡಿದ್ದರಿಂದ ಹೊಸ ಮೂರ್ತಿ ಸ್ಥಾಪನೆಯ ಚಿಂತನೆ ಇದೆ.
ಧರ್ಮಸ್ಥಳ ಯೋಜನೆಯಿಂದ ಸಿಲಿಕಾನ್ ಬಾಕ್ಸ್
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ 30 ವರ್ಷಗಳ ಹಿಂದೆಯೇ ಶ್ಮಶಾನಗಳಿಗೆ ಸಿಲಿಕಾನ್ ಬಾಕ್ಸ್ ಒದಗಿಸಲಾಗಿತ್ತು. ಇದರ ಹಿಂದೆ ಎಂ.ಆರ್.ಎಚ್. ಪೂಂಜರ ಕಲ್ಪನೆ ಕೆಲಸ ಮಾಡಿತ್ತು. ಮುಂದೆ ಯೋಜನೆಯಡಿ ರಾಜ್ಯಾದ್ಯಂತ ರುದ್ರಭೂಮಿಗೆ ಸಿಲಿಕಾನ್ ಬಾಕ್ಸ್ ಒದಗಿಸಲಾಗಿದೆ. ಇದೀಗ ಮೂಲ್ಕಿಯ ರುದ್ರಭೂಮಿಯ ಸಿಲಿಕಾನ್ ಬಾಕ್ಸ್ ಜೀರ್ಣಾವಸ್ಥೆ ತಲುಪಿರುವುದರಿಂದ ಮತ್ತೆ ಯೋಜನೆಯ ಮೂಲಕ ಹೊಸದಾಗಿ ಪಡೆಯಲಾಗುತ್ತಿದೆ.
-ಸರ್ವೋತ್ತಮ ಅಂಚನ್ ಮೂಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.