Bengaluru: ಲಕ್ಷ+ ಲೀ. ನೀರು ಬಳಕೆದಾರರಿಗೆ ಸ್ಮಾರ್ಟ್‌ ಮೀಟರ್‌

ಸ್ಮಾರ್ಟ್‌ ಮೀಟರ್‌ನಿಂದ ಶೇ.100 ನಿಖರವಾಗಿ ಬರಲಿವೆ ನೀರಿನ ಬಿಲ್‌ಗ‌ಳು

Team Udayavani, Sep 13, 2024, 2:52 PM IST

14-smart-water-meter

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಲಕ್ಷಾಂತರ ಲೀಟರ್‌ ಕಾವೇರಿ ನೀರು ಬಳಸುವ ವಾಣಿಜ್ಯ ಉದ್ಯಮಗಳು, ಅಪಾರ್ಟ್‌ಮೆಂಟ್‌ನಂತಹ ಕಡೆಗಳಲ್ಲಿ ಇನ್ನು ಮುಂದೆ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಜಲಮಂಡಳಿಯು ಮುಂದಾಗಿದೆ.

ಅಮೆರಿಕ, ಜಪಾನ್‌, ಬ್ರಿಟನ್‌, ಭಾರತದಲ್ಲಿ ಮುಂಬೈ, ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಈಗಾಗಲೇ ಸ್ಮಾರ್ಟ್‌ಮೀಟರ್‌ಗಳು ಅಳವಡಿಸಿದ್ದು, ಇಲ್ಲೆಲ್ಲ ಶೇ.100 ರಷ್ಟು ನಿಖರವಾಗಿ ನೀರಿನ ಬಿಲ್‌ಗ‌ಳು ಬರುತ್ತಿವೆ.

ಇದನ್ನು ಮನಗಂಡ ಜಲಮಂಡಳಿಯು ಬೆಂಗಳೂರಿನ ಅಪಾರ್ಟ್‌ಮೆಂಟ್‌ಗಳು, ಕಾರ್ಖಾನೆ, ವಾಣಿಜ್ಯ ಕಟ್ಟಡಗಳು, ಐಟಿ-ಬಿಟಿ ಸಂಸ್ಥೆಗಳು, ಎಚ್‌ ಎಎಲ್‌, ಬಿಎಚ್‌ಎಎಲ್‌, ಏರ್‌ಫೋರ್ಸ್‌ ಸೇರಿದಂತೆ ಲಕ್ಷಾಂತರ ಲೀ. ಕಾವೇರಿ ನೀರು ಬಳಸುವ ಕಡೆಗಳಲ್ಲಿ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ.

ಕಂಪನಿಯಿಂದಲೇ ಹೂಡಿಕೆ:

ಸ್ಮಾರ್ಟ್‌ ಮೀಟರ್‌ ಅಳವಡಿಸಲು ನೂರಾರು ಕೋಟಿ ರೂ. ಬೇಕಾಗುತ್ತವೆ. ಜಲಮಂಡಳಿ ಬೊಕ್ಕಸದಲ್ಲಿ ಹಣಕಾಸಿನ ಕೊರತೆ ಇರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ಮೀಟರ್‌ ಯೋಜನೆಯನ್ನು ಖಾಸಗಿ ಕಂಪನಿಗೆ ಟೆಂಡರ್‌ ನೀಡಲು ಚಿಂತಿಸಲಾಗಿದೆ. ಟೆಂಡರ್‌ ಪಡೆಯುವ ಕಂಪನಿಯೇ ಯೋಜನೆಗೆ ಹೂಡಿಕೆ ಮಾಡಿದರೆ, ಸ್ಮಾರ್ಟ್‌ಮೀಟರ್‌ನಿಂದ ಬರುವ ನೀರಿನ ಶುಲ್ಕದಲ್ಲಿ ಇಂತಿಷ್ಟು ಪ್ರಮಾಣದ ದುಡ್ಡನ್ನು ಆ ಕಂಪನಿಗೆ ಹಲವು ವರ್ಷಗಳ ಕಾಲ ಪಡೆಯಲು ಅವಕಾಶ ಕಲ್ಪಿಸಲಾ ಗುತ್ತದೆ. ಈ ಮೂಲಕ ಹೂಡಿಕೆ ಮಾಡಿದ ದುಡ್ಡನ್ನು ಕಂಪನಿಯು ಪಡೆಯಬೇಕಾಗಿದೆ. ಇನ್ನು ಯೋಜನೆ ಗಾಗಿ ಯಾವ ಮೂಲಗಳಿಂದ ಹೇಗೆ ಹಣ ಕ್ರೋಢೀಕ ರಿಸಬಹುದು ಎಂಬ ಬಗ್ಗೆಯೂ ಸ್ಮಾಟ್‌ ಮೀಟರ್‌ ಕುರಿತು ಅಧ್ಯಯನ ನಡೆಸಲು ಕನ್ಸಲ್ಟೆನ್ಸಿ ಪಡೆಯುವ ಕಂಪನಿ ವರದಿಯಲ್ಲಿ ತಿಳಿಸಲಿದೆ.

ಸ್ಮಾರ್ಟ್‌ ಮೀಟರ್‌ ಅಳವಡಿಕೆಯಿಂದ ಜಲ ಮಂಡಳಿ ಸರ್ವರ್‌ಗಳಿಗೆ ರೀಡಿಂಗ್‌ ಬರಲಿವೆ. ಪ್ರತಿದಿನ ಬಳಕೆಯಾಗುವ ನೀರು, ಅದಕ್ಕೆ ತಗುಲುವ ವೆಚ್ಚ, ಎಷ್ಟು ಪ್ರಮಾಣದಲ್ಲಿ ನೀರು ಪೂರೈಸಬಹುದು ಸೇರಿದಂತೆ ಹಲವಾರು ನಿಖರವಾದ ಮಾಹಿತಿಗಳು ಜಲ ಮಂಡಳಿ ಮುಖ್ಯ ಕಚೇರಿಯಲ್ಲೇ ಪರಿಶೀಲಿಸಬಹುದಾಗಿದೆ.

ಟೆಂಡರ್‌ ಪಡೆದ ಸಂಸ್ಥೆಯಿಂದ ಅಧ್ಯಯನ:

ಬೆಂಗಳೂರಿನಲ್ಲಿ ಸ್ಮಾರ್ಟ್‌ಮೀಟರ್‌ ಅಳವಡಿಸುವ ಕುರಿತು ಅಧ್ಯಯನ ನಡೆಸಿ ಜಲಮಂಡಳಿಗೆ ವರದಿ ನೀಡಲು (ಟ್ರಾನ್ಸಾಕ್ಷನ್‌ ಎಡ್ವೈಸರ್‌) ಕನ್ಸಟೆನ್ಸಿಗಾಗಿ ಕರೆದ ಟೆಂಡರ್‌ ನಲ್ಲಿ ರಾಜ್ಯ ಸರ್ಕಾರದ ಅಧೀನದ ಇಂಡಸ್ಟ್ರಿಯಲ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಕರ್ನಾಟಕ ಲಿ.(ಐಡೆಕ್‌)ಹೆಸರಿನ ಕಂಪನಿವೊಂದು ಭಾಗವಹಿಸಿದೆ. ಕಂಪನಿಯು ಸಲ್ಲಿಸಿರುವ ದಾಖಲೆ ಗ ಳನ್ನು ಜಲಮಂಡಳಿ ಎಂಜಿನಿಯರ್‌ಗಳು ಪರಿಶೀಲಿಸುತ್ತಿದ್ದಾರೆ. ಬಹುತೇಕ ಇದೇ ಕಂಪನಿಗೆ ಕನ್ಸಟೆನ್ಸಿ ನೀಡುವ ಸಾಧ್ಯತೆಗಳಿವೆ.

ಇನ್ನು ಸ್ಮಾರ್ಟ್‌ ಮೀಟರ್‌ಗಳನ್ನು ಯಾವ ಮಾದರಿಯಲ್ಲಿ ಅಳವಡಿಸಬಹುದು, ವಿದೇಶದ ನಗರಗಳಲ್ಲಿ ಸ್ಮಾಟ್‌ಮೀಟರ್‌ ವ್ಯವಸ್ಥೆಗಳು ಹೇಗಿವೆ, ಇದಕ್ಕೆ ಅಲ್ಲಿನ ಸರ್ಕಾರವೇ ದುಡ್ಡು ವ್ಯಯಿಸಿ ದೆಯೇ ಅಥವಾ ಪಿಪಿಪಿ ಮಾಡೆಲ್‌ನಲ್ಲಿ ಮಾಡಲಾಗಿ ದೆಯೇ, ಯಾವ ಮೀಟರ್‌ ಅಳವಡಿಸಿದರೆ ಸೂಕ್ತ ರೀಡಿಂಗ್‌ ತೆಗೆದುಕೊಳ್ಳಬಹುದು ಎಂಬಿತ್ಯಾದಿ ವಿಚಾ ರಗಳ ಕುರಿತು ಈ ಸಂಸ್ಥೆಯು ಕೆಲವು ತಿಂಗಳುಗಳ ಕಾಲ ಅಧ್ಯಯನ ನಡೆಸಲಿದೆ.

ಬೆಂಗಳೂರಿನ ಐದಾರು ಕಡೆ ಸ್ಮಾರ್ಟ್‌ಮೀಟರ್‌ ಅಳವಡಿಸಿ ಪರಿಶೀಲಿಸಲಿದೆ. ಈ ಎಲ್ಲ ಪ್ರಕ್ರಿಯೆಗಳ ಬಳಿಕ ಜಲಮಂಡಳಿಗೆ ಈ ಸುದೀರ್ಘ‌ವಾದ ವರದಿ ನೀಡಲಿದೆ. ಈ ಸಂಸ್ಥೆಯು ನೀಡುವ ವರದಿ ಆಧರಿಸಿ ಯೋಜನೆ ರೂಪಿಸುವ ಬಗ್ಗೆ ಸರ್ಕಾರಕ್ಕೆ ಜಲಮಂಡಳಿಯು ಪ್ರಸ್ತಾವನೆ ಸಲ್ಲಿಸಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌ ಸಿಗುತ್ತಿದ್ದಂತೆ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಾರ್ಯ ಶುರುವಾಗಲಿದೆ.

ವಾಣಿಜ್ಯ ಸಂಕೀರ್ಣಗಳಿಗೆ ಮಾತ್ರ ಅಳವಡಿಕೆ ಏಕೆ?

ಕಾವೇರಿ ನೀರು ಬಳಸುತ್ತಿರುವ ಬೆಂಗಳೂರಿನ 10.95 ಲಕ್ಷ ಸಂಪರ್ಕಗಳಲ್ಲಿ ಜಲಮಂಡಳಿಯು ಮೆಕ್ಯಾನಿಕಲ್‌ ಮೀಟರ್‌ ಅಳವಡಿಸಿದೆ. ಮೆಕ್ಯಾನಿಕಲ್‌ ಮೀಟರ್‌ಗಳಿಂದ ನೀರಿನ ಬಿಲ್‌ಗ‌ಳಲ್ಲಿ ಶೇ.5ರಷ್ಟು ಪ್ರಮಾಣದಲ್ಲಿ ವ್ಯತ್ಯಾಸಗಳಾಗುತ್ತವೆ. ಪ್ರತಿ ತಿಂಗಳು 1 ಲಕ್ಷ ಲೀಟರ್‌ಗಿಂತ ಕಡಿಮೆ ನೀರನ್ನು ಬಳಸುವವರಿಗೆ ಇದು ಹೊರೆಯಾಗುವುದಿಲ್ಲ. ಬದಲಾಗಿ 5 ಲಕ್ಷ ಲೀಟರ್‌ಗಿಂತ ಹೆಚ್ಚಿನ ನೀರು ಬಳಸುವ ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಸಂಕೀರ್ಣಗಳು, ಐಟಿ-ಬಿಟಿ ಕಂಪನಿಗಳಂತಹ ಪ್ರದೇಶಗಳಲ್ಲಿ ಪ್ರತಿ ತಿಂಗಳು ಹೆಚ್ಚುವರಿಯಾಗಿ ಲಕ್ಷಾಂತರ ರೂ. ನೀರಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಆರೋಪಗಳಿವೆ. ಹೀಗಾಗಿ ವಾಣಿಜ್ಯ ಸಂಕೀರ್ಣಗಳಂತಹ ಪ್ರದೇಶಗಳಿಗೆ ಮಾತ್ರ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಜಲಮಂಡಳಿಯು ಚಿಂತಿಸಿದೆ.

ಸ್ಮಾರ್ಟ್‌ ಮೀಟರ್‌ ಅಳವಡಿಸುವ ಬಗ್ಗೆ ಅಧ್ಯಯನ ನಡೆಸುವ ಕಂಪನಿಯು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸುತ್ತೇವೆ. ಮೊದಲನೇ ಹಂತದಲ್ಲಿ ಬೆಂಗಳೂರಿನ ವಾಣಿಜ್ಯ ಸಂಕೀರ್ಣಗಳಲ್ಲಿ ಸ್ಮಾರ್ಟ್‌ಮೀಟರ್‌ ಅಳವಡಿಸುವ ಉದ್ದೇಶವಿದೆ. ಇದರಿಂದ ವಾಣಿಜ್ಯ ಕಟ್ಟಡಗಳಿಗೆ ಅನುಕೂಲವಾಗಲಿದೆ. ●ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌, ಜಲಮಂಡಿ ಅಧ್ಯಕ

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

9-thekkatte

Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಮೆಜೆಸ್ಟಿಕ್‌ ಬಳಿ ಬಿಎಂಟಿಸಿ ಬಸ್‌ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Bengaluru: ಪರಪ್ಪನ ಅಗ್ರಹಾರ ಕಾರಾಗೃಹದ‌ಲ್ಲಿ ಮತ್ತೆ 9 ಮೊಬೈಲ್‌ ಫೋನ್‌ಗಳು ಪತ್ತೆ!

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

Leopard: ಎಲೆಕ್ಟ್ರಾನಿಕ್‌ ಸಿಟಿ ಎನ್‌ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ

6

Anekal: ಶಾಲಾ ಬಸ್‌ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

9-thekkatte

Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.