Nagamangala Riots: ಗಲಭೆ ಪೂರ್ವಯೋಜಿತ ಕೃತ್ಯ, ಗುಪ್ತಚರ ಇಲಾಖೆ ವೈಫಲ್ಯ ಸ್ಪಷ್ಟ: ಎಚ್‌ಡಿಕೆ

ಒಂದು ಸಮುದಾಯದ ಓಲೈಕೆಗಾಗಿ ಕೃತ್ಯದ ಹಿಂದೆ ಕಾಂಗ್ರೆಸ್ ಇರುವ ಶಂಕೆ: ಕೇಂದ್ರ ಸಚಿವ, ಮಸೀದಿ ಬಳಿ ಡಾನ್ಸ್ ಮಾಡಲು ಬಿಟ್ಟಿದ್ದೇಕೆ? ಪೊಲೀಸರು ಏನು ಮಾಡುತ್ತಿದ್ದರು?

Team Udayavani, Sep 13, 2024, 8:08 PM IST

Kumaraswmay

ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ನಾಗಮಂಗಲ ಪಟ್ಟಣದಲ್ಲಿ ನಡೆದ ಗಲಭೆ ಪೂರ್ವಯೋಜಿತ ಕೃತ್ಯ, ವ್ಯವಸ್ಥಿತ ಪಿತೂರಿ. ಅಷ್ಟೇ ಅಲ್ಲ, ಗುಪ್ತಚರ ಇಲಾಖೆ ವೈಫಲ್ಯ, ಕಾಂಗ್ರೆಸ್‌ ಪ್ರಾಯೋಜಿತ ಗಲಭೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು.

ನಾಗಮಂಗಲದ ಗಲಭೆ ಪೀಡಿತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ದುಷ್ಕರ್ಮಿಗಳ ದಾಳಿಗೆ ತುತ್ತಾದ ಅಂಗಡಿ, ಮಳಿಗೆಗಳ ವೀಕ್ಷಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವ್ಯವಸ್ಥಿತವಾಗಿ ಗಲಭೆಗಳ ಸೃಷ್ಟಿಸುವುದು ಕಾಂಗ್ರೆಸ್ ಗೆ ಕರಗತವಾಗಿದೆ. ಹಿಂದಿನಿಂದಲೂ ಅದನ್ನು ಮಾಡಿಕೊಂಡು ಬಂದಿದೆ. 1990ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕೆಳಗಿಳಿಸಲು ರಾಮನಗರ, ಚನ್ನಪ್ಪಟ್ಟಣದಲ್ಲಿ ಕೋಮುಗಲಭೆ ಸೃಷ್ಟಿಸಿ ಬೆಂಕಿ ಹಾಕಲಾಯಿತು. ಅವಳಿ ಪಟ್ಟಣಗಳು ಹೊತ್ತಿ ಉರಿದವು. ಅದೇ ಮಾದರಿಯಲ್ಲಿ ನಾಗಮಂಗಲದಲ್ಲಿ ಗಲಭೆ ಎಬ್ಬಿಸಲಾಗಿದೆ. ನಾಗಮಂಗಲದಲ್ಲಿ ಈಗ ಯಾವ ದುರುದ್ದೇಶ ಇಟ್ಟುಕೊಂಡು ಗಲಭೆ ಸೃಷ್ಟಿ ಮಾಡಲಾಗಿದೆಯೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಅನುಮಾನ ವ್ಯಕ್ತಪಡಿಸಿದರು.

ನಾಗಮಂಗಲದಲ್ಲಿಯೂ ಕಾಂಗ್ರೆಸ್ ಚಿತಾವಣೆಯ ಬಗ್ಗೆ ಅನುಮಾನವಿದೆ. ಈಗ ಚನ್ನಪಟ್ಟಣದಲ್ಲಿ ಉಪ ಚುನಾವಣೆ ಬರುತ್ತಿದೆ. ಬೇರೆ ಬೇರೆ ಘಟನೆಗಳು ಕೂಡ ನಡೆಯುತ್ತಿವೆ. ಹೀಗಾಗಿ ಒಂದು ಸಮುದಾಯದ ಓಲೈಕೆ ಮಾಡಲು ಈ ಸಂಚು ರೂಪಿಸಿರಬಹುದು. ಇಡೀ ಘಟನೆ ನೋಡಿದರೆ ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.

ಅಧಿಕಾರಿಗಳ ನಡೆ ಸಂಶಯಾಸ್ಪದ: 
ಗಲಭೆಯ ಎಫ್‌ಐಆರ್ ಪ್ರತಿ ಸಂಪೂರ್ಣ ಲೋಪದಿಂದ ಕೂಡಿದ್ದು, ಪೊಲೀಸರ ವರ್ತನೆ ಸಂಶಯಾಸ್ಪದವಾಗಿದೆ. ಕೇವಲ 100- 150 ಜನ ಇದ್ದ ಮೆರವಣಿಗೆಗೆ ಸ್ಥಳೀಯ ಪೊಲೀಸರಿಗೆ ಭದ್ರತೆ ಒದಗಿಸಲು ಸಾಧ್ಯವಾಗಿಲ್ಲ. ಮೆರವಣಿಗೆಗೆ ಅನುಮತಿ ಕೊಟ್ಟಿರುವುದೇ ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾದ ಹೊಣೆಯೂ ನಿಮ್ಮದೇ. ಘಟನೆ ಸ್ಥಳದಲ್ಲಿ ಆಗ ಎಷ್ಟು ಜನ ಪೊಲೀಸರನ್ನು ನಿಯೋಜನೆ ಮಾಡಿದ್ದಿರಿ? ನಿಮ್ಮ ಇನ್‌ಸ್ಪೆಕ್ಟರ್ ಎಲ್ಲಿ‌ ಇದ್ದರು? ಘಟನೆಗೂ ಮುನ್ನ ಇಲ್ಲಿದ್ದ ಮೀಸಲು ಪಡೆ ವಾಹನ ವಾಪಸ್ ಕರೆಸಿಕೊಂಡಿದ್ದಾರೆ. ಮಸೀದಿ ಬಳಿ 10 ನಿಮಿಷ ಡಾನ್ಸ್ ಮಾಡಲು ಬಿಟ್ಟವರು ಯಾರು? ಆಗ ಪೊಲೀಸರು ಏನು ಮಾಡುತ್ತಿದ್ದರು? ಹೆಚ್ಚುವರಿ ಪೊಲೀಸರಿದ್ದರೆ ಪರಿಸ್ಥಿತಿ ನಿಯಂತ್ರಿಸಬಹುದಿತ್ತು. ಮೆರವಣಿಗೆ ವೇಳೆ ಇನ್‌ಸ್ಪೆಕ್ಟರ್, ಡಿವೈಎಸ್ಪಿ ಯಾರೂ ಇರಲಿಲ್ಲ. ಆದರೆ ಎಫ್‌ಐಆರ್‌ನಲ್ಲಿ ಅವರೆಲ್ಲ ಇದ್ದರು ಎಂದು ಬರೆಯಲಾಗಿದೆ. ಇದು ಯಾವ ಜಾದು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಹತ್ತೇ ನಿಮಿಷದಲ್ಲಿ ಕಲ್ಲು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು?
ಮೆರವಣಿಗೆ ಹೊರಟಿದ್ದವರ ಮೇಲೆ ಕಲ್ಲು, ಚಪ್ಪಲಿ, ಪೆಟ್ರೋಲ್ ಬಾಂಬ್ ಗಳನ್ನು ಎಸೆಯಲಾಗಿದೆ. ಕೇವಲ ಹತ್ತು ನಿಮಿಷದಲ್ಲಿ ಅಷ್ಟು ಪ್ರಮಾಣದ ಕಲ್ಲು, ಚಪ್ಪಲಿ, ಕಬ್ಬಿಣದ ಪೈಪ್ ಗಳು, ಪೆಟ್ರೋಲ್ ಬಾಂಬ್ ಗಳು ಎಲ್ಲಿಂದ ಬಂದವು? ಹತ್ತೇ ನಿಮಿಷದಲ್ಲಿ ಇವನ್ನೆಲ್ಲಾ ಸಂಗ್ರಹ ಮಾಡಿಕೊಳ್ಳಲು ಸಾಧ್ಯವೇ? ಎಂದು ಕೇಂದ್ರ ಸಚಿವ ಪ್ರಶ್ನಿಸಿದರು.

ಗೃಹ ಸಚಿವ ಪರಂ ವಿರುದ್ಧ ಕಿಡಿ: 
ನಾಗಮಂಗಲ ಗಲಭೆ ಸಣ್ಣ, ಆಕಸ್ಮಿಕ ಘಟನೆ ಎಂದು ಕರೆದಿರುವ ಗೃಹ ಸಚಿವ ಜಿ.ಪರಮೇಶ್ವರ್ ರನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವರು; ಇಷ್ಟೊಂದು ದೊಡ್ಡ ಗಲಭೆಯಾಗಿದೆ. ಯೋಜಿತವಾಗಿ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಆದರೂ ಇವರೂ ಸಣ್ಣ, ಆಕಸ್ಮಿಕ ಘಟನೆ ಎನ್ನುತ್ತಾರೆ, ಇವರನ್ನು ಗೃಹ ಸಚಿವರು ಎಂದು ಕರೆಯಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳ ಪರಿಶೀಲನೆ, ಪರಿಹಾರ ವಿತರಿಸಿದ ಕೇಂದ್ರ ಸಚಿವ
ಗಲಭೆ ನಡೆದಿದ್ದ ಜಾಗಕ್ಕೆ ಭೇಟಿ ನೀಡಿದ ಕುಮಾರಸ್ವಾಮಿ, ಸುಟ್ಟು ಹೋಗಿರುವ ಅಂಗಡಿಗಳ ಬಳಿ ಪರಿಶೀಲಿಸಿದರು. ನಂತರ ಅಂಗಡಿ ಮಾಲೀಕರ ಜೊತೆ ಚರ್ಚಿಸಿ ಮಾಹಿತಿ ಪಡೆದ ಬಳಿಕ ಪರಿಹಾರದ ಮೊತ್ತ ವಿತರಿಸಿದರು. ಆಸ್ತಿ, ಅಂಗಡಿ ಹಾನಿಗೊಳದವರಿಗೆ ನಷ್ಟ ಆಧರಿಸಿ ತಲಾ 25 ಸಾವಿರ ರೂ. 2 ಲಕ್ಷ ರೂ. ವರೆಗೂ ಪರಿಹಾರ ವಿತರಿಸಿದರು.

ಟಾಪ್ ನ್ಯೂಸ್

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

9-thekkatte

Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ

Jammu Kashmir: ಯುವಕರ ಕೈಯಲ್ಲೀಗ ಕಲ್ಲುಗಳಿಲ್ಲ, ಪೆನ್ನು-ಪುಸ್ತಕಗಳಿವೆ: ಪ್ರಧಾನಿ ಮೋದಿ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್‌ ಮಾಡಿದ ಕ್ರಿಕೆಟ್‌ ಆಸ್ಟ್ರೇಲಿಯಾ

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

Explainer:ಒಂದು ದೇಶ-ಒಂದು ಚುನಾವಣೆ..ರಾಷ್ಟ್ರದ ಹಿತಕ್ಕೊ? ರಾಜಕೀಯ ಪಕ್ಷಗಳ ಹಿತಕ್ಕಾಗಿಯೇೂ?

8

Lokesh Kanagaraj: ʼಕೂಲಿʼ ಸಿನಿಮಾದ ದೃಶ್ಯ ಲೀಕ್‌; ಬೇಸರ ಹೊರ ಹಾಕಿದ ನಿರ್ದೇಶಕ ಲೋಕೇಶ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

Bellary: ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ತಾಯಿ, ಅಕ್ಕ

dandeli

Dandeli: ನಗರದಲ್ಲಿ ಸರಣಿ ಕಳ್ಳತನ… ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು, ಪೊಲೀಸರ ಭೇಟಿ

ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Munirathna: ಮುನಿರತ್ನ ವಿರುದ್ಧ ಅತ್ಯಾಚಾರ, ಹನಿಟ್ರ್ಯಾಪ್ ಆರೋಪ‌ ಮಾಡಿದ ಮಹಿಳೆ; ಎಫ್‌ಐಆರ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Traffic: ಆಗುಂಬೆ ಘಾಟಿಯಲ್ಲಿ ವಾಹನ ಬ್ರೇಕ್ ಫೇಲ್, ಟ್ರಾಫಿಕ್ ನಲ್ಲಿ ಸಿಲುಕಿದ ಆಂಬ್ಯುಲೆನ್ಸ್

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Kannada Cinema: ರವಿ ಶ್ರೀವತ್ಸ ಅವರ ಗ್ಯಾಂಗ್ಸ್‌ ಆಫ್‌ ಯುಕೆ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

10

Channapatnam by-election: ಡಿಕೆಸು ಕೈ ಅಭ್ಯರ್ಥಿ ಮಾಡಲು ಕಾರ್ಯಕರ್ತರ ಒತ್ತಡ

9-thekkatte

Thekkatte: ಶಾಲಾ ವಾಹನ ಹೈಮಾಸ್ಟ್ ಕಂಬಕ್ಕೆ ಢಿಕ್ಕಿ; ಚಾಲಕನಿಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.