Hockey ಏಷ್ಯನ್ ಚಾಂಪಿಯನ್ಸ್ ಟ್ರೋಫಿ: ಇಂದು ಭಾರತ-ಪಾಕ್ ಮುಖಾಮುಖಿ
ಅವರು ಸಹೋದರರಂತೆ ಎಂದ ನಾಯಕ ಹರ್ಮನ್‌ಪ್ರೀತ್ ಸಿಂಗ್
Team Udayavani, Sep 14, 2024, 6:50 AM IST
ಹುಲುನ್‌ಬಿಯುರ್ (ಚೀನ): ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಪಂದ್ಯಾವಳಿಯಲ್ಲಿ ಅಜೇಯ ಓಟ ಬೆಳೆಸಿರುವ ಹಾಲಿ ಚಾಂಪಿಯನ್ ಭಾರತ, ಶನಿವಾರದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ. ಈ ಪಂದ್ಯವನ್ನೂ ಗೆದ್ದು ಅಜೇಯವಾಗಿ ಸೆಮಿಫೈನಲ್‌ನಲ್ಲಿ ಸೆಣಸುವುದು ಹರ್ಮನ್‌ಪ್ರೀತ್ ಸಿಂಗ್ ಪಡೆಯ ಯೋಜನೆ.
6 ತಂಡಗಳ ರೌಂಡ್ ರಾಬಿನ್ ಲೀಗ್ ಮಾದರಿಯ ಈ ಸ್ಪರ್ಧೆಯಲ್ಲಿ ಭಾರತ ಈವರೆಗಿನ ಎಲ್ಲ 4 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನೊಂದೆಡೆ ಅಮ್ಮಾದ್ ಬಟ್ ನೇತೃತ್ವದ ಪಾಕಿಸ್ಥಾನ 2 ಜಯ ಹಾಗೂ 2 ಡ್ರಾ ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನಿಯಾಗಿದೆ.
ಎಷ್ಟೇ ಪಂದ್ಯಗಳನ್ನು ಗೆದ್ದರೂ ಸಾಂಪ್ರ ದಾಯಿಕ ಎದುರಾಳಿ ಪಾಕಿಸ್ಥಾನವನ್ನು ಮಣಿಸಿದಾಗಲೇ ಭಾರತಕ್ಕೆ ಸಮಾಧಾನ ಹಾಗೂ ಹುರುಪು. ಇದಕ್ಕೆ ಸರಿಯಾಗಿ ಕಳೆದ ಕೆಲವು ವರ್ಷಗಳಿಂದ ಪಾಕ್ ಎದುರು ನಮ್ಮವರು ನಿರಂತರ ಮೇಲುಗೈ ಸಾಧಿಸುತ್ತ ಬಂದಿದ್ದಾರೆ. 2023ರ ಹ್ಯಾಂಗ್‌ಝೂ ಏಷ್ಯಾಡ್‌ನಲ್ಲಿ ಇತ್ತಂಡಗಳು ಕೊನೆಯ ಸಲ ಮುಖಾಮುಖೀ ಆಗಿದ್ದವು. ಇಲ್ಲಿ ಭಾರತ 10-2 ಅಂತರದ ಭರ್ಜರಿ ಜಯ ಸಾಧಿಸಿತ್ತು. ಇದಕ್ಕೂ ಕೆಲವು ತಿಂಗಳು ಮೊದಲು ಚೆನ್ನೈಯಲ್ಲಿ ನಡೆದ ಎಸಿಟಿ ಕೂಟದಲ್ಲಿ 4-0 ಗೆಲುವು ಒಲಿಸಿಕೊಂಡರೆ, 2022ರ ಜಕಾರ್ತಾ ಏಷ್ಯಾ ಕಪ್‌ನಲ್ಲಿ ಯಂಗ್ ಇಂಡಿಯಾ 1-1ರಿಂದ ಡ್ರಾ ಮಾಡಿಕೊಂಡಿತ್ತು. 2022ರ ಢಾಕಾ ಎಸಿಟಿಯಲ್ಲಿ 4-3ರ ಜಯ ಸಾಧಿಸಿ ಕಂಚಿನ ಪದಕ ಜಯಿಸಿತ್ತು.
ಅವರು ಸಹೋದರರಂತೆ…
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಾಯಕ ಹರ್ಮನ್‌ಪ್ರೀತ್ ಸಿಂಗ್, “ಜೂನಿಯರ್ ಹಂತದಿಂದಲೇ ನಾನು ಪಾಕಿಸ್ಥಾನ ತಂಡದ ಬಹುತೇಕ ಆಟಗಾರರೊಂದಿಗೆ ಆಡಿದ್ದೆ. ನಮ್ಮ ನಡುವೆ ಸ್ಪೆಷಲ್ ಬಾಂಡ್ ಬೆಸೆದಿದೆ. ಅವರು ನನ್ನ ಸಹೋದರರಂತೆ. ಆದರೆ ಅಂಗಳದಲ್ಲಿ ನಮ್ಮ ಗೆಲುವಿನ ಹೋರಾಟ ಸದಾ ಜಾರಿಯಲ್ಲಿರುತ್ತದೆ. ಎಲ್ಲ ತಂಡಗಳಂತೆ ಪಾಕಿಸ್ಥಾನ ವನ್ನು ಎದುರಿಸುತ್ತೇವೆ. ಭಾವನೆಗ ಳನ್ನು ನಿಯಂತ್ರಣದಲ್ಲಿರಿಸಿಕೊಳ್ಳು ತ್ತೇವೆ. ಅಭಿಮಾನಿಗಳು ಇನ್ನೊಂದು ಭಾರತ- ಪಾಕಿಸ್ಥಾನ ಪಂದ್ಯಕ್ಕೆ ಕಾತರಗೊಂಡಿದ್ದಾರೆ’ ಎಂದರು. ದಿನದ ಉಳಿದ ಪಂದ್ಯಗಳಲ್ಲಿ ಮಲೇಷ್ಯಾ- ಕೊರಿಯಾ, ಚೀನ- ಜಪಾನ್ ಎದುರಾಗಲಿವೆ.
ಆರಂಭ: ಅ. 1.15
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.