Kaalapatthar movie review: ಶಿಲೆಯ ಸುತ್ತದ ಸೆಳೆತವಿದು..
Team Udayavani, Sep 14, 2024, 11:22 AM IST
ಹೊಸ ಬಗೆಯ ಕಥೆ ಮೂಲಕ ಪ್ರೇಕ್ಷಕರನ್ನು ಸೆಳೆಯಬೇಕೆಂಬ ಹಂಬಲ ಸಿನಿಮಾ ಮಂದಿಯದ್ದು. ಅದರಲ್ಲೂ ಹೊಸ ನಿರ್ದೇಶಕರಲ್ಲಿ ಆ ತುಡಿತ ಹೆಚ್ಚು. ಈ ವಿಷಯದಲ್ಲಿ ನಿರ್ದೇಶಕ ವಿಕ್ಕಿ ಕೂಡಾ ಒಂದು ಹೊಸ ಪ್ರಯತ್ನ ಮಾಡಿದ್ದಾರೆ. ಅದು “ಕಾಲಾಪತ್ಥರ್’ ಮೂಲಕ. ಈ ವಾರ ತೆರೆಕಂಡಿರುವ ಈ ಸಿನಿಮಾದಲ್ಲಿ ಒಂದಷ್ಟು ಹೊಸ ಬಗೆಯ ವಿಚಾರದ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುವ ಪ್ರಯತ್ನ ಮಾಡಿದ್ದಾರೆ ವಿಕ್ಕಿ.
ಚಿತ್ರದ ಬಗ್ಗೆ ಹೇಳಬೇಕಾದರೆ ಇಲ್ಲೊಬ್ಬ ಯೋಧನಿದ್ದಾನೆ, ಅಣ್ಣಾವ್ರ ಅಭಿಮಾನವಿದೆ, ಕಪ್ಪು ಶಿಲೆಯ ಪುತ್ಥಳಿ ಇದೆ, ಊರ ಮಂದಿಯ ಹೆಮ್ಮೆ ಇದೆ, ಜೊತೆಗೆ ಆತಂಕವೂ ಇದೆ, ಉರಿದುಬೀಳುವ ಎಂಎಲ್‌ಎ ಇದ್ದಾನೆ.. ಈ ಎಲ್ಲಾ ಅಂಶಗಳ ಒಟ್ಟು ಸಮ್ಮಿಲನವೇ ಕಾಲಾಪತ್ಥರ್. ಇಲ್ಲಿ ನಾಯಕ ಸೇನಾನಿ. ಎದುರಾಳಿಗಳನ್ನು ಸದೆಬಡಿದು ದೇಶಾದ್ಯಂತ ಖ್ಯಾತಿ ಪಡೆದು ಊರಿಗೆ ಮರಳುವ ಹೆಮ್ಮೆಯ ಮಗ. ಊರ ಜನರ ಪ್ರೀತಿಯ ಪ್ರತೀಕವಾಗಿ ಪುತ್ಥಳಿ. ಅಲ್ಲಿಂದ ಸಮಸ್ಯೆ ಶುರು. ಅದೇನು ಎಂಬುದನ್ನು ತೆರೆಮೇಲೆಯೇ ನೋಡಿ.
ಈ ಸಿನಿಮಾದಲ್ಲಿ ಮನಸ್ಸಿಗೆ ಆಪ್ತವಾಗುವ ಹಲವು ಅಂಶಗಳಿವೆ. ಮುಖ್ಯವಾಗಿ ಡಾ.ರಾಜ್‌ಕುಮಾರ್ ಮೇಲಿನ ನಾಯಕ ಅಭಿಮಾನ. ರಾಜ್‌ಕುಮಾರ್ ಹಾಡುಗಳನ್ನು ಹಾಡುತ್ತಾ, ಅವರ ಫೋಟೋ ಇಟ್ಟು ಅಭಿಮಾನಿಸುತ್ತಾ, ತನ್ನ ಮನಸ್ಸಿನ ವಿಚಾರಗಳನ್ನು ಅವರಲ್ಲಿ ಹೇಳಿಕೊಳ್ಳುತ್ತಾ ಖುಷಿಯಾಗುವ ಅಂಶಗಳು ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಇಲ್ಲಿ ವೇದನೆ, ತಳಮಳ, ಸಂಕಟ… ನಾಯಕನ ಮನಸ್ಸಿನ ಭಾವನೆಗಳು ವ್ಯಕ್ತವಾಗುವ ಮೂಲಕ ಸಿನಿಮಾದ ಕಲರ್ ಕೂಡಾ ಬದಲಾಗುತ್ತಾ ಹೋಗುತ್ತದೆ.
ನಾಯಕನಾಗಿ ನಟಿಸುವ ಜೊತೆಗೆ ಈ ಸಿನಿಮಾವನ್ನು ನಿರ್ದೇಶಿಸಿರುವ ವಿಕ್ಕಿ ವರುಣ್ ಡಬಲ್ ಶೇಡ್‌ನಲ್ಲಿ ಗೆದ್ದಿದ್ದಾರೆ. ಪಾತ್ರಕ್ಕೆ ಹೊಂದಿಕೊಳ್ಳುವ ಜೊತೆಗೆ ಯಾವುದನ್ನು ಎಷ್ಟು ಹೇಳಬೇಕು ಮತ್ತು ಹೇಗೆ ಹೇಳಬೇಕು ಎಂಬ ಸ್ಪಷ್ಟ ಕಲ್ಪನೆ ಅವರಿಗಿದ್ದ ಕಾರಣ ಸಿನಿಮಾದ ಸರಾಗವಾಗಿ ಸಾಗುತ್ತದೆ. ಉಳಿ ದಂತೆ ನಾಯಕಿ ಧನ್ಯಾ, ನಾಗಾಭರಣ, ರಾಜೇಶ್ ನಟ ರಂಗ, ಅಚ್ಯುತ್ ಕುಮಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.