ಜಲಾವೃತಗೊಂಡ ಅಂಡರ್‌ಪಾಸ್ ನಲ್ಲಿ ಮುಳುಗಿದ ಕಾರು: ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಮೃತ್ಯು
Team Udayavani, Sep 14, 2024, 12:13 PM IST
ನವದೆಹಲಿ: ಭಾರಿ ಮಳೆಯಿಂದಾಗಿ ಶುಕ್ರವಾರ ದೆಹಲಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು ಜೊತೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ಥವ್ಯಸ್ಥಗೊಂಡಿದೆ.
ಮಳೆಯ ಪರಿಣಾಮ ಪ್ರಮುಖ ರಸ್ತೆಗಳು ಜಲಾವೃತಗೊಂಡು ಹಲವಾರು ಅನಾಹುತಗಳು ಸಂಭವಿಸಿದ್ದು, ಓಲ್ಡ್ ಫರಿದಾಬಾದ್ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸುಮಾರು ಹತ್ತು ಅಡಿಯಷ್ಟು ನೀರು ನಿಂತ್ತಿದ್ದು ಎಸ್‌ಯುವಿ ಕಾರೊಂದು ನೀರಿನಲ್ಲಿ ಮುಳುಗಿ ಬ್ಯಾಂಕ್ ಮ್ಯಾನೇಜರ್ ಮತ್ತು ಕ್ಯಾಷಿಯರ್ ಮೃತಪಟ್ಟಿರುವ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ಪುಣ್ಯಾಶ್ರಯ್ ಶರ್ಮಾ (48) ಮತ್ತು ವಿರಾಜ್ (26) ಎಂದು ಗುರುತಿಸಲಾಗಿದ್ದು ಗುರುಗ್ರಾಮ್‌ನಿಂದ ಗ್ರೇಟರ್ ಫರಿದಾಬಾದ್‌ನಲ್ಲಿರುವ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ ಶುಕ್ರವಾರ (ಸೆ. 13) ಭಾರೀ ಮಳೆಯಿಂದಾಗಿ ಅಂಡರ್‌ಪಾಸ್ ಸಂಪೂರ್ಣ ಜಲಾವೃತಗೊಂಡಿದ್ದು, ಮುನ್ನೆಚ್ಚರಿಕೆಯಾಗಿ ಕಾರುಗಳು ಸೇರಿದಂತೆ ಇತರ ವಾಹನಗಳು ಪ್ರವೇಶಿಸದಂತೆ ಬ್ಯಾರಿಕೇಡ್ ಗಳನ್ನೂ ಇಟ್ಟು ಎಚ್ಚರಿಕೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಆದರೆ ತಡರಾತ್ರಿ ರಾತ್ರಿ 11:50 ರ ಸುಮಾರಿಗೆ ಮಹೀಂದ್ರಾ XUV 700 ಕಾರಿನಲ್ಲಿ ಬಂದ ಬ್ಯಾಂಕ್ ಅಧಿಕಾರಿಗಳು ಬ್ಯಾರಿಕೇಡ್ ನಿರ್ಲಕ್ಷಿಸಿ ಅಂಡರ್‌ಪಾಸ್‌ಗೆ ಕಾರನ್ನು ಕೊಂಡೊಯ್ದಿದ್ದಾರೆ ಈ ವೇಳೆ ನೀರಿನಲ್ಲಿ ಕಾರು ಸಿಲುಕಿಕೊಂಡಿದೆ, ನಂತರ ವಾಹನದೊಳಗೆ ನೀರು ನುಗ್ಗಿದೆ ಎನ್ನಲಾಗಿದೆ. ಈ ಸಮಯದಲ್ಲಿ ಅಲ್ಲಿದ್ದ ದಾರಿಹೋಕರು ಕಾರಿನಲ್ಲಿ ಸಿಲುಕಿದ ಇಬ್ಬರನ್ನು ರಕ್ಷಿಸಲು ಯತ್ನಿಸಿದ್ದಾರೆ ಸಾಕಷ್ಟು ಪ್ರಯತ್ನಗಳ ನಂತರ ಇಬ್ಬರನ್ನು ಕಾರಿನಿಂದ ಹೊರಗೆ ಎಳೆದಿದ್ದಾರೆ ಆದರೆ ಅಷ್ಟೋತ್ತಿಗಾಗಲೇ ವಿರಾಜ್ ಕೊನೆಯುಸಿರೆಳೆದಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಪುಣ್ಯಾಶ್ರಯ್ ಅವರನ್ನು ಬಾದ್‌ಶಾ ಖಾನ್ ಸಿವಿಲ್ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
STORY | 2 dead after driving SUV into flooded underpass in Faridabad
READ: https://t.co/9D9YO73isP
VIDEO: #FaridabadNews #Faridabad
(Full video available on PTI Videos – https://t.co/n147TvqRQz) pic.twitter.com/HwjclexFly
— Press Trust of India (@PTI_News) September 14, 2024
ಆಸ್ಪತ್ರೆಯಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುತ್ತೇವೆ” ಎಂದು ಎನ್‌ಐಟಿ ಫರಿದಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಮೇರ್ ಸಿಂಗ್ ಹೇಳಿದ್ದಾರೆ.
हरियाणा : फरीदाबाद में रेलवे अंडरब्रिज के नीचे भरे बारिश के पानी में महिंद्रा XUV-700 डूब गई। इसमें बैठे HDFC बैंक मैनेजर पुण्यश्रेय शर्मा और कैशियर विराज द्विवेदी की मौत हुई।
अंदाजा नहीं था कि पानी इतना भरा होगा। कार पानी में बंद होकर लॉक हो गई। वो बाहर नहीं निकल सके। pic.twitter.com/CBq5ZJ3CXf
— Sachin Gupta (@SachinGuptaUP) September 14, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.