Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಮೋಡಿ ಮಾಡುವ ಅಂಶವೆಂದರೆ ವಲ್ಲಂಕಲಿ ಎನ್ನುವ ಹಾವು ದೋಣಿ ಪಂದ್ಯ...

Team Udayavani, Sep 14, 2024, 12:25 PM IST

Desi Swara: ಸಾಂಪ್ರದಾಯಿಕ ವೈವಿಧ್ಯದ ಓಣಂ ವೈಭವ-ವಿಶೇಷ ಹತ್ತು ದಿನಗಳು

ಹಬ್ಬಗಳ ಋತು ಆರಂಭವಾಗಿದ್ದು, ಎಲ್ಲೆಲ್ಲೂ ಸಂಭ್ರಮದ ವಾತಾವರಣ ಮನೆಮಾಡಿದೆ. ಹಬ್ಬಗಳ ಸಂಭ್ರಮ ದಕ್ಷಿಣ ಭಾರತದಲ್ಲಿ ಬಲು ಜೋರಾಗೇ ಇರುತ್ತದೆ. ಅದರಲ್ಲೂ ಅಪ್ಪಟ ದಕ್ಷಿಣ ಭಾರತದ ಹಬ್ಬವಾದ ಓಣಂ ಅನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಓಣಂ ಕೇರಳದಲ್ಲಿ ಆಚರಿಸುವ ಸಾಂಪ್ರದಾಯಿಕ ಸುಗ್ಗಿ ಹಬ್ಬವಾಗಿದೆ. ವಿಶೇಷವಾಗಿ ಕೇರಳದಲ್ಲಿ ಓಣಂ ಹಬ್ಬವು ತಿರುವೋಣಂ ನಕ್ಷತ್ರದ ಸಮಯದಲ್ಲಿ ವರ್ಷಕೊಮ್ಮೆ ತನ್ನ ಪ್ರಜೆಯನ್ನು ಭೇಟಿಯಾಗಲು ಭೂಮಿಗೆ ಬಲಿರಾಜ ಬರುವ ಸುದಿನವಾಗಿದೆ. ಮಲಯಾಳ ಕ್ಯಾಲೆಂಡರ್‌ ಪ್ರಕಾರ, ಹಬ್ಬವನ್ನು ಚಿಂಗಂನ ಮೊದಲ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಕೇರಳದ ತುಂಬ ಜಾತಿ ಮತಗಳ ಭೇದವಿಲ್ಲದೆ ಎಲ್ಲರೂ ಈ ಹಬ್ಬವನ್ನು ಆಚರಿಸುವುದು ಶಾಂತಿ, ಸೌಹಾರ್ದತೆ ಕನ್ನಡಿ ಹಿಡಿದಂತಿದೆ.

ಹಿನ್ನಲೆ:
ಪುರಾಣಗಳ ಪ್ರಕಾರ, ಮಹಾಬಲಿ ಚಕ್ರವರ್ತಿಯ ಕಾಲದಲ್ಲಿಯೇ ಕೇರಳವು ಸುವರ್ಣ ಯುಗಕ್ಕೆ ಸಾಕ್ಷಿಯಾಗಿತ್ತು. ಆತನನ್ನು ಬ್ರಾಹ್ಮಣ ಋಷಿ ಮತ್ತು ಪ್ರಹ್ಲಾದನ ಮೊಮ್ಮಗನಾಗಿದ್ದ ಕಶ್ಯಪನ ವಂಶಸ್ಥನೆಂದು ಹೇಳಲಾಗುತ್ತದೆ. ಅವನ ರಾಜ್ಯಭಾರದ ಸಮಯದಲ್ಲಿ ಪ್ರತಿಯೊಬ್ಬ ಪ್ರಜೆಯೂ ಸಂತಸ, ನೆಮ್ಮದಿ ಮತ್ತು ಸಂತೃಪ್ತಿಯಿಂದಿದ್ದು, ಅರಸನೂ ಕೂಡ ಅವರೆಲ್ಲರ ಮೆಚ್ಚುಗೆ ಪಾತ್ರನಾಗಿದ್ದ ಎಂದು ತಿಳಿದು ಬರುತ್ತದೆ. ಮಹಾಬಲಿ ತನ್ನ ಒಳ್ಳೆಯ ಗುಣಗಳ ಫ‌ಲವಾಗಿ ದೇವರಿಂದ ಒಂದು ವರವನ್ನು ಪಡೆದುಕೊಂಡಿದ್ದ. ಅದೇನೆಂದರೆ ವರ್ಷಕೊಮ್ಮೆ ಅವನು ತೀರಾ ಆತ್ಮೀಯರಾಗಿದ್ದ ತನ್ನ ಜನರನ್ನು ಭೇಟಿ ಮಾಡಲು ಸಾಧ್ಯವಿತ್ತು. ಅವನು ಭೂಲೋಕವನ್ನು ಭೇಟಿ ಮಾಡುವ ದಿನವನ್ನು ಕೇರಳದಲ್ಲಿ ಓಣಂ ಆಗಿ ಪ್ರತೀ ವರ್ಷವೂ ಆಚರಿಸುತ್ತಾರೆ.

ವೈವಿಧ್ಯ ಸಂಭ್ರಮ
ಓಣಸದ್ಯ ಎಂಬ ಭೋಜನ ಕೂಟವು ಈ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಹೊಸ ಬೆಳೆಗಳನ್ನು ತಂದು ಈ ದಿನ ವಿಶೇಷ ಆಹಾರವನ್ನು ತಯಾರಿಸಲಾಗುತ್ತದೆ. ಮೂರು ಬಗೆಯ ಪಾಯಸ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ರಾಜ ಮಹಾಬಲಿಯ ಸಂತೋಷ ಮತ್ತು ಸಮೃದ್ಧಿಯುತ ಜೀವನವನ್ನು ಈ ಊಟ ನೆನಪಿಸುತ್ತದೆ.

ಸಾಂಪ್ರದಾಯಿಕ ಆಟಗಳು
ಓಣಂ ಉತ್ಸವದ ಮತ್ತೊಂದು ಮೋಡಿ ಮಾಡುವ ಅಂಶವೆಂದರೆ ವಲ್ಲಂಕಲಿ ಎನ್ನುವ ಹಾವು ದೋಣಿ ಪಂದ್ಯ. ಈ ಪಂದ್ಯವನ್ನು ಪಂಪಾ ನದಿಯಲ್ಲಿ ಆಯೋಜಿಸಲಾಗುತ್ತದೆ. ಕಣ್ಮನ ಸೆಳೆಯುವಂತೆ ಸಿಂಗಾರಗೊಂಡ ದೋಣಿಯಲ್ಲಿ ನೂರಾರು ನಾವಿಕರು ಕೇಕೆ ಹಾಕುತ್ತಾ ಉತ್ಸಾಹದಿಂದ ಹಾಡುಗಳನ್ನು ಹೇಳಿಕೊಂಡು ದೋಣಿ ನಡೆಸುವುದನ್ನು ನೋಡಲು ಅಸಂಖ್ಯಾಕ ಜನ ನೆರೆದಿರುತ್ತಾರೆ.

ಓಣಂ ದಿವಸ ಓಣಕಲಿಕಾಲ್‌ ಎನ್ನುವ ಆಟವನ್ನು ಗುಂಪುಗುಂಪಾಗಿ ಆಡುವ ಸಂಪ್ರದಾಯವು ಇದೆ. ಹೆಚ್ಚು ದೈಹಿಕ ಶ್ರಮವನ್ನು ಹಾಕಿ ಆಡಲಾಗುವ ಆಟಗಳಾದ ತಳಪ್ಪಂತುಕಲಿ(ಇಲ್ಲಿ ಚೆಂಡನ್ನು ಬಳಸಲಾಗುತ್ತದೆ), ಆಮ್ಬೆಯಲ್‌(ಬಿಲಿನಾಟ), ಕುಟುಕುಟು ಮತ್ತು ಕಯ್ಯಮಕಲಿ ಹಾಗೂ ಅತ್ತಕಳಂ ಎಂಬುವ ಕಾಳಗದ ಆಟವನ್ನು ಪುರುಷರು ಆಯ್ಕೆ ಮಾಡಿಕೊಳ್ಳುತ್ತಾರೆ.

ಮಹಿಳೆಯರು ಸಾಮಾನ್ಯವಾಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಅವರು ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುವ ಕುರುಹಾಗಿ ಅವರವರ ಮನೆಗಳ ಮುಂದೆ ಹೂವುಗಳಿಂದ ತುಂಬಾ ಸುಂದರವಾದ ಪೂಕ್ಕಳಂ ಎಂಬ ರಂಗೋಲಿಗಳನ್ನು ಬಿಡಿಸುತ್ತಾರೆ.

ಓಣಂ ಸಂದರ್ಭದಲ್ಲಿ ಕಥಕ್ಕಳಿ ಮತ್ತು ತುಂಬಿ ತುಳ್ಳಾಲ್‌ ಎಂಬೆರಡು ಬಗೆಯ ಅತ್ಯಂತ ಮನೋಹರವಾದ ನೃತ್ಯ ಪ್ರಕಾರಗಳನ್ನು ಮಹಿಳೆಯರು ಪ್ರದರ್ಶಿಸುತ್ತಾರೆ. ಜಾನಪದ ನೃತ್ಯ ಪ್ರಕಾರಗಳಾದ ಕುಮ್ಮಟ್ಟಿಕಲಿ ಮತ್ತು ಪುಲಿಕಲಿಗಳಂತೂ ಇಡೀ ಉತ್ಸವದ ಮೇರು ಆಕರ್ಷಣೆಗಳಾಗಿವೆ. ಒಣಂ ಸಮಯದಲ್ಲಿ ಹಿಂದೂ ಕೇರಳಿಗರು ತ್ರಿಕ್ಕಾಕ್ಕರ ಅಪ್ಪನ್‌(ವಾಮನ ಸ್ವರೂಪದಲ್ಲಿರುವ ವಿಷ್ಣು) ಎಂಬ ಮೂರ್ತಿಯೊಂದನ್ನು ನಿರ್ಮಿಸಿ ತಮ್ಮತಮ್ಮ ಮನೆಗಳಲ್ಲಿ ಪೂಜಿಸುತ್ತಾರೆ.

ವಿಶೇಷ ಹತ್ತು ದಿನಗಳು
*ಆಥಂ- ಆಥಂ ದಿನದಂದು ಕೊಚ್ಚಿಯ ಮಾಮನ ಮೂರ್ತಿಯನ್ನು ತಿರಿಕಾರ ದೇವಸ್ಥಾನದಲ್ಲಿ ಉತ್ಸವಗಳು ಆರಂಭವಾಗುತ್ತದೆ.

* ಚಿತಿರಾ – ಎರಡನೇ ದಿನವಾದ ಚಿತಿರಾದಲ್ಲಿ ಪೂಕಳಕ್ಕೆ ಇನ್ನೂ ಎರಡು ಪದರದ ಹೂವುಗಳನ್ನು ಸೇರಿಸಲಾಗುತ್ತದೆ.

* ಚೋಧಿ ಪೂಕ್ಕಳಂ – ಮೂರನೇ ದಿನವಾದ ಚೋಡಿಯಂದು ಜನರು ಒನಕ್ಕೋಡಿ ಎಂಬ ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

* ವಿಶಾಕಂ- ಓಣಸದ್ಯದ( ಓಣಂನ ವಿಶೇಷ ಭೋಜನ) ಸಿದ್ಧತೆಗಳು ಪ್ರಾರಂಭವಾಗುವ ಅತ್ಯಂತ ಮಂಗಳಕರ ದಿನವಾಗಿದೆ.

* ಅನಿಜಂ -ಪಂಪಾ ನದಿಯಲ್ಲಿ ವಲ್ಲಂಕಾಳಿ ಕ್ರೀಡೆಗಳ ಆರಂಭ.

* ತ್ರಿಕೆಟ್ಟಾ- ಈ ದಿನದಂದು ಜನರು ತಮ್ಮ ಪೂರ್ವಿಕರ ಮನೆಗಳಿಗೆ ತೆರಳಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

* ಮೂಲಂ – ಪುಲಿಕಳಿ ಮತ್ತು ಇತರ ನೃತ್ಯ ಪ್ರಕಾರಗಳನ್ನು ವಿವಿಧೆಡೆ ಪ್ರದರ್ಶಿಸಲಾಗುತ್ತದೆ.

* ಪೂರದಂ – ಪೂಕಳಂ ಮಧ್ಯಭಾಗದಲ್ಲಿ ಮಹಾಬಲಿ ಮತ್ತು ಮಾಮನ ಮಣ್ಣಿನ ಪ್ರತಿಮೆಗಳನ್ನು ಒನತಪ್ಪಂ ಎಂದು ಪ್ರತಿಷ್ಠಾಪಿಸುವ ದಿನ.

* ಉತ್ತರಾದಂ – ಈ ದಿನದ ಸಂಜೆಯನ್ನು ಓಣಂ ಎಂದು ಪರಿಗಣಿಸಲಾಗುತ್ತದೆ. ಈ ದಿನ ಮಹಾಬಲಿ ಕೇರಳಕ್ಕೆ ಆಗಮಿಸುತ್ತಾನೆ.

*ತಿರುವೋಣಂ – ಮಹಾಬಲಿ ಪ್ರತೀ ಮನೆಗಳಿಗೆ ತೆರಳಿ ಜನರನ್ನು ಆಶೀರ್ವದಿಸುವ ದಿನ.

*ಮಾಹಿತಿ: ದಿವ್ಯಾ, ನಾಯ್ಕನಕಟ್ಟೆ

ಟಾಪ್ ನ್ಯೂಸ್

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

By Election: Announcement of By-Election for the Dakshina Kannada Local Bodies Constituency

By Election: ದ. ಕನ್ನಡ ಸ್ಥಳೀಯ ಸಂಸ್ಥೆಗಳ ಪರಿಷತ್ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Vijayapura: ಗ್ರಾ.ಪಂ ಕಾಯಕ ಮಿತ್ರ ಸಿಬ್ಬಂದಿ ಮೇಲೆ ಗ್ರಾಪಂ ಉಪಾಧ್ಯಕ್ಷೆ ಚಪ್ಪಲಿಯಿಂದ ಹಲ್ಲೆ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

Job Opportunities:ಪಂಜಾಬ್‌ and ಸಿಂಧ್‌ ಬ್ಯಾಂಕ್‌-213 ಆಫೀಸರ್‌ ಹುದ್ದೆಗೆ ಅರ್ಜಿ ಆಹ್ವಾನ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

INDvsBAN: ”ಈತ ಭಾರತದ ಬಾಬರ್‌ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

“ತಿರಂಗಾ’ದ ರಂಗೇರಿದ “ನಯಾ ಕಾಶ್ಮೀರ’

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

Assembly Elections: ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳೇ ಕಿಂಗ್‌ಮೇಕರ್!

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

Today PM ಮೋದಿಗೆ ಹುಟ್ಟುಹಬ್ಬದ ಸಂಭ್ರಮ; ಪ್ರಧಾನಿ ಮೋದಿ ಬದುಕು, ಸಾಧನೆಯ 74 ಹೆಜ್ಜೆಗಳು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

INDvsBAN: Ashwin, Jadeja prop up slumping India; A local boy scored a century

‌INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್‌, ಜಡೇಜಾ; ಶತಕ ಬಾರಿಸಿದ ಲೋಕಲ್‌ ಬಾಯ್

1-wewqe

Contractors Association ಅಧ್ಯಕ್ಷ ಕೆಂಪಣ್ಣ ವಿಧಿವಶ; ಗಣ್ಯರ ಸಂತಾಪ

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.